*ಸಮಯ ಸಾದಕರ ಸಮಯದ ನಡುವೆ ಮಾನವೀಯತೆಯ ಸಾಧನೆಗೆ ನಿಂತ ಮಂಗಳೂರು ಕಣಚೂರ್ ಹಾಸ್ಪಿಟಲ್ ವೈದ್ಯರಿಗೊಂದು ಸಲಾಂ*

ಇತ್ತೀಚಿಗೆ ಪುತ್ತೂರು ಮೂಲದ ಸಹೋದರಿಯೊಬ್ಬರ ಹೆರಿಗೆ ಸಂಬಂದಿಸಿದಂತೆ ಹೋಗುತ್ತಿದ್ದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ತಪಾಸಣೆ ಗೈದಾಗ ಆಪರೇಷನ್ ಮಾಡದೇ ಯಾವುದೇ ದಾರಿ ಇಲ್ಲ ತಪ್ಪಿದಲ್ಲಿ ಮಗುವಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎನ್ನುವ ಸಲಹೆ ನೀಡಿದ್ದು ಇದನ್ನು ಒಪ್ಪದ ಕುಟುಂಬ ಮಂಗಳೂರಿನ ಇನ್ನೊಂದು ಖಾಸಗಿ ಆಸ್ಪತ್ರೆಯ ಬೇರೆ ವೈದ್ಯರಲ್ಲಿ ತಪಾಸಣೆ ಮಾಡಿಸಿದ್ದು ಅಲ್ಲಿ ಕೂಡ ಆಪರೇಷನ್ ಒಂದೇ ದಾರಿ ಬೇರೆ ದಾರಿ ಇಲ್ಲ ಎಂದು ತಿಳಿಸಿದರು,
ಇದರಿಂದ ಕಂಗಾಲಾದ ಕುಟುಂಬ ಪುತ್ತೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯನ್ನು ಸಂದರ್ಶಿಸಿದ್ದು ಅಲ್ಲಿಯೂ ಕೂಡ ಇದೆ ನಿರ್ದೇಶನ ಬಂದಿದ್ದು
ಮುಂದಿನ ಹಂತದಲ್ಲಿ ದಿನಾಂಕ 19/05/2021 ರಂದು ರಾತ್ರಿ 12 ಗಂಟೆಗೆ ಹೆರಿಗೆ ನೋವಿನ ಕೊನೆಯ ಹಂತದಲ್ಲಿ ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈಧ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಆಪರೇಷನ್ ಆದರೂ ಪರವಾಗಿಲ್ಲ ಬರುತ್ತೇವೆ ಎಂದು ಕೇಳಿಕೊಂಡಾಗ ಅಂತಹ ಸಮಯದಲ್ಲಿ ಆ ಡಾಕ್ಟರ್ ನೀವು ಕೋವಿಡ್ ನೆಗೆಟಿವ್ ರಿಪೋರ್ಟ್ ತಂದರೆ ಮಾತ್ರ ರೋಗಿಯನ್ನು ನೋಡುತ್ತೇವೆ ಎಂದು ಡಾಕ್ಟರ್ ಹೇಳಿದಾಗ ಬೇರೆ ದಾರಿ ಕಾಣದೆ ಕೊನೆಯದಾಗಿ
ನೆನಪಾದ ಡಾಕ್ಟರ್ ಮಂಗಳೂರಿನ ಪ್ರತಿಷ್ಠಿತ ಡಾಕ್ಟರ್ *ಆಯಿಷಾ*
ತಕ್ಷಣ ಕಣಚೂರ್ ಹಾಸ್ಪಿಟಲ್ ನ ರಶೀದ್ ಎಂಬವರನ್ನು ಸಂಪರ್ಕಿಸಿ ರಾತ್ರಿ 1:45 ಸಮಯಕ್ಕೆಕಣಚೂರ್ ಹಾಸ್ಪಿಟಲ್ ನಲ್ಲಿ ನಾರ್ಮಲ್ ಡೆಲಿವರಿ ಆದದ್ದು ಖಂಡಿತವಾಗಿಯೂ ಆ ದೇವರಿಗೂ ಹಾಗೂ ಆಯಿಷಾ ಡಾಕ್ಟರ್ ರಿಗೂ ಕಣಚೂರ್ ಹಾಸ್ಪಿಟಲ್ ಸಿಬ್ಬಂದಿ ವರ್ಗಕ್ಕೂ ಹೃದಯಪೂರ್ವ ಅಂತರಾಳದಿಂದ ಕೃತಜ್ಞತೆ ಸಲ್ಲಿಸುತ್ತೇವೆ..!
✍🏻ಕುಟುಂಬಸ್ಥರು..!

ಮಾನವೀಯ ನೆಲೆಗಟ್ಟಿನಲ್ಲಿ ಅತ್ಯುತ್ತಮ ಸೇವೆ ನೀಡುವ ಕಣಚೂರು ಆಸ್ಪತ್ರೆಯ ಬೆನ್ನೆಲುಬುಗಳಾದ ಕಣಚೂರು ಮೋನು ಹಾಜಿ ಮತ್ತು ಅಬ್ದುರ್ರಹ್ಮಾನ್ ಕಣಚೂರು*

ದೇರಳಕಟ್ಟೆಯ ಕಣಚೂರು ಆಸ್ಪತ್ರೆಯು ಮಾನವೀಯ ನೆಲೆಯಲ್ಲಿ ಮಾತ್ರ ಸ್ಪಂದಿಸುವ ಮಾದರಿ ಆಸ್ಪತ್ರೆಯಾಗಿದ್ದು ಇತರ ಕಡೆ ಶಸ್ತ್ರ ಕ್ರಿಯೆ ನಡೆಸಬೇಕೆಂದು ಹೇಳಿದ್ದ ಪುತ್ತೂರಿನ ಸಹೋದರಿಯರೊಬ್ಬರಿಗೆ ಸಾಮಾನ್ಯ ಹೆರಿಗೆ ಮಾಡಿಸುವ ಮೂಲಕ ಮತ್ತೊಮ್ಮೆ ಅಪಪ್ರಚಾರಕರ ಆರೋಪವನ್ನು ಮೆಟ್ಟಿ ನಿಂತಿದೆ.
ಕಳೆದ ಆರು ವರ್ಷಗಳಿಂದ ಕಣಚೂರು ಆಸ್ಪತ್ರೆಯ ಅಧ್ಯಕ್ಷ ಹಾಜಿ ಯು.ಕೆ.ಮೋನು ಕಣಚೂರು ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ತಾವೇ ಮುತುವರ್ಜಿ ವಹಿಸಿ ಮುಂದೆ ನಿಂತು ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ.
ಕಣಚೂರು ಮೋನು ಹಾಜಿ ಯವರಿಗೆ ಬೆನ್ನೆಲುಬಾಗಿ ಅವರ ಮಗ ಅಬ್ದುರ್ರಹ್ಮಾನ್ ಕಣಚೂರು ಕೂಡ ಅತ್ಯುತ್ತಮ ಸೇವೆ ನೀಡುವ ಮೂಲಕ ಕಣಚೂರು ಆಸ್ಪತ್ರೆ ನಿರ್ಮಿಸಿದ್ದೇ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮಾತ್ರ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ಈ ಕೊರೋನ ಸಂದರ್ಭದಲ್ಲಿ ಹಾಜಿ ಯು.ಕೆ.ಮೋನು ಕಣಚೂರು ಮತ್ತು ಅವರ ಮಗ ಅಬ್ದುರ್ರಹ್ಮಾನ್ ಕಣಚೂರು, ಹೆಚ್ಚಿನ ಸಮಯ ಆಸ್ಪತ್ರೆಯಲ್ಲೇ ಇದ್ದು ರೋಗಿಗಳಿಗೆ ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಆಸ್ಪತ್ರೆ ಯೆಂದರೆ ರೋಗಿಗಳಿಂದ ಬೇಕಾಬಿಟ್ಟಿ ಹಣ ಪೀಕಿಸುವ ಕೇಂದ್ರ ಗಳು ಎಂಬ ಜನತೆಯ ದೂರಿನ ನಡುವೆ ದೇರಳಕಟ್ಟೆ ನಗರದ ಅಭಿಮಾನವಾಗಿ ತಲೆಯೆತ್ತಿ‌ ನಿಂತಿರುವ ಕಣಚೂರು ಆಸ್ಪತ್ರೆ ವಿಭಿನ್ನ ಶೈಲಿಯಲ್ಲಿ ರೋಗಿಗಳೊಂದಿಗೆ ಮಾನವೀಯತೆ ಯಿಂದ ವರ್ತಿಸುವ ಮೂಲಕ ಸರ್ವರಿಗೂ ಆಶಾ ಕೇಂದ್ರವಾಗಿ ಮೂಡಿಬಂದಿದೆ.
ಕಣಚೂರು ಆಸ್ಪತ್ರೆಗೆ ಹೋಗುವವರು ಯಾವುದೇ ಭಯ ಪಡಬೇಕಾಗಿಲ್ಲ.
ರೋಗಿಗಳೊಂದಿಗೆ ಕಣಚೂರು ಮೋನು ಹಾಜಿ ಮತ್ತು ಅವರ ಪುತ್ರ ಅಬ್ದುರ್ರಹ್ಮಾನ್ ಕಣಚೂರು ಸದಾ ಇದ್ದಾರೆ.

✍️ *ಕೆ.ಎ.ಅಬ್ದುಲ್ ಅಝೀಝ್ ಪುಣಚ*

*ಕಣಚೂರು ಆಸ್ಪತ್ರೆಯಲ್ಲಿ ಬೆಚ್ಚಿ ಬೀಳಿಸುವ ಮೆಡಿಸಿನ್‌ ದಂಧೆ ಮತ್ತು ದಾಳಿ ಎಂಬ ಪ್ರಚಾರ ಪ್ರಿಯರ ಸುಳ್ಳಾರೋಪ*

ದೇರಳಕಟ್ಟೆ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಯು.ಕೆ.ಮೋನು ಕಣಚೂರು ಅವರು ಜನರಿಗೆ ಉಪಕಾರವಾಗಬೇಕು ಎಂಬ ಏಕೈಕ ಉದ್ದೇಶದಿಂದ ತುಂಬಾ ಶ್ರಮ ಪಟ್ಟು ಕಣಚೂರು ಆಸ್ಪತ್ರೆ ಕಟ್ಟಿಸಿದ್ದಾರೆ.
ಅವರ ಇತರ ಅಂತರಾಷ್ಟ್ರೀಯ ಮಟ್ಟದ ಉದ್ಯಮಗಳ ನಡುವೆ ಊರಿನಲ್ಲಿ ಜನರಿಗೆ ಉಪಕಾರವಾಗಬೇಕು ಎಂದು ಬೃಹತ್ ಆಸ್ಪತ್ರೆ ಕಟ್ಟಿ ಅವರು ಜನಸೇವೆ ಮಾಡುತ್ತಿರುವ ಸಂಗತಿ ಸರ್ವರಿಗೂ ತಿಳಿದಿರುವ ವಿಷಯ.

ಇತ್ತೀಚಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಎಂದು ಪರಿಚಯಿಸಿದ ಕೆಲವು ಯುವಕರು ಕಣಚೂರು ಆಸ್ಪತ್ರೆಗೆ ಬಂದು ಕಣಚೂರು ಮೋನು ಹಾಜಿ ಯವರ ಮಾಜಿ ಚಾಲಕ ಚಾರ್ಮಾಡಿಯ ಹಂಝ ಎಂಬವರಿಗೆ ಕಣಚೂರು ಆಸ್ಪತ್ರೆಯಲ್ಲಿ ಅನ್ಯಾಯವಾಗಿದೆ ಎಂದು ರಾದ್ದಾಂತ ವೆಬ್ಬಿಸಿ ನೋಡೆಲ್ ಅಧಿಕಾರಿಯನ್ನು ಕೂಡ ಕರೆಸಿ,ಕಣಚೂರು ಆಸ್ಪತ್ರೆ ಹೆಚ್ಚು ಬಿಲ್ ಮಾಡಿದೆ ಎಂದು ಹೇಳಿ ಅದನ್ನು ಸಾಮಾಜಿಕ ತಾಣಗಳಲ್ಲಿ ” ಯುವ ಕಾಂಗ್ರೆಸ್ಸಿಗರಿಂದ ಆಸ್ಪತ್ರೆಗೆ ದಾಳಿ” ಎಂದು ಸುಳ್ಳು ಸುದ್ದಿ ಹಬ್ಬಿಸಲಾಯಿತು.

ನಿಜ ಸಂಗತಿ ಸ್ಥಿತಿ ಏನೆಂದರೆ, ಕೊರೋನ ರೋಗಿಗಳಿಗೆ ನಿರ್ದಿಷ್ಟ ಆಸ್ಪತ್ರೆ ಗಳಲ್ಲಿ 75% ಬೆಡ್ ಸರಕಾರ ನೀಡುತ್ತಿದೆ.
ಅದೇ ಪ್ರಕಾರ ಚಾರ್ಮಾಡಿಯ ಹಂಝ ಎಂಬ ರೋಗಿಗೆ ಕೂಡ ಕಣಚೂರು ಆಸ್ಪತ್ರೆ ನ್ಯಾಯಯುತವಾಗಿಯೇ ಬಿಲ್ ಮಾಡಿದೆ.
ಸರಕಾರದ ಮಾನದಂಡ ಪ್ರಕಾರ ಮಾತ್ರ ಕಣಚೂರು ಆಸ್ಪತ್ರೆ ನ್ಯಾಯಯುತ ಬಿಲ್ ಮಾಡುತ್ತಿದೆ.
ಆದರೆ ಸರಕಾರ ಹೇಳದ ಕೆಲವು ಔಷಧಿಯನ್ನು ರೋಗಿಗಳ ಅವಶ್ಯಕತೆ ಪ್ರಕಾರ
ಇನ್ನಿತರ ರೋಗಗಳಿದ್ದರೆ ಬೇರೆ ಔಷಧಿ ನೀಡಬೇಕಾಗುತ್ತದೆ.
ಇದನ್ನು ನೋಡೆಲ್ ಅಧಿಕಾರಿಯವರು ಕೂಡ ರೋಗಿಗಳೊಂದಿಗೆ ನಿನ್ನೆ ಹೇಳಿದ್ದಾರೆ.
ಆಕ್ಸಿಜನ್, ವೆಂಟಿಲೇಟರ್ ಸಹಿತ ಸರಕಾರದ ವತಿಯಿಂದ ಉಚಿತವಾಗಿ ರೋಗಿಗಳಿಗೆ ನೀಡಲಾಗುತ್ತಿದೆ.

ಆದರೆ ಕೆಲವು ಯುವಕರು ಕೇವಲ ಪ್ರಚಾರಕ್ಕಾಗಿ ನಾವು ಕಣಚೂರು ಆಸ್ಪತ್ರೆಗೆ ದಾಳಿ ಮಾಡಿ ಹೆಚ್ಚು ಬಿಲ್ ಮಾಡಿದ ಕಾರಣ ತರಾಟೆಗೆ ತೆಗೆದು ಕೊಂಡಿದ್ದೇವೆಂದು ಬಿಂಬಿಸಿ ಜನರ ನಡುವೆ ಹೀರೋ ಆಗಲು ಯತ್ನಿಸಿದರೂ ಆಡಳಿತ ಮಂಡಳಿಯ ಸಮಯ ಪ್ರಜ್ಞೆ ಯಿಂದಾಗಿ ಯುವ ಕಾಂಗ್ರೆಸ್ಸಿಗರು ಎನ್ನುವ ಈ ಪ್ರಚಾರ ಪ್ರಿಯ ಗುಂಪಿನ ನಿಜಬಣ್ಣ ಈಗ ಬಟಾ ಬಯಲಾಗಿದೆ.

ಕಣಚೂರು ಆಸ್ಪತ್ರೆ ಆರಂಭವಾದ ಬಳಿಕ ರೋಗಿಗಳಿಗೆ ಅತ್ಯುತ್ತಮ ಗುಣಮಟ್ಟದ ಮೂರು ಹೊತ್ತಿನ ಊಟ ಮತ್ತು ಒಂದು ಹೊತ್ತಿನ ಚಹಾ ನೀಡುತ್ತಿದೆ.
ಬೆಡ್,ವೈದ್ಯರ ಚಾರ್ಜ್ ಕೂಡ ಉಚಿತವಾಗಿದೆ.
ಆಡಳಿತ ಮಂಡಳಿ ಆರು ವರ್ಷಗಳಿಂದ ಇಷ್ಟೆಲ್ಲಾ ಸೇವೆ ಮಾಡುತ್ತಿದ್ದರೂ ಕೆಲವೊಂದು ಪ್ರಚಾರಪ್ರಿಯರು ಕಣಚೂರು ಆಸ್ಪತ್ರೆ ಬಗ್ಗೆ ತಪ್ಪು ಮಾಹಿತಿ ನೀಡಿ ತಾವು ಸಮಾಜದಲ್ಲಿ ಹೀರೋ ಆಗಲು ಶ್ರಮಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡು.
ಲಾಕ್‌‌ಡೌನ್ ಸಂದರ್ಭದಲ್ಲಿ ಜಾತಿ ಮತ ಬೇಧವಿಲ್ಲದೆ ಕಿಟ್ ವಿತರಿಸಿ ಮಾನವೀಯತೆ ಮರೆದಿರುವ ಕಣಚೂರು ಆಸ್ಪತ್ರೆಯ ಆಡಳಿತ ಮಂಡಳಿ, ಜನರು ಯಾವುದೇ ಕಾರಣಕ್ಕೂ ತೊಂದರೆ ಅನುಭವಿಸಬಾರದೆಂದು ಸದಾ ಜಾಗ್ರತೆ ವಹಿಸುವ ಅತ್ಯುತ್ತಮ ಆಡಳಿತ ಮಂಡಳಿ ಯೆಂದರೆ ಅದು ಅತಿಶಯೋಕ್ತಿಯಾಗಲಾರದು.

ಕಣಚೂರು ಆಸ್ಪತ್ರೆ ಬಗ್ಗೆ ಅಪಪ್ರಚಾರ ನಡೆಸಿದವರು ಆಡಳಿತ ಮಂಡಳಿ ಮತ್ತು ರೋಗಿಗೆ ತಿಳಿಯದೆ ನೋಡೆಲ್ ಅಧಿಕಾರಿಯೊಂದಿಗೆ ಮಾತುಕತೆ ನಡೆಸಿ ಆ ಫೋಟೋ ವನ್ನು ಸಾಮಾಜಿಕ ತಾಣಗಳಿಗೆ ಹರಿಯಬಿಟ್ಟಿದ್ದಾರೆ ಎನ್ನುವುದು ಇನ್ನೊಂದು ಮಹತ್ವದ ಸಂಗತಿಯಾಗಿದೆ.
ಹಾಗೆ ಅನ್ಯಾಯ ಆಗಿದ್ದೇ ಆದರೆ ಮೊದಲು ಆಡಳಿತ ಮಂಡಳಿ ಯೊಂದಿಗೆ ವಿಷಯ ಏನೆಂದು ಮನವರಿಕೆ ಮಾಡಿಕೊಡಬೇಕಿತ್ತು.
ಆದರೆ ರೋಗಿ ಯಾವುದೇ ದೂರು ನೀಡದಿದ್ದರೂ ಯುವ ಕಾಂಗ್ರೆಸ್ ಹೆಸರಿನ ಈ ಪ್ರಚಾರ ಪ್ರಿಯ ಗುಂಪು ತಾವು ಆಸ್ಪತ್ರೆಗೆ ದಾಳಿ ನಡೆಸಿದ್ದೇವೆಂದು ಸ್ವಯಂ ಘೋಷಣೆ ಮಾಡಿರುವುದು ಸಾರ್ವಜನಿಕವಾಗಿ ನಗೆಪಾಟಲಿಗೀಡಾಗಿದೆ.
ನೋಡೆಲ್ ಅಧಿಕಾರಿಯನ್ನು ಕರೆಸಿದವರ ಪೈಕಿ ಆಲ್ವಿನ್ ಡಿಸೋಜ ಎಂಬ ವ್ಯಕ್ತಿಯ ಮಗಳಿಗೆ, ಸರಕಾರ ನಿಶ್ಚಯಿಸಿದ ಒಂದು ಕೋಟಿ ಇಪ್ಪತ್ತು ಲಕ್ಷದ ವೈದ್ಯಕೀಯ ಸೀಟನ್ನು ಕಣಚೂರು ಮೋನು ಹಾಜಿ ಯವರು ಎಲ್ಲರಿಗಿಂತ ಕಡಿಮೆ ಮಾಡಿ ನೀಡಿದ್ದರು.
ಕಣಚೂರು ಮೋನು ಹಾಜಿಯವರಿಂದ ಒಂದಲ್ಲ ಒಂದು ರೀತಿಯಲ್ಲಿ ಉಪಕಾರ ಪಡೆದವರೇ ಈ ದಾಳಿ ನಾಟಕದ ಹಿಂದಿದ್ದಾರೆನ್ನುವಾಗ ಇವರ ಪುಕ್ಕಟೆ ಪ್ರಚಾರದ ತೀವ್ರತೆ ಮನದಟ್ಟಾಗುತ್ತದೆ.
ಇಂಥಾ ಪ್ರಚಾರ ಪ್ರಿಯರು ಕೇವಲ ಮುಸ್ಲಿಂ ಆಡಳಿತದ ಆಸ್ಪತ್ರೆ ಬಗ್ಗೆ ಈ ರೀತಿ ಅಪಪ್ರಚಾರ ಮಾಡುತ್ತಾರೆ.
ಇತರ ಆಸ್ಪತ್ರೆಗೆ ತೆರಳಿ ಇವರು ಈ ರೀತಿ ಪುಕ್ಕಟೆ ಪ್ರಚಾರ ಪಡೆಯಲೆತ್ನಿಸಿದರೆ ತಕ್ಕ ಮಂಗಳಾರತಿಯಾಗುತ್ತದೆ ಎಂದು ಅವರಿಗೆ ಗೊತ್ತಿದೆ.

ಕಣಚೂರು ಆಸ್ಪತ್ರೆಗೆ ಬಂದು ರಾದ್ದಾಂತ ನಡೆಸಿದವರ ಫೈಕಿ ಆಲ್ವಿನ್ ಡಿಸೋಜ ನಂತರ ಸ್ಪಷ್ಟನೆ ನೀಡುತ್ತಾ” ಕೆಲವು ಯುವ ಕಾಂಗ್ರೆಸ್ ಕಾರ್ಯಕರ್ತರು ನನ್ನನ್ನು ಕರೆದಾಗ ನಾನು ಬಂದಿದ್ದೆ.
ಆದರೆ ಈ ಯುವಕರು ಅದನ್ನು ಈ ರೀತಿ ಪ್ರಚಾರ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ ” ಎಂದಿದ್ದಾರೆ.
ಈ ಘಟನೆ ಬಗ್ಗೆ ಅವಲೋಕಿಸುವಾಗ ಯುವ ಕಾಂಗ್ರೆಸ್ ಹೆಸರಿನಲ್ಲಿ ಈ ಯುವಕರು ಪುಕ್ಕಟೆ ಪ್ರಚಾರ ಗಿಟ್ಟಿಸಿ ಸಮಾಜದ ಮುಂದೆ ಮಿಂಚಲು ಯತ್ನಿಸಿದ್ದರು ಎಂಬುದು ಸ್ಪಷ್ಟವಾಗುತ್ತಿದೆ.
ಕಣಚೂರು ಆಸ್ಪತ್ರೆ ದಿನದ ಇಪ್ಪತ್ತನಾಲ್ಕು ಗಂಟೆ ಕೂಡ ಜನರಿಗೆ ಮುಕ್ತವಾಗಿದೆ.
ಯಾವುದೇ ರೀತಿಯ ಅಪಪ್ರಚಾರಗಳನ್ನು ಮೆಟ್ಟಿ ನಿಂತು ನಾಗರಿಕರಿಗೆ ಅತ್ಯುತ್ತಮ ಸೇವೆ ನೀಡಲು ಅಲ್ಲಾಹುವಿನ ಅಪಾರ ಅನುಗ್ರಹದಿಂದ ಕಣಚೂರು ಆಸ್ಪತ್ರೆ ಆಡಳಿತ ಮಂಡಳಿ ಸದಾ ಸಿದ್ಧವಿದೆ.

Reported by

Sameer