*ಬದುಕಿನಲ್ಲಿ ಹಣ – ಅಧಿಕಾರ ಮತ್ತು ಶಕ್ತಿಯು ಕಣ್ಣಿಗೆ ಕಾಣದ ವೈರಸ್ಸ್ ನ ಮುಂದೆ ಸೋತಿದೆ. ಈಗ ಉಳಿದಿರುವುದು ಮನುಷ್ಯತ್ವ ಮಾತ್ರ -: ಅಝಾದ್ ಮನ್ಸೂರ್*

ಮನುಷ್ಯ ಭಯ-ಭೀತಿ ಆತಂಕದಲ್ಲಿದ್ದಾನೆ. ಅಪಾಯ ಮತ್ತು ಅನಾಹುತಗಳು ಸುತ್ತಿಕೊಂಡಿದೆ. ಇದು ಪರಸ್ಪರ ತರ್ಕಿಸುವ- ವೈಷಮ್ಯ ಮತ್ತು ಧರ್ಮಾಂಧತೆ ಪ್ರದರ್ಶಿಸುವ ಸಮಯವಲ್ಲ. ನಾವೀಗ ಮನುಷ್ಯ ಸಂಕುಲದ ವ್ಯಥೆಗೆ ದೈರ್ಯ ಮತ್ತು ದಯೆ ತೋರಿಸುವ ಸಮಯ. ಪ್ರತೀಯೊಬ್ಬರೂ ಪರಸ್ಪರ ಪ್ರೀತಿ -ಕರುಣೆಯೊಂದಿಗೆ ಮನುಷ್ಯರ ಸಂಕಷ್ಟಕ್ಕೆ ಸಮರೋಪಾದಿಯಲ್ಲಿ ಸಹಭಾಗಿಗಳಾಗಿ ದುಡಿಯಬೇಕು ಎಂದು ಮಂಗಳೂರಿನ ಪ್ರತಿಷ್ಠಿತ ಸೇವಾ ಸಂಸ್ಥೆ ಹಿದಾಯ ಪೌಂಡೇಶನ್ ನ ಅಧ್ಯಕ್ಷರಾದ ಮನ್ಸೂರ್ ಅಝಾದ್ ತನ್ನ ಈದ್ ಸಂದೇಶದ ತಿಳಿಸಿದ್ದಾರೆ. ಕೊರೊನಾ ಎಂಬ ಮಹಾಮಾರಿಯು ನಮ್ಮ ಧರ್ಮ -ಬಣ್ಣ- ಅಂತಸ್ತು ನೋಡುವುದಿಲ್ಲ. ಅದು ಮನುಷ್ಯನ ಮೇಲೆ ಆಕ್ರಮಿಸುತ್ತಿದೆ. ನಾವು ಮನುಷ್ಯರಾಗಿ ಚಿಂತಿಸಲು ಪ್ರಕೃತಿಯು ನಮಗೆ ಪಾಠ ಕಲಿಸಿದೆ. ಈಗ ನಮಗೆ ಬೇಕಿರುವುದು ಏನು ಎಂದು ಆಲೋಚಿಸಲೂ ಅವಕಾಶ ನೀಡಿದೆ. ಮನುಷ್ಯನು ಪರಸ್ಪರ ಸಹಕರಿಸಿ ಬದುಕಲೇ ಬೇಕಾದ ಅನಿವಾರ್ಯತೆ ಸೃಷ್ಠಿಸಿದ ಈ ಸನ್ನಿವೇಶದಲ್ಲಿ ಮಾನವೀಯತೆ ಮೇಲುಗೈ ಸಾಧಿಸಿದೆ ಎಂದವರು ಹೇಳಿದರು.

*ರಾಜ್ಯದಾದ್ಯಂತ ಲಕ್ಷಾಂತರ ಜನರು ಸಂಕಷ್ಟದಲ್ಲಿರುವಾಗ ಈದ್ ಸಂಭ್ರಮ ಇಲ್ಲವಾಗಿದೆ. ಸಾವಿರಾರು ವೈಧ್ಯರು -ದಾದಿಯರು-ಆಸ್ಪತ್ರೆ ಸಿಬ್ಬಂದಿಗಳು ಜೀವದ ಹಂಗು ತೋರೆದು ರೋಗಿಗಳ ಸೇವೆ ಮಾಡುತ್ತಿದ್ದಾರೆ. ಉಪವಾಸ ತಿಂಗಳು ನಮಗೆ ಸಿಕ್ಕಿದ ಪುಣ್ಯದ ಫಲಕ್ಕಿಂತ ನಿಮ್ಮ ಕೆಲಸಕ್ಕೆ ಸಿಗುವ ಪುಣ್ಯವು ಶ್ರೇಷ್ಠವಾಗಿದೆ. ಸರಕಾರಿ ಅಧಿಕಾರಿಗಳು- ಜನಪ್ರತಿನಿಧಿಗಳು ಕೂಡ ಈ ಮಹಾಮಾರಿಯ ವಿಪತ್ತನ್ನು ನಿಗ್ರಹಿಸಲು ಶ್ರಮಪಡುವುದು ಕಾಣುತ್ತಿದ್ದೇವೆ. ಈ ನಡುವೆ ಮುಸ್ಲಿಂ ಸಂಘ ಸಂಸ್ಥೆಗಳು -ಸೇವಾ ಕಾರ್ಯಕರ್ತರು ಜನರ ಮೇಲೆ ತೋರಿಸುತ್ತಿರುವ ಕರುಣೆಗೆ ಅಭಿಮಾನ ವ್ಯಕ್ತ ಪಡಿಸಿದ ಅಝಾದ್ ಮನ್ಸೂರ್, ಬದುಕಿನಲ್ಲಿ ಹಣ – ಅಧಿಕಾರ ಮತ್ತು ಶಕ್ತಿಯು ಕಣ್ಣಿಗೆ ಕಾಣದ ವೈರಸ್ಸ್ ನ ಮುಂದೆ ಸೋತಿದೆ. ಈಗ ಉಳಿದಿರುವುದು ಮನುಷ್ಯತ್ವ ಮಾತ್ರ ಎಂದರು.*

ಹಿದಾಯ ಪೌಂಡೇಶನ್ ಮುಖಾಂತರ ವೆಲ್ ನೆಸ್ಸ್ ಹೆಲ್ಪ್ ಲೈನ್ ಆರಂಭಿಸಿ ನಾವು ಈಗಾಗಲೇ ಜಿಲ್ಲಾಡಳಿತ ಮತ್ತು ಸನ್ಮಾನ್ಯ ಶಾಸಕರ ಸಹಯೋಗದಲ್ಲಿ ಕೋವಿಡ್ ವಿರುದ್ದ ಹೋರಾಟದಲ್ಲಿ ದುಡಿಯುತ್ತಿದ್ದೇವೆ. ಈಗಾಗಲೇ ಖ್ಯಾತ ವೈಧ್ಯರ- ಆಸ್ಪತ್ರೆಗಳ -ಎನ್ ಜಿ ಓ ಮತ್ತು ಸರಕಾರದ ನೆಟ್ವರ್ಕನ್ನು ಅಭಿವೃದ್ದಿ ಪಡಿಸಿ ಸಾವಿರಾರು ರೋಗಿಗಳಿಗೆ ನೆರವಾಗುತ್ತಿದ್ದೇವೆ. 24 ಘಂಟೆಯೂ ಹೆಲ್ಪ್ ಲೈನ್ ಸೆಂಟರ್ ಕಾರ್ಯಾಚರಿಸುತ್ತಿದೆ. ಆಕ್ಸಿಜನ್ ಸಿಲೀಂಡರ್, ಪ್ಲಾಝ್ಮಾ ಮತ್ತು ವೆಂಟಿಲೇಟರ್ ಸೌಲಭ್ಯವನ್ನೂ ನೀಡುತ್ತಿದ್ದೇವೆ. ಪೇಸೆಂಟ್ ಟ್ರಾಕಿಂಗ್ ಮತ್ತು ಸೌಲಭ್ಯ ನಿರ್ವಹಣೆಗೆ ವಿಶೇಷ ತಂಡವು ದುಡಿಯುತ್ತಿದೆ. ಜಿಲ್ಲೆಯ ಯಾವುದೇ ಭಾಗದಲ್ಲೂ ನಮ್ಮ ಸೇವೆಯ ಸಹಕಾರ ಪಡೆಯಬಹುದು ಎಂದ ಅಝಾದ್ ಮನ್ಸೂರ್, ಕೌಂನ್ಸಿಲಿಂಗ್ ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ನಿಖರವಾಗಿ ವಿವರಿಸುಗ ತಜ್ಞ ತಂಡವನ್ನು ನಾವು ಹೊಂದಿದ್ದು, ಯಾವುದೇ ಸೂಚನೆ ಮತ್ತು ನೆರವಿನ ಅಗತ್ಯಕ್ಕೆ ವೆಲ್ ನೆಸ್ಸ್ ಮಂಗಳೂರು ಸಂಸ್ಥೆಯನ್ನು ಸಂಪರ್ಕಿಸಲು ಅಝಾದ್ ಮನ್ಸೂರ್ ಕೋರಿಕೊಂಡಿದ್ದಾರೆ.

*ನಾಡಿನ ಜನತೆಗೆ ಈದುಲ್ ಫಿತ್ರ್ ಹಬ್ಬದ ಶುಭಾಶಯ ತಿಳಿಸಿದ ಅವರು, ನಾವು ಎಚ್ಚರಿಕೆ ವಹಿಸುವ, ಸರಕಾರದ ನಿಯಮ ಪಾಲಿಸುವ ಮತ್ತು ಈ ಮಹಾಮಾರಿಯನ್ನು ಸಂಘಟಿತವಾಗಿ ನಿವಾರಿಸುವ ಎಂದಿದ್ದಾರೆ…*
✍🏻
*ಸುನ್ನೀಟುಡೇ*