*7 ಕೋಟಿ ರೂಗಳ ಸಹಾಯ*.
*ಐನೂರಕ್ಕೂ ಮಿಕ್ಕಿದ ಫಲಾನುಭವಿಗಳು*.
*ಫಲಾನುಭವಿಗಳು ಯಾರು ಎಂದು ಜಗತ್ತಿಗೆ ಗೊತ್ತಿಲ್ಲ*.
*ಸಹಾಯ ಮಾಡಿದವರು ಯಾರು ಎಂದು ಫಲಾನುಭವಿಗಳಿಗೆ ಗೊತ್ತಿಲ್ಲ*.
*ಪ್ರಚಾರವಿಲ್ಲದೆ ಇಷ್ಟೊಂದು ಗುಟ್ಟಾಗಿ ಮುನ್ನಡೆಯುತ್ತಿರುವ ಆ ಯೋಜನೆ ಯಾವುದು?*
ಐನೂರಕ್ಕೂ ಮಿಕ್ಕಿದ ಫಲಾನುಭವಿಗಳು. ಸುಮಾರು 7ಕೋಟಿ ರೂ ಗಳ ಸಹಾಯದ ಮೊತ್ತ. ಆ ಫಲಾನುಭವಿಗಳು ಯಾರು ಎಂದು ಜಗತ್ತಿಗೆ ಗೊತ್ತಿಲ್ಲ. ಸಹಾಯ ಮಾಡಿದವರು ಯಾರು ಎಂದು ಫಲಾನುಭವಿಗಳಿಗೆ ಗೊತ್ತಿಲ್ಲ. ತನ್ನ ಹೆಂಡತಿಯ ಕತ್ತಲ್ಲಿರುವ ಸರ, ಕಿವಿಯಲ್ಲಿರುವ ಬೆಂಡೋಲೆ, ಯಾರು ಕೊಟ್ಟದ್ದು ಅಂತ ಅವಳ ಗಂಡನಿಗೇ ಗೊತ್ತಿಲ್ಲ. ಸಹಾಯ ಮಾಡಿದ ಸಂಸ್ಥೆಯ ಸ್ಥಾಪಕರು ಯಾರು? ಆ ಅಭಿಯಾನದ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು, ಸಲಹೆಗಾರರು ಯಾರಿದ್ದಾರೆ? ಇದರ ಹಿಂದೆ ಸಹಾಯ ಮಾಡುವ ಕೈಗಳು ಯಾರು? ಎಂಬುದು ಫಲಾನುಭವಿಗಳಿಗೆ ಗೊತ್ತೇ ಇಲ್ಲ.
ಅಷ್ಟೊಂದು ಗುಟ್ಟಾಗಿ ಈ ಐನೂರಕ್ಕಿಂತ ಮಿಕ್ಕಿದ ಫಲಾನುಭವಿಗಳಿಗೆ ಸಹಾಯವನ್ನು ನೀಡಲಾಗಿದೆ. ಫೋಟೊ ಇಲ್ಲ. ಪ್ರಚಾರ ಇಲ್ಲ. ಪೇಪರ್ ನಲ್ಲಿ ಸುದ್ದಿ ಇಲ್ಲ. ವೇದಿಕೆ, ಅತಿಥಿಗಳ ಮಾತು ಯಾವುದೂ ಇಲ್ಲ. ಒಂದೋ ಫಲಾನುಭವಿಯ ಮನೆಗೆ ಗುಟ್ಟಾಗಿ ಸಹಾಯವನ್ನು ತಲುಪಿಸಲಾಗುತ್ತದೆ ಅಥವಾ ಆಫೀಸಿಗೆ ಬಂದು ಫಲಾನುಭವಿಗಳು ಸಹಾಯವನ್ನು ಪಡೆದು ಕೊಳ್ಳುತ್ತಾರೆ.
*ಇಷ್ಟೊಂದು ವೈಶಿಷ್ಟ್ಯಮಯ ಯೋಜನೆಯೇ ನಂಡೆ ಪೆಂಙಳ್ ಅಭಿಯಾನ.* ಪ್ರಾಯ ಮೂವತ್ತು ಮೀರಿದ ನಮ್ಮ ನಮ್ಮ ಸಹೋದರಿಯರಿಗೆ ಮದುವೆ ಯೋಜನೆ. *ಈವರೆಗೆ ಐನೂರಕ್ಕಿಂತ ಅಧಿಕ ಸಹೋದರಿಯರಿಗೆ ದಾಂಪತ್ಯ ಭಾಗ್ಯ ಕಲ್ಪಿಸಿ ಅವರ ಮುಖದಲ್ಲಿ ನಗುವನ್ನು ಅರಳಿಸಲಾಗಿದೆ. ಅವರ ಹೆತ್ತವರ ಕಣ್ಣೀರನ್ನು ಒರೆಸಲಾಗಿದೆ.* ಈ ಸಹೋದರಿಯರ ಮೂಲಕ ಅದೆಷ್ಟೋ ಉಮ್ಮತ್ ಗಳನ್ನು ಈ ಜಗತ್ತಿಗೆ ಅರ್ಪಿಸಲಾಗಿದೆ. ಗರಿಷ್ಠ ಪ್ರಾಯ ನಲವತ್ತೇಳರ ಸಹೋದರಿಯೊಬ್ಬರಿಗೆ
ದಾಂಪತ್ಯ ಭಾಗ್ಯ ಸಿಕ್ಕಿದೆ. ಒಂದೆರಡು ತಲಾಕ್ ಬಿಟ್ಟರೆ ಉಳಿದ ಎಲ್ಲಾ ಜೋಡಿಗಳು ಸುಖ ದಾಂಪತ್ಯವನ್ನು ಅನುಭವಿಸುತ್ತಿದ್ದಾರೆ. ಅಲ್ ಹಮ್ದುಲಿಲ್ಲಾಹ್*
ಇನ್ನೊಬ್ಬರಿಗೆ ಸ್ಫೂರ್ತಿ ಯಾಗುವುದಾದರೆ ಯಾವುದೇ ಸಂಘಟನೆ ಮಾಡುವ ಉತ್ತಮ ಕೆಲಸಗಳಿಗೆ ಪ್ರಚಾರ ಸಿಗಲೇಬೇಕು. ಅದು ಅವರ ವೈಯಕ್ತಿಕ ಲಾಭಕ್ಕಲ್ಲ. ತಮ್ಮ ಸಂಸ್ಥೆ ಮಾಡುತ್ತಿರುವ ಉತ್ತಮ ಕೆಲಸಗಳನ್ನು ಇತರರಿಗೆ ಪರಿಚಯಿಸುವುದರೊಂದಿಗೆ ಅವರನ್ನು ಉತ್ತಮ ಕೆಲಸಗಳಿಗೆ ಪ್ರೇರೇಪಿಸುವುದೇ ಇದರ ಮುಖ್ಯ ಉದ್ದೇಶವಾಗಿರುತ್ತದೆ.
*ಇನ್ನೂ ಸಾವಿರಾರು ಹೆಣ್ಣುಮಕ್ಕಳು ಮದುವೆಯಾಗದೆ ಮನೆಯಲ್ಲೇ ಬಾಕಿಯಾಗಿದ್ದಾರೆ. ಅವರಿಗೂ ಮದುವೆಯ ಕನಸುಗಳಿವೆ. ದೈಹಿಕ ಬಯಕೆಗಳಿವೆ. ಅವರ ಕನಸು ನನಸಾಗಬೇಕಾದರೆ ಈ ಅಭಿಯಾನ ಮುಂದುವರಿಯಲೇಬೇಕು.* ನಮ್ಮ ಮೇಲೆ ಅವರಿಗೆ ಒಂದು ನಿರೀಕ್ಷೆ ಇದೆ. ಖಂಡಿತ ಇದೊಂದು ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ನಮ್ಮ ಜೊತೆ ಇರುತ್ತೀರಿ ಎಂಬ ಭರವಸೆ ಇದೆ. ಸಹಾಯ ಕೊಟ್ಟವರು ಮತ್ತೆಮತ್ತೆ ಕೊಡುತ್ತಲೇ ಇದ್ದಾರೆ. ಯಾಕೆಂದರೆ ಅದರ ಪ್ರಯೋಜನ ಅವರ ಅರಿವಿಗೆ ಬಂದಿದೆ. ಈ ಸಹೋದರಿಯರ ನಿರಂತರ ಪ್ರಾರ್ಥನೆ ನಮ್ಮ ಇಹ ಪರ ವಿಜಯಕ್ಕೆ ಕಾರಣವಾಗಬಹುದು. ಇನ್ಶಾ ಅಲ್ಲಾಹ್.
ಬ್ಯಾಂಕ್ ಖಾತೆ ವಿವರ