ಬೆಡ್ ಬ್ಲಾಕಿಂಗ್ ಹಗರಣ: ಇದೊಂದು ವ್ಯವಸ್ಥಿತ ಸಂಚು

ಪ್ರಮಾಣಿಕತೆ ಖ್ಯಾತಿಯ
ಮುಸ್ಲಿಂ ಐ ಎ ಎಸ್ ಅಧಿಕಾರಿಗಳ ಧಮನ ತಂತ್ರ

ಬೆಂಗಳೂರು:
ಕೊವಿಡ್ ಪೀಡಿತರಿಗೆ ಬೆಡ್ ಹಂಚುವ ಬಿ ಬಿ ಎಂ ಪಿ ವಾರ್ ರೂಮಿನಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಸಾಮಾಜಿಕ ಮಾಧ್ಯಮದ ಮೂಲಕ ಸಂಸದ ತೇಜಸ್ವಿ ಸೂರ್ಯ ತನ್ನ ಕೋಮುವಾದಿ ಅಸ್ತ್ರವನ್ನು ಬಿ ಬಿ ಎಂ ಪಿ ಜಾಯಿಂಟ್ ಕಮಿಷನರ್
ಮುಸ್ಲಿಂ ಎಂಬ ಕಾರಣಕ್ಕಾಗಿ
ಸರ್ಫ್ರಾಜ್ ಖಾನ್ ಅವರ ಮೇಲೆ ಪ್ರಯೋಗಿಸಿ ಕರೋನ ವೈಫಲ್ಯ ಮುಚ್ಚಿಕೊಳ್ಳಲು ಮುಂದಾಗಿದ್ದಾರೆ
ಎಂದು ರಾಷ್ಟ್ರೀಯ ಸೌಹಾರ್ದ ವೇದಿಕೆ ರಾಜ್ಯಧ್ಯಕ್ಷ ಸಮೀರ್ ಮಂಡ್ಯ ಗಂಬೀರ ಆರೋಪಮಾಡಿದ್ದಾರೆ.

ಇದೊಂದು ವ್ಯವಸ್ಥಿತ ಸಂಚಾಗಿದೆ, ರಾಜ್ಯದಲ್ಲಿ ಕೆಲವೇ ಕೆಲವು ಮುಸ್ಲಿಂ ಐ ಎ ಎಸ್ ಅಧಿಕಾರಿಗಳಿದ್ದು ಅವರನ್ನು ಧಮನಿಸುವ ತಂತ್ರವಾಗಿದೆ.
ಮುಸ್ಲಿಂ ಐ ಎ ಎಸ್ ಅಧಿಕಾರಿಗಳು ಪ್ರಯಾಣಿಕರ, ಕಳಂಕರಹಿತರು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇದನ್ನು ಕುಖ್ಯಾತಿ ಗೊಳಿಸಲು ಹಣದಿರುವ ಮಹಾಚಾಲವಾಗಿದೆ ಎಂದಿದ್ದಾರೆ.

ಸರ್ಫ್ರಾಜ್ ಖಾನ್ ರವರಿಗೆ ಹೆಣದ ಹೆಸರಿನಲ್ಲಿ ಹಣಮಾಡುವ ಅಗತ್ಯ ವಿಲ್ಲ.
ಇವರ ಅಧಿಕಾರವದಿಯಲ್ಲಿ ಒಂದು ಕಪ್ಪು ಚುಕ್ಕಿ ಇಲ್ಲದೆ ಕರ್ತವ್ಯ ಸಲ್ಲಿಸಿ ಎಲ್ಲಡೆ ಶಹಬ್ಬಾಸ್ ಗಿರಿ ಪಡೆದಿರುವ ಅಧಿಕಾರಿ ಯಾಗಿದ್ದಾರೆ, ಇವರ ತಂದೆ ಕೆ ಎ ಎಸ್ ಅಧಿಕಾರಿಯಾಗಿದ್ದು ಡಿ ಸಿ ಯಾಗಿ ಕರ್ತವ್ಯ ಸಲ್ಲಿಸಿದ್ದಾರೆ. ಅವರ ಸಹೋದರ ನನ್ನ ಸ್ನೇಹಿತರಾದ
ಶೇರೆಯಾರ್ ಖಾನ್ ಸಮಾಜ ಸೇವಕರಾಗಿ ಖ್ಯಾತಿ ಪಡೆದಿದ್ದಾರೆ.
ರಾಷ್ಟ್ರೀಯ ಸೌಹಾರ್ದ ವೇದಿಕೆ ಗೌರವಾಧ್ಯಕ್ಷರಾಗಿದ್ದಾರೆ.
ಅವರ ಇಬ್ಬರು ಸೋದರರು ಐಪಿಎಸ್ ಅಧಿಕಾರಿಗಳಾಗಿದ್ದಾರೆ.
ಇವರದು ಸೇವ ಮನೋಭಾವದ ಕುಟುಂಬವಾಗಿದೆ ಎಂದು ಅವರ ಕುಟುಂಬದ ಬಗ್ಗೆ ಶ್ಲಾಗಿಸಿದ್ದಾರೆ.

ಶರ್ಯಾರ್ ಖಾನ್ ಅವರು ರಾಷ್ಟ್ರೀಯ ಟಿವಿ ಚಾನೆಲ್ ಗಳ ಸಂವಾದ ಕಾರ್ಯಕ್ರಮಗಳಲ್ಲಿ ದೇಶದ ಭದ್ರತೆ,ಐಖ್ಯತೆ,ಸಾಮರಸ್ಯ ಮತ್ತು ಕಲ್ಯಾಣ ರಾಜ್ಯದ ಪರಿಕಲ್ಪನೆಗಳನ್ನು ಪ್ರತಿಪಾದಿಸುತ್ತಾರೆ ಎಂದು ಅವರ ದೇಶ ಪ್ರೇಮ, ಉತ್ತಮ ಸಮಾಜದ ಆದರ್ಶ ಗಳನ್ನು ಸಮರ್ಥಿಸಿದ್ದಾರೆ.

ಬಿ ಬಿ ಎಂ ಪಿ ಕೊಂವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಸರ್ಫ್ರಾಜ್ ಖಾನ್ ಅವರಿಗೆ ಮತೀಯ ಸೋಂಕು ತಲುಗಿಸಲು ಕೆಲವರು ಪ್ರಯತ್ನಿಸುತ್ತಿರುವುದು ಸಮಾಜದ ಸಾರ್ವಭೌಮತ್ವ ಕ್ಕೆ ದಕ್ಕೆ ತರುವ ಸಂಚಾಗಿದೆ ಇದರ ಗಂಬೀರ ಪರಿಣಾಮ ಜಾತ್ಯಾತೀತ ಸಿದ್ದಾಂತದ ಮೇಲೆ ಬೀಳಲಿದೆ ಎಂದಿದ್ದಾರೆ.

“ಯಾರೇ ಬಂದರೂ ಜಾತಿ ಅಥವಾ ಧರ್ಮವನ್ನು ನೋಡದೆ ಬೇಷರತ್ತಾಗಿ ಸಹಾಯ ಮಾಡುವುದನ್ನೇ ನಮ್ಮ ತಂದೆ ನಮಗೆ ಕಲಿಸಿದ್ದಾರೆ “ಎಂದು ಶರ್ಯಾರ್ ಖಾನ್ ಹೇಳುತ್ತಾರೆ.”ನಾವು ಮನೆ ಮತ್ತು ಪ್ರಾರ್ಥನಾ ಸ್ಥಳದಲ್ಲಿ ಮಾತ್ರ ಧರ್ಮವನ್ನು ಆಚರಿಸುತ್ತೇವೆ.ಆದರೆ ನಾವು ಕಟ್ಟರ್ ಪಂಥೀಯರಲ್ಲ.ಜನರನ್ನು ಧಾರ್ಮಿಕ ತಾರತಮ್ಯದಿಂದ ನೋಡುವ ಗುಣ ನಮ್ಮ ಜೀನ್ಸ್ ನಲ್ಲಿಯೇ ಇಲ್ಲ.ನಮ್ಮ ಸಂವಿಧಾನ ದಲ್ಲೂ ಇಲ್ಲ”ಎಂದು ಅವರು ದೃಢವಾಗಿ ಹೇಳುತ್ತಾರೆ ಇವರು ಅನೇಕ ಸಂದರ್ಭಗಳಲ್ಲಿ ಹೇಳಿದ್ದಾರೆ ಎಂದಿದ್ದಾರೆ.

“ನಮ್ಮ ಧರ್ಮ ಸ್ವತಂತ್ರವಾಗಿ ಆಲೋಚನೆ ಮಾಡುವಂತೆ ನಮ್ಮನ್ನು ಪ್ರೋತ್ಸಾಹ ಮಾಡಿದೆಯೇ ಹೊರತು ಕ್ಷುಲ್ಲಕವಾಗಿ ವರ್ತಿಸುವಂತೆ
ಅದು ನಮ್ಮನ್ನು ಪ್ರತಿಬಂಧಿಸಿಲ್ಲ ಅಥವಾ ಬಂಧಿಸಿಲ್ಲ ”
ಎಂದು ಅವರು ಪ್ರತಿಪಾದಿಸುತ್ತಾರೆ.
“ಹಿಂದೂಗಳು ಮುಸ್ಲಿಮರನ್ನು ದ್ವೇಷಿಸುತ್ತಾ ಒಂದು ಕಡೆ ಸೇರಿದರೆ ,ಮುಸ್ಲಿಮರು ಹಿಂದೂಗಳನ್ನು ದ್ವೇಷಿಸುತ್ತಾ ಇನ್ನೊಂದು ಕಡೆ ಸೇರಿದರೆ ಅದೊಂದು ಧಾರ್ಮಿಕ ಕ್ವಾರಂಟೈನ್ ಆಗಿಬಿಡುವ ಅಪಾಯವಿದೆ “ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ ಇದು ಇವರು ನಂಬಿರುವ ಸಿದ್ದಾತಗಳು ಎಂದಿದ್ದಾರೆ.
“ಈ ದೇಶದಲ್ಲಿ ನೂರು ಕೋಟಿಗೂ ಹೆಚ್ಚಿರುವ ಹಿಂದೂಗಳು ಮತ್ತು 20 ಕೋಟಿಗೂ ಹೆಚ್ಚಿರುವ ಮುಸ್ಲಿಮರು ಸಾಮರಸ್ಯದಿಂದ ಬದುಕಿ ಬಾಳುವುದು ಸಾಧ್ಯವಾದರೆ ಇದೊಂದು ಜಗತ್ತಿನ ಅತಿ ಸುಂದರವಾದ ಸ್ವರ್ಗವಾಗುತ್ತದೆ “ಎಂಬ ಆಶಯವನ್ನು ಅವರು ವ್ಯಕ್ತ ಪಡಿಸುತ್ತಾರೆ.

“ಎಲ್ಲ ಭಾರತೀಯರಂತೆ ನಮ್ಮದೂ ಒಂದು ದೇಶ ಭಕ್ತ ಕುಟುಂಬ.ಆದರೆ ಈ ಅಹಿತಕರ ಬೆಳವಣಿಗೆಯಿಂದ ನಾವು ತತ್ತರಿಸಿ ಹೋಗಿದ್ದೇವೆ”ಎಂದು ಅವರು ನೋವಿನಿಂದ ಹೇಳುತ್ತಾರೆ.

ನೈತಿಕತೆಯನ್ನು ಮೈಗೂಡಿಸಿಕೊಂಡು ಬದುಕುತ್ತಿರುವ
ವ್ಯಕ್ತಿಯ ವಿರುದ್ದ ಕ್ರಿಮಿನಲ್ ಹಿನ್ನಲೆಯ ವ್ಯಕ್ತಿ ಆರೋಪಿಸುತ್ತಿರುವುದು ಪಕ್ಷವನ್ನು ಓಲೈಸುತ್ತಾ ಸರಕಾರದ ತಪ್ಪುಗಳನ್ನು ಮುಚ್ಚಿಕೊಳ್ಳಲು ಮುಂದಾಗಿದ್ದಾರೆ.

ವಾರ್ ರೂಮಿನಲ್ಲಿ ಇವರ ಯಾವುದೇ ಪಾತ್ರವಿಲ್ಲ ಅಲ್ಲಿ ಯಾವುದೇ ವೈದ್ಯರೂ ಇವರಿಗೆ ಗೊತ್ತಿಲ್ಲ. ಹೀಗಿದ್ದರೂ ಇವರನ್ನು ಆರೋಪಿಯನ್ನಾಗಿಸಿರುವುದು
ಆಯೋಜಿತ ಕುತಂತ್ರವಾಗಿದೆ‌. ತೇಜೋವದೆಯ ಸಂಚಾಗಿದೆ.

ವಾರ್ ರೂಮನ್ನು ನಡೆಸುತ್ತಿರುವುದು ವಿಶೇಷ ಆರೋಗ್ಯ ಆಯುಕ್ತರು. ಇವರ ಕಾರ್ಯವೇನಿದ್ದರೂ ಬಿ ಬಿ ಎಂ ಪಿ ಕೊವಿಡ್ ಕೇರ್ ಸೆಂಟರ್ ಗಳ ಉಸ್ತುವಾರಿ ಮತ್ತು ಘನ ತ್ಯಾಜ್ಯ ಇಲಾಖೆಯ ನಿರ್ವಹಣೆ ಮಾತ್ರ.
ವಾರ್ ರೂಮ್ ಗೆ ಬೇಕಾದ ವೈದ್ಯರು ಅಥವಾ ಸಿಬ್ಬಂದಿಯ ನೇಮಕ ಮಾಡಿಕೊಳ್ಳುವುದು ಕೆಲಸ ಆರೋಗ್ಯ ಇಲಾಖೆಯ ಮತ್ತು ಆಯಾ ಬಿಬಿಎಂಪಿ ವಲಯಗಳ ಕೆಲಸವಾಗಿದೆ. ಇದಕ್ಕೂ ಇವರಿಗೂ ಯಾವುದೇ ಸಂಬಂಧವಿಲ್ಲ.
ಕೋಮು ಬಣ್ಣ ಹಚ್ಚಿ ಸಂಬಂದಪಟ್ಟ ಇಲಾಖೆಗೆ ಸಂಬಂಧವೇ ಇರದ ಸರ್ಫ್ರಾಜ್ ಖಾನ್ ಹೆಸರು ಸೇರಿಸಿರುವುದು
ಖಂಡಿಸುತ್ತೇನೆ ಎಂದಿದ್ದಾರೆ.

ಎಲ್ಲಾ ಕೊವಿಡ್ ಕೇರ್ ಕೇಂದ್ರಗಳಿಗೆ
ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ವ್ಯವಸ್ಥೆ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ಇವರು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ.

ಹಜ್ ಭವನವನ್ನು 140 ಬೆಡ್ ವ್ಯವಸ್ಥೆಯುಳ್ಳ ಆಕ್ಸಿಜನ್ ಸೌಲಭ್ಯವುಳ್ಳ ಕೊವಿಡ್ ಕೇರ್ ಕೇಂದ್ರವಾಗಿ ಪರಿವರ್ತಿಸಿ, ಹಜ್ ಕಮಿಟಿ ನಿಧಿಯಿಂದ 50 ಐಸಿಯು ಖರೀದಿ ಈ ಮೂಲಕ ಆರೈಕೆ ಮಾಡುತ್ತಿರುವ ಕೇಂದ್ರದ
ರೋಗಿಗಳಲ್ಲಿ 90% ರೋಗಿಗಳು ಅನ್ಯ ಧರ್ಮದವರಾಗಿದ್ದು. 10% ಮುಸ್ಲಿಮರಾಗಿದ್ದಾರೆ ಎಂದು ಅಂಕಿ ಅಂಶ ನೀಡಿದ್ದಾರೆ.

ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ ಮತ್ತು ಅಗತ್ಯವಿರುವ ಜನರಿಗೆ ಆಹಾರದ ಕಿಟ್ ಗಳನ್ನು ಒದಗಿಸಲು ಕೆಲಸ ಮಾಡಿದ್ದು. ಅವರೆಲ್ಲಾ ಯಾವ ಧರ್ಮದವರು ಯಾವ ಪ್ರದೇಶದವರು ಎಂದು ಇವರು ನೋಡಲಿಲ್ಲ.
ಸಾವಿರಾರು ವಲಸೆ ಕಾರ್ಮಿಕರೊಂದಿಗೆ ನಿಂತು ಅವರಿಗೆ ಅಗತ್ಯ ಆಹಾರ ನೀಡಿ ಧೈರ್ಯ ಹೇಳುವ ಕೆಲಸ ಮಾಡಿದ್ದಾರೆ.‌ ಊರುಗಳಿಗೆ ತಲುಪುವಂತೆ ರೈಲು ಪ್ರಯಾಣ ಮಾಡಲು ಸಹಕರಿಸಿದ್ದಾರೆ.‌
ಇದರ ಪರಿಣಾಮವಾಗಿ ಇಡೀ ಕುಟುಂಬದವರಿಗೆ ಇವರಿಂದಾಗಿ ಕೊವಿಡ್ ಸೋಂಕು ತಗುಲಿತ್ತು.

ಕೆಲವು ಜನರ ಅಜ್ಞಾನ ಮತ್ತು ಮೂರ್ಖತನ ನಿಜಕ್ಕೂ ಮುಸ್ಲಿಂ ಸಮಾಜಕ್ಕೆ ನೋವುಂಟುಮಾಡಿದೆ.‌
ಕೋವಿಂಡ್ ವಿರುದ್ದ ಮುಸ್ಲಿಂ ಸಮಾಜ ಸೈನಿಕರಂತೆ ಶ್ರಮಿಸುತ್ತಿದೆ.
ಈ ಪ್ರಕರಣದಿಂದ ಮುಸ್ಲಿಂ ಸಮಾಜದ ಆತ್ಮ ಸ್ಥೈರ್ಯ ನಾಶಮಾಡಿ ಸೇವ ಕ್ಷೇತ್ರದ ಮುಖ್ಯ ವಾಹಿನಿಯಿಂದ ಹಿಮ್ಮುಖ ಗೊಳಿಸಲು ಕೊಮುವಾದಿಗಳು ಮುಂದಾಗಿದ್ದಾರೆ.
ಇದರ ಕುರಿತು ಕಾನೂನು ಪ್ರಕಾರ ತನಿಖೆ ನಡೆದು, ಇಂತಹ ಸಂಕಷ್ಟದ ಸಮಯದಲ್ಲಿ ಸಹ ವಿಷವನ್ನು ಹರಡುತ್ತಿರುವವರ ಮೇಲೆ ಕ್ರಮ ಜರುಗಿಸಲಿ ಎಂದು ಮುಖ್ಯ ಮಂತ್ರಿ ಯಡಿಯೂರಪ್ಪ ರವರಲ್ಲಿ ರಾಷ್ಟ್ರೀಯ ಸೌಹಾರ್ದ ವೇದಿಕೆ
ಮನವಿ ಮಾಡುತ್ತದೆ ಎಂದಿದ್ದಾರೆ.

ಸರ್ಫ್ರಾಜ್ ಖಾನ್ ರವರಿಗೆ ನ್ಯಾಯ ಸಿಗದಿದ್ದರೆ ರಾಜ್ಯದ್ಯಾಂತ ಆಂದೋಲನ ನಡಸಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.