ಹೋಳಿ ಅಂದರೆ ಪವಿತ್ರತೆ
ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಶಿವರಾತ್ರಿಯ ನಂತರ ಬರುವ ಆಧ್ಯಾತ್ಮಿಕ ಹಿನ್ನೆಲೆ ಹೊಂದಿರುವ ಹಬ್ಬವೆಂದರೆ ಹೋಳಿ. ಭಾರತ ಮಾತ್ರವಲದೇ ಭಾರತಿಯರು ವಾಸಿಸುವ ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ, ಯೂರೋಪ್, ಉತ್ತರ ಅಮೇರಿಕ, ಸುರೇನಾಮ್, ಗಯಾನ, ಟ್ರಿನಿಟಾಡ್, ಆಫ್ರಿಕಾ, ಮಾರಿಷಸ್, ಫ್ಯೂಜಿ ಮುಂತಾದ ಕಡೆಗಳಲ್ಲಿ ಈ ಹಬ್ಬವನ್ನು ಬಹಳ ಸ್ನೇಹದಿಂದ ಕುಣಿದು ಕುಪ್ಪಳಿಸಿ ಆಚರಿಸಲಾಗುತ್ತದೆ. ಹೋಳಿ ಹಬ್ಬವು ಹೊಲಿಕಾ ಶಬ್ದದಿಂದ ಬಂದಿದೆ. ಉತ್ತರ ಭಾರತದಲ್ಲಿ `ಹೋಳಿ’, `ಹೋಲಿಕಾ ದಹನ”, `ಧುರಿಯಾ’ ಎಂದು ಕರೆದರೆ, ಮಹಾರಾಷ್ಟ್ರದಲ್ಲಿ `ಹೋಳಿ’, ‘ಶಿಮಗ’ `ರಂಗಪಂಚಮಿ’, `ಧೂಲಿವಂದನ’ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದಲ್ಲಿ `ಹೋಳಿ’, ‘ಓಕಳಿ’ ‘ಕಾಮಣ’್ಣನ ಹಬ್ಬವೆಂದು ಕರೆಯಲಾಗುತ್ತದೆ.
ಫಾಲ್ಗುಣ ಮಾಸದ ಹುಣ್ಣಿಮೆಯ ದಿನ `ಹೋಳಿ’ ಹಬ್ಬವನ್ನು ಆಚರಿಸಲಾಗುತ್ತದೆ. ತದನಂತರ `ರಂಗಪಂಚಮಿ’ ಬಣ್ಣವನ್ನು ಹಾಕಿ ಬಣ್ಣದ ಹಬ್ಬವನ್ನು ಆಚರಿಸುತ್ತಾರೆ. ವಾಸ್ತವಿಕವಾಗಿ ಹೋಳಿಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿದು ಹಬ್ಬವನ್ನು ಆಚರಿಸಿದರೆ ಮಾನವ ಜೀವನದಲ್ಲಿ ಹೊಸತನವು ಬಂದೇ ಬರುತ್ತದೆ.
ಹೋಳಿ ಎಂದರೆ ಪವಿತ್ರತೆ. ಪವಿತ್ರತೆಯ ಮಹತ್ವವನ್ನು ವೇದಗಳು, ಶಾಸ್ತ್ರಗಳು ಮತ್ತು ಧರ್ಮಗ್ರಂಥಗಳು ಹಾಗೂ ಪುರಾಣಗಳಲ್ಲಿ ವರ್ಣಿಸಲಾಗಿದೆ. ಭಗವದ್ಗೀತೆಯ 2 ನೇ ಅಧ್ಯಾಯ 62-63 ನೇ ಶ್ಲೋಕದಲ್ಲಿ – ಆಸೆÉಯಿಂದ ಕಾಮ, ಕಾಮದಿಂದ ಕ್ರೋಧ, ಕ್ರೋಧದಿಂದ ಮೋಹ, ಮೋಹದಿಂದ ವಿಸ್ಮøತಿ, ವಿಸ್ಮøತಿಯಿಂದ ಬುದ್ಧಿನಾಶ, ಬುದ್ಧಿನಾಶದಿಂದ ಸರ್ವನಾಶವಾಗುತ್ತದೆ ಎಂದು ಹೇಳಲಾಗಿದೆ. ಅಧ್ಯಾಯ 16, ಶ್ಲೋಕ 21 ರಲ್ಲಿ ಕಾಮ, ಕ್ರೋಧ, ಲೋಭಗಳನ್ನು ನರಕದ ಬಾಗಿಲುಗಳೆಂದು ಹೇಳಲಾಗಿದೆ. ಅವುಗಳನ್ನು ನಾವು ತ್ಯಜಿಸಬೇಕೆಂಬುದು ಭಗವಂತನ ಆದೇಶವಿದೆ. ಹೀಗೆ ಭಗವದ್ಗೀತೆಯ ಅನೇಕ ಶ್ಲೋಕಗಳು ನಮಗೆ ನಿರ್ವಿಕಾರಿ, ಪವಿತ್ರರಾಗಲು ಬೋಧನೆ ನೀಡುತ್ತವೆ. ಅಧ್ಯಾಯ 18, ಶ್ಲೋಕ 66 ರಲ್ಲಿ – ದೇಹದ ಸರ್ವ ಧರ್ಮಗಳನ್ನು ತ್ಯಜಿಸಿ, ನನಗೆ ಶರಣಾದಾಗ ನಾನು ನಿಮಗೆ ಪಾಪಕರ್ಮಗಳಿಂದ ದೂರ ಮಾಡಿ ಮೋಕ್ಷವನ್ನು ಕೊಡುತ್ತೇನೆ ಎಂದು ಪರಮಾತ್ಮನು ಹೇಳಿದ್ದಾನೆ. ಧರ್ಮಗ್ಲಾನಿಯ ಸಮಯದ ಬಗ್ಗೆ ಅಧ್ಯಾಯ 4, ಶ್ಲೋಕ 7, 8 ರಲ್ಲಿ ಹೇಳಲಾಗಿದೆ.
ಈ ಸಮಯದಲ್ಲಿ ನಿರಾಕಾರ ಭಗವಂತನು ತನ್ನ ಮಕ್ಕಳಿಗೆ ಪವಿತ್ರತೆಯ ಪಾಲನೆ ಮಾಡಲು ಹೇಳುತಿದ್ದಾನೆ. ಇದು ಕಲಿಯುಗದ ಅಂತಿಮ ಸಮಯವಾಗಿದೆ. ಪವಿತ್ರತೆಯೇ ಸುಖ-ಶಾಂತಿಯ ಜನನಿಯಾಗಿದೆ. ಆತ್ಮದ ಮೂಲ ಸ್ವಧರ್ಮವೇ ಪವಿತ್ರ್ರತೆ. ನಾವು ಪವಿತ್ರರಾಗಲೇಬೇಕೆಂಬ ದೃಢಸಂಕಲ್ಪ ಮಾಡಿದರೆ ತಂದೆಯಾದ ಪರಮಾತ್ಮನ ಸಹಾಯ ಸದಾ ಸಿಕ್ಕೇ ಸಿಗುತ್ತದೆ. ಪವಿತ್ರತೆಯ ಸಂಕೇತವಾಗಿ ಪ್ರತಿಯೊಬ್ಬ ದೇವತೆಗಳ ತಲೆಯ ಹಿಂಭಾಗದಲ್ಲಿ ಪ್ರಕಾಶದ ಕಿರೀಟವನ್ನು ತೋರಿಸಲಾಗುತ್ತದೆ. ಪವಿತ್ರ ಕನ್ಯೆಯರನ್ನು ಪೂಜಿಸಲಾಗುತ್ತದೆ.

e್ಞÁನಿ ಮತ್ತು ಯೋಗಿಗಳ ದೃಷ್ಟಿಯಲ್ಲಿ ಮನುಷ್ಯ ಸೃಷ್ಟಿಯು ವಿರಾಟ ನಾಟಕವಾಗಿದೆ. ಈ ಸೃಷ್ಟಿ ಎಂಬ ನಾಟಕದಲ್ಲಿ ಎರಡು ಬಣ್ಣಗಳ ಆಟ ನಡೆಯುತ್ತದೆ. ಒಂದು ಮಾಯೆಯ ಬಣ್ಣ, ಇನ್ನೊಂದು ಈಶ್ವರನ ಬಣ್ಣ. ಈ ರಂಗಮಂಟಪದಲ್ಲಿ ಪ್ರತಿಯೊಬ್ಬರೂ ಯಾವುದಾದರೊಂದು ಬಣ್ಣವನ್ನು ಹಚ್ಚಿಕೊಂಡಿರುತ್ತಾರೆ. ಈಶ್ವರೀಯ ಬಣ್ಣವನ್ನು ಹಚ್ಚಿಕೊಂಡಿರುವವರು ನಿಜವಾಗಿಯೂ ಯೋಗಿ ಆಗುತ್ತಾರೆ ಮತ್ತು ಮಾಯೆಯ ರಂಗಿನಲ್ಲಿ ಮುಳುಗಿರುವವರು ಭೋಗಿ ಆಗಿರುತ್ತಾರೆ.

ವಾಸ್ತವವಾಗಿ `ಹೋಳಿ’ ಮತ್ತು `ರಂಗಪಂಚಮಿ’ಯು ಸಂತೋಷ, ಪ್ರೀತಿ, ಸ್ನೇಹ, ಆತ್ಮೀಯತೆಯನ್ನು ವೃದ್ಧಿಸುವ ಹಬ್ಬವಾಗಿದೆ. `ಹೋಳಿ’ ಹಬ್ಬವು ಅತಿ ಪ್ರಾಚೀನ ಕಾಲದಿಂದ ಆಚರಣೆಯಲ್ಲಿದೆ ಎಂದು ಭಾರತೀಯರ ನಂಬಿದ್ದಾರೆ. ವೇದಗಳ ಕಾಲದಲ್ಲಿ ರಕ್ಷೋಹಗಂ, ಬಲಗಹಮ್ ಮುಂತಾದ ರಾಕ್ಷಸರು ವಿನಾಶದÀ ಮಂತ್ರಗಳಿಂದ `ಹೋಳಿಕಾದಹನ’ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಆದರೆ ವಾಸ್ತವದಲ್ಲಿ ಇದರ ಸತ್ಯಾರ್ಥವಾಗಿದೆ -`ನಮ್ಮನ್ನು ನಾವು ರಾಕ್ಷಸಿ ಆಹಾರ, ಆಚಾರ, ವಿಚಾರ ವ್ಯವಹಾರಗಳಿಂದ ರಕ್ಷಿಸಿಕೊಳ್ಳಬೇಕಾಗಿದೆ’. `ಪಾಪಿ ತನ್ನದೇ ಆದ ಪಾಪ ಕರ್ಮಗಳಿಂದ ಸುಟ್ಟು ಹೋಗುತ್ತಾನೆ’ ಎಂಬ ಮಾತನ್ನು ಹೋಳಿಕಾ ದಹನವು ನಮಗೆ ತಿಳಿಸಿ ಕೊಡುತ್ತದೆ. ಆದ್ದರಿಂದ ನಾವು ಪಾಪಕರ್ಮಗಳಿಂದ ದೂರವಿರಬೇಕು. ನಮ್ಮ ಜೀವನದಲ್ಲಿ ದೈವಿಗುಣಗಳನ್ನು ಅಳವಡಿಸಿಕೊಳ್ಳಬೇಕು. ಹೋಳಿಕಾ ದಹನ ಮಾಡುವುದೆಂದರೆ ಕಳೆದ ವರ್ಷದ ಕಹಿ ನೆನಪುಗಳನ್ನು ಸುಟ್ಟು, ತಮ್ಮ ದುಃಖಗಳನ್ನು ಮರೆತು, ನಗುನಗುತ್ತಾ ಹೊಸ ವರ್ಷದ ಸ್ವಾಗತ ಬಯಸುವುದು. ಕಟ್ಟಿಗೆಗಳಿಂದ ಕಾಮಣ್ಣನ ದಹನ ಮಾಡದೇ ನಮ್ಮಲ್ಲಿರುವ ಕಾಮ, ಕ್ರೋಧ, ಈರ್ಷೆ ದ್ವೇಷ, ಮದ, ಮತ್ಸರಗಳನ್ನು ಸುಟ್ಟುಹಾಕಬೇಕು. ಪರಸ್ಪರ ಆತ್ಮೀಯತೆ, ಸ್ನೇಹ, ಪ್ರೀತಿ ಬೆಳೆಸಿಕೊಂಡು ಸಿಹಿ ಮಾತುಗಳನ್ನು ಆಡಬೇಕು. `ಹೋಳಿ’ ಅಥವಾ `ಕಾಮಣ್ಣ-ರತಿದೇವಿ’ಯ ದಹನ ಆದ ನಂತರ ಬಣ್ಣವನ್ನೂ ಹಾಕಲಾಗುತ್ತದೆ. ಬಣ್ಣವನ್ನು ಹಾಕುವಾಗ ದೊಡ್ಡವರು, ಚಿಕ್ಕವರು ಎಂಬ ಭೇದಭಾವ ಮರೆತು ಬಿಡುತ್ತಾರೆ. ಅದರ ನಿಜವಾದ ಅರ್ಥವೇನೆಂದರೆ, ನಾವೆಲ್ಲರೂ ಒಬ್ಬ ಭಗವಂತನ ಮಕ್ಕಳೆಂದು ತಿಳಿದು ಸತ್ಯe್ಞÁನದ, ಸತ್ಸಂಗದ, ದೈವೀ ಗುಣಗಳ ಸತ್ಯವಾದ ಬಣ್ಣವನ್ನು ಹಾಕಿಕೊಂಡು ಸರ್ವರನ್ನೂ ಸಹೋದರತ್ವದ ಭಾವನೆಯಿಂದ ಕಾಣಬೇಕು. ಪರಮಪಿತ ಪರಮಾತ್ಮನ ಧ್ಯಾನ ಅಥವಾ ಸಹಜ ರಾಜಯೋಗದಿಂದ ನಮ್ಮ ಜೀವನದಲ್ಲಿ ದೈವೀ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಏಕೆಂದರೆ `ಸಂಗದಂತೆ ರಂಗು’ ಎಂಬ ಗಾಯನವು ಇದೆ. ಪರಮಾತ್ಮನು ಸರ್ವ ಗುಣಗಳ ಬೆಳೆಸಿಕೊಂಡರೆ ಗುಣಮೂರ್ತಿ ಆಗಬಹುದು. ಆತ್ಮವು ಸದ್ಗುಣಗಳ ಬಣ್ಣದಲ್ಲಿ ಮಿಯ್ಯಬೇಕು. ಇದೇ ಹೋಳಿ ಹಬ್ಬದ ಸಂದೇಶವಾಗಿದೆ.
ಹಿಂದಿ ಭಾಷೆಯಲ್ಲಿ `ಹೋ-ಲಿ’ ಎಂದರೆ ಆಗಿ ಹೋದದ್ದನ್ನು ಮರೆತುಬಿಡು ಎಂದರ್ಥ. ಇಂಗ್ಲೀಷ್ ಭಾಷೆಯಲ್ಲಿ `ಹೋಲಿ’ ಎಂದರೆ ಪವಿತ್ರತೆ ಎಂದರ್ಥ. ನಮ್ಮ ಆಚಾರ, ವಿಚಾರ ವ್ಯವಹಾರಗಳನ್ನು ಶುದ್ಧಗೊಳಿಸಬೇಕು. ಪರಸ್ಪರರಲ್ಲಿ ಆತ್ಮೀಯತೆಯನ್ನು ಬೆಳೆಸಿಕೊಂಡು ಸದ್ಗುಣಗಳಿಂದ ಕೂಡಿದ ಸತ್ಯe್ಞÁನದ ಬಣ್ಣವನ್ನು ಹಚ್ಚಿಕೊಂಡು ಹೋಳಿಯನ್ನು ಆಚರಿಸಿದರೆ ನಮ್ಮ ಜೀವನವೂ ಮಂಗಳಮಯ(ಹೋಲಿ)ವಾಗುವುದು.
–ವಿಶ್ವಾಸ. ಸೋಹೋನಿ.
ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,
7349632530 ; 9483937106
ಹೋಳಿ ಆಡುವ ಮುನ್ನ ಎಚ್ಚರವಿರಲಿ. ಕೊರೋನ ಸುರಕ್ಷತೆಯ ಜೊತೆಗೆ ನಾವು ಸುರಕ್ಷಿತವಾಗಿರಬೇಕು.
1. ನೈರ್ಸಗಿಕ ಬಣ್ಣಗಳನ್ನು ಬಳಸಿರಿ. ಮನೆಯಲ್ಲಿ ಪಾಲಕ, ಬೀಟ್‍ರೂಟ್ ಮುಂತಾದನ್ನು ಬಳಸಿ ಬಣ್ಣವನ್ನು ತಯಾರ ಮಾಡಿ. ಸಾಧ್ಯವಾದರೇ ಒಣ ಬಣ್ಣಗಳನ್ನು ಬಳಸಿ.
2. ಹೋಳಿಯಾಡುವ ಮೊದಲು ನಿಮ್ಮ ಮುಖಕ್ಕೆ ಕ್ರೀಮ್ ಮತ್ತು ತಲೆಗೆ ಎಣ್ಣೆ ಹಚ್ಚಿಕೊಳ್ಳಿರಿ.
3. ಮುಖಕ್ಕೆ ಬಣ್ಣ ಹಚ್ಚುವುದು ಅಥವಾ ಹಚ್ಚಿಸಿಕೊಳ್ಳುವುದು ಬೇಡ.
4. ಸನ್‍ಗ್ಲಾಸ್ ಧರಿಸಿಕೊಂಡು ಕಣ್ಣಿನ ರಕ್ಷಣೆ ಮಾಡಿಕೊಳ್ಳಿರಿ.
5. ಚರ್ಮದ ಅಲರ್ಜಿ ಇದ್ದರೆ ಹೋಳಿ ಆಡದೇ ಇರುವುದು ಉತ್ತಮ.