*ಎಸ್.ಡಿ.ಪಿ.ಐಯೊಂದಿಗೆ ಸೇರಿ ಜನಸೇವೆ ಮತ್ತು ಶೋಷಿತರಿಗಾಗಿ ಹೋರಾಟಕ್ಕೆ ಸಿದ್ಧ: ಬಿ.ಆರ್ ಭಾಸ್ಕರ್ ಪ್ರಸಾದ್*

ಬೆಂಗಳೂರು, ಮಾ-19: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್.ಡಿ.ಪಿ.ಐ ಪಕ್ಷದ ಬೆಂಗಳೂರು ಜಿಲ್ಲಾ ಸಮಿತಿಯಿಂದ ‘ಸ್ವಾಭಿಮಾನದ ರಾಜಕೀಯಕ್ಕಾಗಿ’ ಎಂಬ ಘೋಷಣೆಯೊಂದಿಗೆ ರಾಜಕೀಯ ಸಮಾವೇಶವನ್ನು ಬೆಂಗಳೂರಿನ ಕೆ.ಜಿ ಹಳ್ಳಿಯ ಎಸ್.ಆರ್ ಫಂಕ್ಷನ್ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದಲಿತ ಹೋರಾಟಗಾರ ಹಾಗೂ ಪ್ರಗತಿಪರ ಚಿಂತಕ ಬಿ.ಆರ್. ಭಾಸ್ಕರ್ ಪ್ರಸಾದ್, ದಲಿತ ಮತ್ತು ಅಹಿಂದ ನಾಯಕರು ಪಕ್ಷ ಸೇರ್ಪಡೆಗೊಂಡರು.

ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಬೆಂಗಳೂರು ಜಿಲ್ಲಾ ಉಪಾಧ್ಯಕ್ಷ ಗಂಗಪ್ಪನವರು ಮಾಡಿದರು. ಉದ್ಘಾಟನಾ ಭಾಷಣ ಮಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಷಾಷ ಮಾತನಾಡಿ, ಅವಕಾಶ ವಂಚಿತ ಸಮುದಾಯಗಳ ಸ್ವಾಭಿಮಾನದ ರಾಜಕೀಯ ಪ್ರಗತಿಗಾಗಿ ಎಸ್.ಡಿ.ಪಿ.ಐ ಪಕ್ಷವು ಹೋರಾಡುತ್ತಿದೆ. ಈ ಹೋರಾಟದಲ್ಲಿ ಭಾಗಿಯಾಗಲು ಪಣತೊಟ್ಟು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವ ರಾಜ್ಯದ ಪ್ರಗತಿಪರ, ಜನಪರ ಹೋರಾಟಗಾರರನ್ನು ಅವರು ಅಭಿನಂದಿಸಿದರು. ಭವಿಷ್ಯದ ಕರ್ನಾಟಕದ ರಾಜಕೀಯ ದಿಕ್ಕನ್ನು ಬದಲಾಯಿಸುವ ಶಕ್ತಿ ಹೊಂದಿರುವುದಾಗಿ ಪ್ರಶಂಸೆ ವ್ಯಕ್ತಪಡಿಸಿದರು.

ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಮಾತನಾಡಿ, ಎಸ್.ಡಿ.ಪಿಐ ಪಕ್ಷವು ಗ್ರಾಮಮಟ್ಟ, ಹೋಬಳಿ ಮಟ್ಟದ, ತಾಲೂಕು ಮಟ್ಟದ ಸಕ್ರಿಯ ರಾಜಕಾರಣದಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸುತ್ತಿದೆ. ಈ ಮೂಲಕ ತಳಮಟ್ಟದಲ್ಲಿ ಜನಪರ ಹೋರಾಟಗಾರರಿಗೆ ಪ್ರಾಮಾಣಿಕವಾದ ಸದೃಢ ರಾಜಕೀಯ ವೇದಿಕೆಯನ್ನು ಒದಗಿಸುತ್ತಿದೆ. ಇದೇ ರೀತಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ರಾಜಕೀಯದಲ್ಲಿಯೂ ಕೂಡ ಶೋಷಿತರ ಪ್ರಬಲಧ್ವನಿಯಾಗಿ ಹೊಮ್ಮುವ ದಿನ ದೂರವಿಲ್ಲ. ಹಾಗಾಗಿ ಭಾಸ್ಕರ್ ಪ್ರಸಾದ್ ಹಾಗೂ ಇತರೆ ಅಹಿಂದ ವರ್ಗಗಳ ನಾಯಕರುಗಳು ಪಕ್ಷವನ್ನು ತಮ್ಮ ಹೋರಾಟದ ಪಥವನ್ನಾದಗಿಸಿಕೊಂಡAತೆ ರಾಜ್ಯದ ಪ್ರಾಮಾಣಿಕ ಯುವ ಮುಖಂಡರು ಕೂಡ ಈ ಆದರ್ಶ ನಡೆಯನ್ನು ಅನುಸರಿಸಬೇಕೆಂದು ಕರೆ ನೀಡಿದರು.

ವುಮೆನ್ ಇಂಡಿಯಾ ಮೂವ್‌ಮೆಂಟ್‌ನ ರಾಜ್ಯ ನಾಯಕಿ ಸಾದಿಯಾ ಗುಲ್ಬರ್ಗಾ ಮಾತನಾಡಿ, ಭಾರತ ದೇಶದ ಸೌಂದರ್ಯವೇ ವಿವಿಧತೆಯಲ್ಲಿ ಏಕತೆಯನ್ನು ಸಾರುವುದು. ಸಂವಿಧಾನವು ಈ ದೇಶದ ಎಂಜಿನ್ ಆಗಿದೆ. ಅದನ್ನು ಉಳಿಸುವುದಕ್ಕಾಗಿ ನಾವು ಇಲ್ಲಿ ಸೇರಿದ್ದೇವೆ. ಮಹಿಳೆಯರೂ ರಾಜಕೀಯ ಶಕ್ತಿಯಾಗುವ ಸಮಯ ಬಂದಿದೆ. ತಮ್ಮ ಹಕ್ಕುಗಳಿಗಾಗಿ ಹೋರಾಡಲು ಮುಂದಾಗಬೇಕಾಗಿದೆ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆರವರು ಮಾತನಾಡಿ, ಎಸ್.ಡಿ.ಪಿ.ಐ ಪಕ್ಷ ಯಾವುದೇ ಸಮುದಾಯಕ್ಕೋ, ಜಾತಿಗೋ ಸೇರಿದ್ದಲ್ಲ. ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿರುವ ಪ್ರತಿಯೊಬ್ಬ ನಾಗರಿಕರಿಗೂ ಸೇರಿದ್ದು. ರಾಜಕೀಯ ಗುಲಾಮಗಿರಿಯಿಂದ ಹೊರಬರಲು ಕರೆ ನೀಡಿರುವ ಡಾ. ಬಿ.ಆರ್ ಅಂಬೇಡ್ಕರ್‌ರವರ ಮಾತನ್ನು ಪೂರ್ತಿಗೊಳಿಸುವತ್ತಾ ಎಸ್.ಡಿ.ಪಿ.ಐ ಹೆಜ್ಜೆಯಿಟ್ಟಿದೆ. ಹಣ, ಹೆಂಡಗಳಿಗಾಗಿ ಓಟುಗಳನ್ನು ಮಾರುವಂತಹ ಮತ್ತು ಕೊಂಡುವಳ್ಳುವ ಇಂತಹ ಸಮಯದಲ್ಲಿ ಅದರಿಂದ ಜನರನ್ನು ಹೊರತರಲು ಎಸ್.ಡಿ.ಪಿ.ಐ ಜನರಿಗೆ ಅಧಿಕಾರವನ್ನು ನೀಡಲು ಪಕ್ಷವನ್ನು ಸ್ಥಾಪಿಸಿದೆ. ಉತ್ತಮ ಜನರ ಸೇವಕರನ್ನು ಪಕ್ಷ ನೀಡುತ್ತಿದ್ದು, ಇದರಲ್ಲಿ ದಲಿತರು, ಮುಸಲ್ಮಾನರು ಸೇರಿ ಎಲ್ಲಾ ಸಮುದಾಯದವರಿದ್ದಾರೆ. ಭಾಸ್ಕರ್ ಪ್ರಸಾದ್‌ರವರನ್ನು ಅತ್ಯಂತ ಗೌರವಯುತವಾಗಿ ಪಕ್ಷಕ್ಕೆ ಸ್ವಾಗತಿಸುತ್ತಿದ್ದೇವೆ. ಪಕ್ಷಕ್ಕೆ ಬರುವ ಪ್ರತಿಯೊಬ್ಬರನ್ನು ನಮ್ಮ ಮನೆಯವರು ಎಂಬ ದೃಷ್ಟಿಯಿಂದ ನೋಡುತ್ತೇವೆ ಎಂದರು.

 

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರುರವರು ಮಾತನಾಡಿ, ತಮಿಳುನಾಡಿನಲ್ಲಿ ವಿಧಾನ ಸಬಾ ಚುನಾವಣೆ ನಡೆಯುತ್ತಿದೆ. ಅಲ್ಲಿಯ 4 ಪ್ರಮುಖ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟವು ಎಸ್.ಡಿ.ಪಿ.ಐಯನ್ನು ನೇರವಾಗಿ ಸಂಪರ್ಕಿಸಿ ತಮ್ಮ ಮೈತ್ರಿಕೂಟದಲ್ಲಿ ಕೈಜೋಡಿಸಲು ಅಹ್ವಾನಿಸಿದವು. ಮುಂದೆ ಭಾರತದ ಎಲ್ಲಾ ರಾಜ್ಯಗಳಲ್ಲೂ ಸಹ ಇಂತಹ ಅಹ್ವಾನಗಳು ಸಾಲು ಸಾಲಾಗಿ ಬರಲಿದೆ. ಎಸ್.ಡಿ.ಪಿ.ಐ ಪಕ್ಷದ ಕಾರ್ಯಕರ್ತರ ಮತ್ತು ನಾಯಕರ ನಿಸ್ವಾರ್ತ ಸೇವೆ, ತ್ಯಾಗ ಮತ್ತು ಪರಿಶ್ರಮಗಳನ್ನು ಜನರು ಮುಕ್ತ ಕಂಠದಿAದ ಪ್ರಶಂಸಿಸುತ್ತಿದ್ದಾರೆ ಎಂದರು.

ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಬಿ.ಆರ್ ಭಾಸ್ಕರ್ ಪ್ರಸಾದ್, ನಿವೃತ್ತ ಕೆ.ಎ.ಎಸ್ ಅಧಿಕಾರಿ ಕೆ.ಎಲ್ ವಸಂತ್ ಕುಮಾರ್, ಕರ್ನಾಟಕ ರಾಜ್ಯ ಆದಿ ಜಾಂಬವ ಅಭಿವೃಧಿ ಸಂಘದ ಕಾರ್ಯದರ್ಶಿ ರಮೇಶ್ ಕುಮಾರ್, ಕರ್ನಾಟಕ ರಾಜ್ಯ ದಲಿತ ಹೋರಾಟ ಸಮಿತಿಯ ಕಮಲಾನಗರದ ಉಪಾಧ್ಯಕ್ಷ ಗೋವಿಂದ ರಾಜು ವಿ, ಸಮಾಜ ಸೇವಕ ಜಯರಾಂ ಸಿ, ಸಾಮಾಜಿಕ ಹೋರಾಟಗಾರ ಸಿದ್ಧರಾಜು, ಕರ್ನಾಟಕ ರಕ್ಷಣ ವೇದಿಕೆ ಕ್ರಾಂತಿ ಸೇನೆಯ ರಾಜ್ಯಾಧ್ಯಕ್ಷ ಮಹಮ್ಮದ್ ಹನೀಫ್, ಸಮಾಜ ಸೇವಕ ಅಮಾನುಲ್ಲಾ ಮೊದಲಾದವರನ್ನು ಪಕ್ಷದ ರಾಷ್ಟಿçÃಯ ಹಾಗೂ ರಾಜ್ಯ ನಾಯಕರು ಪಕ್ಷದ ಶಾಲು ಹಾಕುವ ಮೂಲಕ ಸೇರ್ಪಡೆ ಮಾಡಿದರು.

ಬಿ.ಆರ್ ಭಾಸ್ಕರ್ ಪ್ರಸಾದ್ ಮಾತನಾಡಿ, ಕರೋನ ಸಂತ್ರಸ್ತರಿಗೆ ನೆರವು ಮತ್ತು ಶವ ಸಂಸ್ಕಾರ, ಸೇವೆ ಸಲ್ಲಿಸಿದ ಎಸ್.ಡಿ.ಪಿ.ಐ ಕಾರ್ಯಕರ್ತರ ನಿಸ್ವಾರ್ಥ ಸೇವಾ ಮನೋಭಾವ ಮತ್ತು ಹೋರಾಟದ ಮಾರ್ಗವನ್ನು ಪ್ರಶಂಸಿದರು. ಇದೇ ಕಾರ್ಯಕರ್ತರೊಂದಿಗೆ ಸೇರಿ ಪಕ್ಷ ಕಟ್ಟಲು ನಾನು ರಾತ್ರಿ ಹಗಲು ತಯಾರಾಗಿದ್ದೇನೆ ಎಂದರು

ವೇದಿಕೆಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮಹಬೂಬ್ ಶರೀಫ್ ಅವಾದ್, ರಾಜ್ಯ ಉಪಾಧ್ಯಕ್ಷ ಅಡ್ವೋಕೇಟ್ ಮಜೀದ್ ಖಾನ್, ರಾಜ್ಯ ಕಾರ್ಯದರ್ಶಿಗಳಾದ ಅಶ್ರಫ್ ಮಾಚಾರ್ ಮತ್ತು ಅಬ್ರಾರ್ ಅಹಮದ್, ರಾಜ್ಯ ಖಜಾಂಚಿ ಜಾವೇದ್ ಆಝಂ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಹಾಗೂ ರಾಜ್ಯ ಮಾಧ್ಯಮ ಉಸ್ತುವಾರಿ ಅಕ್ರಂ ಹಸನ್, ರಾಜ್ಯ ಸಮಿತಿ ಸದಸ್ಯ ಅಮ್ಜದ್ ಮೈಸೂರು, ಬೆಂಗಳೂರು ಜಿಲ್ಲಾಧ್ಯಕ್ಷ ಫಯಾಝ್ ಅಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಅಹಮದ್, ಕರ್ನಾಟಕ ರಾಜ್ಯ ಹೈಕೋಟ್‌ನ ವಕೀಲ ಅಡ್ವೊಕೇಟ್ ಮಹಮ್ಮದ್ ತಾಹೀರ್ ಮತ್ತಿತರು ಉಪಸ್ಥಿತರಿದ್ದರು. ರಾಜ್ಯ ಸಮಿತಿ ಸದಸ್ಯ ಇಖ್ಬಾಲ್ ಬೆಳ್ಳಾರೆ ಕಾರ್ಯಕ್ರಮವನ್ನು ನಿರೂಪಿಸಿದರು.

*-ಅಕ್ರಂ ಹಸನ್
ರಾಜ್ಯ ಮಾಧ್ಯಮ ಉಸ್ತುವಾರಿ
+91 93433 42250*

A political convention “ For Politics of Dignity” was organized by Social Democratic Party of India SDPI, Bangalore committee in SR function hall KG Halli Banglore, on 19th March 2021. On this occasion prominent Dalit leader and progressive thinker Mr B.R Bhaskar Prasad and other Ahinda leaders joined SDPI.

Mr. Mujahideen Pasha, General Secretary, delivered the inaugural speech, congratulated the newly joined progressive leaders and hope that together will strengthen the party and positively change the future course of politics in Karnataka.

Mr Abdul Hannan, State President expressed his pleasure and gratitude and said proudly that SDPI has spread its reach in Gram panchayat, Muncipal Councils, Corporation and other local bodies and the day is not far when SDPI will be a force to recon with, in State and National politics.

Women India Movement WIM, state leader Mrs Syed Sadiya said the beauty of our country is Unity in Diversity and our constitution is the engine and binding force of our country and we shall strive hard to save it.

Mr. Afsar Kodlipet said SDPI party is not just limited to a particular sect or religion, but SDPI belongs to every person who believes and has faith in Democratic values of our country.

Mr. Abdul Majeed Mysore, National General Secretary said, four different parties came forward to forge an alliance with SDPI in Tamilnadu, SDPI’s credibility and presence can be felt everywhere. Likewise, strong political alliances are being forged nation wide.
State Convenor of Dalits organizations Mr. B.R Bhaskar Prasad, retired KAS officer KL Vasant Kumar, Karnataka State Adi Jhambava development association Secretary Ramesh Kumar, Karnataka State Dalits association Kamala Nagar vice president Govind Raju,Social worker Mr. Siddaraju, Karnataka Rakshana Venice kranti sene state president Mohammed Haneef, Social Worker Amaanulla and many other leaders joined SDPI in the presence of National & State leaders.

Mr Bhaskar Prasad lauded the services of SDPI during Covid Pandemic, especially the cremation and burials of persons died due to covid. Bhaskar Prasad also told he along with others will strive day and night to build the party.

Many dignitaries, State Secretary Mahboob Sheriff, State vice president Advocate Majeed khan, state secretaries Ashraff Machaar and Abrar Ahmed, state treasurer Javid Azam, State secretariat members, State media Incharge Akram Hasan, state committee member Amjad Khan, Saleem Ahmed, Advocate MD Tahir and others were present, state committee member Iqbal Ballare concluded the program.

Akram Hasan
State Media Incharge.
+91 9343342250..