*PFI ರಾಷ್ಟ್ಟೀಯ ಕಾರ್ಯದರ್ಶಿ ಅನೀಸ್ ಅಹ್ಮದ್ ರವರು ಫೆ.17 ರಂದು ಮಾಡಿದ ಭಾಷಣದ ಕನ್ನಡ ಭಾಷಾಂತರ…*🔥🔥
ವೇದಿಕೆಯಲ್ಲಿ ಆಸೀನರಾಗಿರತಕ್ಕಂತಹ ಪಾಪ್ಯುಲರ್ ಫ್ರಂಟ್ ಮುಖಂಡರೇ ,ಅತಿಥಿಗಳೇ ಹಾಗು ಸಭಾಂಗಣದಲ್ಲಿ ನೆರೆದಿರುವ ಎಲ್ಲ ಸಹೋದರ ಸಹೋದರರಿಗೆ ನಾನು ಪಾಪ್ಯುಲರ್ ಫ್ರಂಟ್ ವತಿಯಿಂದ ಧನ್ಯವಾದ ಅರ್ಪಿಸುತ್ತೇನೆ .ಯಾಕೆಂದರೆ ನೀವು ಇಲ್ಲಿ ಆಗಮಿಸಿದ್ದೀರಿ ಎನ್ನುವ ಕಾರಣಕ್ಕಾಗಿ ಅಲ್ಲ ,ನೀವು ಇಲ್ಲಿ PFI ಪರೇಡ್ ನೋಡಲು ಬಂದಿದ್ದೀರಿ ಎಂಬ ಕಾರಣಕ್ಕಂತೂ ಅಲ್ಲವೇ ಅಲ್ಲ ಯಾಕೆಂದರೆ ಇಂದಿನ ದಿನ ಇಂಡಿಯಾದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಮಾರಂಭದ ಜೊತೆ ಸಂಬಂಧ ಇಟ್ಟು ಕೊಳ್ಳೂದೆ ಒಂದು ದೊಡ್ಡ ಧೈರ್ಯದ ಮಾತಾಗಿದೆ .
ಯಾರಿಗೆ ಎದೆಗಾರಿಕೆ ಇದೆಯೋ ಅಂತಹವರೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜೊತೆ ಸಂಭಂದ ಇಟ್ಟು ಕೊಳ್ಳುತ್ತಾರೆ .ಹೇಡಿಗಳ ತಂಡದ ಜೊತೆ ಪೋಪುರ್ ಫ್ರಂಟ್ ಈ ಹೋರಾಟ ನಡೆಸಲಸಾಧ್ಯ .
ಈ ಸಣ್ಣ ನಗರದಲ್ಲಿ ನಡೆಯುತ್ತಿರುವ ಸಾಮಾನ್ಯ ಸಭೆಯೊಂದಕ್ಕೆ ನೀವು ಬಂದಿದ್ದೀರಿ ಎಂಬ ತಪ್ಪು ತಿಳುವಳಿಕೆ ನಿಮ್ಮಲ್ಲಿರದಿರಲಿ .ದೆಹಲಿಯಲ್ಲಿರುವ ಎರಡು ಜೋಕೇರ್ಗಳಿಗೆ ನೀವು ಒಂದು ಸಂದೇಶ ನೀಡುತ್ತಿರುವಿರಿ .ನೀವು ಎಂತಹುದೇ ಪ್ರಯತ್ನ ನಡೆಸಿರಿ ,ಯಾವ ರೀತಿ ಬೇಕಾದರೂ ನಮ್ಮನ್ನು ಪರೀಕ್ಷೆಗೊಳಪಡಿಸಿ ,ನಾವು ಭಯ ಪಡುವವರಲ್ಲ .ಒಂದು ಕಾಲವಿತ್ತು ಇಡೀ ದೇಶದಲ್ಲಿ ನಮಗೆ ಪಾಪ್ಯುಲರ್ ಫ್ರಂಟ್ ಬಗ್ಗೆ ಪರಿಚಯಿಸಬೇಕಾದ ಅಗತ್ಯತೆ ಇತ್ತು.
ಜನ ನಮ್ಮಲ್ಲಿ ಪ್ರಶ್ನಿಸುತ್ತಿದ್ದರೇನೆಂದರೆ ಪಾಪ್ಯುಲರ್ ಫ್ರಂಟ್ ಎಂದರೇನು ?ಪಾಪ್ಯುಲರ್ ಫ್ರಂಟ್ ಯಾರು ಎಲ್ಲಿಂದ ಇತ್ಯಾದಿ .ಆ ಹೊತ್ತಿನಲ್ಲಿ ದೇಶದ ಉದ್ದಗಲಕ್ಕೆ ಜನರ ಬಳಿ ಹೋಗಲು ಅಷ್ಟೊಂದು ಸೌಕರ್ಯ ಮತ್ತು ಆರ್ಥಿಕ ಶಕ್ತಿ ನಮ್ಮಲ್ಲಿ ಇರಲಿಲ್ಲ .ನಾವು ಮಾಧ್ಯಮದವರಲ್ಲಿ ವಿನಂತಿ ಮಾಡಿ ಕೊಳ್ಳುತ್ತಿದ್ದೆವು ನಮ್ಮ ಮಾಧ್ಯಮ ಪ್ರಕಟಣೆಯನ್ನು ಪ್ರಕಟಿಸಿ ಎಂದು .ನಾವು ಮಾಧ್ಯಮದವರಲ್ಲಿ ಬೇಡಿಕೊಳ್ಳುತ್ತಿದ್ದೆವು ನಮ್ಮ ಚಿತ್ರ ಗಳನ್ನು ಪ್ರಕಟಿಸಿ ಎಂದು .ನಮ್ಮ ಸಭೆಗಳನ್ನು ವರದಿ ಮಾಡಿ ಎಂದು ನಾವು ಮಾಧ್ಯಮದ ಮಂದಿಯಲ್ಲಿ ಭಿನ್ನೈಸಿ ಕೊಳ್ಳುತ್ತಿದ್ದೆವು .ಆದರೆ ಯಾವ ಮಾಧ್ಯಮದವರು ಮುಂದೆ ಬರುತ್ತಿರಲಿಲ್ಲ .ಆದರೆ ಇಂದು ಇಡೀ ದೇಶದ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಪ್ರತೀ ಮಗುವಿಗೂ ತಿಳಿದಿದೆ ಪಾಪ್ಯುಲರ್ ಫ್ರಂಟ್ ಎಂಬುದೆನೆಂದು .ಇಂದು ಇಲ್ಲಿಯೂ ಗೋಧಿ ಮೀಡಿಯಾದ ಅನೇಕ ಮಂದಿ ಬಂದಿದ್ದಾರೆ .ಪಾಪ್ಯುಲರ್ ಫ್ರಂಟ್ ಬಗ್ಗೆ ಸಕಾರಾತ್ಮಕ ವಾದ ವರದಿ ಮಾಡಲೆಂದಲ್ಲ .ಇಂದು ಪಾಪ್ಯುಲರ್ ಫ್ರಂಟ್ ಸಭೆಯ ಕೆಲ ಇಂತಹ ಸುದ್ಧಿಗಳನ್ನು ಎತ್ತಿ ನಾಳೆ ತನ್ನ ಮುಖಪುಟದಲ್ಲಿ ಪ್ರಕಟಿಸಲೆಂದು .ಅವರಲ್ಲಿ ನಾನು ಪ್ರತಿಜ್ಞೆ ಮಾಡುತ್ತೇನೆಂದರೆ ನಿಮಗೆ ಇಂತಹ ಪೋಯಿಂಟ್ಸ್ಗಳನ್ನು ಖಂಡಿತವಾಗಿ ನೀಡುತ್ತೇನೆ ಅದರಿಂದ ಕೇವಲ ಗೋಧಿ ಮೀಡಿಯಾ ಮಾತ್ರವಲ್ಲ ದೆಹಲಿಯಲ್ಲಿ ಗದ್ದುಗೆಯಲ್ಲಿ ಕೂತಿರುವ ಜೋಕರ್ಗಳು ಮತ್ತು ಆ ಎರಡು ಜೋಕರ್ಗಳ ನಾಗಪುರದ ಮಾಸ್ಟರ್ಗಳ ಕುರ್ಚಿ ಕೂಡ ನಡುಗಲಿದೆ .ಇಂದು ಭಾರತದಲ್ಲಿ ನೀವು ವಾಸಿಸುತ್ತಿರುದು ಹಿಂದೂ ಬಹುಸಂಖ್ಯಾತತೆ ಯಲ್ಲಿ ನಂಬಿಕೆಯಿಟ್ಟಿರುವ ಸರ್ಕಾರದಡಿಯಲ್ಲಾಗಿದೆ . ಈ ಸರ್ಕಾರ ಯಾರ ಹಕ್ಕನ್ನು ಒಪ್ಪೂದಿಲ್ಲ .ನೀವು ಮುಸ್ಲಿಮರಾಗಿರಲಿ ,ಕ್ರೈಸ್ತರಾಗಿರಲಿ, ಹಿಂದೂವಾಗಿರಲಿ ,ದಲಿತರಾಗಿರಲಿ ,ಆದಿವಾಸಿಯಾಗಿರಲಿ ಯಾರೇ ಆಗಿರಲಿ .ಒಂದು ವೇಳೆ ನೀವು ಈ ಸರ್ಕಾರದ ವಿರೋಧಿಯಾಗಿದ್ದರೆ ಮತ್ತು ಸರ್ಕಾರದ ನೀತಿಗಳನ್ನು ಪ್ರತಿರೋಧಿಸಿದರೆ ಈ ಸರ್ಕಾರ ತನ್ನ ಎಲ್ಲ ಸಂಸ್ಥೆಗಳನ್ನು ಶಕ್ತಿಗಳನ್ನು ಬಳಸಿ ನಿಮ್ಮನ್ನು ಮಟ್ಟ ಹಾಕಲು ರಣತಂತ್ರ ರೂಪಿಸುತ್ತದೆ .ಇಂತಹ ಸರ್ಕಾರವೊಂದನ್ನು ನಾವು ನೋಡುತ್ತಿದ್ದೇವೆ .ಅಮೆರಿಕಾದಲ್ಲಿನ ಟ್ರಂಪ್ ಸರ್ಕಾರ ಹಾಗು ಯೂರೋಪಿನ ಇತರ ಬಲಪಂಥೀಯ ಸರ್ಕಾರ ಯಾವುದು ಕೂಡ ಈ ಹಿಂದುತ್ವವಾದಿ ಸರ್ಕಾರ ಎದುರು ಏನೇನು ಅಲ್ಲ .ಇಂತಹ ಒಂದು ಸರ್ಕಾರ ಇಂದು ದೇಶದ ಪ್ರತಿಯೊಬ್ಬರಿಗೆ ಗುರಿ ಮಾಡಿಕೊಂಡಿದೆ .ಮಹಾರಾಷ್ಟ್ರದಲ್ಲಿ ದಲಿತರು ಭೀಮ ಕೋರೆಗಾವ್ ಹೆಸರಿನಲ್ಲಿ ಒಂದು ಪ್ರತಿಭಟನೆ ನಡೆಸಿದಾಗ ಇಡೀ ದಲಿತ ಬುಡಕಟ್ಟು ಹಾಗು ಎಡಪಂಥೀಯ ನಾಯಕರನ್ನು ಜೈಲಿಗೆ ತಳ್ಳಲಾಯಿತು .ಇದನ್ನು ಸಾಬೀತು ಪಡಿಸಲೆಂದರೆ ನೀವು ದಲಿತರು ಹಾಗು ಬುಡಕಟ್ಟು ಮಂದಿ ಆರೆಸ್ಸೆಸ್ ನ ವಿರುದ್ಧ ಧ್ವನಿ ಎತ್ತಬಾರದು .CAA ಬಗ್ಗೆ ಇಡೀ ವಿದ್ಯಾರ್ಥಿ ಸಮುದಾಯ ಬೀದಿ ಹೋರಾಟ ನಡೆಸಿತು .ತದನಂತರ ದೆಹಲಿ ದಂಗೆ ನೆಪದಲ್ಲಿ ಇಡೀ CAA ಹೋರಾಟಗಾರರನ್ನೇ ಗುರಿ ಮಾಡಲಾಗಿತ್ತು .ಇಂದು ರೈತ ಹೋರಾಟಗಾರರನ್ನೇ ಅಪರಾಧಿ ಸ್ಥಾನದಲ್ಲಿಡಲಾಗಿದೆ .ಸಂದೇಶ ಸ್ಪಷ್ಟವಾಗಿದೆ .ಒಂದು ವೇಳೆ ಭಾರತದಲ್ಲಿ ಜೀವಿಸಬೇಕಾದಲ್ಲಿ ಈ ಸರ್ಕಾರದ ಗುಲಾಮರಾಗಿ ಜೀವಿಸ ಬೇಕು .ಸಂದೇಶ ಸ್ಪಷ್ಟವಾಗಿದೆ .ಈ ಸರಕಾರ ಸಬ್ಕ ಸಾಥ್ ಸಬ್ಕ ವಿಕಾಸ್ ಎಂದು ಹೇಳೂದು ಎಲ್ಲವೂ ಬರಿಯೊಳು .ಒಂದು ಸಿಂಗಲ್ ಏಜಂಡಾ ಈ ಸರ್ಕಾರ ನಿಮಗೆ ನೀಡುತ್ತಿದೆ .ನನ್ನ ಮಾತನ್ನು ಆಲಿಸುತ್ತಿರುವ ಎಲ್ಲರಿಗೆ ಈ ಸರ್ಕಾರ ಒಂದು ಸಿಂಗಲ್ ಏಜಂಡಾ ಕೊಡುತ್ತಿದೆ ಅದೇನೆಂದರೆ ನೀವು ಆರೆಸ್ಸೆಸ್ ಬಗ್ಗೆ ಭಯ ಇಟ್ಟಿದ್ದೀರೋ ಇಲ್ಲವೋ ?ಒಂದು ವೇಳೆ ನೀವು ಆರೆಸ್ಸೆಸ್ನ ಪಾದ ನೆಕ್ಕಿದರೆ ನಿಮಗೆ ರಾಜ್ಯಪಾಲ ಹುದ್ದೆ ಸಿಗುತ್ತದೆ .ನಿಮಗೆ ರಂಜಾನ್ ಗೊಗೋಯಿಯಂತೆ ರಾಜ್ಯಸಭೆಯ ಸದಸ್ಯತ್ವ ದೊರೆಯುತ್ತದೆ .ನಿಮಗೆ ಇನ್ನಿತರ ರಾಜಕಾರಣಿಗಳಂತೆ ,ಮುಸ್ಲಿಮರ ಮತ ಪಡೆದು ಕಾಂಗ್ರೆಸ್ಸ್ನಿಂದ ಗೆದ್ದು ಖರೀದಿಸಿದ MP,MLA ಗಳಿಗೆ ದೊರೆಯುವಂತೆ ಮಂತ್ರಿಗಿರಿ ದೊರೆಯುತ್ತದೆ .ಒಂದು ವೇಳೆ ನೀವು ಬಿಜೆಪಿ ವಿರುದ್ಧ ಮಾತಾಡಿದರೆ ನಿಮಗೆ UAPA ಸಿಗುತ್ತದೆ .ನಿಮಗೆ ED ,NIA ದೊರೆಯುತ್ತದೆ .ನಾನು ಇಲ್ಲಿ ನೆರೆದಿರುವ ಸಭಿಕರಿಗೆ ಒಂದು ಪ್ರಶ್ನೆ ಕೇಳುತ್ತೇನೆ .ನಿಮಗೆ ಈ ಬಿಜೆಪಿ ಸರ್ಕಾರ ಎಚ್ಚರಿಕೆ ನೀಡುತ್ತಿದೆ ಒಂದು ವೇಳೆ ನಿಮ್ಮನ್ನು ಶರಣಾಗತಿ ಮಾಡಲು ಹೇಳಿದ್ದಲ್ಲಿ ನೀವು ನಿಮ್ಮ ಮೊಣಕಾಲುರುತ್ತೀರೊ?
ಒಂದು ಮಾತನ್ನು ಅವರು ಮರೆತಿದ್ದಾರೆ .ಭಾರತದಲ್ಲಿ ಇಂದಿಗೂ ಮುಸ್ಲಿಂ ಸಮುದಾಯ ಜೀವಂತವಾಗಿದೆ .ಈ ಮುಸ್ಲಿಂ ಸಮುದಾಯದ ಬಗ್ಗೆ ತುಂಬಾ ನಕಾರಾತ್ಮಕವಾದ ಸುದ್ಧಿಗಳು ಬರುತ್ತಿರುತ್ತದೆ .ಹಿಂದುಳಿದವರು ,ಅಶಿಕ್ಷಿತರು ಇತ್ಯಾದಿ .ಇದು ಮುಸ್ಲಿಂ ಸಮುದಾಯದ ಸಾಮರ್ಥ್ಯವು ಹೌದು .ನೆನಪಿರಲಿ .ಅಲ್ಲಾಮಾ ಇಕ್ಬಾಲ್ ಹೇಳಿದಂತೆ “ತೌಹೀದ್ ನ ಅಮಾನತ್ ನಮ್ಮ ಎದೆಯೊಳಗಿದೆ .ಅಷ್ಟೊಂದು ಸುಲಭವಲ್ಲ ನಮ್ಮ ಗುರುತುಗಳನ್ನು ಚಿವುಟಿ ಹಾಕಲು ”
ಭಾರತೀಯ ಮುಸ್ಲಿಮರು ಆರೆಸ್ಸೆಸ್ಗೆ ಪ್ರತುತ್ತರ ನೀಡಲು ಮುಂದೆ ಬರಬೇಕಾಗಿದೆ ..ಇಂದು ಪಾಪ್ಯುಲರ್ ಫ್ರಂಟ್ ಮುಂದೆ ಬಂದಿದೆ .ಅದೇ ಕಾರಣಕ್ಕೆ PFI ಯನ್ನು ಗುರಿಗೀಡು ಮಾಡಲಾಗಿದೆ .ದೆಹಲಿಯ CAA ಹೋರಾಟದಲ್ಲಿ ಪಾಪ್ಯುಲರ್ ಫ್ರಂಟ್ ಹೆಸರು ಬಂತು .ದೆಹಲಿಯಲ್ಲಿ ದಂಗೆ ನಡೆದು ಮುಸ್ಲಿಮರ ಮಾರಣ ಹೋಮ ನಡೆಸಲಾಗಿತ್ತು .ಆದರೆ ಕೇಸ್ ಮಾತ್ರ PFI ಮೇಲೆ .ED ಕೂಡ ನಮ್ಮ ಹಿಂದೆ ಬೆನ್ನು ಬಿದ್ದಿದೆ .ಮೊನ್ನೆ ಉತ್ತರಪ್ರದೇಶ ದಲ್ಲಿ PFI ನ ನಿಮ್ಮಂತಹ ಎರಡು ಕಡೆರ್ಗಳನ್ನು ಬಂಧಿಸಲಾಯಿತು .ಅವರನ್ನು ಮಾಧ್ಯಮಗಳೆದುರಿಗೆ ತರಲಾಗಿರಲಿಲ್ಲ .ಹನ್ನೊಂದನೇ ತಾರೀಕಿಗೆ ಬಂಧಿಸಿದರೂ ಕೂಡ ನಿನ್ನೆ ಹದಿನಾರು ತಾರೀಕಿಗೆ ನಾವು ಕೇರಳದಲ್ಲಿ ಕೇಸ್ ಮಾಡಿದಾಗ UP. ಪೊಲೀಸರು ಒಂದು ಪತ್ರಿಕಾಗೋಷ್ಠಿ ನಡೆಸಿ ಇವರು ಸ್ಫೋಟ ಮಾಡಲು ಬಂದಿದ್ದಾರೆ ಎಂಬ ಸುಳ್ಳು ಕಥೆ ಸ್ರಷ್ಟಿ ಮಾಡುತ್ತಾರೆ .ಅವರಿಬ್ಬರ ಮೇಲೆ ಸ್ಫೋಟಕಗಳ ಸಾಗಾಟದ ಸುಳ್ಳು ಆರೋಪ ಮಾಡುತ್ತಾರೆ .ಅರೆಸ್ಟ್ ಮಾಡಿ ೫ ದಿನದ ನಂತರ ಈ ಪೊಲೀಸರಿಗೆ ತಿಳಿಯಿತೇ ಇವರು ಭಯೋತ್ಪಾದಕ ಧಾಳಿ ನಡೆಸಲು ಬಂದವರೆಂದು .ಇದರ ಅರ್ಥವೇನು ?PFI ಯನ್ನು ಪ್ರತಿ ದಿನ ಗುರಿಗೀಡು ಮಾಡಲಾಗುತ್ತಿದೆ .ನಿಮ್ಮಲ್ಲಿ ಯಾರಾದರೂ ಪಾಪ್ಯುಲರ್ ಫ್ರಂಟ್ ಧಾಳಿ ನಿಲ್ಲುತ್ತದೆ ಎಂದು ಯೋಚಿಸಿದರೆ ಅದು ನಿಮ್ಮ ತಪ್ಪು ಕಲ್ಪನೆ .ಪ್ರತಿ ದಿನ ಒಂದು ಹೊಸ ಆರೋಪ ಪಾಪ್ಯುಲರ್ ಫ್ರಂಟ್ ಮೇಲೆ ಮಾಡಲಾಗುವುದು .ನಾನು ಇಲ್ಲಿ ನೆರೆದಿರುವ ಫ್ರಂಟ್ ಸದಸ್ಯರಿಗೆ ಹೇಳ ಬಯಸುವೆನೆಂದರೆ ತಯಾರಾಗಿರಿ .UAPA, ED,NIA,NSA, ಹಾಗೂ ದೇಶದ್ರೋಹದ ಕೇಸುಗಳು ನಿಮ್ಮ ಮೇಲೆ ಬರಲಿದೆ .ಈ ಎಲ್ಲ ದಕ್ಕೂ ತಯಾರಾಗುವಂತಹ ಸಮಯ ಬಂದೊದಗಿದೆ .ದೆಹಲಿಯಲ್ಲಿ ಕೂತಿರುವ ಆರೆಸ್ಸೆಸ್ ಪ್ರಚಾರಕರು ನಿಮ್ಮ ಮೇಲೆ ಮೃದುತ್ವ ಹಾಗು ಕರುಣೆ ತೋರಿಸುತ್ತಾರೆ ಎಂಬ ಗುಮಾನಿನಲ್ಲಿರಬೇಡಿ .ಈ ಎರಡು ಪ್ರಚಾರಕರು ತನ್ನ ಬಾಲ್ಯದಿಂದಲೂ ಮನುವಾದದ ಪಾಠಗಳನ್ನು ಆಲಿಸಿ ಕರಗತ ಮಾಡಿ ಕೊಂಡವರಾಗಿದ್ದಾರೆ . ಆ ಮನುವಾದ ಕಲಿಸುವುದೇನೆಂದರೆ ಇಡೀ ದೇಶದ ಆಡಳಿತ ಒಂದು ಚಿಕ್ಕ ಗುಂಪಿನ ಕೈಯ್ಯಲ್ಲಿರಬೇಕೆಂದು .ಅಂತಹ ಶಿಕ್ಷಣ ನೀಡುವ ಮನುವಾದ ಕಲಿತವರಾಗಿದ್ದಾರೆ.ಇಲ್ಲಿನ ಮುಸ್ಲಿಮರು ಅವರ ವಿರೋಧಿಗಳು ,ಕ್ರೈಸ್ತರು ಅವರ ಶತ್ರುಗಳು ,ಎಡಪಂಥೀಯರು ಅವರ ವೈರಿಗಳು .ಇಂತಹ ಒಂದು ಸಿದ್ಧಾಂತದಿಂದ ತರಬೇತಿಗೊಂಡ ಇಬ್ಬರು ಈ ದೇಶವನ್ನು ನಡೆಸುತ್ತಿದ್ದಾರೆ .ಇವರಿಂದ ಯಾವುದೇ ನಿರೀಕ್ಷೆಗಳನ್ನಿಟ್ಟು ಕೊಳ್ಳ ಬೇಡಿ .ಒಂದೇ ಒಂದು ನಿರೀಕ್ಷೆ ಎಂದರೆ ಪ್ರತಿ ದಿನ ನಿಮ್ಮನ್ನು ಬೇಟೆ ಮಾಡಲಾಗುತ್ತದೆ .ನಾನು ಕೇಳಿದೆ ಇಲ್ಲಿ ಮಂಗಳೂರಿನಲ್ಲಿ sdpi ಸದಸ್ಯರಿಬ್ಬರು sdpi ಜಿನ್ದಾಬಾದ್ ಎಂಬ ಘೋಷಣೆ ಹಾಕುತ್ತಿದ್ದಾಗ ಪಾಕಿಸ್ತಾನ ಜಿಂದಾಬಾದ್ ಎಂದು ತಪ್ಪು ಕೇಸು ಜಡಿಯಲಾಯಿತು .ಇದರಲ್ಲಿ ನಿಮಗೆ ನಾಚಿಕೆ ಪಡುವ ಅಗತ್ಯ ಇಲ್ಲ .ನಾಚಿಕೆ ಪಡ ಬೇಕಾದವರು ಇಲ್ಲಿನ ಪೊಲೀಸರು .ನೀವು ನಾಚಿಕೆ ಪಡಬೇಡಿ .ನಾನು ಹೇಳುದೆಂದರೆ ಯಾರನ್ನು ಅರೆಸ್ಟ್ ಮಾಡಿದ್ದರೋ ಅವರನ್ನು ಉತ್ಸವ ಮಾಡಿ .ಹೀರೋಗಳಾಗಿಸಿ .ನಾಚಿಕೆ ಪಡಬೇಕಾಗಿದ್ದು ದಕ್ಷಿಣ ಕನ್ನಡದ ಪೊಲೀಸ್ ಇಲಾಖೆ .ತನ್ನ ಸಾಂವಿಧಾನಿಕ ಕರ್ತವ್ಯವನ್ನು ಬಿಟ್ಟು ಬಿಜೆಪಿ ಸರ್ಕಾರದ ಗುಲಾಮಿತನ ಮಾಡಲು ಹೊರಟಿದೆ ಇಲ್ಲಿನ ಪೊಲೀಸ್ ಇಲಾಖೆ .ಜೈಲಿನಲ್ಲಿರುವ ನಮ್ಮ ಕಾರ್ಯಕರ್ತರು ನಮ್ಮ ಹೀರೋಗಳು .UP ಜೈಲಿನಲ್ಲಿರುವ ನಮ್ಮಿಬ್ಬರು ಸಹೋದರರು ನಮ್ಮ ಹೀರೋಗಳು .ಪಾಪ್ಯುಲರ್ ಫ್ರಂಟ್ ಬಳಿ ಏನೆಲ್ಲ ಇದ್ಯೋ ಅದನ್ನೆಲ್ಲ ನಾವು ಅವರನ್ನು ಬಿಡುಗಡೆಗೊಳಿಸಲು ವ್ಯವಿಸುವೆವು .ಈ ಸಂಘಟನೆ ಸ್ಥಾಪಿಸಿದ್ದೆ ಇಂತಹ ಕಾರ್ಯಕರ್ತರಿಂದಾಗಿ .ಇಲ್ಲಿ ನಾಯಕನೆಂಬುದಿಲ್ಲ .ಪ್ರತಿಷ್ಠಿತ ಕುಟುಂಬದ ಸದಸ್ಯರಿಗೆ ಸೇರಿಸಿ ಮಾಡಿದ ಸಂಘಟನೆ ಇದು ಅಲ್ಲವೇ ಅಲ್ಲ .ನಮ್ಮಲ್ಲಿರುವ ಪ್ರತಿಯೊಂದು ಕೂಡ ಈ ಸದಸ್ಯರಿಗೆ ನ್ಯಾಯ ಒದಗಿಸಲಾಗಿದೆ .ಅವರಿಗೆ ನ್ಯಾಯ ಸಿಗುವವರೆಗೂ ನಾವು ವಿರಮಿಸುವವರಲ್ಲ .
ಕೆಲವರು ಪ್ರಶ್ನಿಸುತ್ತಾರೇನೆಂದರೆ ಪಾಪ್ಯುಲರ್ ಫ್ರಂಟ್ ಅನ್ನು ಯಾಕೆ ಗುರಿ ಮಾಡಲಾಗುತ್ತಿದೆ .ಸಿಂಪಲ್ ಉತ್ತರ ಏನೆಂದರೆ ಭಾರತದಲ್ಲಿ ಇಡೀ ಸಮುದಾಯಕ್ಕೆ ವಿಶೇಷವಾಗಿ ಮುಸ್ಲಿಂ ಸಮುದಾಯಯಕ್ಕೆ ಗುಲಾಮನಾಗಿ ಮಾಡುತ್ತಿರುವಾಗ ಒಂದು ಭರವಸೆ ನೀಡುವ ಸಂಘಟನೆ ಪಾಪ್ಯುಲರ್ ಫ್ರಂಟ್ ಆಗಿದೆ .
ನಮಗೆ ಹೇಳಲಾಗಿತ್ತು ಕಾಗದ ತೋರಿಸಿ ಕಾಗದ ತೋರಿಸಿ ಕಾಗದ ತೋರಿಸಿ ಎಂದು .ಆವಾಗ ನಾವು ಹೇಳಿದೆವು NRC ಯನ್ನು ಧಿಕ್ಕರಿಸಿ CAA ಧಿಕ್ಕರಿಸಿ ಧಿಕ್ಕರಿಸಿ ಎಂದು .ಯಾವುದೇ ಧಾಖಲೆ ತೋರಿಸುದಿಲ್ಲ .ಇದು ನಮ್ಮ ದೇಶ .ನೀವು ಯಾರಾಗಿದ್ದೀರಿ ನಮ್ಮನ್ನು ಪ್ರಶ್ನಿಸಲೆಂದು .ಇಂತಹ ಭರವಸೆ ನೀಡಿದ ಸಂಘಟನೆ ನಾವಾಗಿದ್ದೇವೆ .ವೈರಿಯ ಕಣ್ಣಿನೊಳಗೆ ಕಣ್ಣನಿಟ್ಟು ಮಾತನಾಡುವ ಸಂಘಟನೆ ನಾವಾಗಿದ್ದೇವೆ .ಮತ್ತು ಈ ಕಾರವಾನ ನಿಲ್ಲುದಿಲ್ಲ .ನಿಮಗೇನು ಮಾಡಬೇಕೋ ಮಾಡಿ .ಏನು ಎತ್ತ ಬೇಕೋ ಎತ್ತಿ ಎಲ್ಲ ಪ್ರಯತ್ನವನ್ನು ಮಾಡಿ .ನಾವು ನಿಲ್ಲುವವರಲ್ಲ .
ಯಾರಿಗೆ ಧ್ವನಿ ಇಲ್ಲವೋ ಅಂಥವರ ಧ್ವನಿ ಆಗಿದ್ದೇವೆ ನಾವು .ಇಂದು ವೇದಿಕೆಯೇರಿ ನಾನು ಹೇಳುವ ಮಾತು ಅದು ನನ್ನ ಮಾತಲ್ಲ .ಇದು ನಿಮ್ಮ ಮಾತಾಗಿದೆ .ಹೌದೇ ಅಲ್ಲವೇ ?ಭಾರತದಲ್ಲಿನ ೨೦ ಕೋಟಿ ಮುಸ್ಲಿಮರು ಹಾಗು ಅನೇಕ ತುಳಿತೊಳ್ಕಕಾದ ಸಮುದಾಯಗಳ ಧ್ವನಿ ಇಂದು ಪಾಪ್ಯುಲರ್ ಫ್ರಂಟ್ ಆಗಿದೆ .ಇವರು ಬಯಸುದೇನೆಂದರೆ ಶೋಷಣೆಗೊಳಗಾದ ಮುಸ್ಲಿಮರ ಧ್ವನಿಯನ್ನು ಸಂಪೂರ್ಣವಾಗಿ ನಿಶ್ಶಭ್ಧಗೊಳಿಸೋಣ. ಇದೆ ಕಾರಣಕ್ಕಾಗಿ ಪಾಪ್ಯುಲರ್ ಫ್ರಾಂಟನ್ನು ಟಾರ್ಗೆಟ್ ಮಾಡಲಾಗಿದೆ .
ಮೂರನೆಯದಾಗಿ ಪಾಪ್ಯುಲರ್ ಫ್ರಂಟ್ ಎಂದೂ ಹೊಂದಾಣಿಕೆ ಮಾಡಿ ಕೊಳ್ಳೂದಿಲ್ಲ.ಇವರು ತುಂಬಾ ನೇ ಸಂತೋಷವಾಗಿರುತ್ತಿದ್ದರು ಒಂದು ವೇಳೆ ನಾವು ಹೊಂದಾಣಿಕೆ ಮಾಡಿ ಕೊಂಡಿರುತ್ತಿದ್ದರೆ .ನಮ್ಮ ಕಮ್ಯುನಿಟಿ ಲೀಡರ್ಸ್ ಗಳು ಬಂದು ನಮ್ಮಲ್ಲಿ ಹೇಳುತ್ತಾರೆ ಸ್ವಲ್ಪ ಕಾಂಪ್ರೋಮೈಜ್ ಮಾಡಿ ಕೊಳ್ಳಿ.ನಾವು ಅವರಿಗೆ ಉತ್ತರಿಸುತ್ತೇವೆ ಈ ಹೊಂದಾಣಿಕೆ ಎಂಬ ಪದ ನಮ್ಮ ಸಂಘಟನೆ ನಮಗೆ ಕಲಿಸಿ ಕೊಟ್ಟಿಲ್ಲ .ನಮ್ಮ ಸಂಘಟನೆ ನಮಗೆ ಅನೇಕ ವಿಷಯಗಳನ್ನು ಕಲಿಸಿದೆ ಹೊರತು ಹೊಂದಾಣಿಕೆ ಮಾತ್ರ ಕಲಿಸಿಲ್ಲ .ಎಲ್ಲಿ ಅನ್ಯಾಯವಾಗುತ್ತದೆಯೋ ಆ ಸಮಯದಲ್ಲಿ ಹೊಂದಾಣಿಕೆ ಮಾಡಿ ಕೊಳ್ಳೂದು ಪಾಪ್ಯುಲರ್ ಫ್ರಂಟ್ ಡಿಎನ್ಎ ನಲ್ಲಿಲ್ಲ .ಯಾರು ಹಿಂಸೆಯಲ್ಲಿ ವ್ಯಸ್ಥನಾಗಿದ್ದಾನೋ ಅವನ ಕೈಯ್ಯನ್ನು ಹಿಡಿಯೋದು ಮತ್ತು ಬಿಸಾಕೋದು ಇದೆ ಪಾಪ್ಯುಲರ್ ಫ್ರಂಟ್ ನ ಡಿಎನ್ಎ ನಲ್ಲಿದೆ .
ಒಂದು ವೇಳೆ ಪಾಪ್ಯುಲರ್ ಫ್ರಂಟ್ ಒಬ್ಬ ಸದಸ್ಯರಿರಲಿ ಅಥವಾ ಸಾವಿರ ಸದಸ್ಯರಿರಲಿ .ಒಂದು ವೇಳೆ ನಮ್ಮ ಮುಂದೆ ಅನ್ಯಾಯವಾದಲ್ಲಿ ನಾವು ಸುಮ್ಮನೆ ಕೂರುವ ಜಾಯಮಾನದವರಲ್ಲ .ಶೋಷಣೆ ಯಾರ ಮೇಲಾದರೂ ಸರಿ .
ಪಾಪ್ಯುಲರ್ ಫ್ರಂಟ್ ಮೇಲೆ ಇವರಿಗೆ ಇನ್ನೊಂದು ಅಭ್ಯಂತರ ಎಂದರೆ ಪಾಪ್ಯುಲರ್ ಫ್ರಂಟ್ ದೇಶಕ್ಕೆ ಭಾರತದ ನೈಜ ಶತ್ರುವಿನ ಪರಿಚಯ ಮಾಡಿ ಕೊಡುತ್ತಿದೆ .ಇಂದು ನಾನು ಹೇಳುವೆನೆಂದರೆ ಭಾರತದ ನೈಜ ಶತ್ರು ಯಾರು ?ಭಾರತದ ನೈಜ ಶತ್ರು ಯಾವುದೇ ಶಂಕೆ ಇಲ್ಲದೆ ಆರೆಸ್ಸೆಸ್ .ಇದರಲ್ಲಿ ಯಾವುದೇ ಅನುಮಾನ ಇಲ್ಲ .ಕೋವಿಡ್ ಬಂತು ಹೋಯಿತು ,ಪೋಲಿಯೊ ಬಂತು ಹೋಯಿತು .ಇದಕ್ಕೆ ವ್ಯಾಕ್ಸಿನ್ ಕೂಡ ಬರುತ್ತದೆ .ಆದರೆ ಆರೆಸ್ಸೆಸ್ ಇಂತಹ ಒಂದು ವೈರಸ್ ಆಗಿದೆ ಅದಕ್ಕೆ ಇದುವರೆಗೂ ಯಾವುದೇ ವ್ಯಾಕ್ಸಿನ್ ಬಂದಿಲ್ಲ .ಇನ್ ಷ ಅಲ್ಲಾಹ್ ಆ ವ್ಯಾಕ್ಸಿನ್ ಬಹು ಬೇಗ ಪಾಪ್ಯುಲರ್ ಫ್ರಂಟ್ ತೆಗೆದು ಕೊಂಡು ಬರುತ್ತದೆ .ಪ್ರತಿ ಜಾಗದಲ್ಲಿ ನಾವು ಆ ವ್ಯಾಕ್ಸಿನನ್ನು ಆರೆಸ್ಸೆಸ್ ಗೆ ಕೊಡಲಿದ್ದೇವೆ .
ನಮಗೆ ಗೊತ್ತಿದೆ ಆರೆಸ್ಸೆಸ್ ಯಾರೆಂದು .ಭಾರತದಲ್ಲಿ ಹಿಂದೂ – ಮುಸ್ಲಿಂ ಎಂಬ ಸಮಸ್ಯೆ ಇಲ್ಲವೇ ಇಲ್ಲ .ನಾನು ಇಂದು ಸ್ಪಷ್ಟವಾಗಿ ಹೇಳುತ್ತೇನೆ ಭಾರತದಲ್ಲಿ ಹಿಂದೂ ಮುಸ್ಲಿಂ ಎಂಬ ಸಮಸ್ಯೆ ಇಲ್ಲವೇ ಇಲ್ಲ .ಈ ಮಾಧ್ಯಮದವರು ಯಾರಾದರೂ ಇನ್ನು ಮುಂದೆ ಹಿಂದೂ ಮುಸ್ಲಿಂ ಸಮಸ್ಯೆ ಹೇಳಿದರೆ ನೀವು ಹೇಳಿ ಇಲ್ಲಿ ಹಿಂದೂ ಮುಸ್ಲಿಮರ ನಡುವೆ ಸಮಸ್ಯೆನೆ ಇಲ್ಲ .ಇಲ್ಲಿರುವ ಏಕೈಕ ಸಮಸ್ಯೆ ಆರೆಸ್ಸೆಸ್ ವರ್ಸ್ಸ್ ಮುಸ್ಲಿಮ್ಸ್ .ಇದೆ ಕಾರಣಕ್ಕೆ ನಾನು ಈ ವೇದಿಕೆಯಿಂದ ಇಡೀ ಭಾರತದ ಮುಸ್ಲಿಮರಿಗೆ ಹೇಳ ಬಯಸುತ್ತೇನೆ ಆರೆಸ್ಸೆಸ್ಸನ್ನು ಅರ್ಥ ಮಾಡಿ ಕೊಳ್ಳಿ .ನೀವು ನಿಮ್ಮ ಆರೆಸ್ಸೆಸ್ ನ ಜಿಲ್ಲಾ ಪ್ರಮುಖ್ ಯಾರು .ನಿಮ್ಮ ಜಿಲ್ಲೆಯ ಆರೆಸ್ಸೆಸ್ನ ಬೌದ್ಧಿಕ್ ಪ್ರಮುಖ್ ಯಾರು .ನಿಮ್ಮ ಜಿಲ್ಲೆಯ ಶಾರೀರಿಕ್ ಪ್ರಮುಖ್ ಯಾರು ಯಾರೆಂದು ತಿಳಿದು ಕೊಳ್ಳಿ .ಇವರು ನಿಮ್ಮ ನೈಜ ಶತ್ರುಗಳು .ನಿಮ್ಮ ಜೊತೆ ಇರುವ ನಿಮ್ಮ ಸಹೋದರರು ನಿಮ್ಮ ವೈರಿಗಳಲ್ಲ .ನಮ್ಮ ಶತ್ರು ಆರೆಸ್ಸೆಸ್ .ಇದಕ್ಕಾಗಿ ಆರೆಸ್ಸೆಸ್ಸನ್ನು ಅರ್ಥ ಮಾಡಿ ಕೊಳ್ಳಿ .ಭಾರತದಲ್ಲಿನ ಪ್ರತಿ ದಲಿತ ,ಬುಡಕಟ್ಟು ,ಮುಸಲ್ಮಾನ ಹಾಗು ಪ್ರತಿ ಹಿಂದುಳಿದ ವರ್ಗದ ಜವಾಬ್ದಾರಿ ಏನೆಂದರೆ ಆರೆಸ್ಸೆಸ್ಸನ್ನು ಅರ್ಥ ಮಾಡಿ ಕೊಳ್ಳ ಬೇಕು .ನಾನು ಸವಾಲು ಹಾಕಿ ಹೇಳುತ್ತೇನೆಂದರೆ ಯಾವಾಗ ನೀವು ಆರೆಸ್ಸೆಸ್ಸನ್ನು ಗುರುತು ಮಾಡಿ ಕೊಳ್ಳುತ್ತೀರೋ ಆವಾಗ ಇವರು ಓಡಲು ಆರಂಭಿಸುತ್ತಾರೆ .ಈ ರೀತಿ ಓಡಲು ಆರಂಭಿಸುತ್ತಾರೆಂದರೆ ಅವರಿಗೆ ತನ್ನ ಸಮವಸ್ತ್ರ ಚಡ್ಡಿಯಿಂದ ಪ್ಯಾಂಟ್ ಆಗಿ ಪರಿವರ್ತನೆಗೊಂಡ ನೆನಪು ಇರಲಾರದು .ನಿಮಗೆ ಮಾಡ ಬೇಕಾದ ಏಕೈಕ ಕಾರ್ಯ ಆರೆಸ್ಸೆಸ್ಸನ್ನು ಪರಿಚಯಿಸಿಸಬೇಕು .ನೀವು ನಿಮ್ಮ ಜಿಲ್ಲೆಯ ಮಂಡಲದ ಆರೆಸ್ಸೆಸ್ನ ಪ್ರಮುಖರನ್ನು ಗುರುತು ಮಾಡಿ ಕೊಂಡಿರಿ .ನಾವು ಸಾವಿರ ವರುಷಗಳಿಂದ ಹಿಂದೂ ಮುಸ್ಲಿಮರು ಜೊತೆ ಜೊತೆಯಾಗಿ ಬಾಳುತ್ತಿದ್ದೇವೆ .ಭಾರತದಲ್ಲಿ ಹಿಂದೂ ಮುಸ್ಲಿಂ ಸಮಸ್ಯೆ ಇಲ್ಲ .ಇಲ್ಲಿ ಏರುವ ಸಮಸ್ಯೆ ಆರೆಸ್ಸೆಸ್ ಮತ್ತು ನಾವು ಅವರ ಅನಾವರಣ ಮಾಡುತ್ತಿದ್ದೇವೆ .ನಾವು ತೋರಿಸುತ್ತೇವೆ ಇವರು ಎಷ್ಟು ಹೇಡಿಗಳೆಂದು .ಈ ಲಿನ್ಚಿಂಗ್ ಸಮಯದಲ್ಲಿ ೨೫ ಮಂದಿಯ ಗುಂಪು ಬಂದು ಒಬ್ಬ ಅಮಾಯಕನನ್ನು ಥಳಿಸಲು ಬರುತ್ತಾರಲ್ಲವೇ ಅಂತಹ ಅನೇಕ ಕೃತ್ಯಗಳು ಮಾಧ್ಯಮಗಳಲ್ಲಿ ಬಂದಿಲ್ಲ .ಅದೇ ೨ ಅಮಾಯಕರು ಸೇರಿ ಈ ೩೦ ೪೦ ಮಂದಿಯ ಹೇಡಿಗಳ ತಂಡದ ಎದುರಿಸಲು ಸನ್ನದ್ಧರಾದಾಗ ಈ ಹೇಡಿಗಳ ಗುಂಪು ಕಾಲ್ಕಿತ್ತು ಕೊಳ್ಳುತ್ತಾರೆ ಮತ್ತು ಪಲಾಯನಗೊಳ್ಳುತ್ತಾರೆ .ಇಷ್ಟೊಂದು ರಣಹೇಡಿಗಳು ಈ ಆರೆಸ್ಸೆಸ್ನವರು .ಅವರ ಪುಕ್ಕಲುತನವನ್ನು ಅನಾವರಣ ಮಾಡಬೇಕಾಗಿದೆ .
ಎರಡನೆಯದಾಗಿ ನಾವು ಜನರ ಬಳಿ ಹೇಳುತ್ತೇವೆ ನಾವು ಆರೆಸ್ಸೆಸ್ಸನ್ನು ಎದುರು ನಿಲ್ಲಲು ಇರುವ ಏಕೈಕ ದಾರಿ ಯಾವುದು ?ಆ ದಾರಿ ಆರೆಸ್ಸೆಸ್ಸನ್ನು ವಿರೋಧಿಸಿ ,ಎದುರಿಸಿ, ಸೆಟೆದು ನಿಲ್ಲುದು .ಆರೆಸ್ಸೆಸ್ಸಿಗೆ ಮಂಡಿಯೂರಿ ಯಾವುದೇ ಕೆಲಸ ಆಗಲಾರದು .ಕೆಲ ಮುಸ್ಲಿಂ ಸೆಕ್ಯುಲರ್ ನಾಯಕರು ಬಂದು ಹೇಳುತ್ತಾರೆ ಸ್ವಲ್ಪ ಸಮಾಧಾನದಿಂದ ಇದ್ದರೆ ಸ್ವಲ್ಪ ಸೌಹಾರ್ಧದಿಂದಿದ್ದರೆ ಎಲ್ಲವೂ ಸರಿ ಹೊಂದುತ್ತದೆ .ಇದು ಮೂರ್ಖತನದ ಪರಮಾವಧಿ .ಈ ಮೂರ್ಖರು ಹೇಳುತ್ತಿದ್ದರು ಬಾಬರಿ ಮಸೀದಿ ಕೊಟ್ಟರೆ ಎಲ್ಲವೂ ಸರಿ ಆಗುತ್ತದೆ .ಇದು ಅದೇ ಮೂರ್ಖರಾಗಿದ್ದರು .ಅವರು ತಮ್ಮನ್ನು ಮುಸ್ಲಿಂ ಚಿಂತಕರೆಂದು ಹೇಳಿ ಕೊಳ್ಳುತ್ತಿದ್ದರು .ಈಗ ಬಾಬರಿ ಮಸೀದಿಯ ಒಡೆತನ ನಮ್ಮ ಕೈ ಯಿಂದ ತಪ್ಪಿ ಹೋಗಿದೆ .ಏನು ಸಮಸ್ಯೆ ಬಗೆ ಹರಿದಿದೆಯೇ ?.ನಮಗೆ ಭಾರತದಲ್ಲಿ ನೆಮ್ಮದಿ ಬಂದಿದೆಯೇ ?ಬಾಬರಿ ಮಸೀದಿಯ ಭೂಮಿ ಕೊಟ್ಟೆವು .ಸರ್ಕಾರದ ವತಿಯಿಂದ ಟ್ರಸ್ಟ್ ಸ್ಥಾಪಿಸಿ ಮಂದಿರ ನಿರ್ಮಾಣ ಮಾಡಲು ಅನುವು ಮಾಡಿ ಕೊಟ್ಟಿದ್ದು ಆಯ್ತು .ಆದರೆ ಇಂದು ಮಂದಿರದ ದೇಣಿಗೆಯ ಹೆಸರಿನಲ್ಲಿ ಪ್ರತಿ ಗಲ್ಲಿ ಗಲ್ಲಿ ಗಳಲ್ಲಿ ದಂಗೆ ನಡೆಯುತ್ತಿದೆ .ಮಧ್ಯ ಪ್ರದೇಶ ಉತ್ತರ ಪ್ರದೇಶಗಳಲ್ಲಿ ಗಲಭೆ ನಡೆಯುತ್ತಿದೆ . ಮಂದಿರಕ್ಕೆ ಜಾಗ ದೊರಕಿದ್ದರೂ ಯಾಕೆ ಗಲಭೆ ನಡೆಸುತ್ತಿದ್ದಾರೆ .ಯಾಕೆ ಮುಸ್ಲಿಮರ ಮೇಲೆ ಆಕ್ರಮಣ ನಡೆಯುತ್ತಿದೆ .ಮಂದಿರಕ್ಕೆ ಜಾಗ ದೊರೆತಿದೆಯಲ್ಲವೇ ?ಎಲ್ಲಿದ್ದಾರೆ ಆ ಶತ ಮೂರ್ಖ ಚಿಂತಕರು .ಮಂದಿರಕ್ಕೆ ಜಾಗ ಕೊಡಿ ಸಮಸ್ಯೆ ಬಗೆ ಹರಿಯುತ್ತದೆ ಎಂದವರು .ಇನ್ನೂ ಯಾಕೆ ಮುಸ್ಲಿಮರ ಮೇಲೆ ಧಾಳಿ ನಡೆಯುತ್ತಿದೆ .ಇನ್ನೂ ಯಾಕೆ ಮುಸ್ಲಿಮರ ಮಾರಣ ಹೋಮ ನಡೆಯುತ್ತಿದೆ .ಇನ್ನೂ ಯಾಕೆ ಮಸೀದಿಗಳ ಮೇಲೆ ದಂಡೆತ್ತಿ ಬರುತಿದ್ದಾರೆ .ಇನ್ನೂ ಯಾಕೆ ಮುಸ್ಲಿಮರ ಮನೆಗಳಿಗೆ ಬೆಂಕಿ ಹಾಕಲಾಗುತ್ತಿದೆ .ಇನ್ನೂ ಯಾಕೆ ನಮ್ಮ ಅಂಗಡಿಗಳನ್ನು ಸುಟ್ಟು ಹಾಕಲಾಗುತ್ತಿದೆ .ಯಾಕೆ ?ಯಾಕೆಂದರೆ ಇವರಿಗೆ ಮಂದಿರದಿಂದ ಏನು ಕೊಡು ಕೊಳ್ಳುವಿಕೆ ಇರಲಿಲ್ಲ .ಇವರಿಗೆ ಹಿಂದೂ ಧರ್ಮದ ಜೊತೆ ಏನು ಸಂಬಂಧ ವಿರಲಿಲ್ಲ .ಇದೆ ಕಾರಣಕ್ಕೆ ನಾನು ಹೇಳುತ್ತಿದ್ದೇನೆ ಆರೆಸ್ಸೆಸ್ ಮತ್ತು ಹಿಂದೂ ಧರ್ಮಕ್ಕೆ ಯಾವುದೇ ಸಂಬಂಧವಿಲ್ಲ .ಆರೆಸ್ಸೆಸ್ ಭಾರತದ ಅತೀ ದೊಡ್ಡ ಹಿಂದೂ ವಿರೋಧಿ ಆಗಿದೆ .ಇಡೀ ಜಗತ್ತಿನಲ್ಲಿ ಹಿಂದೂ ಸಮುದಾಯದ ಹೆಸರನ್ನು ಆರೆಸ್ಸೆಸ್ ಕೆಡಿಸಿದೆ . ನಾವು ಹೆಸರುಗೆಡಿಸಿದಲ್ಲ .ಇಂದು ಅಮೇರಿಕಾದ ಪ್ರಸಿದ್ಧ ಪ್ರಖ್ಯಾತ ಪ್ರಸಿದ್ಧ ಸೆಲೆಬ್ರಿಟಿಗಳು ಭಾರತದ ಹಿಂದೂ ಸಮುದಾಯದ ಬಗ್ಗೆ ಮಾತನ್ನಾಡುತಿದ್ದಾರೆ.ನಮಗೆ ಗೊತ್ತಿದೆ ಇದು ಆರೆಸ್ಸೆಸ್ನ ಕೃತ್ಯದಿಂದಾಗಿ ಆಯಿತು .ಆರೆಸ್ಸೆಸ್ನ ಎದುರು ಪೋಲಿಷ್ ಹೊಡೆದು ಅವರಿಗೆ ಮಂಡಿಯೂರಿ ಏನೂ ಆಗಲಾರದು . ಆರೆಸ್ಸೆಸ್ನ ಮುಂದೆ ಒಂದೇ ಪರಿಹಾರ ಇರೋದು .ಅದೇನೆಂದರೆ ಅವರ ಕಣ್ಣಿನಲ್ಲಿ ಕಣ್ಣನಿಟ್ಟು ಮಾತಾಡಿ .ನಾನು ಇಂದು ಈ ವೇದಿಕೆಯಿಂದ ಹೇಳುತ್ತಿದ್ದೇನೆ .ಈ ರಾಮ ಮಂದಿರದ ಹಣ ಸಂಗ್ರಹಕ್ಕೆ ನಿಮ್ಮ ಮನೆಗೆ ಬರುತಿದ್ದಾರೆ .ಯಾವ ರೀತಿ NRC ಯನ್ನು ಬಹಿಷ್ಕರಿದ್ದೀರೋ ಅದೇ ರೀತಿ ನಿಮ್ಮ ಮನೆ ಅಥವಾ ಅಂಗಡಿಗಳಿಗೆ ರಾಮ ಮಂದಿರಕ್ಕಾಗಿ ಹಣ ಬೇಡಲು ಬಂದರೆ ಒಂದು ನಯಾ ಪೈಸೆಯನ್ನು ಅವರಿಗೆ ನೀಡಬೇಡಿ .ನಾನು ಎಲ್ಲ ಮುಸ್ಲಿಂ ಉದ್ಯಮಿಗಳಿಗೆ ಮತ್ತು ಅಂಗಡಿ ಮಾಲಕರಿಗೆ ಹೇಳುತ್ತೇನೆ .ಒಂದು ವೇಳೆ ಸಾಸಿವೆ ಕಾಳಿನಷ್ಟು ಧೈರ್ಯವಿದ್ದಲ್ಲಿ ಅಥವಾ ಎಳ್ಳಿನಷ್ಟೂ ಸ್ವಾಭಿಮಾನವಿದ್ದಲ್ಲಿ ಒಂದು ವೇಳೆ ಮನೆಯಲ್ಲಿ ಹೆಂಡತಿ ಮಕ್ಕಳ ಬಳಿ ತಮ್ಮ ಮುಖ ತೋರಿಸುವ ತಾಕತ್ತು ಇದ್ದಲ್ಲಿ ಈ ಆರೆಸ್ಸಿಗರು ನಿಮ್ಮ ಮನೆಗೆ ದುಡ್ಡು ಕೇಳಲು ಬಂದಾಗ ಒಂದು ಪೈಸೆಯನ್ನು ನೀಡಬೇಡಿ .ಯಾಕೆಂದರೆ ಇದು ರಾಮ ಮಂದಿರ ಅಲ್ಲ .ಇದು ಆರೆಸ್ಸೆಸ್ನ ಮಂದಿರ ಹಾಗು ಮುಸ್ಲಿಮರ ಸಂಪತ್ತಿನಿಂದ ಆರೆಸ್ಸೆಸ್ನ ಮಂದಿರಕ್ಕೆ ಒಂದು ಪೈಸೆಯೂ ಹೋಗದು ಇನ್ ಷಾ ಅಲ್ಲಾಹ್ .ಒಂದು ರೂಪಾಯಿ ಕೂಡ ನಾವು ನೀಡುದಿಲ್ಲ ಎಂದು ಪ್ರತಿಜ್ಞೆ ಗಯ್ಯ ಬೇಕಾಗಿದೆ .
ಅವರು ನಮ್ಮನ್ನು ಬಾಗಿಸಲು ಬಯಸುತ್ತಾರೆ .ನಮ್ಮ ಹಿಂದೆ ED ಬಿಡುತ್ತಾರೆ .ಅದೇ ED ಮಾಜಿ ವಿತ್ತ ಸಚಿವ ಪಿ . ಚಿದಂಬರಂರನ್ನು ಕಛೇರಿಸಲು ಮಲಗಿಸಿತ್ತು .ಅದೇ ED DK ಶಿವಕುಮಾರರನ್ನು ಎರಡು ತಿಂಗಳ ಕಾಲ ಜೈಲಿನಲ್ಲಿಟ್ಟಿತ್ತು .ಅದೇ ED ಹೆಸರು ಕೇಳಿ ರಾಬರ್ಟ್ ವಾದ್ರಾ ಕಂಪಿಸುತ್ತಾನೆ .ಅದೇ ED ಹೆಸರು ಕೇಳಿ ಕಾಂಗ್ರೆಸ್ ನಾಯಕರು ರಾತ್ರೋ ರಾತ್ರಿ ಬಿಜೆಪಿ ಗೆ ಸೇರುತ್ತಾರೆ .ಅಂತಹ ED ಯನ್ನು ನಮ್ಮ ಬೆನ್ನ ಹಿಂದೆ ಬಿಟ್ಟರು .ED ನಮ್ಮ ಬೆನ್ನ ಹಿಂದೆಯೂ ಬಂತು .ನನ್ನ ಮನೆಗೂ ಧಾಳಿ ನಡೆಸಿತು .ಆದರೆ ಧಾಳಿ ನಂತರ ನಾವು ED ಗೂ ಸಮಜಾಯಿಸಿದೆವು .ನೋಡಿ ಪಾಪ್ಯುಲರ್ ಫ್ರಂಟ್ ಕಚೇರಿ ಮತ್ತು ಮನೆಗೆ ಧಾಳಿ ನಡೆಸುದೆಂದರೆ ಯಾವುದೇ ರಾಜಕಾರಣಿಯ ಮನೆಗೆ ಧಾಳಿ ನಡೆಸಿದಂತಲ್ಲ .ಇಡೀ ದೇಶದಲ್ಲಿ ನಾವು ED ಯಾ ತೇಜೋವಧೆ ನಡೆಸಿದೆವು .ED ಎಂಬುದು ಆರೆಸ್ಸೆಸ್ನ ಸುಪಾರಿ ಕಿಲ್ಲರ್ ಆಗಿದೆ .ಆರೆಸ್ಸೆಸ್ನ ಸುಪಾರಿಯಲ್ಲಿ ಕಾರ್ಯ ಮಾಡುವ ಒಂದು ಸಂಸ್ಥೆ ಆಗಿದೆ .ಯಾವ ರೀತಿ NIA ಯನ್ನು ನಿಕಾಹ್ ಇನ್ವೆಸ್ಟಿಗೇಷನ್ ಏಜನ್ಸಿ ಮಾಡಿದೆವೋ ಅದೇ ರೀತಿ ನಾವು ಇಡೀ ದೇಶಕ್ಕೆ ನಾವು ತೋರಿಸಿ ಕೊಟ್ಟೆವು ED ಯಿಂದ ಭಯ ಪಡುವ ಅಗತ್ಯ ಇಲ್ಲ .ಕಾನೂನಾತ್ಮಕವಾಗಿ ,ಪ್ರಜಾಪ್ರಭುತ್ವ ರೀತಿಯಲ್ಲಿ ED ಯನ್ನು ಎದುರಿಸೋಣ .ಬಿಹಾರದ ಧರಭಂಗದ ಒಬ್ಬ ಬಡ ಸದಸ್ಯನ ರಾಜ್ಯ ಕಾರ್ಯದರ್ಶಿ ಮನೆಯ ಮೇಲೆ ED ಧಾಳಿ ನಡೆಸಿದಾಗ ನಾವು ED ಯನ್ನು ಅಲ್ಲಿಂದ ಹೋಗಲು ಬಿಟ್ಟಿಲ್ಲ .ಧರ್ಬನ್ಗದ ಆ ಪುಟ್ಟ ಹಳ್ಳಿಯ ಜನರಿಗೂ ನಾವು ಅಷ್ಟೊಂದು ಧೈರ್ಯ ನೀಡಿದೆವು ಆ ED ಯನ್ನು ಹೋಗಲು ಬಿಟ್ಟಿಲ್ಲ .ಎಲ್ಲಿಯವರೆಗೆ ED ಯಾವ ಧಾಖಲೆಗಳನ್ನು ವಶಕ್ಕೆ ಪಡೆದು ಕೊಂಡೆವೆಂದೂ ಬರೆದು ಕೊಟ್ಟಿಲ್ಲವೋ ಅಲ್ಲಿಯವರೆಗೂ ಅವರನ್ನು ಅಲ್ಲಿಂದ ಹೊರ ಹೋಗಲು ಬಿಟ್ಟಿಲ್ಲ .NIA ಯನ್ನು ನಮ್ಮ ಹಿಂದೆ ಬಿಟ್ಟರು .ಕೆಲ ತಿಂಗಳ ಕೆಳಗೆ ಆದಾಯ ತೆರಿಗೆ ಅಧಿಕಾರಿಗಳು ನಮ್ಮನ್ನು ಸಂಪರ್ಕಿಸಿದರು .ನಿಮಗೆ ತಿಳಿದಿದೆಯೇ ನಮ್ಮ ಮೇಲೆ ಆದಾಯ ತೆರಿಗೆ ನೋಟೀಸ್ ಬರಲು ಕಾರಣವೇನು ?ಯಾಕೆಂದರೆ ನಾವು ಹಾದಿಯ ಬೆಂಬಲಕ್ಕೆ ನಿಂತೆವು .ನೀವು ಹಾದಿಯಾಗೆ ಯಾಕೆ ಸಹಾಯ ಮಾಡಿದ್ದೀರಿ ?ಹಾದಿಯ ಮತಾಂತರವಾಗಿದ್ದಳು .ಮಾನ್ಯ ಸುಪ್ರೀಂ ಕೋರ್ಟ್ ಸ್ವತ ಹೇಳಿತ್ತು ಮತಾಂತರ ಒಬ್ಬರ ವಯ್ಯಕ್ತಿಕ ಹಕ್ಕು .ಅಂತಹ ಸುಪ್ರೀಂ ಕೋರ್ಟ್ನ ಮಾತನ್ನು ಕೂಡ ಈ ಆದಾಯ ತೆರಿಗೆ ಅಧಿಕಾರಿ ಬಿಜೆಪಿಯ ಮಾತನ್ನು ಕೇಳಿ ಪ್ರಶ್ನಿಸುತ್ತಿದ್ದಾನೆ ನೀವು ಹಾದಿಯಾಗೆ ಯಾಕೆ ಸಹಾಯ ಮಾಡಿದ್ದೀರಿ .ನಮ್ಮಲ್ಲಿ ಪ್ರಶ್ನಿಸುತ್ತಾನೆ ನಿಮ್ಮ ದೇಣಿಗೆದಾರ ಆಧಾಯ ತೆರಿಗೆ ಕೊಟ್ಟಿಲ್ಲ .ನಮ್ಮಲ್ಲಿ ಹೇಳುತ್ತಾನೆ ನಿಮ್ಮ ದೇಣಿಗೆದಾರ ನ ಬಳಿ ಪಾನ್ ಕಾರ್ಡ್ ಇಲ್ಲ .ಅದಕ್ಕೆ ನಾವು ಉತ್ತರಿಸಿದ್ದೆವು ನರೇಂದ್ರ ಮೋದಿ ೨೦೧೪ ರಿಂದ ಪಾನ್ ಕಾರ್ಡ್ ಮಾಡಿ ಎಂದು ಕರೆ ನೀಡಿದರೂ ಎಂದು ಹೇಳುತ್ತಾರೆ .ಪ್ರತಿ ದಿನ ಮೋದಿಯವರು ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡುತ್ತಿದ್ದಾರೆ .ನಿರ್ಮಲ ಸೀತಾರಾಮನ್ ಪ್ರತಿ ಸಲ ಆದಾಯ ತೆರಿಗೆ ಕಟ್ಟಲು ವಿನಂತಿ ಮಾಡಿದ ಮೇಲೂ ಇಡೀ ಭಾರತದ ಜನಸಂಖ್ಯೆಯ ಶೇಕಡಾ ೪ ಜನ ಆದಾಯ ತೆರಿಗೆ ಕಟ್ಟುತ್ತಿದ್ದಾರೆ.ಪಾಪ್ಯುಲರ್ ಫ್ರಂಟ್ ಮೇಲೆ ಜನರ ತೆರಿಗೆ ಕಟ್ಟಿಸುವ ಆ ಜವಾಬ್ದಾರಿ ಹೇಗೆ ಬಂತು?ಸರ್ಕಾರವೇ ಆದಾಯ ತೆರಿಗೆ ಕಟ್ಟಿಸಲು ವಿಫಲವಾದ ಮೇಲೆ ನಮ್ಮ ಮೇಲೆ ಆರೋಪ ಯಾಕೆ ?ನಾವು ಹೇಳಿದೆವು ನಾವು ಇದಕ್ಕೆ ಉತ್ತರ ನೀಡುವೆವು .ನಾವು ನ್ಯಾಯಾಲಯದಲ್ಲಿ ನಿಮ್ಮ ಮೇಲೆ ಮೊಕದ್ದಮೆ ಹೂಡುವೆವು ಎಂದು .ಅನೇಕರು ನನ್ನಲ್ಲಿ ಪ್ರಶ್ನಿಸುತ್ತಾರೆ ED,NIA,IT,STF ಇತ್ಯಾದಿ ನಿಮ್ಮ ಬೆನ್ನ ಹಿಂದೆ ಬಂತು ನಿಮಗೆ ಭಯ ಆಗೂದಿಲ್ಲವೇ ಎಂದು .ಅದಕ್ಕೆ ನಾನು ಉತ್ತರಿಸಿದೆ ಪಾಪ್ಯುಲರ್ ಫ್ರಾಂಟಿನ ಪ್ರತಿ ನಾಯಕ ಪ್ರತಿ ಸದಸ್ಯ ಪ್ರತಿ ಬೆಳಗ್ಗೆ ಎಚ್ಚರವಾಗುವಾಗ ನಾವು ಈ ರೀತಿ ಯೋಚಿಸಿ ಎಚ್ಚರ ಗೊಳ್ಳುತ್ತೇವೆ ಇಂದು ನಮ್ಮ ಜೀವನದ ಅತೀ ಕೆಟ್ಟ ದಿನ ಎಂದು .ಯಾವಾಗ ನಾವು ಈ ರೀತಿ ಭಾವಿಸಿ ಎಚ್ಚರಗೊಳ್ಳುತ್ತೇವೆಯೋ ಆವಾಗ ಎಷ್ಟೇ ದೊಡ್ಡ ಸಮಸ್ಯೆ ಬಂದರೂ ಕೂಡ ನಮಗೆ ಆ ಸಮಸ್ಯೆಗಳು ದೊಡ್ಡದಾಗಿ ಕಾಣಲಾರದು .ನೀವು ನಮ್ಮನ್ನು ED ಯಿಂದ ಭಯ ಪಡಿಸ ಬಯಸಿದೀರೋ .ನೀವು ನಮ್ಮ ಮೇಲೆ UAPA ತೋರಿಸಿ ಭಯಪಡಿಸಬಯಸಿದೀರೋ .ನೀವು ನಮ್ಮನ್ನು ದೇಶ ದ್ರೋಹದ ಕೇಸಿನ ಮೂಲಕ ಭಯ ಪಡಿಸ ಬಯಸಿದೀರೋ ?ನೀವು ನಮ್ಮನ್ನು ರಾಷ್ಟ್ರೀಯ ಸುರಕ್ಷಾ ಕಾನೂನಿನ ಮೂಲಕ ಭಯಪಡಿಸ ಬಯಸಿದೀರೋ ?ನಾನು ಬಿಜೆಪಿ ಸರ್ಕಾರಕ್ಕೆ ಒಂದು ಸಲಹೆ ನೀಡ ಬಯಸುತ್ತೇನೆ .ನಾವು ಈ ಸಂಘಟನೆ ಸೇರಿದ್ದೇ ಇದೆ ತಿಳಿದು ಕೊಂಡು ನಮ್ಮ ಮೇಲೆ UAPA ಕೇಸು ಧಾಖಲಾಗಲಿದೆ ಎಂದು .ನಾವು ಈ ಸಂಘಟನೆ ಸೇರಿದ್ದೇ ಇದೆ ತಿಳಿದು ಕೊಂಡು ನಮ್ಮ ಮೇಲೆ ದೇಶ ದ್ರೋಹ ಮೊಕದ್ದಮೆ ಧಾಖಲಾಗಲಿದೆ ಎಂದು .ನಾವು ಈ ಸಂಘಟನೆ ಸೇರಿದಾಗ ನಮಗೆ ೧೦೦ ಶೇಕಡಾ ಖಚಿತವಾಗಿತ್ತು ನಮ್ಮ ಮೇಲೆ UAPA ಜಡಿಯಲಾಗುದೆಂದು .ಯಾವ ವಿಷಯ ನಮಗೆ ಮೊದಲೇ ಅರಿವಿದೆಯೋ ಅದನ್ನೇ ಬಳಸಿ ನಮ್ಮನ್ನು ಭಯ ಪಡಿಸಲಸಾಧ್ಯ .ಆದುದರಿಂದ ಯಾವುದೇ ಹೊಸದಾಗಿ ಪ್ರಯತ್ನ ಮಾಡಿ ಕೊಳ್ಳಿ .ನೀವು ನಿಮ್ಮ ಚಡ್ಡಿಧಾರಿಗಳಿಂದ ಲಾಠಿ ಯಿಂದ ಪ್ರಯತ್ನಿಸಿದೀರಿ.ನಾವು ಭಯ ಪಟ್ಟಿಲ್ಲ .ಲಾಠಿಯ ನಂತರ ನೀವು ಪೊಲೀಸರನ್ನು ಬಳಸಿ ನಮ್ಮನ್ನು ಹೆದುರಿಸುವ ಪ್ರಯತ್ನ ಪಟ್ಟಿದ್ದೀರಿ .ಅದರಿಂದಲೂ ನಾವು ಜಗ್ಗಲಿಲ್ಲ .ತದನಂತರ ED ಯನ್ನು ತಂದಿರಿ .ಅದಕ್ಕೂ ನಾವು ಹಿಮ್ಮೆಟ್ಟಲಿಲ್ಲ . ನಾನು ನಿಮ್ಮಲ್ಲಿ ಹೇಳುತ್ತೆಂದರೆ ಸ್ವಲ್ಪ ಸ್ರಜನಶೀಲ ರಾಗಿರಿ .ಯಾವ ವಸ್ತುವಿನಿಂದ ನೀವು ನಮ್ಮನ್ನು ಭಯ ಪಡಿಸ ಬೇಕೆಂದಿರುವಿರಾ ಆ ವಸ್ತುವನ್ನೇ ನಾವು ಬಯಸುತ್ತೇವೆ .ನಾವು ಬಯಸುತ್ತೇವೆ ನಮ್ಮ ಜೊತೆ ಅದೇ ಆಗಲೆಂದು .ಪಾಪ್ಯುಲರ್ ಫ್ರಂಟ್ ಕಾರ್ಯದ ಯಾವುದೇ ಸರ್ಟಿಫಿಕೇಟ್ ಇಲ್ಲ .ಪಾಪ್ಯುಲರ್ ಫ್ರಂಟ್ ಕಾರ್ಯದ ಒಂದೇ ಸರ್ಟಿಫಿಕೇಟ್ ಇರೋದೆಂದರೆ ಎಲ್ಲಿಯವರೆಗೆ ಆರೆಸ್ಸೆಸ್ ನಮ್ಮ ವಿರೋಧ ಮಾಡುತ್ತಿರುತ್ತದೆಯೋ ಅಲ್ಲಿಯವರೆಗೆ ನಾವು ಒಳ್ಳೆ ಕೆಲಸ ಮಾಡುತೇವೆ ಎಂದರ್ಥ .ಯಾವ ದಿನ ಬಿಜೆಪಿ ಹಾಗು ಆರೆಸ್ಸೆಸ್ ನಮ್ಮ ಗುಣಗಾನ ಮಾಡಲಾರಂಭಿಸುತ್ತದೆಯೋ ಆ ದಿನ ನಮಗೆ ಅರಿವಾಗುತ್ತದೆ ನಾವು ಕೆಟ್ಟ ಕೆಲಸ ಮಾಡುತೇವೆಂದು.ಇಂತಹ ಕಾರ್ಯದಿಂದ ನಾವು ಭಯ ಪಡುದಿಲ್ಲ .ನಾನು ನಿಮ್ಮಲ್ಲಿ ಒಂದು ಮಾತನ್ನು ಹೇಳ ಬಯಸುತ್ತೇನೆ .ಆರಾಮವಾಗಿ ಹೇಳುತ್ತೇನೆ .ಪಾಪ್ಯುಲರ್ ಫ್ರಂಟ್ ಎಂದೂ ಹಿಮ್ಮೆಟ್ಟುದಿಲ್ಲ ಯಾಕೆಂದರೆ ನಾವು ಬಾಲ್ಯದಲ್ಲಿರುವಾಗ ನಮಗೆ ಚರಿತ್ರೆಯಲ್ಲಿ ನಡೆದ ಒಂದು ಘಟನೆಯನ್ನು ಹೇಳಿ ಕೊಡಲಾಗುತ್ತಿತ್ತು .ಭಾರತ ಮಾತ್ರವಲ್ಲ ಇಡೀ ಜಗತ್ತಿನ ಮುಸ್ಲಿಮರು ಈ ಘಟನೆಯನ್ನು ನಮ್ಮ ಮದರಸಾಗಳಲ್ಲಿ ಹಾಗೂ ನಮ್ಮ ಮನೆಗಳಲ್ಲಿ ಕಲಿಸಿ ಕೊಡಲಾಗುತ್ತದೆ .ಅದೇನೆಂದರೆ ಬಿಲಾಲ್ ಹಬ್ಶಿ ಎಂಬ ಒಬ್ಬ ಮಹಾನ್ ಸಹಾಬಿ ವರ್ಯರಿಗೆ ಚಿತ್ರ ಹಿಂಸೆ ನೀಡುತಿದ್ದಾಗ ಅವರಿಗೆ ಶರಣಾಗತಿ ಆಗಲು ಹೇಳಲಾಗಿತ್ತು ..ಬಿಲಾಲ್ ರಝಿಯಲ್ಲಾಹು ರವರಿಗೆ ಇತಿಹಾಸ ಕಂಡು ಕೇಳಲರಿಯದಂತಹ ಹಿಂಸೆಯನ್ನು ಉಪಟಳವನ್ನು ಕಿರುಕುಳವನ್ನು ಕೊಡಲಾಗಿತ್ತು .ಅವರ ಒಡೆಯ ಉಮಯ್ಯ ಬಿನ್ ಖಲಫ್ ಎಂಬ ವ್ಯಕ್ತಿ ಬಿಲಾಲ್ರವರಿಗೆ ಶರಣಾಗತಿ ಆಗಲು ಗಡುವು ನೀಡುತ್ತಾರೆ .ಹಾಗೂ ಹೇಳುತ್ತಾರೆ ನೀನು ಶರಣಾಗತಿ ಆಗದಿದ್ದಲ್ಲಿ ನಿನಗೆ ಇಂತಹ ಹಿಂಸೆ ನೀಡುವೆ ಅದನ್ನು ಇದುವರೆಗೂ ಅರಬರು ಕೇಳದಿರಲಾರರು ಮತ್ತು ನೋಡಿರಲಿರಲಾರರು .ಅದಕ್ಕೆ ಬಿಲಾಲ್ ಉತ್ತರಿಸುತ್ತಾರೆ “ಉಮಯ್ಯ ! ನೀನು ಏನಂತಹ ಹಿಂಸೆಯೆನ್ನಾದರೂ ನೀಡು .ಆದರೆ ನಾನು ನಿನಗೆ ಅಂತಹ ತಾಳ್ಮೆ ಮತ್ತು ಧ್ರಡತೆ ಯನ್ನು ತೋರಿಸುವೆನು ಅಂತಹ ಧ್ರಡತೆಯನ್ನು ಇದುವರೆಗೂ ಅರಬರು ಕಂಡು ಕೇಳರಿಯಲಾರರು ”
ನಾವು ಬಿಲಾಲರ ಇಂತಹ ಚರಿತ್ರೆಯನ್ನು ಓದಿ ಬೆಳೆದವರು .ನೀವು ನಮ್ಮನ್ನು ED,NIA, ಯಂತಹ ಸಂಸ್ಥೆಗಳಿಂದ ಭಯಪಡಿಸಲಾರಿರಿ .ಇದೆಲ್ಲವೂ ನಡೆಯದು .ಒಂದು ವೇಳೆ ನೀವು ಪಾಪ್ಯುಲರ್ ಫ್ರಾಂಟಿನ ಧೈರ್ಯವನ್ನು ಕುಗ್ಗಿಸಲು ಬಯಸುತ್ತೀರಾದರೆ ,ನಮ್ಮ ಮೇಲೆ ಮೊಕದ್ದಮೆ ಜಡಿಸಿ ನಮ್ಮನ್ನು ಭಯ ಪಡಿಸುದಾದರೆ ನಾನು ಇಂದು ಹೇಳ ಹೊರಟಿದ್ದೇನೆಂದರೆ ನಾನು ಹಾಗೂ ನಮ್ಮ ಪ್ರತಿ ಸದಸ್ಯ ಇಂತಹ ಹೋರಾಟವನ್ನು ನಾನು ತೋರಿಸುವೆವು ಅಂತಹ ಹೋರಾಟ ನೀವು ಕೂಡ ಎಂದಿಗೂ ನೋಡಿರಲಿಕ್ಕಿಲ್ಲ ಹಾಗೂ ಎಂದೂ ಯೋಚಿಸಿರಲಿಕ್ಕಿಲ್ಲ . ಪಾಪ್ಯುಲರ್ ಫ್ರಾಂಟಿನ ಈ ಹೋರಾಟ ಏಕಾಂಗಿ ಅಲ್ಲ .ಇದು ಇಡೀ ಸಮುದಾಯದ ಹೋರಾಟ .ನಾನು ಇಡೀ ಭಾರತೀಯ ಸಮುದಾಯಕ್ಕೆ ಹೇಳುದೆಂದರೆ ನೀವು ಪ್ರತಿ ವರ್ಷ ರಮಧಾನಿನಲ್ಲಿ ಚಂದಾ ನೀಡುತ್ತೀರಿ .ನಮಗೆ ED ಪ್ರಶ್ನಿಸುತ್ತದೆ ಈ ದುಡ್ಡು ಎಲ್ಲಿಂದ ಬಂತೆಂದು .೧೦೦ಕೋಟಿ ಎಲ್ಲಿಂದ ಬಂತೆಂದು .ಈ ನೂರು ಕೋಟಿ ಯಾವ ಲೆಕ್ಕ ?ಒಂದು ವೇಳೆ ನಮ್ಮ ಕಾರ್ಯಕರ್ತರು ಒಂದು ದಿನ ಬೀದಿಗಿಳಿದು ಸಂಗ್ರಹಿಸಿದರೆ ೧೦೦ ಕೋಟಿ ಅಲ್ಲ ೫೦೦ ಕೋಟಿ ಸಂಗ್ರಹಿಸುವ ತಾಕತ್ತು ನಮ್ಮಲ್ಲಿದೆ .೧೦೦ ಕೋಟಿ ಏನು?ನಿಮಗೆ ಅದು ಐಷಾರಾಮಿ ಬಿರ್ಯಾನಿ ಆಗಿರಬಹುದೇ ವಿನಃ ನಾವು ದಿನ ನಿತ್ಯ ಬಿರ್ಯಾನಿ ತಿನ್ನುವವರು .ಈ ಮಂದಿ ಹೇಳುತ್ತಿದ್ದರು ಶಹೀನ್ ಬಾಘ್ಹ್ನಲ್ಲಿ ಬಿರ್ಯಾನಿ ಎಲ್ಲಿಂದ ಬಂತೆಂದು ?ನಿಮಗೆ ಬಹುಶ ವರ್ಷಕ್ಕೊಮ್ಮೆ ಬಿರ್ಯಾನಿ ಸಿಗುತ್ತದೆ ಆದರೆ ನಾವು ಪ್ರತಿ ಶುಕ್ರವಾರ ಬಿರ್ಯಾನಿ ತಯಾರಿಸುತ್ತೇವೆ .ನೀವು ನಮ್ಮಲ್ಲಿ ಪ್ರಶ್ನಿಸುತ್ತೀರಿ ೧೦೦ ಕೋಟಿ ಎಲ್ಲಿಂದ ಬಂತೆಂದು .೨೦ ಕೋಟಿ ಮುಸ್ಲಿಮರು ಹಾಗೂ ಅದೆಷ್ಟೋ ಕ್ರೈಸ್ತ ,ಸಿಖ್ ,ದಲಿತರು ಕೊಡುಗೆದಾನಿಗಳಿದ್ದರೆ ನಮ್ಮ ಸಂಘಟನೆಗೆ ಒಂದು ದಿನದಲ್ಲಿ ೧೦೦ ಕೋಟಿ ಜಮಾ ಮಾಡುವ ತಾಕತ್ತು ನಮ್ಮಲ್ಲಿದೆ .ನಾನು ಹೇಳುತ್ತೇನೆ ನಿಮ್ಮ ಬೆಂಬಲ ಕೇವಲ ದೇಣಿಗೆ ತನಕ ಮಾತ್ರ ಸೀಮಿತವಾಗಿರ ಬಾರದು .ಇನ್ನು ಮುಂದೆ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ನಮಗೆ ನಿಮ್ಮ ಬೆಂಬಲ ಬೇಕಾಗಿದೆ .ಯಾವ ಯಾವ ಕೆಲಸ ಪಾಪ್ಯುಲರ್ ಫ್ರಂಟ್ ಮಾಡುತ್ತದೆಯೋ ಅದರಲ್ಲಿ ನೀವು ಭುಜಕ್ಕೆ ಭುಜ ಕೊಟ್ಟು ಸಹಬಾಗಿಗಳಾಗಿ .ನಮ್ಮ ಪ್ರತಿ ಒಂದು ಸಭೆಗಳಲ್ಲಿ ಪ್ರತಿ ಒಂದು ಹೋರಾಟದಲ್ಲಿ ನೀವು ನಮ್ಮೊಂದಿಗೆ ಬನ್ನಿ .ಇದು ನಿಮ್ಮ ಜವಾಬ್ದಾರಿ ಆಗಿದೆ .ಇನ್ನು ನೀವು ac ಕೊಠಡಿ ಒಳಗೆ ಕೂತು ಈ ಪಾಪ್ಯುಲರ್ ಫ್ರಾಂಟಿನವರು ಆರೆಸ್ಸೆಸ್ನವರು ನೋಡಿ ಕೊಳ್ಳುತ್ತಾರೆ ಎಂಬ ಭ್ರಮೆಯಲ್ಲಿ ಕೂತರೆ ಸಾಕಾಗದು ..ಇದು ಕೇವಲ ಪಾಪ್ಯುಲರ್ ಫ್ರಾಂಟಿನ ಸಮಸ್ಯೆ ಅಲ್ಲ .ಯಾರು ಆರೆಸ್ಸೆಸ್ ಜೊತೆ ಸೇರುದಿಲ್ಲವೋ ಅವನನ್ನು ಗುರಿಗೀಡು ಮಾಡಲಾಗುತ್ತದೆ .೨೧ ವರ್ಷದ ಪ್ರಾಯದ ಪರಿಸರ ಕಾರ್ಯಕರ್ತೆ ದಿಶಾ ರವಿ ಎಂಬಾಕೆ ಆಕೆಯ ಪೋಷಕರು ಮೋದಿಯ ಬೆಂಬಲಿಗರಾಗಿದ್ದರು ಕೂಡ ಆಕೆಯ ಬೆನ್ನು ಬಿಟ್ಟಿಲ್ಲ .೮೦ ವರ್ಷದ ಹಿರಿಯ ಪ್ರಾಯದ ಸಿಖ್ ರೈತ ವ್ಯಕ್ತಿಯನ್ನು ಕೂಡ ಪರಿಗಣಿಸಲಿಲ್ಲ .ಅವರನ್ನು ಖಾಲಿಸ್ತಾನಿ ಎನ್ನಲಾಯಿತು .ಇದು ಪಾಪ್ಯುಲರ್ ಫ್ರಾಂಟಿನ ಸಮಸ್ಯೆ ಅಲ್ಲ .ಪ್ರತಿ ಒಬ್ಬ ಆತ PFI ಜೊತೆ ಇಲ್ಲವೋ ಅವನು ಟಾರ್ಗೆಟ್ನಲ್ಲಿದ್ದಾನೆ .ಆದುದರಿಂದ ಕೇವಲ ವರ್ಷಕ್ಕೊಮ್ಮೆ ನಮಗೆ ದೇಣಿಗೆ ನೀಡುವ ಮೂಲಕ ಮಾತ್ರ ಈ ಹೋರಾಟ ನಡೆಸಲಿಕ್ಕಸಾಧ್ಯ .ದೇಣಿಗೆಯೂ ನೀಡಬೇಕು .ಕಳೆದ ವರ್ಷಕ್ಕಿಂತಲೂ ಹೆಚ್ಚು ದೇಣಿಗೆ ನೀಡಿ ಬೆಂಬಲಿಸಿ .ಅದರ ಜೊತೆ ಯಾವಾಗ ನಮ್ಮ ವಿರುದ್ಧ ಅಪ ಪ್ರಚಾರ ಮಾಡುವ ಪ್ರಯತ್ನ ನಡೆಯುತ್ತದೆಯೋ ಆವಾಗ ಇಡೀ ಸಮುದಾಯ ನಮ್ಮ ಪರ ಧ್ವನಿ ಎತ್ತ ಬೇಕೆಂದು ವಿನಂತಿಸುತ್ತೇನೆ .ಇಂದು ನೀವು ವೈಯ್ಯಕ್ತಿಕವಾಗಿ ಇಲ್ಲಿ ನೆರೆದಿದ್ದೀರಿ .ನಾನು ಹೇಳ ಬಯಸುತ್ತೇನೆ ಇಂದು ನೀವೆಲ್ಲ ಹಾಗೂ ಇದೆ ರೀತಿ ದೇಶದ ನಾನಾ ಕಡೆ ಪಾಪ್ಯುಲರ್ ಫ್ರಾಂಟ್ ದಿನದ ಅಂಗವಾಗಿ ಸೇರಿದಿರುವ ಜನಜಂಗುಳಿ ನರೇಂದ್ರ ಮೋದಿ ಅಮಿತ್ ಶಾಹ್ ಗಳಿಗೆ ಕೆನ್ನೆಗೆ ಬಾರಿಸಿದಂತಾಗಿದೆ .ನಮ್ಮ ಜೊತೆ ಬಂದು ನೀವು ಅವರಿಗೆ ಕೆನ್ನೆಗೆ ಬಾರಿಸಿದ್ದೀರಿ .ನಾನು ಹೇಳ ಬಯಸುದೆಂದರೆ ಈ ಹೋರಾಟ ಇನ್ನೂ ಬಾಕಿಯಿದೆ .ಭಾರತದ ಸಂವಿಧಾನ ಮತ್ತು ಜಾತ್ಯತೀತ ಪರಂಪರೆಯನ್ನು ಉಳಿಸಲು ಈ ಹೋರಾಟ ವಾಗಿದೆ .ಯಾವ ಹೋರಾಟ ಶಹೀದ್ ಮಿಲ್ಲತ್ ಟಿಪ್ಪು ಸುಲ್ತಾನರು ನಡೆಸಿದ್ದರು .ಯಾವ ಹೋರಾಟ ಕುಂಜ್ಞಿ ಮೊಹಮ್ಮದ್ ಹಾಜಿ ನಡೆಸಿದ್ದರು .ಆ ಹೋರಾಟವನ್ನು ಮತ್ತೊಮ್ಮೆ ನಾವು ನಡೆಸ ಬೇಕಾಗಿದೆ .ಅದನ್ನು ಹೊರಗಿನಿಂದ ಬಂದ ಯಾರ ಜೊತೆ ಅಲ್ಲ ಇಲ್ಲಿನ ನಾಗಪುರದ ಫ್ಯಾಶ್ಚಿಸ್ಟ್ಸ್ ಶಕ್ತಿಗಳು ನಮ್ಮ ಸಂವಿಧಾನಿಕ ಹಕ್ಕನ್ನು ,ಪ್ರಜಾಪ್ರಭುತ್ವವನ್ನು ನಾಶ ಮಾಡಲು ಹೊರಟಿದೆ .ಆದುದರಿಂದ ಇನ್ನು ಮನೆಯಲ್ಲಿ ಕೂರಿದರೆ ಪ್ರಯೋಜನವಿಲ್ಲ .ಯಾವ ರೀತಿ CAA ಸಮಯದಲ್ಲಿ ನೀವು ಬೀದಿಗಿಳಿದಿದ್ದೀರಿ ಅದೇ ರೀತಿ ಇನ್ನೊಮ್ಮೆ CAA ಜಾರಿಗೆ ಹೊರಟರೆ ಮಗದೊಮ್ಮೆ ನೀವೆಲ್ಲ ಬೀದಿಗಿಳಿಯ ಬೇಕಾಗಿದೆ .ಮತ್ತೆ ನಮ್ಮ ಹಕ್ಕನ್ನು ಪಡೆಯಲು ಬೀದಿಗಿಳಿಯ ಬೇಕಾಗಿದೆ .ಕೇವಲ ಮುಸ್ಲಿಮರ ಹಕ್ಕು ಮಾತ್ರವಲ್ಲ .ಭೀಮ ಕೋರೆಗಾಉ ಸಮಯದಲ್ಲಿ ದಲಿತರ ಹಕ್ಕನ್ನು ಕಸಿದಾಗ ದಲಿತರಿಗಾಗಿ ನೀವು ಹೋರಾಡಬೇಕಾಗಿದೆ .ಕ್ರೈಸ್ತರ ಚರ್ಚ್ ಗಳ ಮೇಲೆ ಧಾಳಿ ನಡೆಸಿದಾಗ ನಮ್ಮ ಕ್ರೈಸ್ತರ ಪರವಾಗಿ ಹೋರಾಡ ಬೇಕಾಗಿದೆ .ರೈತಾಪಿ ವರ್ಗದ ಹಾಗೂ ಸಿಖ್ಖರ ಮೇಲೆ ಲಾಠಿ ಪ್ರಯೋಗಿಸಿ ಖಾಲಿಸ್ತಾನಿ ಎಂದಾಗ ಅವರ ಪರ ಎದ್ದು ನಿಲ್ಲ ಬೇಕಾಗಿದೆ .ಇದು ಭಾರತೀಯ ಮುಸ್ಲಿಮರ ಜವಾಬ್ದಾರಿ ಆಗಿದೆ .ನಮ್ಮ ಈ ವರ್ಷದ ಘೋಷಣೆ ಯು ಇದೆ ಆಗಿದೆ “ಫಾರ್ ದಿ ನೇಶನ್ ವಿಥ್ ಪಾಪ್ಯುಲರ್ ಫ್ರಂಟ್ “.
ಪಾಪ್ಯುಲರ್ ಫ್ರಂಟ್ ವತಿಯಿಂದ ನಾನು ಇಷ್ಟು ಹೇಳ ಬಯಸುದೆಂದರೆ ಇನ್ ಷಾ ಅಲ್ಲಾಹ್ ಎಲ್ಲಿಯವರೆಗೆ ಪಾಪ್ಯುಲರ್ ಫ್ರಂಟ್ ನ ಕೊನೆಯ ಸದಸ್ಯನಿರುತ್ತಾನೋ ಅದುವರೆಗೂ ನಾವು ಹೋರಾಡಲಿದ್ದೇವೆ .ಇನ್ ಷಾ ಅಲ್ಲಾಹ್ .
ನಾನು ಒಂದು ಕೊನೆಯ ಮಾತನ್ನು ಹೇಳಿ ನನ್ನ ಭಾಷಣ ಮುಗಿಸುತಿದ್ದೇನಂದರೆ ಯಾವ ರೀತಿಯಲ್ಲಿ ನೀವು ಇದುವರೆಗೂ ನಮ್ಮ ಜೊತೆ ಸಹಕಾರ ನೀಡಿದ್ದೀರೋ ಅಂತಹ ಬೆಂಬಲ ಇನ್ನೂ ನೀಡುತ್ತಿರಿ .
ಇನ್ ಷಾ ಅಲ್ಲಾಹ್ , ಇನ್ ಷಾ ಅಲ್ಲಾಹ್ ಮುಂದಿನ ದಿನಗಳಲ್ಲಿ ಪರಸ್ಪರ ಕೈ ಹಿಡಿದು , ಭುಜಕ್ಕೆ ಭುಜ ಕೊಟ್ಟು ಇನ್ ಷಾ ಅಲ್ಲಾಹ್ ಈ ಫ್ಯಾಸಿಸ್ಟ್ ರೋಗವನ್ನು ನಿರ್ಮೂಲನ ಗೊಳಿಸುತ್ತೇವೆ .