*ಉಳ್ಳಾಲ ಜನವಸತಿ ಪ್ರದೇಶದಿಂದ ಒಳ ಚರಂಡಿ ಘಟಕ ಸ್ಥಳಾಂತರಕ್ಕೆ ಬಿ.ಎಂ ಫಾರೂಕ್ ಒತ್ತಾಯ*

*ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕು ಉಳ್ಳಾಲ ನಗರ ಸಭೆ* *ವ್ಯಾಪ್ತಿಯಲ್ಲಿ ಒಟ್ಟು 70 ಸಾವಿರ ಜನಸಂಖ್ಯೆಯಿದ್ದರೂ ಈ ವರೆಗೆ ಒಳ ಚರಂಡಿ ವ್ಯವಸ್ಥೆ ಇಲ್ಲದಿರುವುದು ಖೇದಕರ.ಕಳೆದ 8 ವರ್ಷದಿಂದ ಒಳ ಚರಂಡಿ ಕಾಮಗಾರಿ ಪೂರ್ಣ ಗೊಂಡಿಲ್ಲ, ಸರಕಾರ 70 ಕೋಟಿ ರೂಪಾಯಿ ಮಂಜೂರು ಮಾಡಿಯೂ ಕ್ಷುಲ್ಲಕ ಕಾರಣದಿಂದ ವಿಳಂಭವಾಗುತ್ತಿರುವುದು ಸರಿಯಲ್ಲ.*
*ಅಲ್ಲದೆ ಈಗ ಜನವಸತಿ ಪ್ರದೇಶದಲ್ಲಿ ಶುಧ್ದೀಕರಣ ಘಟಕ ಮತ್ತು ವೆಟ್ ವೆಲ್ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ.ಯಾವುದೇ ಕಾರಣಕ್ಕೂ ಜನವಸತಿ ಪ್ರದೇಶದಲ್ಲಿ ಶುಧ್ದೀಕರಣ ಘಟಕ ಮಾಡಬಾರದು.ಇದರಿಂದ* *ದುರ್ನಾತ,ಚರ್ಮರೋಗ ಮತ್ತು ಪರಿಸರ* *ಮಾಲಿನ್ಯವಾಗುತ್ತದೆ.ಈಗ CRZ ಕಾನೂನು ಹಾಗೂ ಪರಿಸರ ನಿಯಮಗಳನ್ನು ಮೀರಿ ಯಾವುದೇ ನಿರಪೇಕ್ಷ ಪತ್ರಗಳನ್ನು ಪಡೆಯದೇ ಕಾಮಗಾರಿ ನಡೆಸಲಾಗತ್ತಿದೆ.*
*ಪರ್ಯಾಯ ಸ್ಥಳದಲ್ಲಿ ಜನವಸತಿ ಇಲ್ಲದ ಪ್ರದೇಶದಲ್ಲಿ ವೆಟ್ ವೆಲ್ ಮತ್ತು STP ರಚಿಸಿ ಕೂಡಲೇ ಉಳ್ಳಾಲದ ಪ್ರಮುಖ ಸಮಸ್ಯೆಯಾದ ಒಳ ಚರಂಡಿ ಕಾಮಗಾರಿ ಪೂರ್ಣಗೂಳಿಸಬೇಕೆಂದು ಸಂಬಧ ಪಟ್ಟ ಸರಕಾರದ ಏಳು ಇಲಾಖೆಗಳಿಗೆ ವಿಧಾನ ಪರಿಷತ್ ಸದಸ್ಯ ,JDS ಪಕ್ಷದ ರಾಷ್ಟೀಯ ಕಾರ್ಯಾಧ್ಯಕ್ಷರು   ಬಿ.ಎಮ್ ಫಾರೂಕ್ ಒತ್ತಾಯಿಸಿದ್ದಾರೆ. ಈ ಸಂಬಂಧ ಉಳ್ಳಾಲದ ಕೆಲವು ಕೌನ್ಸಿಲರ್‍ಗಳು ಮತ್ತು ಧಾರ್ಮಿಕ ಕೇಂದ್ರದ ಮುಖಂಡರು ಬೆಂಬಲ ಸೂಚಿಸಿದ್ದಾರೆ ಎಂದು ಬಿ.ಎಮ್ ಫಾರೂಕ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ*