ಉಳ್ಳಾಲ ಕ್ರಿಕೆಟ್ ಬೋರ್ಡ್ ಇದರ 2020-21ನೇ ಸಾಲಿನ ಸಮಿತಿಯ ನೂತನ
ಗೌರವಾಧ್ಯಕ್ಷರಾಗಿ ಆಯ್ಕೆಯಾದ ಉಳ್ಳಾಲದ ಉದ್ಯಮಿ, ಹಸೈನಾರ್ ಯು. ಎಚ್.
ಇವರ ಅಧಿಕಾರ ಸ್ವೀಕಾರ ಮತ್ತು ಅಭಿನಂದನಾ ಕಾರ್ಯಕ್ರಮ  ಯುಸಿಬಿ ಇದರ
ಕಛೇರಿಯಲ್ಲಿ ಗುರುವಾರ ಸಂಜೆ ನಡೆಯಿತು.
ಯುಸಿಬಿಯ ನೂತನ ಚುನಾಯಿತ ಅಧ್ಯಕ್ಷ ಫಯಾಝ್ ಪಟ್ಲ ಹೂ ಗುಚ್ಚ ನೀಡಿ
ಹಸೈನಾರ್ ರನ್ನು ಅಭಿನಂದಿಸಿದರು.
ಉಳ್ಳಾಲ ಕ್ರಿಕೆಟ್ ಬೋರ್ಡ್ ಅಸ್ಥಿತ್ವಕ್ಕೆ ಬಂದ ನಂತರ ಉಳ್ಳಾಲದಲ್ಲಿ ಕ್ರಿಕೆಟ್ ಪಂದ್ಯಾಟಗಳು
ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ಉಳ್ಳಾಲ ಪ್ರೀಮಿಯರ್ ಲೀಗ್ ನ ಏಳನೇ
ಮತ್ತು ಯುಸಿಬಿ ಯ ನೇತೃತ್ವದ 3ನೇ ಯುಪಿಎಲ್ ಪಂದ್ಯಾಟ ಫೆಬ್ರವರಿ 16 ರಿಂದ 21 ರವರೆಗೆ
ಒಟ್ಟು 6ದಿನ ಉಳ್ಳಾಲದ ಸೀ ಗ್ರೌಂಡ್ ನಲ್ಲಿ ನಡೆಯಲಿದೆ, 8ಓವರ್ ಗಳ ಈ ಲೀಗ್ ಪಂದ್ಯಾಟದಲ್ಲಿ
ವಿಜೇತ ತಂಡಕ್ಕೆ ಟ್ರೋಫಿ ಮತ್ತು 3ಲಕ್ಷ, ರನ್ನರ್ ಅಪ್ ತಂಡಕ್ಕೆ ಟ್ರೋಫಿ ಮತ್ತು 2ಲಕ್ಷ ನಗದು
ಹಾಗೂ ಸರಣಿ ಶ್ರೇಷ್ಠ ದಾಂಡಿಗನಿಗೆ ದ್ವಿಚಕ್ರ ಬೈಕ್, ಉತ್ತಮ ದಾಂಡಿಗ, ಉತ್ತಮ ಎಸೆತಗಾರ
ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಫಯಾಝ್ ಪಟ್ಲ ತಿಳಿಸಿದರು.
ಯುಸಿಬಿ ಉಪಾಧ್ಯಕ್ಷ ಅಬ್ದುಲ್ ರಝಾಕ್ ಸರ್ಮದ್ ಸ್ವಾಗತಿಸಿ, ಹಸೈನಾರ್ ರನ್ನು ಪರಿಚಯಿಸಿ
ಅಭಿನಂದಿಸಿದರು.
ಇನ್ನೋರ್ವ ಉಪಾಧ್ಯಕ್ಷ ಇಕ್ಬಾಲ್ ಕೆನರ ಮಾತನಾಡಿ ಯುಪಿಎಲ್ 7ನೇ ಆವೃತ್ತಿಯ ಬಗೆಗೆ ಇನ್ನಷ್ಟು
ಮಾಹಿತಿ ನೀಡಿ, ಯುಪಿಎಲ್ ನ ಜತೆಗೆ 40ರ ಮೇಲ್ಪಟ್ಟ ಹಿರಿಯ ಆಟಗಾರರ ಮಾಸ್ಟರ್ಸ್ ಲೀಗ್ ಪಂದ್ಯಾಟ ಸಹ ನಡೆಯಲಿದ್ದು,
ಆಕರ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಹಾಗೆಯೇ ಉದ್ಘಾಟನಾ ಪಂದ್ಯವಾಗಿ ಕಮಿಟಿ ಸದಸ್ಯರ ಮತ್ತು ಉಳ್ಳಾಲ ಪೋಲಿಸರ
ನಡುವೆ ವಿಶೇಷ ಆಕರ್ಷಣ ಪಂದ್ಯಾಟ ಏರ್ಪಡಿಸಲಾಗಿದೆ, ಫೆಬ್ರವರಿಯಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಎಲ್ಲರ ಸಹಕಾರ ಯಾಚಿಸಿದರು.
ಯುಸಿಬಿ ಯ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಕೋಡಿ, ಜತೆ ಕಾರ್ಯದರ್ಶಿ ಇಮ್ತಿಯಾಝ್ ಬಿ.ಎಫ್.ಸಿ.
ಕೋಶಾಧಿಕಾರಿ ನಝೀರ್ ಅಲ್ಫಾ, ಸಮಿತಿ ಸದಸ್ಯರು ಹನೀಫ್ ಬಿ.ಎಫ್.ಸಿ., ರಿಯಾಝ್ ಸ್ಪೋಟ್ರ್ಸ್ ವಿನ್ನರ್
ಮುಂತಾದವರು ಈ ಸಂದರ್ಭ ಉಪಸ್ಥಿತರಿದಸ್ದರು.