ಗುಲ್ಬರ್ಗ ,5 ಜನವರಿ :- ಸೋಶಿಯಲ್ ಡೆಮೊಕ್ರೆಟಿಕ್ ಇಂಡಿಯಾ   ಕರ್ನಾಟಕ ರಾಜ್ಯ ಸಮಿತಿ ವತಿಯಿಂದ  ಅಭಿನಂದನಾ ಕಾರ್ಯಕ್ರಮ ನಡೆಯಿತು .

ಮುಖ್ಯ ಬಾಷಕಾರರಾದ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಾಕ್ಟರ್ ತಸ್ಲೀಮ್ ರಹ್ಮಾನಿ ಮಾತನಾಡಿ ಆರೆಸ್ಸೆಸ್ ಸಂಘಟನೆಯನ್ನು ಮೂರು ಬಾರಿ ನಿಷೇಧಿಸಲಾಗಿತ್ತು,,ಈಗ ಅವರೇ ಎಸ್ಡಿಪಿಐ ಮತ್ತು  ಪಿಎಫ್ಐ ವಿರುದ್ಧ ಸುಳ್ಳು ಆರೋಪ ಹೊರಿಸುತ್ತಿದ್ದಾರೆ.ಇನ್ನೂರು ವರ್ಷಗಳ ಹಿಂದೆ ಬ್ರಹ್ಮಸಮಾಜ ಸ್ಥಾಪನೆಯಾಗಿ ಹಿಂದುತ್ವ ರಾಜಕೀಯ ಆರಂಭವಾಗಿತ್ತು ಕಾಂಗ್ರೆಸ್ ಪಕ್ಷ ಆರಂಭದಿಂದಲೂ ಪರೋಕ್ಷವಾಗಿ ಹಿಂದುತ್ವ ರಾಜಕೀಯಕ್ಕೆ ಬೆಂಬಲ ನೀಡುತ್ತಿತ್ತು  , 2014 ಬಳಿಕ ಕಾಂಗ್ರೆಸ್ ಬದಿಗೆ ಸರಿದು ಹಿಂದುತ್ವವನ್ನು ಬಿಜೆಪಿ ಹೆಗಲಿಗೆ ಬದಲಾಯಿಸಿತ್ತು.
ಅವರು ಉತ್ತರ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಸ್ಟಿಪಿಐ ಬೆಂಬಲಿತ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದರು.

ಪಕ್ಷದ ಕರ್ನಾಟಕ ಸೆಕ್ರೆಟೆರಿಯೆಟ್ ಸಮಿತಿ ಸದಸ್ಯ ಅಕ್ರಮ ಹಸನ್ ಮಾತನಾಡಿ ಶಾಸಕರುಗಳು ನಿರಂತರವಾಗಿ ಗ್ರಾಮ ಪಂಚಾಯತ್ ಅಧಿಕಾರವನ್ನು ಕಸಿಯುವ  ಹುನ್ನಾರ ನಡೆಸುತ್ತಿದ್ದಾರೆ. ಅನುದಾನಗಳು ಪ್ರತಿವರ್ಷ ಕಡಿಮೆಯಾಗುತ್ತಿದೆ. ಅಬ್ದುಲ್ ನಜೀರ್ ಸಾಬ್ ತಂದಂತಹ ಗ್ರಾಮ ಸ್ವರಾಜ್ಯ ವ್ಯವಸ್ಥೆ ದುರ್ಬಲವಾಗುತ್ತಿರುವ  ಖೇದಕರ ಎಂದರು.

ಸೋಶಿಯಲ್  ಡೆಮಾಕ್ರಟಿಕ್   ಟ್ರೇಡ್ ಯುನಿಯನ್ ರಾಜ್ಯಾಧ್ಯಕ್ಷ ಅಬ್ದುಲ್ ರಹೀಮ್ ಪಟೇಲ್ ಮಾತನಾಡಿ ಈ  ಬಾರಿ ರಾಜ್ಯದಲ್ಲಿ ಕಳೆದ ಐದು ವರ್ಷಕ್ಕಿಂತ 300 ಶೇಕಡ ಹೆಚ್ಚಾಗಿ ಎಸ್ಡಿಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು ವಿಜೇತರಾಗಿದ್ದಾರೆ ಎಂದರು.ಸಮಾವೇಶದ ಅಧ್ಯಕ್ಷತೆ  ಎಸ್ಡಿಪಿಐ ಗುಲ್ಬರ್ಗ ಜಿಲ್ಲಾಧ್ಯಕ್ಷ ಸೈಯದ್ ದಸ್ತಗೀರ್  ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ರಾಜ್ಯ ಅಧ್ಯಕ್ಷ ಮೌಲಾನ ಅತ್ತಿಕ್ಕುರಹ್ಮಾನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಖಜಾಂಚಿ ಶಾಹಿದ್ ನಸೀರ್, ವಿಮನ್ ಇಂಡಿಯಾ ಮೂವ್ಮೆಂಟ್ ರಾಜ್ಯ ನಾಯಕಿ ಸಯಿದಾ ಸಾದಿಯಾ ,

ವಿಶೇಷ ಆಹ್ವಾನಿತರಾಗಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಗುಲ್ಬರ್ಗ ಜಿಲ್ಲಾಧ್ಯಕ್ಷ ಸೈಯದ್ ಏಜಾಜ್    ಅಲಿ,  ಎಸ್ಡಿಪಿಐ ಯಾದ್ಗೀರ್  ಜಿಲ್ಲಾಧ್ಯಕ್ಷ ಸೈಯದ್ ಖಾಲಿದ್, ರಾಯಚೂರು ಜಿಲ್ಲಾಧ್ಯಕ್ಷ ಡಾಕ್ಟರ್ ನಾಯಕ್ ,ಹುಬ್ಬಳ್ಳಿ ಜಿಲ್ಲಾಧ್ಯಕ್ಷ ರಫೀಕ್ ಲಷ್ಕರ್, ಗುಲ್ಬರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ರಿಜ್ವಾನ್ ,ಮತ್ತಿತರರು ಉಪಸ್ಥಿತರಿದ್ದರು ವಿವಿಧ ಜಿಲ್ಲೆಗಳಿಂದ ವಿಜೇತ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು.