ಮಂಗಳೂರು,ಜನವರಿ 3 : ಮಾರಲ್ಪಟ್ಟ  ಮಾಧ್ಯಮಗಳಿಂದ ಎಸ್ಡಿಪಿಐ ವಿರುದ್ಧ ನಿರಂತರ ಸುಳ್ಳು ಪ್ರಚಾರ ಮಾಡಿದ್ದರು ನಾವು ಸಂವಿಧಾನಬದ್ಧ ಹೋರಾಟದಿಂದ ಒಂದು ಹೆಜ್ಜೆಯೂ ಹಿಂಜರಿದಿಲ್ಲ.
ಗೋಧಿ ಮೀಡಿಯಾಗಳ ವಿರುದ್ಧ  ಎಸ್ಡಿಪಿಐ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು ಗುಡುಗಿದರು

ಅವರು  ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ವತಿಯಿಂದ 2020 ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ  ಅಭೂತಪೂರ್ವ ವಿಜಯ ಸಾಧಿಸಿದ ಪಕ್ಷದ ಬೆಂಬಲಿತ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದಲಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಮಾತನಾಡಿ ನಮ್ಮ ಪಕ್ಷದಲ್ಲಿ ಗೆದ್ದಿರುವ ಮತ್ತು ಸೋತಿರುವ ಎಲ್ಲಾ ಅಭ್ಯರ್ಥಿಗಳು ಪಕ್ಷದ ಕಾರ್ಯಕರ್ತರೊಂದಿಗೆ ಸೇರಿಕೊಂಡು ನಿಸ್ವಾರ್ಥವಾಗಿ ಜನಸೇವೆ ಮತ್ತು ಜನಪರ ಹೋರಾಟ ಮಾಡಲಿದ್ದಾರೆ ಎಂದರು. ರಾಜ್ಯ ಅಧ್ಯಕ್ಷ ಅಬ್ದುಲ್ ಹನ್ನ್ ನ್ ಮಾತನಾಡಿ ನಮ್ಮ ಪಂಚಾಯತ್ ಸದಸ್ಯರುಗಳು ಜಾತಿ ,ಧರ್ಮ, ಪಕ್ಷ ನೋಡದೆ ಎಲ್ಲಾ ಜನರ ಮನೆ ಬಾಗಿಲಿಗೆ ಸರಕಾರದ ಸೌಲತ್ತುಗಳನ್ನು ಯಾವುದೇ  ಫಲಾಪೇಕ್ಷೆ ಇಲ್ಲದೆ  ತಲುಪಿಸಲಿದ್ದಾರೆ ಎಂದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ ಮಾತನಾಡಿ ಡೋಂಗಿ ಸೆಕ್ಯುಲರ್ ಪಕ್ಷಗಳು ಎಸ್ಡಿಪಿಐ ಅಭ್ಯರ್ಥಿಗಳನ್ನು ಸೋಲಿಸಲು ರಹಸ್ಯ ಒಪ್ಪಂದ ಮಾಡುತ್ತಾರೆ ಆದರೂ ನಮ್ಮ ಕಾರ್ಯಕರ್ತರ ನಿರಂತರ ಪ್ರಯತ್ನಗಳಿಂದಾಗಿ ನಾವು ಚುನಾವಣೆಗಳಲ್ಲಿ ಗೆಲ್ಲುತ್ತೇವೆ ಎಂದರು . ರಾಷ್ಟ್ರೀಯ  ಕಾರ್ಯದರ್ಶಿ  ಅಲ್ಫೋನ್ಸೋ ಫ್ರಾಂಕೊ ಮಾತನಾಡಿ ಕೆಲವು ಮಾಧ್ಯಮಗಳಲ್ಲಿ ಆಂಕರ್ ಗಳು ಬಳಸುವ ಶಬ್ದ ಪ್ರಯೋಗ ಅಸಹ್ಯಕರ ವಾಗಿರುತ್ತದೆ ಎಂದರು.


ವಿಮನ್ ಇಂಡಿಯಾ ಮೂವ್ಮೆಂಟ್ ಸಂಘಟನೆಯ ರಾಜ್ಯ ಅಧ್ಯಕ್ಷೆ ಶಾಹಿದಾ ತಸ್ಲೀಮ್ ಮಾತನಾಡಿ ಗೆದ್ದಂತಹ 79 ಮಹಿಳಾ ಸದಸ್ಯರನ್ನು ವಿಶೇಷವಾಗಿ ಅಭಿನಂದಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಮಾತನಾಡಿ ದೇಶದಲ್ಲಿ ಹೋರಾಟಗಾರರನ್ನು ನಿರಂತರ ಹೆದರಿಸುವ ಕುತಂತ್ರ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು ರಾಜ್ಯ ಸಮಿತಿ ಸದಸ್ಯ ಆನಂದ ಮಿತ್ತಬೈಲ್ ಪಕ್ಷದಿಂದ ಎಲ್ಲ ಜಾತಿ ಧರ್ಮದವರು ಚುನಾವಣೆಗಳಲ್ಲಿ ಗೆಲ್ಲುತ್ತಿರುವುದು ಶುಭ ಸೂಚನೆಯಾಗಿದೆ ಎಂದರು.

ವೇದಿಕೆಯಲ್ಲಿ  ರಾಜ್ಯ ಉಪಾಧ್ಯಕ್ಷ ಅಬ್ದುಲ್ ಮಜೀದ್ ಖಾನ್, ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಜ್ ಪರಂಗಿಪೇಟೆ, ರಾಜ್ಯ ಕಾರ್ಯದರ್ಶಿ ಅಶ್ರಪ್ ಮಾಚಾರ್ ,

ಜಿಲ್ಲಾ ಮುಖಂಡರುಗಳಾದ  ಅಶ್ರಫ್ ಮಂಚಿ,ಹೆಚ್ ಎಸ್ ಶಾಹುಲ್ ,ಹೈದರ್ ನಿರ್ಸಲ್. ಎಸ್ಡಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ,ಮುಖಂಡರುಗಳಾದ  ಹಮೀದ್ ಮಂಜೆಶ್ವರ್, ಅಬ್ಬಾಸ್ ಕಿನ್ಯ , ಆಯಿಶಾ ಬಜ್ಪೆ , ಸಿದ್ದಿಕ್ ಪುತ್ತೂರು ,ಕಾರ್ಪೊರೇಟರ್ ಗಳಾದ ಶಂಷಾದ್ ಅಬೂಬಕ್ಕರ್, ಮುನಿಬ್ ಬೆಂಗ್ರೆ ಸಾದಾತ್ ಬಜತ್ತೂರು ಮೊದಲಾದವರು ಉಪಸ್ಥಿತರಿದ್ದರು .ಜಿಲ್ಲಾ ಉಪಾಧ್ಯಕ್ಷ ಐಎಂಆರ್ ಇಕ್ಬಾಲ್ ಸ್ವಾಗತಿಸಿದರು.ಖಾದರ್ ಪರಂಗಿಪೇಟೆ ಕಾರ್ಯಕ್ರಮ ನಿರೂಪಿಸಿದರು