ಆನ್ ಲೈನ್ ತರಗತಿಗಳು ಶಿಕ್ಷಣಕ್ಕೆ ಪರ್ಯಾಯವಲ್ಲ

ಅದು ಪೂರಕ ಅಷ್ಟೆ : ಎಸ್ ಸುರೇಶ್ ಕುಮಾರ್

ಬೆಂಗಳೂರು ನಗರ ಜ. 1, (ಕರ್ನಾಟಕ ವಾರ್ತೆ) ಪ್ರಸ್ತುತ ಶೈಕ್ಷಣಿಕ ವರ್ಷದ ‘ತರಗತಿ ನಡೆಸಲು ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರಿಗೆ ಯಾವುದೇ ಆತಂಕ ಬೇಡ. ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶಕುಮಾರ್ ಹೇಳಿದರು
ಶಾಲಾ ಆರಂಭ ಮೊದಲ ದಿನವಾದ ಇಂದು ಆನೇಕಲ್ ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗೆ ತೆರಳಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗಡಿಭಾಗದಲ್ಲಿರುವ ಆನೇಕಲ್ ತಾಲ್ಲೂಕಿನ ಸುತ್ತು-ಮುತ್ತಿನ ಪ್ರದೇಶಗಳಲ್ಲಿ ಸರ್ಕಾರ ಶಾಲೆ- ಕಾಲೇಜುಗಳಿಗೆ ಹೆಚ್ಚಾಗಿ ಗ್ರಾಮೀಣ ಪ್ರದೇಶದಿಂದ ಮಕ್ಕಳ ಬರುವುದರಿಂದ ಮಕ್ಕಳಿಗೆ ಕರೋನ ಮಹಾಮಾರಿ ಕುರಿತು ಅರಿವು ಮೂಡಿಸಿ, ಸಾಮಾಜೀಕ ಅಂತರ ಕಾಪಾಡಿಕೊಂಡು, ಪತ್ರಿಯೊಬ್ಬರು ಮಾಸ್ಕ್ ಧರಿಸಿಕೊಂಡು ಶಾಲೆಗೆ ಬರವಾಗ ನೋಡಿಕೊಳ್ಳಬೇಕು ಎಂದರು
6 ರಿಂದ 9ನೇ ತರಗತಿಗಳಿಗೆ ವಿದ್ಯಾಗಮ ಯೋಜನೆ ಮೂಲಕ ಕಲಿಕೆ ಆರಂಭವಾಗಿದ್ದು, ಸ್ವಯಂ ಪ್ರೇರಿತವಾಗಿ ಬರುವ ಮಕ್ಕಳು ಕಡ್ಡಾಯವಾಗಿ ಪೋಷಕರಿಂದ ಲಿಖಿತ ಅನುಮತಿ‌ ಪತ್ರ ಬರೆಸಿಕೊಂಡು ಬರುವಂತೆ ಶಾಲಾ ಮುಖ್ಯೋಪಾಧ್ಯಯರಿಗೆ ಸೂಚಿಸಿದರು
ಮಕ್ಕಳಲ್ಲಿ ಶೀತ, ಜ್ವರ, ನೆಗಡಿಯಂತ ಲಕ್ಷಣಗಳಿದ್ದರೆ ಅಂತಹ ಮಕ್ಕಳ ಶಾಲೆಗೆ ಬರದಂತೆ ಎಚ್ಚರವಹಿಸಿವಂತೆ ಪೋಷಕರ ಮನವಿ ಮಾಡಿದರು. ಶಾಲೆಗಳಲ್ಲಿ ಪತ್ರಿದಿನ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಎಲ್ಲಾ ಶಾಲೆಗಳನ್ನು ಸ್ಯಾನಿಟೈಜೇಶನ್ ಮಾಡಲಾಗಿದ್ದು. ಪ್ರತಿ ದಿನ ಮಕ್ಕಳ ಆರೋಗ್ಯದ ಕಡೆ ಒಬ್ಬ ಶಿಕ್ಷಕರು ಕಣ್ಗಾವಲು ಇಟ್ಟಿರುತ್ತಾರೆ. ಇಷ್ಟೇ ಅಲ್ಲದೆ ಶಾಲೆ- ಕಾಲೇಜುಗಳಲ್ಲಿ ಕೋವಿಡ್ ಮುನ್ನಚ್ಚರಿಕಾ ಕ್ರಮಗಳನ್ನು ಪರಿಶೀಲಿಸಲು ಪತ್ರಿ ಜಿಲ್ಲೆಯಲ್ಲಿ ವಿಚಕ್ಷಣ ದಳ ರಚಿಸಲು ನಿರ್ಧರಿಸಲಾಗಿದೆ. ಎಂದು ತಿಳಿದರು.
ಶಾಲೆಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಸರ್ಕಾರದ ಮಾರ್ಗ ಸೂಚಿಗಳನ್ನು ತಪ್ಪದೆ ಪಾಲಿಸುವಂತೆ ಆಡಳಿತ ಮಂಡಳಿಗೆ ಸೂಚಿಸಿದರು.