ಜನ ಸೇವೆಯಲ್ಲಿ ಸಕ್ರಿಯವಾಗಿರುವ ರಾಷ್ಟ್ರೀಯ ಸೌಹಾರ್ದ ವೇದಿಕೆ


ಬೆಂಗಳೂರು 25 ಡಿಸೆಂಬರ್ : ಸಾಮಾಜಿಕ ಹೋರಾಟಗಾರ ಪತ್ರಕರ್ತ ಸಮೀರ್ ಮಂಡ್ಯ ನೇತೃತ್ವದಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಸೌಹಾರ್ದ ವೇದಿಕೆ ಎಲೆ ಮರೆ ಕಾಯಿಯಂತೆ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದೆ


ಸಮಾಜದ ವಿವಿಧ ಧರ್ಮ, ಜಾತಿ, ಭಾಷೆ ಮತ್ತು ಪ್ರಾಂತ್ಯದವರ ನಡುವೆ ಸೌಹಾರ್ದ ವಾತಾವರಣ ನಿರ್ಮಿಸಬೇಕು ಅವಕಾಶ ವಂಚಿತ ಸಮುದಾಯಗಳಿಗೆ ಉದ್ಯೋಗ, ಶಿಕ್ಷಣ, ವಸತಿ ಸಿಗಬೇಕು ಎಂಬ ಉದ್ದೇಶದಿಂದ ಸಮಾನ ಮನಸ್ಕರರು ಸೇರಿ ವೇದಿಕೆ ನಿರ್ಮಿಸಿದ್ದಾರೆ,

ವೇದಿಕೆಯ ಕಾರ್ಯಕ್ರಮ ಗಳಿಗೆ ಚಿತ್ರ ನಟ ಪ್ರಕಾಶ್ ರೈ ಎಲ್ಲ ಪಕ್ಷದ ರಾಜಕಾರಣಿಗಳು, ಉದ್ಯಮಿಗಳು, ಅಧಿಕಾರಿಗಳು, ಪಾಲ್ಗೊಂಡಿದ್ದಾರೆ ಕೆಲವು ತಿಂಗಳ ಹಿಂದೆ ಅಷ್ಟೇ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪರವರು ವೇದಿಕೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು..
ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು


ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ (ಸಂಘದ ಸಮಾಜ ಕಲ್ಯಾಣ ಇಲಾಖೆ) 33 ಜನರನ್ನು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ವರಿಗೆ ಖಾಯಂ ಮಾಡಿಸುವುದು
ಮತ್ತು ನಿರುದ್ಯೋಗಿ ಯುವಕ ಯುವತಿಯರಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿಸುವುದು ಸರ್ಕಾರಿ ಅಭಿವೃದ್ಧಿ ನಿಗಮ ದಿಂದ ಸಾಲ ಕೊಡಿಸುವುದಾಗಿ


ಈ ಮೂರು ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದೆ ಈ ಮೂಲಕ ಬಡ ಶಿಕ್ಷಕರು, ಮತ್ತು ನಿರುದ್ಯೋಗಿ ಸಮೂಹ ಸಂತಸ ವ್ಯಕ್ತ ಪಡಿಸಿದೆ.
ಎಲ್ಲ ಪಕ್ಷದ ಶಾಸಕರುಗಳಿಗೂ ಮಂತ್ರಿಗಳಿಗೂ, ಅಧಿಕಾರಿಗಳು ಟಿವಿ ಚಾನೆಲ್ ಮುಖ್ಯಸ್ಥರು, ವರದಿಗಾರರು, ಪ್ರಗತಿಪರ, ರೈತ, ಹೋರಾಟ ಗಾರರು, ಹೀಗೆ ಎಲ್ಲ ಕ್ಷೇತ್ರಗಳಲ್ಲಿನ ಪ್ರಮುಖರು ಆಪ್ತರಾಗಿರುವ ಸಮೀರ್ ಮಂಡ್ಯ,

ಬಿಜೆಪಿ ಪಕ್ಷದ ಪ್ರಬಲ ನಾಯಕರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ, ಈ ವೇದಿಕೆ ದೊಡ್ಡ ಸಮಾಜ ಸೇವಾ ಸಂಸ್ಥೆ ಯಾಗಿ ಬೆಳೆಯುತ್ತದೇ..

ಮುಂದೊಂದು ದಿನ ಸಮೀರ್ ಮಂಡ್ಯ ಶಾಸಕರಾಗಬೇಕು ಎನ್ನುವುದು ಜನಬಿಪ್ರಾಯವಾಗಿದೆ


ವಿಶೇಷ ವರದಿ : ರಮೇಶ್, ಪಿ ಬೆಂಗಳೂರು