ಕೊರೊನಾ ಹೊಸ ಪ್ರಕರಣಗಳನ್ನು ಹಿಂದಿಕ್ಕುತ್ತಿರುವ ದೈನಂದಿನ ಚೇತರಿಕೆ ಪ್ರವೃತ್ತಿ; ನಿರಂತರ ಇಳಿಮುಖ ಹಾದಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ

ಒಟ್ಟು ಕೊರೊನಾ ಪ್ರಕರಣಗಳ 5%ಗೆ ತಗ್ಗಿದ ಸಕ್ರಿಯ ಪ್ರಕರಣಗಳು

ಪ್ರಕಟಣಾ ದಿನಾಂಕ: 19 NOV 2020 11:30AM by PIB Bengaluru

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 45,576 ಹೊಸಕೊರೊನಾ ಪ್ರಕರಣಗಳು ಪತ್ತೆಯಾದರೆ, ಒಂದೇದಿನದಲ್ಲಿ 48,493 ಸೋಂಕಿತರುಗುಣಮುಖರಾಗಿದ್ದಾರೆ. ಇದರಿಂದ ದೈನಂದಿನಸಕ್ರಿಯ ಸೋಂಕಿತರ ಪ್ರಮಾಣ 2,917ರಷ್ಟು ಇಳಿಕೆಆದಂತಾಗಿದೆ.

ಹೊಸ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿಗುಣಮುಖರಾಗುತ್ತಿದ್ದು, ಕಳೆದ 47 ದಿನಗಳಿಂದಚೇತರಿಕೆ ದರ ಗಣನೀಯವಾಗಿ ಏರಿಕೆ ಕಾಣುತ್ತಿದ್ದು,ಸಕ್ರಿಯ ಪ್ರಕರಣಗಳನ್ನು ಹಿಂದಿಕ್ಕುತ್ತಿದೆ.

ದೇಶಾದ್ಯಂತ ಈ ತನಕ ಕಾಣಿಸಿಕೊಂಡಿರುವ ಒಟ್ಟುಕೊರೊನಾ ಪ್ರಕರಣಗಳ ಶೇಕಡ 5ರ ಮಟ್ಟಕ್ಕಿಂತಕೆಳಕ್ಕೆ ಸಕ್ರಿಯ ಪ್ರಕರಣಗಳ ಪ್ರಮಾಣ ತಗ್ಗಿದೆ.

ದಿನನಿತ್ಯ ಸೋಂಕಿನಿಂದಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವಪ್ರವೃತ್ತಿಯು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಇಳಿಕೆ ಕಾಣಲು ಕಾರಣವಾಗುತ್ತಿದೆ. ಭಾರತದಲ್ಲಿಪ್ರಸ್ತುತ 4,43,303 ಸಕ್ರಿಯ ಪ್ರಕರಗಳುವರದಿಯಾಗಿವೆ. ಇವು ದೇಶದ ಒಟ್ಟು ಪಾಸಿಟಿವ್ಪ್ರಕರಣಗಳ ಸಂಖ್ಯೆಯ ಶೇಕಡ 4.95ಕ್ಕೆ ತಗ್ಗಿರುವುದುಆಶಾದಾಯಕ ಬೆಳವಣಿಗೆ.

ಪ್ರತಿ 24 ತಾಸುಗಳ ಬೆಳವಣಿಗೆಯಲ್ಲಿ ಹೊಸ ಚೇತರಿಕೆದರವು ಹೊಸ ಕೊರಾನಾ ಪ್ರಕರಣಗಳನ್ನುಹಿಂದಿಕ್ಕುತ್ತಿದೆ. ಇದರ ಫಲವಾಗಿ, ಚೇತರಿಕೆ ದರಇದೀಗ 93.58%ಗೆ ಸುಧಾರಣೆ ಕಂಡಿದೆ. ದೇಶದಲಲ್ಲಿಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಈತನಕ ಒಟ್ಟು 83,83,602 ಸೋಂಕಿತರುಗುಣಮುಖರಾಗಿದ್ದಾರೆ. ಗುಣಮುಖ ಪ್ರಕರಣಗಳುಮತ್ತು ಸಕ್ರಿಯ ಪ್ರಕರಣಗಳ ನಡುವಿನ ಅಂತರದಿನೇದಿನೆ ಸ್ಥಿರವಾಗಿ ಏರಿಕೆ ಕಾಣುತ್ತಿದ್ದು, ಪ್ರಸ್ತುತಅದು 79,40,299ರಷ್ಟಿದೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ77.27% ಹೊಸ ಪ್ರಕರಣಗಳು ಪತ್ತೆಯಾಗಿವೆ.

ಕಳೆದ 24 ತಾಸುಗಳಲ್ಲಿ ಕೇರಳ ರಾಜ್ಯದಲ್ಲೇ 7,066ಹೊಸ ಪ್ರಕರಣಗಳು ಪತ್ತೆಯಾಗಿ, ಆಗ್ರ ಸ್ಥಾನದಲ್ಲಿದೆ.ದೆಹಲಿಯಲ್ಲಿ 6,901, ಮಹಾರಾಷ್ಟ್ರದಲ್ಲಿ 6,608ಪ್ರಕರಣಗಳ ದೃಢಪಟ್ಟಿವೆ.

10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ77.28% ಹೊಸ ಪ್ರಕರಣಗಳು ದೃಢಪಟ್ಟಿವೆ.

ಕಳೆದ 24 ತಾಸುಗಳಲ್ಲಿ ದೆಹಲಿ ಮಹಾನಗರಿಯಲ್ಲಿ7,486, ಕೇರಳದಲ್ಲಿ 6,419 ಮತ್ತು ಮಹಾರಾಷ್ಟ್ರದಲ್ಲಿ5,011 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.

ದೇಶಾದ್ಯಂತ ನಿನ್ನೆ ಒಂದೇ ದಿನ ಒಟ್ಟು 585ಕೊರೊನಾ ಸಾವುಗಳು ಸಂಭವಿಸಿವೆ. ಅದರಲ್ಲಿ79.49% ಮರಣಗಳು 10 ರಾಜ್ಯಗಳು ಮತ್ತುಕೇಂದ್ರಾಡಳಿತ ಪ್ರದೇಶಗಳಲ್ಲಿ ವರದಿಯಾಗಿದೆ.

ದೆಹಲಿಯಲ್ಲಿ 131 ಅಂದರೆ 22.39%.,ಮಹಾರಾಷ್ಟ್ರದಲ್ಲಿ 100 ಮತ್ತು ಪಶ್ಚಿಮ ಬಂಗಾಳದಲ್ಲಿ54 ಹೊಸ ಸಾವುಗಳು ಸಂಭವಿಸಿವೆ.

***

(ಪ್ರಕಟಣೆ ಐ.ಡಿ.: 1674003)