*ಒಂದು ವಾರದಲ್ಲಿ 8 ಸಹೋದರಿಯರಿಗೆ ದಾಂಪತ್ಯ ಭಾಗ್ಯ*
*ತ್ರಿ ಶತಕ ದಾಟಿದ ನಂಡೆ ಪೆಂಙಳ್ ಮದುವೆ*

*ಮಂಗಳೂರು ನ 13. ಪ್ರಾಯ ಮೂವತ್ತು ಮೀರಿದ ಸಮುದಾಯದ ಸಹೋದರಿಯರ ಮದುವೆಗಾಗಿಯೇ ನಡೆಸಿದ ಅಭಿಯಾನ ನಂಡೆ ಪೆಂಙಳ್* *ಈ ಅಭಿಯಾನದಡಿ ಈವರೆಗೆ ಮದುವೆಯಾದ ನಮ್ಮ ಸಹೋದರಿಯರ ಸಂಖ್ಯೆ 312. ಇಷ್ಟರಲ್ಲೇ ತ್ರಿಶತಕದ ಗಡಿಯನ್ನು ದಾಟಿರುವ ಈ ಅಭಿಯಾನ ಅಂಗವಾಗಿ ಇಂದು*
*8 ಸಹೋದರಿಯರ ಮದುವೆಗಾಗಿ ಚಿನ್ನ ಮತ್ತು ಇನ್ನಿತರ ವಸ್ತುಗಳನ್ನು ಕೊಡುವ ಕಾರ್ಯಕ್ರಮ ಟ್ಯಾಲೆಂಟ್ ಕಛೇರಿಯಲ್ಲಿ ನಡೆಯಿತು.*

*ಕಾರ್ಯಕ್ರಮದಲ್ಲಿ ಎಕ್ಸ್ ಪರ್ಟೈಸ್ ಕಂಪೆನಿಯ ನಿರ್ದೇಶಕರು ಹಾಗೂ ನಂಡೆ ಪೆಂಙಳ್ ಅಭಿಯಾನದ ಉಪಾಧ್ಯಕ್ಷರೂ ಆಗಿರುವ ಅಶ್ರಫ್ ಕರ್ನಿರೆ, ಕತಾರಿನ ಉದ್ಯಮಿ ಯಾಗಿರುವ ಹಾಜಿ ಅಬ್ದುಲ್ಲಾ ಮೋನು ಕತಾರ್,* *ಮುಕ್ಕ ಸೀಫುಡ್ ನ ನಿರ್ದೇಶಕರಾಗಿರುವ ಅಲ್ತಾಫ್,ಎಕ್ಸ್ ಪರ್ಟೈಸ್ ಕಂಪೆನಿಯ ವ್ಯವಸ್ಥಾಪಕರಾದ ಶೇಖ್ ಮೊಯ್ದಿನ್, ನಂಡೆ ಪೆಂಙಲ್ ಅಭಿಯಾನದ ಅಧ್ಯಕ್ಷರಾದ ನೌಷಾದ್ ಹಾಜಿ ಸೂರಲ್ಪಾಡಿ,* *ಉಪಾಧ್ಯಕ್ಷರಾದ*
*ಬಿ ಎಂ ಮುಮ್ತಾಝ್ ಅಲಿ ಕೃಷ್ಣಾಪುರ,ಪ್ರಧಾನ ಕಾರ್ಯದರ್ಶಿಯಾದ ಮನ್ಸೂರ್ ಆಝಾದ್, ಕೋಶಾಧಿಕಾರಿ ಅಬ್ದುಲ್ ರವೂಫ್ ಪುತ್ತಿಗೆ, ಕಾರ್ಯದರ್ಶಿ ನಿಸಾರ್ ಮೊಹಮ್ಮದ್ ಕೋಸ್ಟಲ್ ಫಿಶರೀಸ್, ಪರಿಶೀಲನೆ ತಂಡದ ಮುಖ್ಯಸ್ಥರಾದ ಸುಲೈಮಾನ್ ಶೇಖ್ ಬೆಳುವಾಯಿ,* *ರಿಯಾಝ್ ಕಣ್ಣೂರು, ಸರ್ವೆ ತಂಡದ ಮುಖ್ಯಸ್ಥರಾದ ಡಿ. ಅಬ್ದುಲ್ ಹಮೀದ್ ಕಣ್ಣೂರು, ಪ್ರಚಾರ ಮುಖ್ಯಸ್ಥ ರಫೀಕ್ ಮಾಸ್ಟರ್, ನಂಡೆ ಪೆಂಙಳ್ ಉಸ್ತುವಾರಿ ನಕಾಶ್ ಬಾಂಬಿಲ ಮೊದಲಾದವರು ಉಪಸ್ಥಿತರಿದ್ದರು.*
*ಈ ಸಂದರ್ಭದಲ್ಲಿ 8 ಮಂದಿ ಸಹೋದರಿಯರಿಗೆ ಚಿನ್ನ ಮತ್ತು ಇನ್ನಿತರ ವಸ್ತುಗಳನ್ನು ವಿತರಿಸಲಾಯಿತು.* *ಸಹೋದರಿಯರ ವಿವಾಹಕ್ಕೆ ಆರ್ಥಿಕ ಸಹಕಾರವನ್ನು*
*ಎಕ್ಸ್ ಪರ್ಟೈಸ್ ಕಂಪೆನಿಯ ಶೇಖ್ ಮತ್ತು ಸಹೋದರರು* *ಇತ್ತೀಚೆಗೆ ಅಗಲಿದ ತಮ್ಮ ತಾಯಿಯ ಹೆಸರಿನಲ್ಲಿ ನೀಡಿದ್ದರು.*
*ಈ ಅಭಿಯಾನದಡಿ 47 ವರ್ಷದ ಸಹೋದರಿ ಯೊಬ್ಬಳಿಗೆ ಮೊನ್ನೆ ಮದುವೆಯಾಗಿದ್ದು, 40 ವರ್ಷ ಮೇಲ್ಪಟ್ಟ 12* *ಸಹೋದರಿಯರಿಗೆ ದಾಂಪತ್ಯ ಭಾಗ್ಯ ಸಿಕ್ಕಿದೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲೂ ಈ ಅಭಿಯಾನ ಇನ್ನಷ್ಟು ವೇಗವನ್ನು ಪಡೆದುಕೊಂಡಿದ್ದು, ಒಟ್ಟು 39 ಸಹೋದರಿಯರಿಗೆ ದಾಂಪತ್ಯ ಭಾಗ್ಯ ಲಭಿಸಿದೆ.*