ಭಾರತೀಯ ಸಾಗರೋತ್ತರ ಕಾಂಗ್ರೆಸ್, ಬಹರೈನ್ ಘಟಕದಿಂದ ಬಹರೈನ್ ಪ್ರಧಾನಿಯ ನಿಧನಕ್ಕೆ ಸಂತಾಪ ಸೂಚನೆ.

ಮನಾಮ: 12 ನವೆಂಬರ್ ,:  ಮಹಮ್ಮದ್ ಮನ್ಸೂರ್ ಇವರ ನೇತೃತ್ವದ ಭಾರತೀಯ ಸಾಗರೋತ್ತರ ಕಾಂಗ್ರೆಸ್ ನ ಬಹರೈನ್ ಘಟಕವು ಬಹರೈನ್ ನ ದೊರೆ ಗೌರವಾನ್ವಿತ ಶೇಖ್ ಹಮದ್ ಬಿನ್ ಇಸಾ ಅಲ್ ಖಲೀಫಾ, ಬಹರೈನ್ ನ ಯುವರಾಜ ಗೌರವಾನ್ವಿತ ಶೇಖ್ ಸಲ್ಮಾನ್ ಬಿನ್ ಹಾಮದ್ ಅಲ್ ಖಲೀಫಾ, ದಿವಂಗತ ಪ್ರಧಾನಿಯ ಪುತ್ರರಾದ ಶೇಖ್ ಅಲಿ ಬಿನ್ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ, ಶೇಖ್ ಸಲ್ಮಾನ್ ಬಿನ್ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಮತ್ತು ಬಹರೈನ್ ನ ರಾಜ ಮನೆತನದ ಸರ್ವ ಸದಸ್ಯರಿಗೆ ಹಾಗೂ ಬಹರೈನ್ ನ ನಾಗರಿಕರಿಗೆ – ಪ್ರಧಾನಿ ಗೌರವಾನ್ವಿತ ಶೇಖ್ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾರವರ ನಿಧನದ ಸಂಧರ್ಭದಲ್ಲಿ ಸಂತಾಪ ವ್ಯಕ್ತ ಪಡಿಸಿದೆ.

ಭಾರತೀಯ ಸಾಗರೋತ್ತರ ಕಾಂಗ್ರೆಸ್ ನ ಅಧ್ಯಕ್ಷರಾದ ಶ್ರೀ ಮಹಮ್ಮದ್ ಮನ್ಸೂರ್ ರವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಹಲವು ನಾಯಕರಿಂದ ದೂರವಾಣಿ ಕರೆಗಳನ್ನು ಹಾಗೂ ಸಂತಾಪ ಸಂದೇಶಗಳನ್ನು ಸ್ವೀಕರಿಸಿದರು. ರಾಷ್ಟ್ರೀಯ ಕಾಂಗ್ರೆಸ್ ನ ಮುಖ್ಯಸ್ಥರಾದ ಶ್ರೀ ರಾಹುಲ್ ಗಾಂಧಿ ಯವರು ತಮ್ಮ ಟ್ವೀಟ್ ನ ಮೂಲಕ ಬಹರೈನ್ ನ ದೊರೆ, ರಾಜ ಮನೆತನ ಹಾಗೂ ಬಹರೈನ್ ನ ನಾಗರಿಕರಿಗೆ ಎಲ್ಲರಿಗಿಂತಲೂ ಮೊದಲಾಗಿ ಸಂತಾಪ ವ್ಯಕ್ತಪಡಿಸಿದ್ದರು. ಭಾರತೀಯ ಸಾಗರೋತ್ತರ ಕಾಂಗ್ರೆಸ್ ನ ಅಧ್ಯಕ್ಷರಾದ ಶ್ರೀ ಸ್ಯಾಮ್ ಪಿತ್ರೋಡಾ ರವರು ಬಹರೈನ್ ನ ದೊರೆ, ರಾಜ ಮನೆತನ ಹಾಗೂ ಬಹರೈನ್ ನ ನಾಗರಿಕರಿಗೆ ಸಂತಾಪ ಸೂಚಿಸಿದರು. ಈ ಇಬ್ಬರು ಮುಖ್ಯಸ್ಥರೂ ಇತ್ತೀಚೆಗಷ್ಟೇ ಬಹರೈನ್ ಸರಕಾರದ ಅತಿಥಿಗಳಾಗಿ ಭೇಟಿ ನೀಡಿದ್ದ ಸಂದರ್ಭದ ನೆನಪುಗಳನ್ನು ಮೆಲುಕುಹಾಕಿ ಕೊಂಡರು. ಸದ್ರಿ ಭೇಟಿಯ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ಕಲೆ, ಕ್ರೀಡೆ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಪರಸ್ಪರ ಪ್ರಯೋಜನ ಪಡೆಯುವ ವಿಷಯಗಳ ಬಗ್ಗೆ ಚರ್ಚೆಯಾಗಿತ್ತು. ವಾಣಿಜ್ಯ ಸಂಬಂಧಗಳು, ವಿದೇಶಾಂಗ ನೀತಿ ಹಾಗೂ ಸಾಂಸ್ಕೃತಿಕ ವಿನಿಮಯ ಗಳ ಬಗ್ಗೆ ಬಹರೈನ್ ಹಾಗೂ ಭಾರತ ದೇಶಗಳ ಸಂಬಂಧ ಅತ್ಯಂತ ಸೌಹಾರ್ದಯುತವಾಗಿದೆ. . ಬಹರೈನ್ ನಲ್ಲಿ ಸುಮಾರು 350,000 ಭಾರತೀಯರು ನೆಲೆಸಿದ್ದು, ಬಹರೈನ್ ನಾಗರೀಕರೊಂದಿಗೆ ತಮ್ಮ ಪರಂಪರಾಗತ ಹಾಗೂ ಅಮೂಲ್ಯ ಬಾಂಧವ್ಯವನ್ನು ಮುಂದುವರಿಕೊಂಡು ಬರುತ್ತಿದ್ದಾರೆ.