*ವೆಲ್ ನೆಸ್ ಹೆಲ್ಪ್ ಲೈನ್ ವತಿಯಿಂದ ಮಾನವೀಯತೆಯ ಹೀರೋಗಳಿಗೆ ಅಭಿನಂದನಾ ಕಾರ್ಯಕ್ರಮ*

ಕೊರೊನ ಸಂಕಷ್ಟದ ಸಮಯದಲ್ಲಿ ನೂರ ಐವತ್ತ ಕ್ಕಿಂತಲೂ ಅಧಿಕ ಪ್ಲಾಸ್ಮಾ ದಾನ ಮಾಡಿದ್ದ ಕೊರೊನ ವಾರಿಯರ್ಸ್ ಗಳಿಗೆ ಅಭಿನಂದಿಸುವ ಕಾರ್ಯಕ್ರಮ ವೆಲ್ ನೆಸ್ ಹೆಲ್ಪ್ ಲೈನ್ ವತಿಯಿಂದ ಹಿದಾಯ ಫೌಂಡೇಶನ್ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ವಿಧಾನ ಪರಿಷತ್ ಶಾಸಕ ಶ್ರೀ ಪ್ರತಾಪ್ ಸಿಂಹ ನಾಯಕ್ ಭಾಗವಹಿಸಿ ಕೊರೊನ ಮಹಾಮಾರಿಯ ಸಮಯದಲ್ಲಿ ವಲ್ ನೆಸ್ ಹೆಲ್ಪ್ ಲೈನ್ ಮಾಡತಕ್ಕಂತಹ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಡಾ.ಸದಾಶಿವ ಶ್ಯಾನ್ ಬೋಗ್, ಜಿಲ್ಲಾ ವೈದ್ಯಾಧಿಕಾರಿ , ಡಾ. ತಾಜುದ್ದೀನ್ , ವೆನ್ಲಾಕ್ ವೈದ್ಯಾಧಿಕಾರಿ, ಡಾ. ಜನಾರ್ದನ್ ಕಾಮತ್, ತಾರಾ ಕ್ಲಿನಿಕ್, ಡಾ.ಪ್ರಿಯಾ ಬಳ್ಳಾಲ್, ವಿಜಯ ಕ್ಲಿನಿಕ್, ಡಾ. ಗಿರಿಧರ್, ಕೆಎಸ್ ಹೆಗ್ಡೆ ಆಸ್ಪತ್ರೆ, ಮೊದಲಾದವರು ಭಾಗವಹಿಸಿದ್ದರು. ಮನ್ಸೂರ್ ಆಜಾದ್,ಅಧ್ಯಕ್ಷರು,ಹಿದಾಯ ಫೌಂಡೇಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ಲಾಸ್ಮಾ ದಾನ ಮಾಡಿದ ದಾನಿಗಳು, ಸಂಘ ಸಂಸ್ಥೆಗಳು, ಕೋರೋಣ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ವೈದ್ಯರು ಮತ್ತು ಸ್ವಯಂಸೇವಕರನ್ನು ಅಭಿನಂದಿಸಲಾಯಿತು. ವೆಲ್ನೆಸ್ ಹೆಲ್ಪ್ ಲೈನ್ ನ ಸಂಚಾಲಕ ಖಾಸಿಂ ಅಹ್ಮದ್ ಎಚ್ ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಫೀಕ್ ಮಾಸ್ಟರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವೆಲ್ನೆಸ್ ಹೆಲ್ಪ್ ಲೈನ್ ನ ಸಂಚಾಲಕ ಆಸಿಫ್ ಡೀಲ್ಸ್ ಧನ್ಯವಾದ ಗೈದರು.

ಕೊರೊನ ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುವುದು, ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವುದು, ರೇಷನ್ ಕಿಟ್ ಪಿಪಿಇ ಕಿಟ್ ಆಕ್ಸಿಜನ್ ಸಿಲಿಂಡರ್ ಮಾಸ್ಕ್ ಮೊದಲಾದ ವಸ್ತುಗಳನ್ನು ವಿತರಿಸುವುದು. ದೂರವಾಣಿ ಮೂಲಕ ವೈದ್ಯರ ಸಲಹೆ ಪಡೆಯುವುದು, ರೋಗಿಗಳಿಗೆ ಸೂಕ್ತ ಕೌನ್ಸೆಲಿಂಗ್ ನಡೆಸಿ ಧೈರ್ಯ ತುಂಬುವುದು, ಅಗತ್ಯವಿದ್ದ ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡುವುದು ಆಯುಷ್ಮಾನ್ ಕಾರ್ಡ್ ಮಾಡಿಸುವುದು ಮೊದಲಾದ ಸೇವೆಯನ್ನು ನಿರಂತರವಾಗಿ ವೆಲ್ನೆಸ್ ಹೆಲ್ಪ್ ಲೈನ್ ಮಾಡುತ್ತಿದೆ. ವೈದ್ಯರು, ಆರೋಗ್ಯ ಇಲಾಖೆ,ಆಸ್ಪತ್ರೆ, ಸಂಘ ಸಂಸ್ಥೆ ಮತ್ತು ಸ್ವಯಂಸೇವಕರ ನಡುವೆ ಸಂಪರ್ಕವನ್ನು ಕಲ್ಪಿಸಿ ಜನಸಾಮಾನ್ಯರಿಗೆ ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ವೆಲ್ನೆಸ್ ಹೆಲ್ಪ್ ಲೈನ್ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.