ಡಾ. ಆರತಿ ಕೃಷ್ಣ, ಸಾಗರೋತ್ತರ ಭಾರತೀಯ ಕಾಂಗ್ರೆಸ್ಸಿನ ಕಾರ್ಯದರ್ಶಿ ಇವರಿಂದ ನವದೆಹಲಿಯಲ್ಲಿರುವ ಭಾರತೀಯ ವಿದೇಶಾಂಗ ಕಾರ್ಯದರ್ಶಿಯವರ ಭೇಟಿ.

ಸಾಗರೋತ್ತರ ಭಾರತೀಯ ಕಾಂಗ್ರೆಸ್ಸಿನ ಕಾರ್ಯದರ್ಶಿ (ಮಧ್ಯ ಪೂರ್ವ ದೇಶಗಳ ಉಸ್ತುವಾರಿ), ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅನಿವಾಸಿ ಭಾರತೀಯ ಘಟಕದ ಅಧ್ಯಕ್ಷೆ, ಹಾಗೂ ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ವೇದಿಕೆಯ ಪೂರ್ವಾಧ್ಯಕ್ಷೆ ಡಾ. ಆರತಿ ಕೃಷ್ಣ ರವರು  ಭಾರತೀಯ ವಿದೇಶಾಂಗ ಕಾರ್ಯದರ್ಶಿ ಶ್ರೀ ಹರ್ಷ್ ಶೃಂಗ್ಲಾ ರವರನ್ನು ನವದೆಹಲಿಯಲ್ಲಿ ಭೇಟಿಯಾದರು. ಕೋವಿಡ್ 19 ನ ಲಾಕ್ ಡೌನ್ ದಿನಗಳ ನಂತರ ಡಾ. ಆರತಿ ಕೃಷ್ಣ ರವರದ್ದು ಇದು ಪ್ರಥಮ ಪ್ರಯಾಣ ವಾಗಿತ್ತು.

ಡಾ. ಆರತಿ ಕೃಷ್ಣ ರವರು ವಿದೇಶಾಂಗ ಸಚಿವಾಲಯದಿಂದ ದೊರೆತ ಸಮಯೋಚಿತ ಹಾಗೂ ತುರ್ತು ಸಹಕಾರಕ್ಕಾಗಿ ಸಚಿವಾಲಯದ ಅಧಿಕಾರಿಗಳನ್ನು ಕೊಂಡಾಡಿ ಕೃತಜ್ಞತೆ ಸಲ್ಲಿಸಿದರು. ಕೋವಿಡ್ 19 ವಿಶ್ವವನ್ನು ತಲ್ಲಣಗೊಳಿಸಿದಾಗ ಪ್ರಪಂಚದಾದ್ಯಂತ ನೆಲೆಸಿದ್ದ ಭಾರತದ ವಿವಿಧ ರಾಜ್ಯಗಳ ಲಕ್ಷಾಂತರ ಭಾರತೀಯರು ವಿದೇಶಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಸ್ವದೇಶಕ್ಕೆ ತೆರಳಲು ಇಚ್ಚಿಸಿದ ಸಾವಿರಾರು  ಭಾರತೀಯ ಪ್ರಜೆಗಳು ಸಹಾಯಕ್ಕಾಗಿ ತನ್ನನ್ನು ಸಂಪರ್ಕಿಸುತ್ತಿದ್ದರು. ಈ ಸಂದರ್ಭದಲ್ಲಿ ವಿವಿಧ ದೇಶಗಳ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು, ಸಿಬಂದಿವರ್ಗ, ಹಾಗೂ ಭಾರತೀಯ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಅತ್ಯುತ್ತಮವಾಗಿ ಸ್ಪಂದಿಸಿ, ಅವರೆಲ್ಲರಿಗೆ ಸೂಕ್ತ ನೆರವನ್ನು ಕ್ಷಿಪ್ರವಾಗಿ ನೀಡಲು ಸಹಕರಿಸಿದ್ದಾರೆ ಎಂದು ತಿಳಿಸಿದರು.   ಇದೊಂದು ಹಿಂದೆಂದೂ ಕಂಡಿರದ ಸಾಂತ್ವನದ ಬೃಹತ್ ಕಾರ್ಯಾಚರಣೆಯಾಗಿತ್ತು ಹಾಗೂ ಈ ಕಾರ್ಯಕ್ಕಾಗಿ ತಾನು ತಮಗೆಲ್ಲರಿಗೂ ಚಿರಋಣಿಯಾಗಿರುವೆ ಎಂಬ ಸಂದೇಶವನ್ನು ವೈಯಕ್ತಿಕವಾಗಿ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆಂದು ಶ್ರೀ ಹರ್ಷ್ ಶೃಂಗ್ಲಾ ಅವರಿಗೆ ತಿಳಿಸಿದರು.

ತಮ್ಮ ಹೇಳಿಕೆಯಲ್ಲಿ, ಡಾ. ಆರತಿ ಕೃಷ್ಣ ರವರು ವಿವಿಧ ದೇಶಗಳ ಸಾಗರೋತ್ತರ ಭಾರತೀಯ ಕಾಂಗ್ರೆಸ್ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಸ್ಮರಿಸಿ, ಕೋವಿಡ್ ೧೯ ರ ಸಂಕಷ್ಟದ ಸಮಯದಲ್ಲಿ ಐಒಸಿ ಘಟಕಗಳು ನಿರಾಶ್ರಿತರಿಗಾಗಿ ಸಲ್ಲಿಸಿದ ಅಭೂತಪೂರ್ವ ಸೇವಾಕಾರ್ಯಗಳಿಗಾಗಿ ತಮ್ಮ ಕೃತಜ್ಞತೆಗಳನ್ನು ಸಲ್ಲಿದ್ದಾರೆ.

Reported by : Mansoor Hejmady

From : Bahrain