ಮಸ್ಕತ್: ಸೋಶಿಯಲ್ ಫೋರಮ್ ಒಮಾನ್ ನಿಂದ ಬೃಹತ್ ರಕ್ತದಾನ ಶಿಬಿರ

ಸೋಶಿಯಲ್ ಫೋರಮ್ ಒಮಾನ್ ಇದರ ವತಿಯಿಂದ ಒಮಾನ್ ನ ವಿವಿಧ ನಗರಗಳಲ್ಲಿ ಬೃಹತ್ ರಕ್ತದಾನ ಶಿಬಿರ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸೆಪ್ಟೆಂಬರ್ 4ರಂದು ಮಸ್ಕತ್ ನಲ್ಲಿ ಎರಡನೆ ಹಂತದ ಬೃಹತ್ ರಕ್ತದಾನ ಶಿಬಿರವನ್ನು ನಡೆಸಲಾಯಿತು.

ಮಸ್ಕತ್ ನ ‘ರೂವಿ’ ‘ಅಲ್ ಮಾಸ ಹಾಲ್’ ನಲ್ಲಿ ಆಯೋಜಿಸಲಾದ ಬೃಹತ್ ರಕ್ತದಾನ ಶಿಬಿರವನ್ನು ಶಿಬಿರದ ಉಸ್ತುವಾರಿ ಅನಸ್ ಅಹ್ಮದ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಒಮಾನ್ ಕೇಂದ್ರ ಆರೋಗ್ಯ ಇಲಾಖೆಯ ಆರೋಗ್ಯಾಧಿಕಾರಿ ಜಮಾಲ್ ಮುಹಮ್ಮದ್ ರಕ್ತದಾನದ ಮಹತ್ವದದ ಬಗ್ಗೆ ಮಾಹಿತಿ ನೀಡಿದರು.

ಸುಮಾರು 200ಕ್ಕೂ ಅಧಿಕ ಅನಿವಾಸಿ ಭಾರತೀಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಕೋವಿಡ್ ನ ಸಂದಿಗ್ಧತೆಯಲ್ಲಿ ಒಮಾನ್ ಆರೋಗ್ಯ ಸಂಸ್ಥೆಯ ರಕ್ತನಿಧಿ ಕೇಂದ್ರದಲ್ಲಿನ ರಕ್ತದ ಅಭಾವವನ್ನು ಮನಗಂಡು ಸೋಶಿಯಲ್ ಫೋರಮ್ ಒಮಾನ್ ಮತ್ತು ಒಮಾನ್ ಕೇಂದ್ರ ಆರೋಗ್ಯ ಇಲಾಖೆ ವತಿಯಿಂದ “ರಕ್ತದಾನ ಮಾಡಿ ಜೀವ ಉಳಿಸಿ” ಎಂಬ ಶೀರ್ಷಿಕೆಯಡಿ ರಕ್ತದಾನ ಶಿಬಿರ ಅಭಿಯಾನವನ್ನು ಆಯೋಜಿಸಲಾಗಿತ್ತು. ಇದೇ ವೇಳೆ ಸಲಾಲ ನಗರದಲ್ಲಿಯೂ ರಕ್ತದಾನ ಶಿಬಿರ ನಡೆದಿದ್ದು, 100 ರಷ್ಟು ಅನಿವಾಸಿ ಭಾರತೀಯರು ರಕ್ತದಾನ ಮಾಡಿದರು.

$$$$$$$$$$$$$$$$$

ಅರಿವು (ವಿಧ್ಯಾಬ್ಯಾಸ ಸಾಲ) ಯೋಜನೆ
ಬೆಂಗಳೂರು, ಸೆಪ್ಟಂಬರ್ 03 (ಕರ್ನಾಟಕ ವಾರ್ತೆ):
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮವು ರಾಜ್ಯದ ಮತೀಯ ಅಲ್ಪಸಂಖ್ಯಾತರಾದ ಮುಸಲ್ಮಾನರು, ಕ್ರೈಸ್ತರು, ಜೈನರು, ಭೌದ್ಧರು, ಸಿಖ್‍ರು ಮತ್ತು ಪಾರ್ಸಿ ಜನಾಂಗದವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕಾಭಿವೃದ್ದಿಗಾಗಿ ಅನುಷ್ಠಾನಗೊಳಿಸುತ್ತಿರುವ ರಾಜ್ಯ ಸರ್ಕಾರ ಪ್ರಾಯೋಜಿತ ಕೆಳಕಂಡ ಯೋಜನೆಯಡಿಯಲ್ಲಿ 2020-21 ನೇ ಸಾಲಿನಲ್ಲಿ ಸಾಲಸೌಲಭ್ಯ ಪಡೆಯಲು ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

2020-21ನೇ ಸಾಲಿಗೆ  2020-21 ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ/ನೀಟ್ ನಲ್ಲಿ ಆಯ್ಕೆಯಾಗುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅರಿವು ಸಾಲ ಯೋಜನೆ ಯಡಿಯಲ್ಲಿ ಸಾಲ ಪಡೆಯಲು ಅಪೇಕ್ಷಿಸುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ನಿಗಮದ ವೆಬ್ ಸೈಟ್  www.kmdc.kar.nic.in/arivu     ಮುಖಾಂತರ ಅರ್ಜಿ ಸಲ್ಲಿಸ ಬಹುದಾಗಿರುತ್ತದೆ. ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ :02/09/2020 ಕೊನೆಯ ದಿನಾಂಕ :18/09/2020
ವಿದ್ಯಾರ್ಥಿಗಳು ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಅದರ ಹಾರ್ಡ್ ಕಾಪಿ  (Hard Copy)        ಯನ್ನು ಡೌನ್‍ಲೋಡ್ ಮಾಡಿಕೊಂಡು ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಜಿಲ್ಲಾ ವ್ಯವಸ್ಥಾಪಕರ ಕಛೇರಿಗೆ ಸಲ್ಲಿಸುವ ಕೊನೆಯ ದಿನಾಂಕ :18/09/2020 ಸಿಇಟಿ/ನೀಟ್ ಪರೀಕ್ಷಾ ಪ್ರವೇಶ ಪ್ರತಿ / ಸಿಇಟಿ ಆರ್ಡರ್ Order Copy)  ಪ್ರತಿಗಳನ್ನು ನೀಡಬೇಕು. ಹೆಚ್ಚಿನ ಮಾಹಿತಿಗೆ ಮೊಹಮ್ಮದ್ ಸಲೀಂ, ಜಿಲ್ಲಾ ವ್ಯವಸ್ಥಾಪಕರು, ಕ.ಅ.ಅ.ನಿ. ಬೆಂಗಳೂರು ನಗರ ಜಿಲ್ಲೆ, ಉತ್ತರ ವಿಭಾಗ, ದೂರವಾಣಿ 23539786 ಸಂಪರ್ಕಿಸಲು ಪ