ಅಹ್ಮದ್ ಹಾಜಿ ಮೊಹಿಯುದ್ದೀನ್ ರವರ ನಿಧನ ಸಮುದಾಯಕ್ಕೆ ದೊಡ್ಡ ನಷ್ಟ : ಇಲ್ಯಾಸ್ ಮುಹಮ್ಮದ್ ತುಂಬೆ

ಅಹ್ಮದ್ ಹಾಜಿ ಮೊಹಿಯುದ್ದಿನ್ ತುಂಬೆ ರವರ ನಿಧನ ಸಮುದಾಯಕ್ಕೆ ದೊಡ್ಡ ನಷ್ಟವಾಗಿದೆ. ಶೈಕ್ಷಣಿಕ ರಂಗದಲ್ಲಿ ಅವರು ನೀಡಿದ ಕೊಡುಗೆ ಹಾಗೂ ಸಮುದಾಯ ಮತ್ತು ಸಮಾಜದ ಹಿತಚಿಂತನೆಯ ಅವರ ಕಾರ್ಯಗಳು ಸ್ಮರಣೀಯ ವಾದುದು. ತುಂಬೆ ಗ್ರಾಮ ಹಾಗೂ ಪರಿಸರದ ಗ್ರಾಮವಾಸಿಗಳಿಗೆ ಉದ್ಯೋಗಾಸರೆಯಾಗಿದ್ದ ಅವರ ಉದ್ಯಮವು ನಾಡಿನ ಅಭಿವೃದ್ಧಿಗೆ ಪೂರಕವಾಗಿದ್ದವು. ಅಹ್ಮದ್ ಹಾಜಿ ಮೊಹಿಯುದ್ದೀನ್ ರವರು ಸಾಮಾಜಿಕ ಸೌಹಾರ್ದತೆ ಹಾಗೂ ಶಾಂತಿಯ ಅಗ್ರ ಚಿಂತಕರಾಗಿ ದ್ದು ಸಮಾಜದಲ್ಲಿ ಮಾದರಿಯಾಗಿದ್ದಾರೆ. ಸರ್ವಶಕ್ತನಾದ ಅಲ್ಲಾಹನು ಅವರನ್ನು ಸ್ವರ್ಗದಲ್ಲಿ ಸೇರಿಸಲಿ ಎಂದು ಎಸ್ಡಿಪಿಐಯ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಸಂತಾಪ ವ್ಯಕ್ತಪಡಿಸಿದ್ದಾರೆ.