*ಪಚ್ಚೆನಾಡಿ , ಆಸುಪಾಸಿನಲ್ಲಿ ಆಡಳಿತ ಪಕ್ಷದವರಿಂದಲೇ ಸರ್ಕಾರಿ ಭೂಮಿ ಕಬಳಿಕೆ?, ಮಾಜಿ ಶಾಸಕ ಮೊಯ್ದಿನ್ ಬಾವಾ ಆರೋಪ!*
************************
ಮಂಗಳೂರು: ಮಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪಚ್ಚೆನಾಡಿ ಆಸುಪಾಸಿನಲ್ಲಿ ಹಲವು ಎಕ್ರೆ ಸರ್ಕಾರಿ ಕುಮ್ಕಿ ಭೂಮಿಯನ್ನು *ಅಕ್ರಮ* *ಲೇ*ಔಟ್* ಮಾಡಿ, ಮಾರಾಟ ನಡೆಸುವ ವ್ಯವಸ್ಥಿತ ದಂಧೆ ಈಗಾಗಲೇ ಆರಂಭಗೊಂಡಂತೆ ಮೇಲ್ನೋಟಕ್ಕೆ ಕಂಡು ಬರುತ್ತದೆ.
ಶಾಸಕ ಶ್ರೀ ಭರತ್ ಶೆಟ್ಟಿ ಮತ್ತು ಕಾರ್ಪೊರೇಟರ್ ಶಾಂತಾ ನಾಯಕ್ ಪತಿ , ಬಿಜೆಪಿ ಮುಖಂಡ ಶ್ರೀ ರವೀಂದ್ರನಾಯಕ್ ಈ ಭೂಗಳ್ಳತನದ ನೇತೃತ್ವ ವಹಿಸಿದ್ದಾರೆ ಎಂಬ ಮಾತು ಸ್ಥಳೀಯವಾಗಿ ಕೇಳಿ ಬರುತ್ತಿವೆ ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಗಂಭೀರ ಆರೋಪವನ್ನು ಹೊರಿಸಿದ್ದಾರೆ.
ಈ ಬಗ್ಗೆ ವಿಸ್ತೃತವಾಗಿ ಹೇಳಿಕೆ ನೀಡಿರುವ ಮೊಯ್ದಿನ್ ಬಾವಾ ಜಿಲ್ಲೆಯಲ್ಲಿ, ಅದರಲ್ಲೂ ಪಾಲಿಕೆ ವ್ಯಾಪ್ತಿಯಲ್ಲಿ ಈ ಹಿಂದೆ ಎಂದೂ ಇಂತಹ (ಭೂಸ್ವಾಹ) ಭೂಹಗರಣ ನಡೆದ ನಡೆದೇ ಇಲ್ಲ.
ಕಾಂಗ್ರೆಸ್ ಪಕ್ಷದ ಸುದೀರ್ಘ ಆಡಳಿತಾವಧಿಯಲ್ಲಿ ಸರ್ಕಾರ ಅಥವಾ ಪಾಲಿಕೆ ಇತರ ಉದ್ದೇಶಗಳಿಗೆಂದು ಮೀಸಲಿಟ್ಟ ಜಾಗದ ಕಬಳಿಕೆಯನ್ನು ಶಾಸಕರು ಅಥವಾ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅಕ್ರಮವಾಗಿ ಕಬಳಿಕೆ ಮಾಡಿದ ಉದಾಹರಣೆಗಳೇ ಇಲ್ಲ. ಆದರೆ ಕೆಲವೇ ಕೆಲವು ವರ್ಷಗಳ ಬಿಜೆಪಿ ಆಡಳಿತದಲ್ಲಿ, ಸರಕಾರದ ವಾರೀಸುದಾರರಾದ ಜನಪ್ರತಿನಿಧಿಗಳೇ ಅಕ್ರಮ ಒತ್ತುವರಿಯನ್ನು ರಾಜಾರೋಷವಾಗಿ ನಡೆಸುತ್ತಿರುವುದು, ಬಿಜೆಪಿ ಹೇಳಿ ಕೊಳ್ಳುವ ದೇಶ ಪ್ರೇಮ ಕೇವಲ ಬಣ್ಣದ ಹೊದಿಕೆಯಷ್ಟೇ.
ಸರ್ಕಾರ ಮತ್ತು ಮ.ನ.ಪಾಲಿಕೆ, ಕೊರೋನ ದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದ ದುರ್ಲಾಭ ಪಡೆದು ಸರ್ಕಾರದ ಸೊತ್ತನ್ನು ಲೂಟಿಗೈಯ್ಯುತ್ತಿರುವುದು ಆಡಳಿತ ಪಕ್ಷದ ಜನವಿರೋಧಿ ನಿಲುವನ್ನು ಎತ್ತಿ ತೋರಿಸುತ್ತದೆ ಎಂದು ಶ್ರೀ ಮೊಯ್ದಿನ್ ಬಾವಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಲಿಕೆಯು ಮುಂದಿನ ದಿನಗಳಲ್ಲಿ ನಿರ್ದಿಷ್ಠ ಉದ್ದೇಶಗಳಿಗೆ ಬೇಕಾದೀತು ಎಂದು ಕಾಯ್ದಿರಿಸಿದ ಮತ್ತು ಪೌರ ಕಾರ್ಮಿಕರಿಗೆ ಮನೆ ಕಟ್ಟಿ ಕೊಡಲು ಉಪಯುಕ್ತ ಎಂದು ಮೀಸಲಿಟ್ಟ ಭೂಮಿಯನ್ನು ಮಾರಾಟ ನಡೆಸಲು ಈಗಾಗಲೇ ಮುಂಗಡವಾಗಿ ಖರೀದಿದಾರರಿಂದ ಹಣ ಪಡೆಯಲಾಗಿದೆ ಎಂದೂ ಹೇಳಲಾಗುತ್ತಿರುವುದರಿಂದ ಜಿಲ್ಲಾಧಿಕಾರಿಗಳು ಈ ಕುರಿತು ಕೂಡಲೇ ಗಮನಹರಿಸಬೇಕು.ಸೂಕ್ತ ತನಿಖೆ ನಡೆಸಿ, ಬೆಲೆಬಾಳುವ ಈ ಭೂಭಾಗವನ್ನು ಪಾಲಿಕೆಯ ಸುಪರ್ದಿಗೆ ತೆಗೆದುಕೊಳ್ಳ ಬೇಕಿದೆ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಿ ಮಂಗಳೂರು ಮಹಾನಗರ ಪಾಲಿಕೆಯ ಘನತೆಯನ್ನು ಉಳಿಸ ಬೇಕಿದೆ ಎಂದೂ ಮಾಜಿ ಶಾಸಕ ಮೊಯ್ದಿನ್ ಬಾವ, ದ.ಕ.ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.