ದಿನಾಂಕ 25-07-2020.
ಕೋಲಿ ಗಂಗಾಮತಸ್ಥರ ದಿಟ್ಟ ಮಹಿಳೆ,
ಮಾಜಿ ಸಂಸದೆ #ಪುಲನ್ #ದೇವಿಯವರ
19 ವರ್ಷದ ಪುಣ್ಯತಿಥಿಯ ಸ್ಮರಣೆಗಳು ಹಾಗೂ ನಮನಗಳು.
ಗುಡ್ ಕಾ ಪರ್ವಾ ಗ್ರಾಮದಿಂದ ಪಾರ್ಲಿಮೆಂಟಿನ ತನಕ ಸಂಘರ್ಷದ ಜೀವನ.

ಕೋಲಿ ಗಂಗಾಮತ ಸಮುದಾಯದ
*ಪುಲನ್ ದೇವಿಯವರ* ಬದುಕೇ ಸಂಘರ್ಷಮಯವಾಗಿತ್ತು,
ಉತ್ತರ ಪ್ರದೇಶದ ಗಂಗಾ ನದಿ ತಟ್ಟದ
ಗುಡ್ ಕಾ ಪರ್ವಾ ಗ್ರಾಮದಲ್ಲಿ ಜನಿಸಿದ ಅವರು
ಬಾಲ್ಯವಿವಾಹ, ಠಾಕೂರ್ ಮೇಲ್ಜಾತಿಯವರ ಶೋಷಣೆ, ಪುರುಷ ಪ್ರಾಧಾನ್ಯ ವ್ಯವಸ್ಥೆಯ
ಕಾರಣ ಬಾಲ್ಯದಿಂದಲೇ ಹಲವಾರು ಅನ್ಯಾಯಗಳನ್ನು ಎದುರಿಸಿದರು ಅದರಿಂದ ತಪ್ಪಿಸಿಕೊಳ್ಳಲು,
ಡಕಾಯಿತರ ಗ್ಯಾಂಗ್ ಸೇರಿಕೊಂಡರು,
ಅಲ್ಲಿ ಠಾಕೂರ್ ಮೇಲ್ಜಾತಿಯ ಹಾಗೂ ಹಿಂದುಳಿದ ಕೋಲಿ ಗಂಗಾಮತ ಜಾತಿಯವರ ಮಧ್ಯೆ ನಾಯಕತ್ವಕ್ಕಾಗಿ ಸ್ಪರ್ಧೆ ಏರ್ಪಟ್ಟಿತು,
ಠಾಕೂರರು ಹಿಂದುಳಿದ ಜಾತಿಯ ಡಕಾಯಿತರ ನಾಯಕ ಪುಲನ್ ದೇವಿ ಪ್ರಿಯಕರ,
ಕೋಲಿ ಗಂಗಾಮತ ಸಮುದಾಯದ
ವಿಕ್ರಮ್ ಮಲ್ಲಾನನ್ನು ಮೋಸದಿಂದ ಕೊಂದರು,
ಪುಲನ್ ದೇವಿಯನ್ನು ಭೀಕರವಾಗಿ ಹಿಂಸಿಸಿ,
ಮೇಲ್ಜಾತಿಯ ಠಾಕೂರರು ಸಾಮೂಹಿಕ ಅತ್ಯಾಚಾರ ಮಾಡಿದರು ಸತ್ತೆ ಹೋದಳು ಎಂದು ಊರಚೇ ಪುಲನ್ ದೇವಿಯನ್ನು ಎಸೆದು ಹೋದರು,
ಅದರೆ ಗಟ್ಟಿಜೀವ ಪುಲನ್ ದೇವಿ ಬದುಕುಳಿದು ಬಿಟ್ಟಳು,
ಒಂದೂ ಕಡೆ ಮರೆ ಮೋಸದಿಂದ ತನ್ನ ಪ್ರಿಯಕರನ ಕೊಲೆ ಇನ್ನೊಂದು ಕಡೆ ಬರ್ಬರ ಅತ್ಯಾಚಾರ‌ದ ನೋವು, ಅ ನೋವು ದುಖ ಕೆಲವೆ ದಿನಗಳಲ್ಲಿ ಪುಲನ್ ದೇವಿಯಲ್ಲಿ ಆಕ್ರೋಶದ ಕೆನ್ನಾಲಗೆ ಬುಗಿಳೆಳುವಂತೆ ಮಾಡಿತು.
ಪುಲನ್ ದೇವಿಯ ಕೆಲವೆ ದಿನಗಳಲ್ಲಿ ಹಿಂದುಳಿದ ಜಾತಿಯವರ ಹೊಸ ತಂಡವನ್ನು ಕಟ್ಟಿ,
ತನ್ನ ಮೇಲೆ ಅತ್ಯಾಚಾರ ಮಾಡಿ ಅವಮಾನ ಮಾಡಿದ
22 ಜನ ಠಾಕೂರ್ ಜಾತಿಯವರನ್ನು ಬೇಹಮಯಿ ಗ್ರಾಮಕ್ಕೆ ನುಗ್ಗಿ ಸಂಹಾರ ಮಾಡಿದಳು,
ಮೇಲ್ಜಾತಿಗಳು ಕೆಳ ಜಾತಿಯವರ ಮೇಲೆ ದೌರ್ಜನ್ಯ ನಡೆಸಿದ ವರದಿ ಕೇಳಿ ಅಭ್ಯಾಸವಾಗಿದ್ದ ಭಾರತೀಯ ಸಮಾಜಕ್ಕೆ, ಒಬ್ಬ ಹಿಂದುಳಿದ ಜಾತಿಯ ವ್ಯಕ್ತಿ ಅದು ಮಹಿಳೆ ಮೇಲ್ಜಾತಿಯ ಶೋಷಕರ ವಿರುದ್ಧ ವೀರೋಚಿತವಾಗಿ ಸೇಡು ತಿರಿಸಿಕೊಂಡ ವಿಚಾರ ಹೊಸದಾಗಿತ್ತು.
ಅಂದಿನ ಉತ್ತರ ಪ್ರದೇಶದ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ V.P ಸಿಂಗ್ ರಾಜಿನಾಮೆ ‌ಕೊಟ್ಟರು,
ಇಡಿ ದೇಶದಲ್ಲಿ ಅಲ್ಲೋಲ್ಲ ಕಲ್ಲೋಲ್ಲ ಸೃಷ್ಟಿಸಿತು.
ಈ ಘಟನೆ ಭಾರತದ ಮೇಲ್ಜಾತಿ ಶೋಷಣಾಶಾಯಿ ವ್ಯವಸ್ಥೆ ಅದುರುವಂತೆ ಮಾಡಿತು,
ಹಿಂದುಳಿದ ಜಾತಿಯವರಿಗೆ ಅಸೀಮಾವಾದ
ಶಕ್ತಿ ದೊರಕಿಸಿಕೊಟ್ಟಿತು,
ಮುಖ್ಯವಾಗಿ ಹಿಂದುಳಿದ ಮಹಿಳೆಯರಿಗೆ
ಪ್ರತಿರೋಧದ ಭಾಷೆಯನ್ನು ಕಲಿಸಿತು.
ಹಲವಾರು ವರ್ಷಗಳ ಕಾಲ ಪುಲನ್ ದೇವಿಯನ್ನು ಬಂಧಿಸಲು ಪ್ರಯತ್ನ ಪಟ್ಟರು ಕೂಡ ಪೋಲಿಸರಿಗೆ ಸಾಧ್ಯವಾಗಲಿಲ್ಲ, ಉತ್ತರ ಪ್ರದೇಶದ ಸಮಸ್ತ ಹಿಂದುಳಿದ ಜಾತಿಯವರ ಬೆಂಬಲವನ್ನು ಪಡೆದಿದ್ದ
ಪುಲನ್ ದೇವಿಯ ಬಂಧನವು ಪೋಲಿಸರಿಗೆ ಅಸಾಧ್ಯವಾಗಿತ್ತು.
ಉತ್ತರ ಭಾರತದ ಹಿಂದುಳಿದ ಜಾತಿಯ ನಾಯಕರು ತಿಳುವಳಿಕೆ ಹೇಳಿದ ನಂತರ ಮಧ್ಯಪ್ರದೇಶದಲ್ಲಿ ಮಹಾತ್ಮ ಗಾಂಧಿ, ದುರ್ಗಮಾತೆಯ ಫೋಟೋಗಳ ಮುಂದೆ ತನ್ನ ಶಸ್ತ್ರಗಳನ್ನು ಇಟ್ಟು ಅಂದಿನ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಸಮ್ಮುಖದಲ್ಲಿ 10 ಸಾವಿರಕ್ಕಿಂತ ಹೆಚ್ಚು ಜನ ಸೇರಿದ ಸಭೆಯಲ್ಲಿ ಶರಣದರು.
ಎಂಟು ವರ್ಷಗಳ ಕಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಪುಲನ್ ದೇವಿಯವರು 1994 ರಲ್ಲಿ ಬಿಡುಗಡೆಯಾಗುತ್ತಾರೆ.
ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಸರ್ಕಾರವು ಪುಲನ್ ದೇವಿಯವರ ಮೇಲಿದ್ದ ಅಷ್ಟು ಪ್ರಕರಣಗಳನ್ನು ರದ್ದು ಮಾಡುತ್ತಾರೆ.
1996 ರಲ್ಲಿ ಸಮಾಜವಾದಿ ಪಕ್ಷದಿಂದ ಮಿರ್ಜಪುರ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಪುಲನ್ ದೇವಿಯವರು ಅತ್ಯಧಿಕ ವೋಟುಗಳಿಂದ ವಿಜೇತರಾಗುತ್ತರೆ ಸಂಸದರಾಗಿ ಪಾರ್ಲಿಮೆಂಟಿಗೆ ಪ್ರವೇಶ ಪಡೆಯುತ್ತಾರೆ.
1998 ರಲ್ಲಿ ನಡೆಯುವ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುತ್ತಾರೆ ಅದರೆ ಅಲ್ಪ ವೋಟುಗಳಿಂದ ಪರಾಜಯಗೊಳ್ಳುತ್ತಾರೆ,
ಅದರೆ 1999 ರಲ್ಲಿ ಪುನಃ ಸ್ಪರ್ಧಿಸಿ ಐತಿಹಾಸಿಕ ವೋಟುಗಳಿಂದ ಗೆಲ್ಲುತ್ತಾರೆ.
ಪಾರ್ಲಿಮೆಂಟಿನಲ್ಲಿ ಮೀನುಗಾರರ ಪರ,
OBC ಗಳ ಪರ ನಿರಂತರವಾಗಿ ಧ್ವನಿ ಎತ್ತುತ್ತಾರೆ,
ದೇಶಾದ್ಯಂತ ಪುಲನ್ ದೇವಿಯವರ ಪ್ರಾಮುಖ್ಯತೆ,
ಯಶಸ್ಸು, ಜನಪ್ರಿಯತೆ ಮೇಲ್ಜಾತಿಯ ಶೋಷಕರ ಎದೆಯಲ್ಲಿ ದ್ವೇಷವನ್ನು ಹೆಚ್ಚಿಸುತ್ತದೆ.
ಸಂಸದೆ ಪುಲನ್ ದೇವಿಯವರನ್ನು ಕೊಲ್ಲಲು ಸಂಚು ರೂಪಿಸುವ ಠಾಕೂರ್ ಕ್ರಿಮಿನಲ್ ಗಳು,
ಮರೆ ಮೋಸದಿಂದ 2001 ಜುಲೈ 25 ರಂದು
ದೆಹಲಿಯ ಅವರ ಸ್ವಗೃಹದಲ್ಲಿ ಹೇಡಿಯೊಬ್ಬನಿಂದ ಕೊಲೆಯಾಗುತ್ತಾರೆ.
ಪುಲನ್ ದೇವಿಯವರ ಕೊಲೆಯು
ಶೋಷಿತ ವರ್ಗದವರ ಹೋರಾಟಕ್ಕೆ ದೊಡ್ಡ
ಅಘಾತವಾಗುತ್ತದೆ.
ಅವರ ಕೊಲೆಯಾಗಿ ಇಂದಿಗೆ 19 ವರ್ಷಗಳು,
ಅದರೆ ಪ್ರತಿವರ್ಷ ಅವರ ನೆನಪಿನಲ್ಲಿ ಹಲವಾರು ಲೇಖನಗಳು, ಶ್ರದ್ಧಾಂಜಲಿ ಸಭೆಗಳು,
ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತಿದ್ದೆ
ಪುಲನ್ ದೇವಿಯವರನ್ನು ಕೊಲ್ಲಬಹುದು ಅದರೆ ಅವರು ಹಚ್ಚಿದ ಕಿಚ್ಚು, ನೀಡಿದ ಪ್ರೇರಣೆ ಸದಾ ಇರುತ್ತದೆ.
ಸಮಸ್ತ ಕೋಲಿ ಗಂಗಾಮತಸ್ಥರ ಪರವಾಗಿ ಪುಲನ್ ದೇವಿಯವರಿಗೆ ಶ್ರದ್ಧಾಂಜಲಿಗಳು,
ನಮನಗಳು.

ಸೂರ್ಯಪ್ರಕಾಶ ಕೋಲಿ
ಅಧ್ಯಕ್ಷ:- ಸಾಂಪ್ರದಾಯಿಕ ‌ಮೀನುಗಾರರ ಒಕ್ಕೂಟ
ಬೆಂಗಳೂರು ಬಿಗ್ ಸಿಟಿ
9945138515.