*ಉಳ್ಳಾಲ ಸರ್ಕಾರಿ ಆಸ್ಪತ್ರೆಯಲ್ಲಿ ನಿಸ್ವಾರ್ಥ ಸೇವೆಮಾಡುವುದರೊಂದಿಗೆ ಕುಟುಂಬದವರ ಮನಗೆದ್ದ ಡಾ. ಸಾರ ನೌಶಾದ್.ಹಾಗೂ ಸಿಬ್ಬಂದಿ

*ತಮ್ಮ ಸೇವೆಗೆ ಅಭಿನಂದನೆಗಳು*

✍🏻 *ಬದ್ರುದ್ದೀನ್ ಉಳ್ಳಾಲ್*

ಆತ್ಮೀಯರೆ ನಿನ್ನೆಯ ದಿನ ರಾತ್ರಿ ನಾನು ಒಬ್ಬರು ಮಹಿಳೆಯನ್ನು ಹೆರಿಗೆಗೆಂದು ಉಳ್ಳಾಲದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಸುಮಾರು 2 ಗಂಟೆಯ ಹೊತ್ತಿಗೆ ಆ ಮಧ್ಯ ರಾತ್ರಿಯ ತುರ್ತು ಸಂಧರ್ಭದಲ್ಲಿ ಮತ್ತು ಪ್ರಸಕ್ತ ಈಗಿನ ಪರಿಸ್ಥಿತಿಯಲ್ಲಿ ಎಲ್ಲಿಗೆ ಕರೆದುಕೊಂಡು ಹೋಗುವುದೆಂದು ಬೇರೆ ದಾರಿ ಕಾಣದೆ ಉಳ್ಳಾಲ ಸರ್ಕಾರಿ ಆಸ್ಪತ್ರೆಗೆ ದಾಖಲುಮಾಡಿದೆ.  ಅನುಗ್ರಹದಿಂದ ಯಾವ ತೊಂದರೆ ಇಲ್ಲದೆ, ದೊಡ್ಡ ಖರ್ಚಿಲ್ಲದೆ ಮಹಿಳೆಯ ಹೆರಿಗೆಯಾಯಿತು. ಈ ಸಂದರ್ಭದಲ್ಲಿ ನನಗೆ *ಕೈಕೊ ಕೌನ್ಸಿಲರ್ ಬಶೀರ್ ರವರು ಉತ್ತಮವಾದ ಸಹಾಯನ್ನು ಮಾಡಿದ್ದಾರೆ* ಮತ್ತು *ಇದಕ್ಕೆ ಆ ಮಧ್ಯ ರಾತ್ರಿಯಲ್ಲಿ ಸಹಕರಿಸಿದ ಡಾ. ಸಾರ ನೌಶಾದ್.    ಹಾಗೂ ಸಿಬ್ಬಂದಿ   ಸೇವೆಗೆ ಅಭಿನಂದನೆ* ಇಂತಹ ವೈದ್ಯರನ್ನು ನಾವು ಗುರುತಿಸಲೇಬೇಕು.

*ಆದರೆ ಇಲ್ಲಿ ನಾವು ಈ ಸಮಯದಲ್ಲಿ ಎಚ್ಚೆತ್ತುಕೊಳ್ಳಬೇಕಾದ ಒಂದು ವಿಚಾರ ಈ ಮೂಲಕ ಊರಿನ ಜನತೆಯಲ್ಲಿ ಹೇಳಲಿಚ್ಚಿಸುತ್ತೇನೆಂದರೆ*
ನಮ್ಮ ಊರು ಉಳ್ಳಾಲದಲ್ಲಿ ಉತ್ತಮವಾದ ಸರ್ಕಾರಿ ಆಸ್ಪತ್ರೆ ಇರುವುದು ನಮಗೆಲ್ಲಾ ಹೆಮ್ಮೆಯ ವಿಚಾರ ಆದರೆ ಇಲ್ಲಿ ಸುಮಾರು ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಎಲ್ಲಾ ವ್ಯವಸ್ಥೆಗಳು ಇಲ್ಲಿ ಸರಿಯಾಗಿ ಉತ್ತಮ ರೀತಿಯಲ್ಲಿದ್ದರೆ ನಮ್ನೂರಿನ ಜನತೆ ಯಾವ ಖಾಸಗಿ ಆಸ್ಪತ್ರೆಗೆ ಹೋಗಿ ಕೈಯಲ್ಲಿಲ್ಲದ ಹಣವನ್ನು ಖರ್ಚು ಮಾಡು ಅವಶ್ಯಕತೆಯೇ ಇಲ್ಲ.

ಆದ್ದರಿಂದ ನಾನು ಮನವಿ ಮಾಡುವುದೇನೆಂದರೆ ನಾವೆಲ್ಲಾ ಒಟ್ಟಾಗಿ ಇದಕ್ಕೆ ಪರಿಹಾರ ಕಾಣಬೇಕು ಉತ್ತಮ ಸೌಲಭ್ಯವಿರುವ ಆಸ್ಪತ್ರೆಯನ್ನಾಗಿ ಮಾರ್ಪಡಿಸುವ ಜವಾಬ್ದಾರಿ ನಮ್ಮಲ್ಲಿದೆಯೆಂದು ಈ ಮೂಲಕ ಹೇಳುತ್ತಿದ್ದೇನೆ.