• ಯಾವ ವ್ಯಕ್ತಿಗೆ ಕೋವಿಡ್ ಪರೀಕ್ಷೆ ದೃಢಪಟ್ಟಿದೆಯೋ ಅವರಿಗೆ ಈ ಕೆಳಕಂಡ
ನಿಬಂಧನೆಗೊಳಪಟ್ಟು “ಮನೆಯಲ್ಲೇ ಪ್ರತ್ಯೇಕ”
ವಾಗಿರುವುದಕ್ಕೆ ಅನುಮತಿ ನೀಡಲಾಗಿದೆ:
• ಕೋವಿಡ್ ಸೋಂಕಿನ ಲಕ್ಷಣ ರಹಿತರು ಲಕ್ಷಣ ಅಥವಾ ಸೌಮ್ಯ ಲಕ್ಷಣಗಳಿವೆಯೋ
ಅಂಥವರಿಗೆ ಮಾತ್ರ ಮನೆಯಲಿ್ಲ
ಪ್ರತ್ಯೇಕವಾಗಿರಲು ಅನುಮತಿ ನೀಡಲಾಗುವುದು.
• ಅವರಿಗೆ ಮನೆಯಲಿ್ಲ
ಪ್ರತ್ಯೇಕವಾಗಿರುವ ಶಿಷ್ಠಾ
ಚಾರದ ಬಗ್ಗೆ ತಿಳುವಳಿಕೆ
ನೀಡಲಾಗುವುದು.
• ಮನೆಯಲಿ್ಲ
ಪ್ರತ್ಯೇಕವಾಗಿರಿಸುವಿಕೆಗೆ ಮನೆಯು ಸೂಕ್ತವಾಗಿದೆಯೆ ಎಂಬುದರ ಬಗ್ಗೆ
ಅಧಿಕಾರಿಗಳು ಪರಿಶೀಲಿಸಿ, ಮನೆಯಲಿ್ಲ
ಪ್ರತ್ಯೇಕವಾಗಿರುವ ಇಡೀ ಅವಧಿಯಲಿ

ವ್ಯಕ್ತಿಯನ್ನು ದೈನಂದಿನ ಅನುಸರಣೆ ಮಾಡಲು ಅನುಕೂಲವಾಗುವಂತೆ ಟೆಲಿ-
ಕನ್‍ಸಲ್ಟೇಷನ್ಸ್ ಸಂಪರ್ಕವನ್ನು ಸ್ಥಾಪಿಸಲಾಗುವುದು.
• ಮನೆಯಲಿ್ಲ
ಪ್ರತ್ಯೇಕವಾಗಿರುವ ವ್ಯಕ್ತಿಯು ಪ್ರತಿ ದಿನ ವೈದ್ಯರಿಗೆ/ ಆರೋಗ್ಯ
ಅಧಿಕಾರಿಗಳಿಗೆ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ವರದಿ ಮಾಡುವುದು.
• ಇಂತಹ ವ್ಯಕ್ತಿಗಳು ಪಲ್ಸ್ ಆಕ್ಸಿಮೀಟರ್, ಡಿಜಿಟಲ್ ಥರ್ಮಾ ಮೀಟರ್ ಮತ್ತು
ವೈಯಕ್ತಿಕ ರಕ್ಷಣಾ ಸಲಕರಣೆಗಳನ್ನು ಹೊಂದಿರಬೇಕು.
• ಮನೆಯಲಿ್ಲ
ಪ್ರತ್ಯೇಕವಾಗಿರುವ ವ್ಯಕ್ತಿಯನ್ನು ಬಿಡುಗಡೆಮಾಡುವುದು, ಪ್ರಸ್ತುತ
ಕೋವಿಡ್-19 ಬಿಡುಗಡೆ ರಾಜ್ಯ ಸರ್ಕಾರದ ಶಿಷ್ಠಾ
ಚಾರದಂತೆ ಇರುತ್ತದೆ.
• ಮನೆಯಲಿ್ಲ
ಪ್ರತ್ಯೇಕವಾಗಿರಿಸುವುದು ಕುಟುಂಬದ ಸದಸ್ಯರಿಗೆ, ಅಕ್ಕ-
ಪಕ್ಕದಮನೆಯವರಿಗೆ, ಚಿಕಿತ್ಸೆ ನೀಡುವ ವೈದ್ಯರಿಗೆ ಹಾಗೂ ಸ್ಥಳೀಯ
ಆರೋಗ್ಯಾಧಿಕಾರಿಗಳಿಗೆ ತಿಳಿದಿರತಕ್ಕದ್ದು

ವ್ಯಕ್ತಿಯ ಮನೆಯಲಿ್ಲ ಆರೋಗ್ಯ ತಂಡದಿಂದ ನಡೆಸಲಾಗುವ ಪ್ರಾಥಮಿಕ
ಪರಿಶೀಲನೆ ಹಾಗೂ ಟ್ರಯೇಜ್
• ಮನೆಯಲಿ್ಲ
ಪ್ರತ್ಯೇಕವಾಗಿರುವ ವ್ಯಕ್ತಿಯು ತನ್ನ ಮನೆಯಲಿ್ಲ ಇತರರಿಂದ
ಪ್ರತ್ಯೇಕವಾಗಿ ಒಂದು ಕೊಠಡಿಯಲ್ಲಿರುವುದು.
• ಮನೆಯಲಿ್ಲ
ಪ್ರತ್ಯೇಕವಾಗಿರಿಸುವಿಕೆಗೆ ಮನೆಯು ಸೂಕ್ತವಾಗಿದೆಯೆ ಹಾಗೂ
ವ್ಯಕ್ತಿಯ ಟ್ರಯೇಜ್ ಪರಿಶೀಲಿಸಲು ಆರೋಗ್ಯ ತಂಡ ಮನೆಗೆ ಭೇಟಿ ನೀಡುತ್ತಾರೆ.
• ಹಾಗೂ ಈ ಲಕ್ಷಣಗಳಿಗಾಗಿ ವಿಚಾರಿಸುತ್ತಾರೆ: ಜ್ವರ, ಶೀತ, ಕೆಮ್ಮು, ಗಂಟಲು
ನೋವು, ಉಸಿರಾಟದ ತೊಂದರೆ ಇತ್ಯಾದಿ.
ಆರೋಗ್ಯ ಸಿಬ್ಬಂದಿಗಳು ಈ ಕೆಳಕಂಡ ಅಂಶಗಳಿಗಾಗಿ ಪರಿಶೀಲನೆ ಮಾಡುತ್ತಾರೆ
(ಟ್ರಯೇಜ್)
• ಶರೀರದ ತಾಪಮಾನದ ಅಳತೆ
• ನಾಡಿಮಿತಕ್ಕಾಗಿ ಪಲ್ಸ್ ಆಕ್ಸಿಮೆಟ್ರಿ
• ರಕ್ತದಲ್ಲಿನ ಸಕ್ಕರೆಯ ಅಂಶ ಪತ್ತೆಗಾಗಿ ಗ್ಲೂಕೋ ಮೀಟರ್
• ರಕ್ತದ ಒತ್ತಡದ ಮಾಪಕದಂತೆ ರಕ್ತದ ಒತ್ತಡದ ದಾಖಲೆ
• ಇತರ ಆರೋಗ್ಯ ಸಮಸ್ಯೆಗಳ ಬಗ್ಗೆ ವಿಚಾರಣೆ
• ಟೆಲಿ-ಮಾನಿಟರಿಂಗ್ ಸಂಪರ್ಕ ಕೇಂದ್ರಕ್ಕೆ ವ್ಯಕ್ತಿಯನ್ನು ಸಂಪರ್ಕಿಸುವುದು.ಮನೆಯಲಿ್ಲ
ಪ್ರತ್ಯೇಕವಾಗಿರಿಸಲು ಅರ್ಹತೆಗಳು
• ವ್ಯಕ್ತಿಯು ಲಕ್ಷಣ ರಹಿತ / ಸೌಮ್ಯವಾದ ಲಕ್ಷಣಗಳಿವೆ ಎಂದು ಚಿಕಿತ್ಸೆ ನೀಡುವ ವೈದ್ಯಾಧಿಕಾರಿ/
ವೈದ್ಯರು ಪರೀಕ್ಷೆ ನಡೆಸಿದ ದೃಢಪಡಿಸುವರು.
• ಇಂತಹ ವ್ಯಕ್ತಿಗಳು ಮನೆಯಲಿ್ಲ
ಪ್ರತ್ಯೇಕವಾಗಿರಲು ಅಗತ್ಯವಿರುವ ಸೌಲಭ್ಯಗಳನ್ನು ಮನೆಯಲಿ್ಲ
ಹೊಂದಿರುತಕ್ಕದ್ದು.
• 24*7 ಅವಧಿಗೆ ಅಂದರೆ ಯಾವಾಗಲೂ ಆರೈಕೆ ನೀಡಲು ಒಬ್ಬರು ಆರೈಕೆದಾರರು ಇರತಕ್ಕದ್ದು,
• ಸತತ ಸಂಪರ್ಕವಿರುವುದು ಪೂರ್ವಭಾವಿ ಅಗತ್ಯವಾಗಿರುತ್ತದೆ.
• ಸೌಮ್ಯ ಸ್ವರೂಪದ ಜ್ವರ < 380 ಅ (< 100.40 ಈ)
• ಆಮ್ಲಜನಕದ ಪರ್ಯಾಪ್ತತೆಯು > 95% ಇರತಕ್ಕದ್ದು.
• ವಯಸ್ಸು 60 ವರ್ಷಕ್ಕಿಂತ ಕಡಿಮೆ ಇರತಕ್ಕದ್ದು.
• ಇತರ ಆರೋಗ್ಯ ಸಮಸ್ಯೆಗಳಾದ ಅಧಿಕ ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಬೊಜ್ಜು, ಥೈರಾಯಿಡ್
ಕಾಯಿಲೆಗಳಿದ್ದು, ಹಾಗೂ ವೈದ್ಯಾಧಿಕಾರಿಗಳು / ವೈದ್ಯರ ಮೌಲ್ಯ ಮಾಪನದಂತೆ , ಈ ಆರೋಗ್ಯ
ಸಮಸ್ಯೆಗಳು ನಿಯಂತ್ರಣಲ್ಲಿದ್ದು, ಮನೆಯಲ್ಲಿಯೇ ನಿರ್ವಹಿಸಬಹುದಾದರೆ.
• ಇತರ ಯಾವುದೇ ಆರೋಗ್ಯ ಸಮಸ್ಯೆಗಳು ಇಲ್ಲದಿದ್ದಲಿ್ಲ
• ವ್ಯಕ್ತಿಯ ಸ್ವಯಂ- ಪ್ರತ್ಯೇಕವಾಗಿರುವ ಬಗ್ಗೆ ಸಹಿ ಮಾಡಿರುವ ಒಂದು ಮುಚ್ಚಳಿಕೆ ಪತ್ರವನ್ನು
ನೀಡಿದಾಗ.
• ವ್ಯಕ್ತಿಯು ತನ್ನ ಆರೋಗ್ಯ ಸ್ಥಿತಿಯನ್ನು ಉಸ್ತುವಾರಿ ಮಾಡಲು ಒಪ್ಪಿದಾಗ.
• ಹೆರಿಗೆಯ ನಿರೀಕ್ಷಿತ ದಿನಾಂಕಕ್ಕೆ 4 ವಾರಗಳೊಳಗೆ ಇರುವ ಗರ್ಭಿಣಿಯರಿಗೆ ಮನೆಯಲಿ್ಲ
ಪ್ರತ್ಯೇಕವಾಗಿರುವುದಕ್ಕೆ ಅನುಮತಿ ಇರುವುದಿಲ್ಲ.

ಹೆಚ್ಚಿನ ಆರೋಗ್ಯ ಸಲಹೆಯನ್ನು ಯಾವಾಗ ಪಡೆಯಬೇಕು
ಈ ಕೆಳಕಂಡ ಲಕ್ಷಣಗಳು ಹಾಗೂ ಚಿನ್ಹೆಗಳು ಕಂಡು ಬಂದ ಕೂಡಲೇ
• ಉಸಿರಾಟದ ತೊಂದರೆ
• ಬೆರಳ ತುದಿಯ ಆಕ್ಸಿ ಮೀಟರ್‍ನಲಿ್ಲ ಆಮ್ಲಜನಕದ ಪರ್ಯಾಪ್ತತೆ ಶೇಕಡಾ 94 ಅಥವಾ
ಅದಕ್ಕಿಂತ ಕಡಿಮೆ.
• 24 ಗಂಟೆಗಳ ಕಾಲ ಅಥವಾ ಅದಕ್ಕೂ ಹೆಚ್ಚು ಕಾಲ ಸತತ ಜ್ವರ ≥380 ಅ (100.40 ಈ)
• ಎದೆಯಲಿ್ಲ
ಸತತವಾದ ನೋವು / ಒತ್ತಡ
• ಮಾನಸಿಕ ಅಸ್ಪಷ್ಟತೆ ಅಥವಾ ಪ್ರತಿಕ್ರಯಿಸಲು ಅಸಮರ್ಥತೆ
• ಮಂದವಾದ ಮಾತು / ನಡುಕ
• ಮುಖ ಅಥವಾ ಕೈಕಾಲುಗಳಲ್ಲಿ ನಿಶ್ಯಕ್ತತೆ ಅಥವಾ ಜೋಮು ಹಿಡಿಯುವಿಕೆ
• ಮುಖ / ತುಟಿಗಳು ನೀಲಿಗಟ್ಟುವಿಕೆ
• ವ್ಯಕ್ತಿಯು ಗಂಭೀರವೆಂದು ಪರಿಗಣಿಸಬಹುದಾದ ಇತರ ಯಾವುದೇ ಲಕ್ಷಣಗಳು
• ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆಯಂತೆ

ಮನೆಯಲ್ಲಿ ಪ್ರತ್ಯೇಕವಾಗಿರುವ ವ್ಯಕ್ತಿಯು ಪಾಲಿಸಬೇಕಾದ ಸೂಚನೆಗಳು
• ಮನೆಯಲ್ಲಿ ಪ್ರತ್ಯೇಕವಾಗಿರುವ ವ್ಯಕ್ತಿಯು ವೈದ್ಯಕೀಯ ಮಾಸ್ಕ್ / ಎನ್ – 95 ಮಾಸ್ಕ್ ಅನ್ನು ಯಾವಾಗಲೂ
ಧರಿಸುವುದು.
•ಪ್ರತ್ಯೇಕವಾಗಿರುವ ವ್ಯಕ್ತಿಯು ಮನೆಯಲ್ಲಿ ಗುರುತಿಸಿ, ನಿಗದಿ ಪಡಿಸಿರುವ ಕೊಠಡಿಯಲ್ಲಿಯೇ ಇರಬೇಕು ಹಾಗೂ
ಇತರರೊಂದಿಗೆ 2 ಮೀಟರ್ ಅಥವಾ 6 ಅಡಿಯ ಅಂತರವನ್ನು ಕಡ್ಡಾಯವಾಗಿ ಪಾಲಿಸಲೇಬೇಕು.
• ಈ ವ್ಯಕ್ತಿಯು ಅಗತ್ಯ ವಿಶ್ರಾಂತಿಯನ್ನು ಪಡೆಯಬೇಕು ಹಾಗೂ ಹೆಚ್ಚಿನ ದ್ರವಾಹಾರವನ್ನು ಸೇವಿಸಬೇಕು.
•ಕೆಮ್ಮುವಾಗ / ಸೀನುವಾಗ ಶಿಷ್ಟಾಚಾರವನ್ನು (ಕರವಸ್ತ್ರ/ಟಿಶ್ಯೂ/ ಮೊಣಕೈ) ವನ್ನು ಪಾಲಿಸಿ.
•ಸೋಪು ಹಾಗೂ ನೀರಿನಿಂದ ಕನಿಷ್ಠ
40 ಸೆಕೆಂಡುಗಳ ಕಾಲ ಕೈಯನ್ನು ಆಗಾಗ್ಗೆ ತೊಳೆಯಿರಿ.
•ನೀವು ವೈಯಕ್ತಿಕವಾಗಿ ಬಳಸುವ ಪಾತ್ರೆಗಳು, ಬಟ್ಟೆ, ಟವೆಲ್‍ಗಳು, ಇತ್ಯಾದಿಗಳನ್ನು ಕುಟುಂಬದ ಇತರ
ಸದಸ್ಯರೊಂದಿಗೆ ಹಂಚಿಕೊಳ್ಳಬೇಡಿ. ಅವುಗಳನ್ನು ಪ್ರತ್ಯೇಕವಾಗಿಡಿ.
• ನಿಮ್ಮ ಕೊಠಡಿಯಲ್ಲಿರುವ ಪದೇ ಪದೇ ಮುಟ್ಟುವ ವಸ್ತುಗಳನ್ನು ಸ್ವಚ್ಛಗೊಳಿಸಿ.
•ಸ್ನಾನಗೃಹ ಹಾಗೂ ಶೌಚಾಲಯವನ್ನು ದಿನಕ್ಕೆ ಒಂದು ಬಾರಿಯಾದರೂ ಸ್ವಚ್ಛಗೊಳಿಸಿ ಹಾಗೂ
ಸೋಂಕುರಹಿತವಾಗಿಸಿ.
•ವೈದ್ಯರ ಸಲಹೆಗಳು ಹಾಗೂ ಔಷಧೋಪಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು
•ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್ ಮತ್ತು ಡಿಜಿಟಲ್ ಥರ್ಮಾಮೀಟರ್‍ನ ಸಹಾಯದಿಂದ ವ್ಯಕ್ತಿಯು ತನ್ನ
ಆರೋಗ್ಯ ಸ್ಥಿತಿಯನ್ನು ಪ್ರತಿದಿನ ಸ್ವಯಂ ನಿಗಾವಣೆ ಮಾಡಬೇಕು.
• ಆರೋಗ್ಯ ಸ್ಥಿತಿಯಲಿ್ಲ ಗಂಭೀರ ಸ್ವರೂಪದ ಯಾವುದಾದರೂ ಲಕ್ಷಣಗಳು ಕಂಡುಬಂದಲ್ಲಿ ತಡಮಾಡದೆ ವರದಿ
ಮಾಡಬೇಕು.
•ವ್ಯಕ್ತಿಯು ಆರೋಗ್ಯಕರ ಹಾಗೂ ಪೌಷ್ಠಿ
ಕ ಆಹಾರವನ್ನು ಸೇವಿಸಬೇಕು.
•ಧೂಮಪಾನ, ತಂಬಾಕು ಜಗಿಯುವುದು ಹಾಗೂ ಮದ್ಯಪಾನವನ್ನು ಕಡ್ಡಾಯವಾಗಿ ನಿರ್ಬಂಧಿಸುವುದು.
•ಅಗತ್ಯವಿದ್ದಲ್ಲಿ ಆಪ್ತ ಸಮಾಲೋಚನೆಯನ್ನು ಪಡೆಯುವುದು.
•ಆರೋಗ್ಯ ಸೇತು ತಂತ್ರಾಂಶವನ್ನು
ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬೇಕು ಹಾಗೂ ಈ ತಂತ್ರಾಂಶವನ್ನು ವೈ-ಫೈ ಅಥವಾ ಬ್ಲೂ ಟೂಥ್‍ನ
ಮೂಲಕ ಯಾವಾಗಲೂ ಕ್ರಿಯಾಶೀಲವಾಗಿಡಬೇಕು.

ಮನೆಯಲ್ಲಿಯೇ ಪ್ರತ್ಯೇಕವಾಗಿರುವ ವ್ಯಕ್ತಿಯನ್ನು ಬಿಡುಗಡೆ ಮಾಡುವ ಸಂದರ್ಭ
•ಸೋಂಕಿನ ಲಕ್ಷಣಗಳು ಕಾಣಿಸಿಕೊಂಡು 17 ದಿನಗಳ ನಂತರ ( ಲಕ್ಷಣ ರಹಿತರಿಗೆ ಮಾದರಿ
ಸಂಗ್ರಹಿಸಿದ ದಿನಾಂಕದಿಂದ) ಅಥವಾ 3 ದಿನಗಳ ಕಾಲ ಜ್ವರ ಕಾಣಿಸಿಕೊಳ್ಳದಿದ್ದಲ್ಲಿ.
• ಈ ಕೆಳಕಂಡ ಮಾನದಂಡಗಳಿರುವ ಸಂದರ್ಭದಲಿ್ಲ
o ಸೋಂಕಿನ ಯಾವುದೇ ಲಕ್ಷಣಗಳಿಲ್ಲದಿದ್ದರೆ.
o ಜ್ವರ ಕಾಣಿಸಿಕೊಳ್ಳದಿದ್ದರೆ (≤ 37.50ಅ ಅಥವಾ ≤99.50 ಈ )
o 95% ಕ್ಕಿಂತ ಹೆಚ್ಚಿನ ಆಕ್ಸಿಜನ ಸ್ಯಾಚುರೇಷನ್ ಇದ್ದಲಿ್ಲ
o ಉಸಿರಾಟದ ದರ ಪ್ರತಿ ನಿಮಿಷಕ್ಕೆ 24 ಕ್ಕಿಂತ ಕಡಿಮೆ ಇದ್ದಲಿ್ಲ
• ಮನೆಯಲಿ್ಲ
ಪ್ರತ್ಯೇಕವಾಗಿರುವ ಅವಧಿ ಮುಗಿದ ನಂತರ ಖಖಿ-Pಅಖ/ಅಃಓಂಂಖಿ/ಖಿಡಿue-ಓಂಖಿ
ಪರೀಕ್ಷೆಯ ಅಗತ್ಯವಿರುವುದಿಲ್ಲ.
• ವ್ಯಕ್ತಿಯು ಮನೆಯಲಿ್ಲ
ಪ್ರತ್ಯೇಕವಾಗಿರುವ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿದಾಗ
ಮಾತ್ರವೇ, ಅವನ/ ಅವಳ ದೈನಂದಿನ ಕರ್ತವ್ಯಗಳನ್ನು ಪುನರಾರಂಭಿಸಬಹುದು.
• ಅವನ / ಅವಳ ಆರೋಗ್ಯ ಸ್ಥಿತಿಯ ದೃಢೀಕರಣ ಪತ್ರವನ್ನು ಸ್ಥಳೀಯ ವೈದ್ಯಾಧಿಕಾರಿಗಳು
(ಪ್ರಾಥಮಿಕ ಆರೋಗ್ಯ ಕೇಂದ್ರ/ನಗರ ಪ್ರಾಥಮಿಕ ಆರೋಗ್ಯ ಕೇಂದ್ರ/ ಸಮುದಾಯ ಆರೋಗ್ಯ
ಕೇಂದ್ರ/ಸಾರ್ವಜನಿಕ ಆಸ್ಪತ್ರೆ) ನೀಡಬೇಕು ( ಅನುಬಂಧ – 5).
• ಮನೆಯಲ್ಲಿಯೇ ಪ್ರತ್ಯೇಕವಾಗಿರುವ ವ್ಯಕ್ತಿಯು ಖಾಸಗಿ ಆಸ್ಪತ್ರೆಯ ಮೂಲಕ ದೈನಂದಿನ
ನಿಗಾವಣೆಯಲ್ಲಿದ್ದರೆ, ಅಂಥವರ ಬಿಡುಗಡೆಯ ಬಗ್ಗೆ ಸಂಬಂಧಪಟ್ಟ ಖಾಸಗಿ ಆಸ್ಪತ್ರೆಯವರು ಜಿಲ್ಲಾ
ಸರ್ವೇಕ್ಷಣಾಧಿಕಾರಿಗಳಿಗೆ ವರದಿ ನೀಡಬೇಕು.
• ಪ್ರತ್ಯೇಕವಾಗಿರುವ ಅವಧಿಯು ಮುಗಿದ ನಂತರ ಮನೆಯನ್ನು ಸೋಂಕುರಹಿತಗೊಳಿಸಬೇಕು.ಮಾಡಬೇಕಾದ್ದು:
• ಕೆಂಪು ಅಕ್ಕಿ / ಕುಸುಲಕ್ಕಿ / ಗೋಧಿ / ಓಟ್ಸ್ / ಸಿರಿ ಧಾನ್ಯಗಳನ್ನು ಸೇವಿಸುವುದು.
• ಪ್ರೋಟೀನ್ ಅಂಶ ಹೆಚ್ಚಿರುವ ದವಸ-ಧಾನ್ಯಗಳನ್ನು ಆಹಾರದಲಿ್ಲ
ಸೇರಿಸುವುದು.
• ತಾಜಾ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸುವುದು (ಕ್ಯಾರೆಟ್, ಬೀಟ್ ರೂಟ್, ಬೀನ್ಸ್, ಗಾಢ
ಬಣ್ಣದ ಇತರೆ ತರಕಾರಿ / ಹಣ್ಣು).
• 8-10 ಗ್ಲಾಸ್ ನೀರನ್ನು ಕುಡಿಯುವುದು (ನೀರು ವಿಷಯುಕ್ತ ಪದಾರ್ಥಗಳನ್ನು ದೇಹದಿಂದ
ಹೊರದೂಡಲು ಸಹಾಯಮಾಡುತ್ತದೆ.
• ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ವಿಟಮಿನ್ ‘ಸಿ’ ಹೆಚ್ಚಿರುವ ನಿಂಬೆ, ಕಿತ್ತಲೆ
ಇತ್ಯಾದಿಯನ್ನು ಸೇವಿಸುವುದು. ಶುಂಠಿ, ಬೆಳ್ಳುಳ್ಳಿ ಹಾಗೂ ಅಡಿಗೆ ಅರಿಶಿಣ ರೋಗ ನಿರೋಧಕ
ಶಕ್ತಿಯನ್ನು ಬಲಪಡಿಸುವ ನೈಸರ್ಗಿಕ ವಸ್ತುಗಳಾಗಿವೆ. ಇವನ್ನು ಅಡುಗೆಯಲಿ್ಲ ಯಥೇಚ್ಛವಾಗಿ
ಬಳಸುವುದು.
• ಮನೆಯಲಿ್ಲ
ತಯಾರಿಸಿದ ಆಹಾರ ಸೇವಿಸುವುದು.
• ತರಕಾರಿ ಹಣ್ಣುಗಳನ್ನು ಚೆನ್ನಾಗಿ ತೊಳೆದು ಬಳಸುವುದು.
• ಕೊಬ್ಬಿನ ಅಂಶ/ ಎಣ್ಣೆಯನ್ನು ಕಡಿಮೆ ಬಳಸುವುದು.
• ಕೊಬ್ಬಿನ ಅಂಶ ಕಡಿಮೆ ಇರುವ ಹಾಲು, ಮೊಸರನ್ನು ಬಳಸುವುದು ಇವುಗಳಲ್ಲಿ ಪ್ರೊಟಿನ್ ಮತ್ತು
ಕ್ಯಾಲ್ಸಿಯಂ ಅಂಶ ಹೆಚ್ಚಿರುತ್ತದೆ.
ಮಾಡಬಾರದ್ದು:
• ಮಧ್ಯಪಾನ/ ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸುವುದು.