*🍣Fennel flower (ಕರೀಜೀರಿಗೆ)*

*ಔಷಧೀಯ ಗುಣದ ಕರಿ ಜೀರಿಗೆ*

ಕೊರೊನಾದೊಂದಿಗೆ ಜೀವನ ನಡೆಸುವುದು ಅನಿವಾರ್ಯವಾಗಿದೆ

*ಕೊರೊನಾ ವೈರಸ್ ವಿರುದ್ಧ ಇಮ್ಯೂನಿಟಿ ಹೆಚ್ಚಿಸಲು ಔಷಧೀಯ ಗುಣದ ಕರಿ ಜೀರಿಗೆ ಬಳಸಿ*

ಬೆಳಿಗ್ಗೆ ಕಪ್ಪುಜೀರಿಗೆಗೆ ಜೇನು ಬೆರೆಸಿ ಕುಡಿಯಿರಿ….

ಸಾವು ಒಂದನ್ನು ಹೊರತು ಪಡಿಸಿ ಎಲ್ಲ ಬಗೆಯ ರೋಗಗಳನ್ನು ನಿಯಂತ್ರಿಸ ಬಲ್ಲದು ಕರಿ ಜೀರಿಗೆ ಎಂದು ಪ್ರವಾದಿ ಮಹಮ್ಮದ್ ಮುಸ್ತಫಾ (ಸ. ಅ) ಹೇಳಿದ್ದಾರೆ

ಇದು ಕರಿ ಜೀರಿಗೆಯ ಮಹತ್ವಕ್ಕೆ ಸಾಕ್ಷಿ

ಜೀರಿಗೆ ಬಗ್ಗೆ ನೀವೆಲ್ಲ ಕೇಳಿದ್ದೀರಿ ಬಳಸುತ್ತೀರಿ ಕೂಡ ಆದರೆ ಕರಿ ಜೀರಿಗೆ ಏನಿದು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ ಅದಕ್ಕೆ ಕಾರಣಗಳು ಇಲ್ಲ ಎಂದಲ್ಲ ಏಕೆಂದರೆ ಈಗಲೂ ಜನ ಸಾಮಾನ್ಯರ ಮಟ್ಟಿಗೆ ಕರಿ ಜೀರಿಗೆ ಅಪರಿಚಿತ ಅದರ ಬಗ್ಗೆ ಮಾಹಿತಿ ಬಳಕೆ ಗೌಣ ದಕ್ಷಿಣ ಭಾರತಕ್ಕೆ ಬಂದರೆ ಕರಿ ಜೀರಿಗೆ ಇಂದಿಗೂ ಬಳಕೆಯಾಗದ ಒಂದು ಅನಾಮಧೇಯ ವಸ್ತು

ಆದರೆ ವಾಸ್ತವವಾಗಿ ಇದಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ

ಆಹಾರಕ್ಕಿಂತ ಔಷಧೀಯ ಗುಣಕ್ಕೆ ಹೆಸರಾದ ಕರಿ ಜೀರಿಗೆಯನ್ನು ಹಿಂದಿಯಲ್ಲಿ ಕಾಲಾಜೀರಾ ಕಲೋಂಜಿ ಸಂಸ್ಕೃತದಲ್ಲಿ ಕೃಷ್ಣಜೀರಾ ಎಂದು ಕರೆಯುತ್ತಾರೆ

ಮೇಲ್ನೋಟಕ್ಕೆ ಅತಿರಂಜಿತ ವಿಷಯ ಎನಿಸಬಹುದಾದರೂ ಥೈಮೊಕ್ವಿನೋನ್ ಥೈಮೋಲ್ ಥೈಮೋ ಹೈಡ್ರೊಕ್ವಿನೋನ್ ಸೇರಿದಂತೆ ನೂರಕ್ಕೂ ಮಿಗಿಲಾಗಿ ಔಷಧೀಯ ಗುಣಗಳನ್ನು ಇದು ಹೊಂದಿದೆ ಇವುಗಳಲ್ಲಿ ಥೈಮೊಕ್ವಿನೋನ್‌ಗೆ ಬ್ರಾಂಕೊಡಿಯಲೇಷನ್ ಗುಣ ಧರ್ಮವಿದ್ದು ಶ್ವಾಸಕೋಶದ ಸೂಕ್ಷ್ಮನಾಳಗಳನ್ನು ಹಿಗ್ಗಿಸುವ ಸಾಮರ್ಥ್ಯ ಹೊಂದಿರುವುದರಿಂದ ಆಸ್ತಮಾ ರೋಗಿಗಳಿಗೆ ಒಂದು ರೀತಿಯಲ್ಲಿ ದಿವ್ಯೌಷಧಿಯೇ ಸರಿ

*ಕಪ್ಪು ಜೀರಿಗೆಯಲ್ಲಿದೆ ಊಹೆಗೂ ನಿಲುಕದ ಪ್ರಯೋಜನಗಳು*

ಕಾಲಾಜೀರಾ ಅಥವಾ ಕಲೋಂಜಿ ಎಂದೂ ಕರೆಯಲ್ಪಡುವ ಕಪ್ಪು ಜೀರಿಗೆ ಅಡುಗೆಯ ರುಚಿ ಹೆಚ್ಚಿಸುವಲ್ಲಿ ತನ್ನದೇ ಆದ ಪಾತ್ರವನ್ನು ವಹಿಸುತ್ತದೆ ಅಡುಗೆಗೆ ವಿಶಿಷ್ಟ ಪರಿಮಳ ಹಾಗೂ ರುಚಿ ನೀಡುವ ಕರಿಜೀರಿಗೆಯನ್ನು ತರಕಾರಿ ಸಾರು, ದಾಲ್ ಹಾಗೂ ಇತರ ಮಸಾಲೆಯುಕ್ತ ಖಾದ್ಯಗಳಲ್ಲಿ ಬಳಸಲಾಗುತ್ತದೆ ಇದರ ಪರಿಮಳ ಮತ್ತು ರುಚಿಯ ಹೊರತಾಗಿ ಕಪ್ಪು ಜೀರಿಗೆಯಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳೂ ಇವೆ

ಈ ಪುಟ್ಟ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ನುಗಳು ಪ್ರೋಟೀನುಗಳು ಕರಗದ ನಾರು ಕಬ್ಬಿಣ ಸೋಡಿಯಂ, ಪೊಟ್ಯಾಶಿಯಂ ಹಾಗೂ ಕ್ಯಾಲ್ಸಿಯಂ ಇವೆ ಆಯುರ್ವೇದದಲ್ಲಿ ಕಪ್ಪು ಜೀರಿಗೆಯನ್ನು ಔಷಧಿಯ ರೂಪದಲ್ಲಿ ನೂರಾರು ವರ್ಷಗಳಿಂದ ಬಳಸಲಾಗುತ್ತಿದೆ ಇದರ ಆ್ಯಂಟಿ ಆಕ್ಸಿಡೆಂಟು ಗುಣ ದೇಹದೊಳಗೆ ಹಾಗೂ ಚರ್ಮದ ಮೇಲೆ ಉಂಟಾಗಿರುವ ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ

*ಅಸ್ತಮಾ ಮತ್ತು ಅಲರ್ಜಿಯಿಂದ ಪರಿಹಾರ ಒದಗಿಸುತ್ತದೆ*

ಅಸ್ತಮಾ ಹಾಗೂ ಇತರ ಶ್ವಾಸನಾಳಗಳಿಗೆ ಸಂಬಂಧಿಸಿದ ಅಲರ್ಜಿಗಳ ಹಾಗೂ ಇತರ ತೊಂದರೆಗಳಿಂದ ರಕ್ಷಿಸಲು ಕಪ್ಪು ಜೀರಿಗೆ ನೆರವಾಗುತ್ತದೆ ಅಲ್ಲದೇ ಉಸಿರಾಟದ ತೊಂದರೆ ಹಾಗೂ ಕಟ್ಟಿ ಕೊಂಡಿರುವ ಎದೆಯನ್ನು ನಿರಾಳ ಗೊಳಿಸಲೂ ನೆರವಾಗುತ್ತದೆ ಹೊಟ್ಟೆಯ ತೊಂದರೆಯನ್ನು ಸರಿಪಡಿಸುತ್ತದೆ ಒಂದು ವೇಳೆ ಅಜೀರ್ಣ ಅಥವಾ ಇನ್ನಾವುದೋ ಕಾರಣದಿಂದ ಹೊಟ್ಟೆ ಕೆಟ್ಟಿದ್ದರೆ ತಕ್ಷಣವೇ ಕೊಂಚ ಕಪ್ಪು ಜೀರಿಗೆಯನ್ನು ಜಗಿದು ನುಂಗುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ ಹೊಟ್ಟೆಯ ಸೆಳೆತ ವಾಯು ಪ್ರಕೋಪ ಹಾಗೂ ಹೊಟ್ಟೆಯುಬ್ಬರಿಕೆ ಮೊದಲಾದ ತೊಂದರೆಗಳಿಂದಲೂ ಕಪ್ಪು ಜೀರಿಗೆ ಪರಿಹಾರ ಒದಗಿಸುತ್ತದೆ

*ಕ್ಯಾನ್ಸರ್ ಬರುವುದರಿಂದ ತಡೆಯುತ್ತದೆ*

ಕಪ್ಪು ಜೀರಿಗೆಯ ಸೇವನೆಯಿಂದ ವಿಶೇಷವಾಗಿ ಸ್ತನ ಕ್ಯಾನ್ಸರ್‌ನ ಜೀವ ಕೋಶಗಳ ಬೆಳವಣಿಗೆಯನ್ನು ನಿಗ್ರಹಿಸುವ ಮೂಲಕ ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗುತ್ತದೆ ಅಲ್ಲದೇ ಬಾಯಿಯ ಕ್ಯಾನ್ಸರ್ ಕರುಳು ಹಾಗೂ ಗರ್ಭಕಂಠದ ಕ್ಯಾನ್ಸರ್‌ಬರುವುದ ರಿಂದಲೂ ರಕ್ಷಿಸುತ್ತದೆ

*ಯಕೃತ್‌ನ ಆರೋಗ್ಯ ವೃದ್ಧಿಸುತ್ತದೆ*

ಒಂದು ವೇಳೆ ನಿಮ್ಮ ಯಕೃತ್‌ನ ಕ್ಷಮತೆ ಕಡಿಮೆ ಯಾಗಿದ್ದರೆ ಇಂದಿನಿಂದಲೇ ನಿಯಮಿತವಾಗಿ ಕಪ್ಪು ಜೀರಿಗೆಯನ್ನು ಸೇವಿಸಲು ತೊಡಗಿ ಇದು ಯಕೃತ್‌ನ ಜೀವ ಕೋಶಗಳು ಮತ್ತೆ ತಮ್ಮ ಮೂಲ ಕ್ಷಮತೆಯನ್ನು ಪಡೆಯುತ್ತವೆ ಹಾಗೂ ಶೀಘ್ರವೇ ಯಕೃತ್ ತನ್ನ ಮೊದಲಿನ ಆರೋಗ್ಯ ಪಡೆಯಲು ನೆರವಾಗುತ್ತದೆ

*ಮಧುಮೇಹದಿಂದ ರಕ್ಷಿಸುತ್ತದೆ*

ಇದು ಪ್ರಾಯಶಃ ಕಪ್ಪು ಜೀರಿಗೆಯ ಅತಿ ಮುಖ್ಯ ಪ್ರಯೋಜನವಾಗಿದೆ ಕಪ್ಪು ಜೀರಿಗೆಯ ಸೇವನೆಯಿಂದ ಮಧು ಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಪ್ರಯೋಜನವಾಗುತ್ತದೆ ಎಂದು ಭಾವಿಸಲಾಗಿದೆ ಸಂಸ್ಥೆಯಲ್ಲಿ ನಡೆಸಿದ ಸಂಶೋಧನೆಯಲ್ಲಿ ಕಂಡು ಕೊಂಡಂತೆ ಮೇದೋಜೀರಕದಲ್ಲಿ ಉತ್ಪತ್ತಿಯಾಗುವ ಬೀಟಾ ಜೀವಕೋಶಗಳ ಸಂಖ್ಯೆಯಲ್ಲಿ ಇಳಿಕೆ ದೇಹದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಪ್ರಮಾಣ ಕಡಿಮೆಯಾಗಿದ್ದುದನ್ನು ಹೆಚ್ಚಿಸುವ ಹಾಗೂ ಮೇಲೇರಿರುವ ಗ್ಲುಕೋಸ್ ರಕ್ತಸಾರವನ್ನು ಕಡಿಮೆ ಗೊಳಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ವಿವರಿಸಲಾಗಿದೆ ದೇಹ ಗ್ಲುಕೋಸ್ ತಾಳುವ ಕ್ಷಮತೆಯನ್ನು ಹೆಚ್ಚಿಸುತ್ತದೆ ಹಾಗೂ ತನ್ಮೂಲಕ ಮಧುಮೇಹ ಆವರಿಸುವ ಸಾಧ್ಯತೆಯನ್ನು ದೂರಾಗಿಸುತ್ತದೆ

*ಮೂತ್ರ ಪಿಂಡಗಳನ್ನು ರಕ್ಷಿಸುತ್ತದೆ*

ಇಂದು ಮೂತ್ರ ಪಿಂಡಗಳಲ್ಲಿ ಕಲ್ಲು ಒಂದು ಸಾಮಾನ್ಯವಾಗಿ ಕಂಡು ಬರುತ್ತಿರುವ ಕಾಯಿಲೆಯಾಗಿದೆ ನಿಮ್ಮ ನಿತ್ಯದ ಆಹಾರದಲ್ಲಿ ಕಪ್ಪು ಜೀರಿಗೆಯನ್ನು ಸೇರಿಸಿ ಕೊಳ್ಳುವ ಮೂಲಕ ಮೂತ್ರ ಪಿಂಡಗಳಲ್ಲಿ ಕಲ್ಲುಗಳು ಕರಗುವುದು ಮಾತ್ರವಲ್ಲ ಇದರಿಂದ ಎದುರಾಗಿದ್ದ ಸೋಂಕು ಸಹಾ ಕಡಿಮೆಯಾಗುತ್ತದೆ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಸಾಮಾನ್ಯ ಮಟ್ಟಕ್ಕಿಂತ ಕೊಂಚವೇ ಹೆಚ್ಚಿನ ಸಂಕೋಚನ ಹಾಗೂ ವ್ಯಾಕೋಚನದ ಒತ್ತಡವಿದ್ದರೆ ಈ ಜೀರಿಗೆಯ ಸೇವನೆಯಿಂದ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯ ಎಂದು ಕೆಲವು ಸಂಶೋಧನೆಗಳು ಧೃಢಗೊಳಿಸಿವೆ ಅಧಿಕ ರಕ್ತ ದೊತ್ತಡವನ್ನು ಕಡಿಮೆಗೊಳಿಸಲು ಕಪ್ಪು ಜೀರಿಗೆ ಸಮರ್ಥವಾಗಿವೆ ಅಧಿಕ ರಕ್ತ ದೊತ್ತಡ ವಿರುವ ವ್ಯಕ್ತಿಗಳು ನಿಯಮಿತವಾಗಿ ಕಪ್ಪು ಜೀರಿಗೆಯನ್ನು ಸೇವಿಸಿದಾಗ ಅಧಿಕ ರಕ್ತದೊತ್ತಡ ಕಡಿಮೆ ಯಾಗಿರುವುದು ಕಂಡು ಬಂದಿದೆ

*ಸಂಧಿವಾತ ಹಾಗೂ ಮೂಳೆಸಂದುಗಳ ನೋವನ್ನು ಕಡಿಮೆಗೊಳಿಸುತ್ತದೆ*

ಕಪ್ಪು ಜೀರಿಗೆಯನ್ನು ನಿಯಮಿತವಾಗಿ ಸೇವಿಸುವ ಮೂಲಕ ಸಂಧಿವಾತ ಹಾಗೂ ಅ್ಟಠಿಜ್ಟಜಿಠಿಜಿ ಎಂಬ ಮೂಳೆ ಸಂದುಗಳ ನೋವಿನ ತೊಂದರೆ ಇರುವ ವ್ಯಕ್ತಿಗಳ ನೋವು ಕಡಿಮೆ ಯಾಗಿರುವುದು ಕಡಿಮೆಯಾಗಿದೆ

*ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಗೊಳಿಸುತ್ತದೆ*

ಕಪ್ಪು ಜೀರಿಗೆಯ ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿರುವುದು ಕಂಡು ಬಂದಿದೆ ಇದರಲ್ಲಿ ಆರೋಗ್ಯಕರ ಕೊಬ್ಬಿನ ಆಮ್ಲಗಳಿದ್ದು ದೇಹದಲ್ಲಿ ಒಟ್ಟೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳು ಸಂತುಲಿತ ಪ್ರಮಾಣದಲ್ಲಿರಲು ನೆರವಾಗುತ್ತದೆ

*ಚರ್ಮ ಮತ್ತು ಕೂದಲನ್ನು ಉತ್ತಮ ಗೊಳಿಸುತ್ತದೆ*

ಕಪ್ಪು ಜೀರಿಗೆಯಲ್ಲಿ ಕೂದಲು ಹಾಗೂ ಚರ್ಮವನ್ನು ಸೌಮ್ಯಗೊಳಿಸುವ ಗುಣವಿದ್ದು ಕೂದಲ ಬೆಳವಣಿಗೆಯನ್ನು ಸಹಾ ಹೆಚ್ಚಿಸುತ್ತದೆ ವಿಶೇಷವಾಗಿ ಮುಖದ ಚರ್ಮದ ಬುಡದಲ್ಲಿ ಆರ್ದ್ರತೆಯನ್ನು ಹೆಚ್ಚಿಸುವ ಮೂಲಕ ಚರ್ಮದಲ್ಲಿದ್ದ ಕಲೆಗಳನ್ನು ನಿವಾರಿಸಲೂ ನೆರವಾಗುತ್ತದೆ

*ಹಲ್ಲು ನೋವಿಗೆ*

ಇದರ ಉರಿಯೂತ ನಿವಾರಕ ಹಾಗೂ ಬ್ಯಾಕ್ಟೀ ರಿಯಾ ನಿವಾರಕ ಗುಣಗಳು ಹಲ್ಲು ನೋವನ್ನು ಗುಣಪಡಿಸುವ ಕ್ಷಮತೆ ಹೊಂದಿವೆ ಒಂದು ವೇಳೆ ಹಲ್ಲುನೋವಿದ್ದರೆ ಈ ಎಣ್ಣೆಯಿಂದ ನೋವಿರುವ ಭಾಗವನ್ನು ಬೆರಳಿನಿಂದ ನಯವಾಗಿ ಉಜ್ಜಿಕೊಳ್ಳುವ ಮೂಲಕ ಒಸಡುಗಳಲ್ಲಾಗಿದ್ದ ಸೋಂಕನ್ನು ನಿವಾರಿಸಿ ಹಲ್ಲು ನೋವನ್ನು ಹೋಗಲಾಡಿಸಬಹುದು.

*ಹೆಪಟೈಟಿಸ್ ರೋಗವನ್ನು ಗುಣಪಡಿಸ ಲು ಸಹಕಾರಿಯಾಗಿದೆ*

ಕರಿ ಜೀರಿಗೆಯ ತೈಲದ ಪರಿಣಾಮ ಯಕೃತ್‌ನ ತೊಂದರೆಗಳನ್ನು ನಿವಾರಿಸುವಲ್ಲಿ ಅತ್ಯಂತ ಉತ್ತಮವಾಗಿದೆ ಈ ಮೂಲಕ ಯಕೃತ್‌ಗೆ ಉಂಟಾಗಿರುವ ಘಾಸಿಯನ್ನು ಸರಿಪಡಿಸಲು ಹಾಗೂ ಯಕೃತ್‌ಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಲೂ ಸಾಧ್ಯ. ವಿಶೇಷವಾಗಿ ಈ ಮೂಲಕ ಎದುರಾಗುವ ಹೆಪಟೈಟಿಸ್-ಸಿ ಕಾಯಿಲೆಯ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ ಇದೇ ಕಾರಣಕ್ಕೆ ಹಲವು ಲಿವರ್ ಟಾನಿಕ್‌ಗಳಲ್ಲಿ ಈ ಎಣ್ಣೆಯನ್ನು ಪ್ರಮುಖವಾಗಿ ಬಳಸಲಾಗುತ್ತದೆ

*ಕಿವಿನೋವನ್ನು ಶಮನಗೊಳಿಸಲು*

ಈ ಬೀಜಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಸ್ ನಿರೋಧಕ ಗುಣಗಳು ಹಲವು ಸೋಂಕುಗಳಿಂದ ರಕ್ಷಣೆ ನೀಡುತ್ತದೆ ಇದರ ಉರಿಯೂತ ನಿವಾರಕ ಗುಣದ ಕಾರಣ ಕಿವಿಯಲ್ಲಿ ಸೋಂಕಿನಿಂದ ನೋವು ಉಂಟಾಗಿದ್ದರೆ ಈ ಎಣ್ಣೆಯನ್ನು ಕೆಲವು ತೊಟ್ಟು ಬಿಟ್ಟುಕೊಳ್ಳುವ ಮೂಲಕ ಕಡಿಮೆ ಮಾಡಬಹುದು

ಆರೋಗ್ಯದ ಬಗ್ಗೆ ಎಲ್ಲಾ ವಿವರಗಳನ್ನು ತಿಳಿಯಲು

🇫‌🇴‌🇷‌🇼‌🇦‌🇷‌🇩‌

*W🌎RLD Whatsapp✔*
*ನಮಗೆ ನಾವೇ ಮಾಧ್ಯಮ*