ಗುಲಾಮ್ ಮೆಹಮೂದ್ ಬನಾತ್’ವಾಲಾ ಸಾಹೇಬ್ 1933 ಆಗಸ್ಟ್ 15 ರಂದು ಮುಂಬಯಿಯಲ್ಲಿ ಜನಿಸಿ 25 ಜೂನ್ 2008 ರಂದು ಮುಂಬಯಿಯಲ್ಲಿ ಮರಣ ಹೊಂದಿದರು. ‌ಶಿಕ್ಷಣತಜ್ಞರಾಗಿದ್ದ ಅವರು ಕಾಲೇಜು ಅಧ್ಯಾಪಕರಾಗಿ  ತನ್ನ ಜೀವನ ವೃತಿ ಆರಂಭಿಸಿದರು.‌

ತದ ನಂತರ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗಿನ ಮೂಲಕ ರಾಜಕೀಯ ಪ್ರವೇಶಿಸಿ 1962 ರಲ್ಲಿ ಮುಂಬಯಿ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿಯಾಗಿ ಮುಂಬಯಿ ವಿಧಾನಸಭೆಗೆ ಉಮರ್ ಖಾಡಿ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ‌ 400 ಮತಗಳ ಅಂತರದಿಂದ ಪರಾಜಿತರಾದರು.‌ 1967 ಆ ಕ್ಷೇತ್ರದಲ್ಲೇ ಶಾಸಕರಾಗಿ ಆಯ್ಕೆಯಾಗಿ ಮುಂಬಯಿ ವಿಧಾನಸಭೆಯಲ್ಲಿ ಲೀಗಿನ ಖಾತೆ ತೆರೆದು ಚರಿತ್ರೆ ನಿರ್ಮಿಸಿದರು. ಉರ್ದು ಮತ್ತು ಇಂಗ್ಲೀಷಿನಲ್ಲಿ ನಿರರ್ಗಳವಾಗಿ ಬಾಷಣ ಮಾಡುವ ಮೂಲಕ 1977 ರಿಂದ 1999 ರ ತನಕ ಸತತವಾಗಿ ಏಳು ಸಲ ಕೇರಳದ ಪೊನ್ನಾಣಿಯಿಂದ ಪಾರ್ಲಿಮೆಂಟ್ ಸದಸ್ಯರಾದರು. 1986 ರಾಜೀವ್ ಗಾಂದಿ ಪ್ರಧಾನ‌ಮಂತ್ರಿಯಾದ ಸಂದರ್ಭದಲ್ಲಿ ಮುಸ್ಲಿಂ‌ ಮಹಿಳಾ ವಿವಾಹ ವಿಚ್ಛೇದನಾ ಸಂರಕ್ಷಣೆಯ ಬಗ್ಗೆ  ಲೋಕಸಭೆಯಲ್ಲಿ  ಅವರು ಮಂಡಿಸಿದ ಖಾಸಗಿ ಮಸೂದೆ ಖಾಯಿದೆಯಾಗಿ ಅಂಗೀಕರಿಸಲ್ಪಟ್ಟಿತ್ತು.

1973 ರಲ್ಲಿ ಸಿ.ಹೆಚ್ ಮೊಹಮ್ಮದ್ ಕೋಯಾರೊಂದಿಗೆ ಮುಸ್ಲಿಂ ಲೀಗ್ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ಬನಾತ್ವಾಲ 1994 ರಲ್ಲಿ‌ ಪಕ್ಷ ವಿಭಜನೆಗೊಂಡು ಸೇಠ್ ಸಾಹೇಬರು ನೇಶನಲ್ ಲೀಗ್ ಸ್ಥಾಪಿಸಿದಾಗ ಇವರು ಪಕ್ಷದ ರಾಷ್ಟ್ರಾಧ್ಯಕ್ಷರಾದರು.‌

ಮಾನ್ಯ ಬನಾತ್ವಾಲಾ ಸಾಹೇಬರು ಇಂಡಿಯನ್ ಮುಸ್ಲಿಮರ ಪಾಲಿಗೆ ಅಲ್ಲಾಹನು ನೀಡಿದ್ದ ಕೊಡುಗೆಯಾಗಿದ್ದರು.‌ ದೇಶದ ಯಾವುದೇ ಮೂಲೆಯಲ್ಲಿ ಮುಸ್ಲಿಂ ಮಕ್ಕಳ ಮೇಲೆ ಅನ್ಯಾಯವಾದಾಗ ಅದರ ವಿರುದ್ಧವಾಗಿ ಲೋಕಸಭೆಯಲ್ಲಿಯೂ ಹೊರಗೂ ಘರ್ಜಿಸುತ್ತಿದ್ದರು. ಅವರ ನಿಧನ ವಾರ್ತೆಯನ್ನು ರಾಷ್ಟ್ರದ ಪ್ರಮುಖ ಇಂಗ್ಲೀಷ್ ದೈನಿಕ ದಿ ಹಿಂದೂ ಪತ್ರಿಕೆ “ಎ ಗಿಪ್ಟೆಡ್ ಪಾರ್ಲಿಮೆಂಟೇರಿಯನ್” ಎಂಬ ತಲೆ ಬರಹದೊಂದಿಗೆ ವರದಿ ಪ್ರಕಟಿಸಿತ್ತು.

ಈ ಮಹಾನರ ಮಗ್ಫಿರತಿಗಾಗಿ ಮತ್ತು ಜನ್ನಾತುಲ್ ಫಿರ್ದೌಸಲ್ಲಿ ಉನ್ನತ ದರ್ಜೆಗಾಗಿ ದುವಾ ಮಾಡೋಣ. ‌