ಅನೇಶ ಕಾಂಬಳೆ.

1) ಮಿಸಲಾತಿ ಎಂದರೆ ಏನು ?
2) ಅದನ್ನ ಯಾರು ಆಲೋಚನೆ ಮಾಡಿದರು ?
3) ಅದನ್ನ ಮೋದಲು ಯಾರು ಜಾರಿಗೆ ತಂದರು ?
4) ಅದನ್ನ ಯಾರು ವಿರೋಧ ವ್ಯಕ್ತ ಪಡಿಸಿದರು ?
5) ಮಿಸಲಾತಿ ಇಂದಾ ಯಾರಿಗೆ ಲಾಭ ?
6) ಮಿಸಲಾತಿ ಇಂದಾ ಯಾರಿಗೆ ನಷ್ಟ ?
7) ಮಿಸಲಾತಿ ಉದ್ದೇಶವೇನು ?
8) ಮಿಸಲಾತಿ ಯಾವಾಗ ತೆಗೆದು ಹಾಕಬೇಕು ?

1) ಮಿಸಲಾತಿ ಎಂದರೆ ಏನು ?
ಭಾರತದ ಪ್ರತಿ ನಾಗರಿಕರು ಮಿಸಲಾತಿ ಅಂದರೆ ಬಡತನ ನಿರ್ಮುಲನೆ ಮಾಡುವ ದಾರಿ ಅಂದುಕೊಂಡಿದ್ದಾರೆ, ಅಥವಾ ಅಸ್ಪುರ್ಶರಿಗಾಗಿ ಕೊಡುವ ಭಿಕ್ಷೆ ಅಂತಾ ಅಂದುಕೊಂಡಿದ್ದಾರೆ.
ಗೆಳೆಯರೆ ಮಿಸಲಾತಿ ಎಂದರೆ ಪ್ರತಿನಿಧಿತ್ವ ಎಂದರ್ಥ.
ಇದು ಹೇಗೆ ಪ್ರತಿನಿಧಿತ್ವ ಎಂದು ಪ್ರಶ್ನೆ ಮೂಡುವುದು ಸಹಜ.
ಗೆಳೆಯರೆ ಭಾರತದಲ್ಲಿ ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆ, ಮೇಲು ಕೀಳು ಎಂಬ ಮನೋಭಾವ ಇದೆ.
ಇದನ್ನ ಹೋಗಲಾಡಿಸಲು ಮಿಸಲಾತಿ ಅಂದರೆ ಪ್ರತಿನಿಧಿತ್ವ ಅತ್ಯವಶಕ.
ಮೋದಲು ಜಾತಿ ಆಧಾರದ ಜನ ಗಣತಿ ಆಗಬೇಕು.
ಆಗ ಬಜ್ಜೇಟ್ ಜಾರಿ ಮಾಡಲಾಗುತ್ತದೆ, ಅದರ ಪ್ರಕಾರ ಪ್ರತಿ ನಾಗರಿಕನಿಗು ಪ್ರತಿನಿಧಿತ್ವ ದೊರೆಯುತ್ತದೆ.
ಭಾರತದಲ್ಲಿ ಕೊನೆಯದಾಗಿ ಜಾತಿ ಆಧಾರಿತ ಜನಗಣತಿ ಆದದ್ದು 1931 ರಲ್ಲಿ ಅದು ಬ್ರಿಟಿಷರ ಆಳ್ವಿಕೆಯಲ್ಲಿ.
ಆ ಜಾತಿ ಆಧಾರಿತ ಜನಗಣತಿಯ ಪ್ರಕಾರ ಭಾರತದಲ್ಲಿ,

ಬ್ರಾಹ್ಮಣ 3.5%
ಕ್ಷತ್ರೀಯ 5.5%
ವೈಶ್ಯ 6%

ಪರಿಶಿಷ್ಟ ಜಾತಿ 15%
ಪರಿಶಿಷ್ಟ ಪಂಗಡ 7.5%
ಇತರೆ ಹಿಂದೂಳಿದ ವರ್ಗ 52%
ಧಾರ್ಮಿಕ ಅಲ್ಪ ಸಂಖ್ಯಾತರು 10.5%

ಇದು 100% ಜಾತಿ ಆಧಾರಿತ ಮಿಸಲಾತಿ.
ಇದರ ಪ್ರಕಾರ ಪ್ರತಿ ನಾಗರಿಕನಿಗು ಮಿಸಲಾತಿ ಸಿಗಬೇಕು.

2) ಮಿಸಲಾತಿಯ ಬಗ್ಗೆ ಯಾರು ಆಲೋಚನೆ ಮಾಡಿದರು ?

ಇಲ್ಲಿ ನಾವು ಮೋದಲು ಈ ಮಿಸಲಾತಿ ಬಗ್ಗೆ ಯಾಕೆ ಆಲೋಚನೆ ಮಾಡಿದರು ಅದರ ಹಿಂದೆ ನಡೆದ ಘಟನೆಯ ಬಗ್ಗೆ ತಿಳಿದುಕೊಳ್ಳೊಣಾ.

ರಾಷ್ಟ್ರಪಿತಾ ಮಹಾತ್ಮ ಜ್ಯೋತಿ ಬಾ ಫೂಲೆ ಅವರು ವಿದ್ಯಾಭ್ಯಾಸ ಮಾಡುತ್ತಿರುವಾಗ ಅವರ ಜೋತೆ ಸಕಾರಾಮ ಪರಾಂಜಾಪೆ ಎನ್ನುವ ಬ್ರಾಹ್ಮಣ ಕುಡಾ ಓದುತ್ತಿರುತ್ತಾರೆ,
ತರಗತಿಯಲ್ಲಿ ಫೂಲೆ ಅವರು ತುಂಬಾ ಜಾಣರಾಗಿರುತ್ತಾರೆ ಹಾಗೂ ಪರಾಂಜಾಪೆ ಅವರು ಓದುವುದರಲ್ಲಿ ಸುಮಾರಾಗಿರುತ್ತಾರೆ.
ಒಂದು ದಿನ ಸಕಾರಾಮ ಪರಾಂಜಾಪೆ ಎನ್ನುವ ಬ್ರಾಹ್ಮಣ ಜ್ಯೋತಿ ಬಾ ಫೂಲೆ ಅವರಿಗೆ ಮದುವೆಯ ಔತಣ ಕೊಡುತ್ತಾರೆ, ಜೋತೆಯಲ್ಲಿ ಓದುತ್ತಿರುವ ಗೆಳೆಯ ಔತಣಕ್ಕೆ ಕರೆದಿದ್ದಾನೆ ಎಂದು ಜ್ಯೋತಿ ಬಾ ಫೂಲೆ ಅವರು ಬಿಳಿ ಬಣ್ಣದ ಧೋತಿ, ಕಪ್ಪು ಬಣ್ಣದ ಕೋಟ ಹಾಗೂ ತಲೆಗೆ ಪೇಟಾ ಸುತ್ತಿಕೊಂಡು ಗೆಳೆಯನ ಮದುವೆ ಮನೆಗೆ ತಲಪುತ್ತಾರೆ.
ಮದುವೆ ಮನೆಗೆ ತಲುಪಿದ ಜ್ಯೋತಿ ಬಾ ಫೂಲೆ ಅವರನ್ನ ಇಡಿ ಬ್ರಾಹ್ಮಣ ಸಮಾಜದ ಹಿರಿಯರು ಸೇರಿ ಬಾಯಿಗೆ ಬಂದ ಹಾಗೆ ಉಗಿದು ಶೂದ್ರನಾದ ನಿನು ಬ್ರಾಹ್ಮಣರ ಸಡಗರದಲ್ಲಿ ಹೇಗೆ ಬಂದೆ ಎಂದು ತುಂಬಿದ ಮದುವೆ ಸಮಾರಂಭದಿಂದ ಕುತ್ತಿಗೆ ಪಟ್ಟಿ ಹಿಡಿದು ಹೋರಗೆ ತಳ್ಳುತ್ತಾರೆ.
ಆಗ ಕುದೆರೆಯ ಮೇಲೆ ಕುಳಿತ ಸಕಾರಾಮ ಪರಾಂಜಾಪೆ ಕೆಕೆ ಹಾಕುತ್ತಾ ಹೇಳುತ್ತಾನೆ ಜ್ಯೋತಿರಾವ ನಿನು ಶಾಲೆಯಲ್ಲಿ ನನ್ನಗಿಂತ ಬುದ್ದಿಯಲ್ಲಿ ಜಾಣನಿರಬಹುದು ಹಾಗೂ ವಿದ್ಯೆಯಲ್ಲಿ ನನಗಿಂತ ಮೇಲೆ ಇರಬಹುದು ಆದರೆ ಸಮಾಜದಲ್ಲಿ ನಿನು ಶೂದ್ರ ನನಗಿಂತ ಕೀಳು ಎಂದು ಅವಮಾನಕರವಾಗಿ ನಗಾಡುತ್ತಾನೆ.
ಆಗ ಫೂಲೆ ಅವರು ಅಲ್ಲೆ ಸಮಿಪದಲ್ಲಿ ಇರುವ ಮರದ ಕೆಳೆಗೆ ಕುತು ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸುತ್ತಾರೆ.
ಈ ಘಟನೆಯನ್ನ ವಿಕ್ಷಿಸುತ್ತಿದ್ದ ಕೊರಳಲ್ಲಿ ಮಡಿಕೆ ಮತ್ತು ಸೊಂಟದಲ್ಲಿ ಪೋರಕೆ ಇರುವಾ ಅಸ್ಪರ್ಶರ ಜನರು ಫೂಲೆ ಅವರಿಗೆ ಸಮಾಧಾನ ಮಾಡುತ್ತಾ ಅವರು ಸಹ ಕೆಕೆ ಹಾಕಿ ಹೇಳುತ್ತಾರೆ, ನಿನ್ನ ದಿನ ಚೆನ್ನಾಗಿದೆ ಇಂದು ಬ್ರಾಹ್ಮಣರ ಮನೆಯಲ್ಲಿ ಮದುವೆಯ ವಾತಾವರಣ ಇರುವದರಿಂದ ನಿನ್ನನಾ ಕೊಲ್ಲದೆ ಬಿಟ್ಟಿದ್ದಾರೆ ಎದ್ದು ಹೋಗು ಮನೆಗೆ ಅಂತಾ ಹೇಳ್ತಾರೆ.
ಆಗ ಫೂಲೆ ಅವರು ಮನೆಗೆ ಹೋಗಿ ಈ ಎಲ್ಲಾ ಘಟನೆಯನ್ನ ತನ್ನ ತಂದೆಯಾದ ಗೋವಿಂದರಾವ ಅವರಿಗೆ ತಿಳಿಸುತ್ತಾರೆ.
ನನಗೆ ಯಾವ ಕಾರಣಕ್ಕೆ ಅವಮಾನ ಮಾಡಲಾಯಿತು ? ಮತ್ತು ಆ ಅಸ್ಪರ್ಶರ ಜನರು ತಿಪ್ಪೆಗುಂಡಿಯಲ್ಲಿ ಬಿದ್ದಿದ್ದನ್ನು ತಿಂತಿದ್ದರು ? ಕೊರಳಲ್ಲಿ ಮಡಿಕೆ ಮತ್ತು ಸೊಂಟದಲ್ಲಿ ಪೋರಕೆ ಇದ್ದರು ಯಾಕೆ ಅವರು ಕೆಕೆ ಹಾಕಿಕೊಂಡು ಸಹಿಸಿಕೊಂಡಿದ್ದಾರೆ ಎಂದು ಕೇಳಿದಾಗ.
ನಿನಗೆ ಆ ಔತಣದಲ್ಲಿ ಯಾರು ಹೋಗಲು ಹೇಳಿದ್ದರು ಅವರು ಬ್ರಾಹ್ಮಣ ಸಮಾಜದವರು ಅವರು ಮೇಲಜಾತಿಯವರು ಅವರ ಸರಿಸಮಾನವಾಗಿ ನಾವಲ್ಲ ಮತ್ತು ಆ ಅಸ್ಪರ್ಶರ ಜನ ಕೀಳು ಜಾತಿಯವರು ಅವರ ಜೋತೆ ನಾವು ಮಾತಾಡಬಾರದು ಅಂತಾ ಬುದ್ದಿ ಮಾತು ಹೇಳುತ್ತಾರೆ.

ಆಗ ಫೂಲೆ ಅವರು ಯೋಚನೆ ಮಾಡುತ್ತಾರೆ.
ನನ್ನ ತಂದೆಯ ಹತ್ತಿರ ಆಸ್ತಿ ರೂಪದಲ್ಲಿ ೩೦೦ ಎಕರೆ ಹೂವಿನ ತೋಟವಿದೆ, ಸಮಾಜದಲ್ಲಿ ನಾನು ಪೇಟಾ ಧರಿಸಿ ಒಳ್ಳೆ ಬಟ್ಟೆ ಹಾಕಿದರು ನನಗೆ ಶೂದ್ರನೆಂದು ಯಾಕೆ ಅವಮಾನ ಮಾಡಿದರು.
ಹಾಗೂ ಆ ಅಸ್ಪರ್ಶರ ಜನರು ಕೊರಳಲ್ಲಿ ಮಡಿಕೆ, ಸೊಂಟದಲ್ಲಿ ಪೊರಕೆ, ಗುಂಡಿಯಲ್ಲಿ ಬಿಸಾಕಿದನ್ನ ತಿಂತಿದ್ದರು ಯಾಕೆ ಅವರಿಗೆ ಅವರ ಅವಸ್ತೆಯ ಬಗ್ಗೆ ಅರಿವಾಗುತ್ತಿಲ್ಲಾ..
ಇದರ ಸಲುವಾಗಿ ಅಭ್ಯಾಸ ಮಾಡಲು ಪ್ರಾರಂಭಿಸುತ್ತಾರೆ ಆಗ ಅವರಿಗೆ ಮನವರಿಕೆ ಆಗುತ್ತದೆ ಇದಕ್ಕೆಲ್ಲಾ ಮೂಲ ಕಾರಣ ಜಾತಿ ವ್ಯವಸ್ಥೆ ಹಾಗೂ ವರ್ಣ ವ್ಯವಸ್ಥೆ ಮತ್ತು ಇದರ ಆಧಾರ ಅಂಧ ಶ್ರದ್ಧೆ ಮತ್ತು ಅಜ್ಞಾನ ಎಂದು.

ಅದಕ್ಕೆ ಫೂಲೆ ಅವರು ಹೇಳುತ್ತಾರೆ.
“ವಿದ್ಯಾ ಬಿನಾ ಮತಿ ಗಯಿ,
ಮತಿ ಬಿನಾ ನಿತಿ ಗಯಿ,
ನಿತಿ ಬಿನಾ ಗತಿ ಗಯಿ,
ಗತಿ ಬಿನಾ ವಿತ್ತ ಗಯಾ,
ವಿತ್ತ ಬಿನಾ ಶುದ್ರ ಗಯೆ,
ಇತನೆ ಅನರ್ಥ, ಎಕ ಅವಿದ್ಯಾ ನೆ ಕಿಯೆ”
ಅಂದರೆ
ವಿದ್ಯೆ ಇರದೆ ಬುದ್ದಿ ಹೋಯಿತು,
ಬುದ್ದಿ ಇರದೆ ನಿತಿ ಹೋಯಿತು,
ನಿತಿ ಇರದೆ ವೇಗ ಹೋಯಿತು,
ವೇಗ ಇರದೆ ಸಂಪತ್ತಿ ಹೋಯಿತು,
ಸಂಪತ್ತಿ ಇರದೆ ಶುದ್ರರು ಹೋದರು,
ಇಷ್ಟೆಲ್ಲಾ ಅನರ್ಥ, ಒಂದ ಅವಿದ್ಯೆ ಮಾಡಿತು.

ಅದಕ್ಕಾಗಿ ತಮ್ಮ 19ನೆಯ ವಯಸ್ಸಿನಲ್ಲಿ ಫೂಲೆ ಅವರು ನಿರ್ಧಾರ ಮಾಡುತ್ತಾರೆ ಈ ಜಾತಿ ವ್ಯವಸ್ಥೆ ನಿರ್ಮಾಣ ಮಾಡಿದ ಬ್ರಾಹ್ಮಣರ ವಿರೂಧ್ಧ ಹೋರಾಡಬೇಕು ಎಂದು.

ಮುಂದೆ ಫೂಲೆ ಅವರು ಹೇಚ್ಚು ಶಿಕ್ಷಣ ಪಡಿಯಬೇಕೆಂದು ನಿರ್ಧಾರ ಮಾಡುತ್ತಾರೆ.
ಆಗ ಅವರ ತಂದೆ ಗೋವಿಂದರಾವ್ ಅವರ ಮೇಲೆ ಬ್ರಾಹ್ಮಣರು ಒತ್ತಾಯ ಹಾಕತ್ತಾರು.
ನೋಡು ನಿನ್ನ ಮಗ ಧರ್ಮ ವಿರೋಧ್ಧವಾಗಿ ಹೋಗಿ ಶಿಕ್ಷಣ ಪಡೆಯುತ್ತಿದ್ದಾನೆ.
ಶೂದ್ರರಾದ ನಿವು ಶಿಕ್ಷಣ ಪಡೆದರೆ ಧರ್ಮದ ನಿಯಮ ಉಲ್ಲಂಘನೆ ಮಾಡಿದ ಹಾಗೆ ಆಗುವುದಿಲ್ಲವೆ.
ನಿಮಗೆ ಗೊತ್ತಿದೆ ತಾನೆ ಧರ್ಮದ ವಿರೊಧ್ಧ ಮಾಡುವ ಅಧರ್ಮಿಯರಿಗೆ ಮನು ಕಾನುನಿವ ಪ್ರಕಾರ ಶಿಕ್ಷೆಗೆ ಗುರಿ ಪಡಿಸಲಾಗುತ್ತದೆ ಎಂದು ಬೇದರಿಕೆ ಹಾಕುತ್ತಾರೆ.
ಆಗ ಗೋವಿಂದರಾವ ಅವರು ಫೂಲೆ ಅವರ ಶಿಕ್ಷಣ ನಿಲ್ಲಿಸುತ್ತಾರೆ.

ಮುಂದೆ ತಮ್ಮ 21 ವಯಸ್ಸಿನಲ್ಲಿ ಅಂದರೆ 1 ಜನವರಿ 1948ರಲ್ಲಿ ಸತ್ಯ ಶೋಧಕ ಸಮಾಜ ಎಂಬ ಸಂಘಟನೆ ಕಟ್ಟಿ ಹೋರಾಟ ಆರಂಭ ಮಾಡುತ್ತಾರೆ.
ಫೂಲೆ ಅವರು ಶುದ್ರ ಮತ್ತು ಶುದ್ರಾತಿ ಶುದ್ರರನ್ನ ಶಿಕ್ಷಣ ಕೊಡಿಸಬೆಂದು ನಿರ್ಧಾರ ಮಾಡುತ್ತಾರೆ.

ಎಷ್ಟೆ ಬುದ್ದಿ ಹೆಳಿದರು ಕೆಳುತ್ತಿಲ್ಲಾ ನಿನು ಎಂದು ಆಗ ಗೊವಿಂದರಾವ ಅವರು ಫೂಲೆ ಅವರಿಗೆ ಮನೆಯಿಂದ ಆಚೆ ಹಾಕ್ತಾರೆ.

ಫೂಲೆ ಅವರು ತನ್ನ ಮಡದಿ ಸಾವಿತ್ರಿಬಾಯಿ ಅವರೊಂದಿಗೆ ಮನೆ ಆಚೆ ಬಂದು ಊರು ಬಿಟ್ಟು ಹೋಗುತ್ತಿರುತ್ತಾರೆ.
ಆಗ ಅವರಿಗೆ ತಡೆದು, ಇರಲು ವಸತಿ ಮತ್ತು ಶಾಲೆ ತೆಗೆಯಲು ಅವಕಾಶ ಮಾಡಿ ಕೊಟ್ಟವರು ಮುಸ್ಲಿಂ ಗೆಳೆಯರಾದ ಉಸ್ಮಾನ ಶೇಖ್ ಹಾಗೂ ಅವರ ಸಹೋದರಿ ಫಾತಿಮಾ ಶೇಖ್ ಅವರು.

ಆ ಸಮಯದಲ್ಲಿ ಫೂಲೆ ಅವರು ಉಚಿತ ಶಾಲೆ ಆರಂಭ ಮಾಡುತ್ತಾರೆ.
ಜನ ಮಕ್ಕಳನ್ನ ಶಾಲೆಗು ಕೊಟ್ಟು ಖಳಿಸುತ್ತಾರೆ‌.
ಆದರೆ ಮಕ್ಕಳು ಸ್ವಲ್ಪ ಕೈಗೆ ಬಂದ ಮೇಲೆ ಅಂದರೆ ದೊಡ್ಡವರಾದ ಮೇಲೆ ಶಾಲೆ ಬಿಡಿಸಿ ಕುಲಿ ಕೆಲಸಕ್ಕೆ ಖಳಿಸಲು ಪ್ರಾರಂಭಿಸುತ್ತಾರೆ.
ಆಗ ಫೂಲೆ ಅವರು ಮಿಸಲಾತಿಯ ಬಗ್ಗೆ ಯೋಜನೆ ನಿರ್ಮಾಣ ಮಾಡಿ ಭಾರತದಲ್ಲಿ ಇದ್ದ ಬ್ರಿಟಿಷ ಸರ್ಕಾರದ ಹಂಟರ್ ಕಮಿಷನಗೆ ಪ್ರಸ್ತಾವನೆ ಬರೆಯುತ್ತಾರೆ.
ಪ್ರಸ್ತಾವನೆಯಲ್ಲಿ ಫೂಲೆ ಅವರು ಮಿಸಲಾತಿಯ ಬಗ್ಗೆ ವಿವರವಾಗಿ ವಿವರಣೆ ಕೊಡುತ್ತಾರೆ.

ಗೆಳೆಯರೆ ಮಿಸಲಾತಿಯ ಬಗ್ಗೆ ಆಲೊಚನೆ ಮಾಡಿದವರು ಭಾರತದ ರಾಷ್ಟ್ರಪಿತಾ ಮಹಾತ್ಮ ಜ್ಯೋತಿ ಬಾ ಫೂಲೆ ಅವರು.
ಅವರು ವರ್ಣ ವ್ಯವಸ್ತೆಯ ಪ್ರಕಾರ ಶೂದ್ರರು ಆದರೆ ಅಸ್ಪರ್ಶರಲ್ಲಾ.
ಅವರ ಹತ್ತಿರ ತಂದೆಯ ಆಸ್ತಿ ೩೦೦ ಎಕರೆ ಹೂವಿನ ತೋಟವಿತ್ತು‌.
ಜೋತೆಗೆ ಅವರು ಸಿವಿಲ್ ಕಂಟ್ರಾಕ್ಟರ್ ಆಗಿದ್ದರು.
ಅವರ ವಾರ್ಷಿಕ ಆದಾಯ ಆಗ ಸುಮಾರು ೧ ಲಕ್ಷದ ವರೆಗೆ ಇತ್ತು.
ಅವರು ಬಡವರಾಗಿರಲಿಲ್ಲಾ.
ಹೆಚ್ಚಿನ ಮಾಹಿತಿಗಾಗಿ ಗುಲಾಮಗಿರಿ ಪುಸ್ತಕ ಓದಿ.

#First_Resarvation_implementation_Rulersಮೂರನೆಯ ಭಾಗದಲ್ಲಿ ಮಿಸಲಾತಿಯನ್ನ ಯಾರು ಮೋದಲು ಆಚರಣೆಯಲ್ಲಿ ಜಾರಿಗೆ ತಂದರು ಎಂದು ಮಾಹಿತಿ ತಿಳಿದುಕೊಳ್ಳೋಣಾ.

3) ಭಾರತದಲ್ಲಿ ಯಾರು ಮಿಸಲಾತಿಯನ್ನ ಜಾರಿಗೆ ತಂದರು ?

ಮಿಸಲಾತಿ ಎಂಬ ಯೋಜನೆಯನ್ನ ಆಲೋಚನೆ ಮಾಡಿದ ಫೂಲೆ ಅವರ ವಿಚಾರದ ಮೇಲೆ ಭಾರತದಲ್ಲಿ ಜಾರಿಗೆ ತಂದವರು ಎರಡು ರಾಜರ ಮನೆತನಗಳು.
ಒಂದು ಕರವಿರ ಅಂದರೆ ಇಂದಿನ್ನ ಕೊಲ್ಲಾಪೂರ ಸಂಸ್ಥೆ.
ಎರಡು ಮೈ‌ಸೂರು ಸಂಸ್ಥೆ.
1902ರಲ್ಲಿ ಶಾಹೂ ಮಹಾರಾಜರು ತಮ್ಮ ಕೊಲ್ಲಾಪೂರ ಸಂಸ್ಥೆಯಲ್ಲಿ ಮೋದಲ ಬಾರಿಗೆ ಮಿಸಲಾತಿಯನ್ನು ಜಾರಿಗೊಳಿಸಿದರು,
ಆ ಸಮಯದಲ್ಲಿ ಶಾಹೂ ಮಹಾರಾಜರು ತಮ್ಮ ಸಂಸ್ಥೆಯಲ್ಲಿ ಬ್ರಾಹ್ಮಣರನ್ನ ಹೋರತು ಪಡಿಸಿ ಎಲ್ಲಾ ಸಮುದಾಯದವರಿಗು ಮಿಸಲಾತಿ ಜಾರಿಗೊಳಿಸಿದರು.
ಅದೆ ಸಮಯದಲ್ಲಿ ಮೈಸೂರು ಸಂಸ್ಥೆಯ ನಾಲ್ವಾಡಿ ಕೃಷ್ಣ ಒಡೆಯರ್ ಅವರು ಸಹ ಮಿಸಲಾತಿಯನ್ನ ಜಾರಿಗೊಳಿಸಿದರು.

ಛತ್ರಪತಿ ಶಾಹೂ ಮಹಾರಾಜರು ತಮ್ಮ ಸಂಸ್ಥಾನದಲ್ಲಿ ಮಿಸಲಾತಿ ಜಾರಿಗೊಳಿಸಿ ಶಿಕ್ಷಣದ ಸಲುವಾಗಿ ಶಾಲೆಗಳು ಮತ್ತು ವಿದ್ಯಾರ್ಥಿ ವಸತಿಗಳನ್ನ ತೆರೆಯುತ್ತಾರೆ.
ತಮ್ಮ ರಾಜ್ಯದ ಖಜಾನೆಯನ್ನ ರಕ್ಷಣೆಗಾಗಿ ಪಾರದಿ ಸಮುದಾಯವನ್ನು ನೇಮಿಸುತ್ತಾರೆ ಆ ಸಮುದಾಯ ಆಗ ದರೋಡೆ ಮತ್ತು ಕಳ್ಳತನಕ್ಕೆ ಹೆಸರುವಾಸಿ ಆಗಿತ್ತು.
ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 500 ಎಕರೆ ಜಮಿನನ್ನು ಮಿಸಲಾತಿಯ ಆಧಾರದ ಮೇಲೆ ತಮ್ಮ ಸಂಸ್ಥೆಯಲ್ಲಿ ಬರುವ ನಿರಾಶ್ರಿತರಿಗಾಗಿ ತಲುಪಿಸಲು ಯೋಜನೆ ಮಾಡುತ್ತಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನೇತೃತ್ವದಲ್ಲಿ ಶಾಲೆಗಳು ಮತ್ತು ವಿದ್ಯಾರ್ಥಿ ವಸತಿಗಳು ಕೊಲ್ಲಾಪೂರ ಸಂಸ್ಥೆಯ ಮಾದರಿಯಲ್ಲಿ ನಿರ್ಮಾಣ ಮಾಡುತ್ತಾರೆ.

ಭಾರತ ದೇಶದಲ್ಲೆ ಬಹುಜನರ ಸಲುವಾಗಿ ಬ್ರೀಟಿಷರ ಮುಂಚೆ ಮಿಸಲಾತಿ ಜಾರಿಯಲ್ಲಿ ತಂದವರು ಶಾಹೂ ಮಹಾರಾಜರು ಮತ್ತು ನಮ್ಮ ಕನ್ನಡದ ಹೆಮ್ಮೆಯ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು.

ಮಿಸಲಾತಿ ಬಗ್ಗೆ ಮಾಹಿತಿ 8 ಭಾಗದಲ್ಲಿ ಕೊಡಲಾಗುವುದು.

ನಾಲ್ಕನೆಯ ಭಾಗದಲ್ಲಿ ಮಿಸಲಾತಿಯನ್ನ ಯಾರು ವಿರೋಧ ಮಾಡಿದರು ಎಂದು ಮಾಹಿತಿ ತಿಳಿದುಕೊಳ್ಳೋಣಾ.
ಹಾಗೂ ಭಾಗ 3 ರಲ್ಲಿ ಜಾರಿಗೆ ತಂದವರು ಶಾಹೂ ಮಹಾರಾಜರು ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ತಿಳಿದುಕೊಂಡೆವು.
ಇವಾಗ ಮಿಸಲಾತಿಯ ವಿರೋಧ ಯಾರು ಯಾರು ಯಾವ ಸಂಧರ್ಭದಲ್ಲಿ ಮಾಡಿದರೆಂದು ತಿಳಿಯೋಣ.

ಫೂಲೆ ಅವರ 19 ಅಕ್ಟೊಬರ್ 1882ರಲ್ಲಿ ಬ್ರಿಟಿಷ್ ಸರ್ಕಾರದ ಮುಂದೆ ಮಿಸಲಾತಿಯ ಪ್ರಸ್ತಾವನೆಯ ವಿವರಣೆ ನಿಡುತ್ತಾರೆ,
ಬರಿ ಪ್ರಸ್ತಾವನೆ ನಿಡಿದರು ಆಗಲೆ ಇದನ್ನ ವಿರೋಧ ಮಾಡಿದು ನ್ಯಾಯಮೂರ್ತಿ ಗೊವಿಂದ ರಾನಡೆ ಎನ್ನುವ ಬ್ರಾಹ್ಮಣ.

ಮುಂದೆ ರಾಜೆಶ್ರೀ ಛತ್ರಪತಿ ಶಾಹೂ ಮಹಾರಾಜರು 26 ಜುಲೈ 1902 ರಲ್ಲಿ ತಮ್ಮ ಕೊಲ್ಲಾಪೂರ ಸಂಸ್ಥೆಯಲ್ಲಿ 50% ಮಿಸಲಾತಿ ಜಾರಿಗೊಳಿಸಿದರು.
ಆ ಮಿಸಲಾತಿ ಸುತ್ತೊಲೆಯಲ್ಲಿ ಸ್ಪಷ್ಟವಾಗಿ ಬರೆಯಲಾಗಿತ್ತು ಬ್ರಾಹ್ಮಣ, ಶೆಣವಿ, ಪ್ರಭು ಮತ್ತು ಪಾರ್ಸಿ ಈ ನಾಲ್ಕು ಜಾತಿ ಹೋರತುಪಡಿಸಿ ಉಳಿದ ಎಲ್ಲಾ ಜಾತಿಯವರಿಗೂ ಮಿಸಲಾತಿ ಕೊಡಬೇಕೆಂದು.
ಶಾಹೂ ಮಹಾರಾಜರು ಯಾವುದೆ ನಿರ್ಣಯ ತೆಗೆದುಕೊಳ್ಳುವ ಮೋದಲು ಸಮಿಕ್ಷೆ ಮಾಡುತ್ತಿದ್ದರು ಆಮೇಲೆ ಅದನ್ನ ಕಾರ್ಯರೂಪಕ್ಕೆ ತರುತ್ತಿದ್ದರು.
ಸಮಿಕ್ಷೆ ಮಾಡಿದಾಗ ತಮ್ಮ ಸಂಸ್ಥೆಯಲ್ಲಿ 72 ಸರ್ಕಾರಿ ಅಧಿಕಾರಿಗಳಲ್ಲಿ 61 ಬ್ರಾಹ್ಮಣರು ಮತ್ತು 9 ಅಧಿಕಾರಿಗಳು ಬಹುಜನ ಸಮಾಜದವರು ಆಗಿದ್ದರು,
ಅದೆ ರೀತಿ ತಮ್ಮ ರಾಜ್ಯದ ಖಾಸಗಿ ಆಡಳಿತದಲ್ಲಿ 52 ಅಧಿಕಾರಿಗಳಲ್ಲಿ 45 ಬ್ರಾಹ್ಮಣರು ಮತ್ತು 7 ಅಧಿಕಾರಿಗಳು ಬಹುಜನ ಸಮಾಜದವರು ಆಗಿದ್ದರು.
ಆದ್ಧ ಕಾರಣ 50% ಮಿಸಲಾತಿಯನ್ನ ಜಾರಿಗೊಳಿಸಲು ನಿರ್ಧಾರ ಮಾಡಿದರು.
ಇದನ್ನ ವಿರೋಧ ವ್ಯಕ್ತ ಪಡಿಸಲು 55 ಕಿ.ಮೀ. ದೂರದಲ್ಲಿ ಇರುವಾ ಸಾಂಗ್ಲಿಯಿಂದ ಕುದುರೆ ಮೇಲೆ ಕೋಲ್ಲಾಪೂರಗೆ ಬಂದು ಯಾಕೆ 50% ಮಿಸಲಾತಿ ಕೊಡುತ್ತಿದ್ದಿರಾ ನಿವು ಎಂದು ಗಣಪತರಾವ ಅಭಯಂಕರ ಎನ್ನುವ ಬ್ರಾಹ್ಮಣ ಪ್ರಶ್ನೆ ಮಾಡುತ್ತಾನೆ.
ಅಭಯಂಕರಗೆ ಉತ್ತರ ಕೊಡುವಾ ಸಲುವಾಗಿ ಶಾಹೂ ಮಹಾರಾಜರು ಅವನನ್ನ ಕುದುರೆ ಕಟ್ಟುವ ಜಾಗಕ್ಕೆ ಕರೆದುಕೊಂಡು ಹೋಗಿ ಉದಾಹರಣೆಯೋಂದಿಗೆ ವಿವರಿಸುತ್ತಾರೆ.
ಶಾಹೂ ಮಹಾರಾಜರು ಅಭಯಂಕರಗೆ ತೋರಿಸುತ್ತಾರೆ ಅಲ್ಲಿ ನೋಡಿ ಕುದುರೆಗಳು ತಮ್ಮ ತಮ್ಮ ಮುಕ್ಕದ ಬಳಿ ಕಟ್ಟಿದ ಕಡಲೆಗಳನ್ನ ತಿನ್ನುತ್ತಿವೆ ಎನ್ನುತ್ತಾರೆ.
ಅದರಲ್ಲಿ ಕೆಲವು ವಯಸ್ಸಾದ ಕುದರೆಗಳು, ಕೆಲವು ಕಾಲು ಮುರಿದ ಕುದುರೆಗಳು, ಕೆಲವು ಚಿಕ್ಕ ಕುದುರೆಗಳು ಹಾಗೂ ಕೆಲವು ದಷ್ಟ-ಪೂಷ್ಟ ಕುದುರೆಗಳು ಸಹ ಇರುತ್ತವೆ.
ಶಾಹೂ ಮಹಾರಾಜರು ತಮ್ಮ ಸೈನಿಕರಿಗೆ ಹೇಳುತ್ತಾರೆ,
ಒಂದು ಚಾಪೆ ಹಾಕಿ ಅದರ ಮೇಲೆ ಕುದುರೆಗೆ ತಿನ್ನಲು ಕಡಲೆಗಳಲ್ಲ ಹಾಕಿ ಇಗಾ ಆ ಕುದುರೆಗಳನ್ನು ಒಟ್ಟಿಗೆ ತಿನ್ನಲು ಬೀಡಿ ಎಂದು ಹೇಳುತ್ತಾರೆ.
ಆಗ ಎಲ್ಲಾ ಕುದುರೆಗಳು ಒಟ್ಟಿಗೆ ಬಂದು ತಿನ್ನಲು ಆರಂಭ ಮಾಡುತ್ತವೆ, ಅದರಲ್ಲಿ ಕೆಲವು ಕುದುರೆಗಳು ಹತ್ರಾನು ಬರುವುದಿಲ್ಲಾ ಯಾಕಂದರೆ ಆ ಕುದುರೆ ಗುಂಪಿನಲ್ಲಿ ಇರುವಾ ದಷ್ಟ-ಪುಷ್ಟ ಕುದುರೆಗಳು ತಿನ್ನುವುದರ ಜೋತೆ ತಮ್ಮ ಹಿಂದಿನ ಕಾಲಿನಿಂದ ಬೇರೆ ಕುದುರೆಗಳಿಗೆ ಒದಿತಾ ತಿನ್ನುತಿದ್ದವು‌.
ಆಗ ಆ ದೃಶ್ಯವನ್ನು ಅಭಯಂಕರಗೆ ತೊರಿಸಿ ಕೇಳುತ್ತಾರೆ ಇವಾಗ ಹೇಳಿ ಆ ವಯಸ್ಸಾದ, ಕಾಲು ಮುರಿದುಕೊಂಡು ಮತ್ತು ಚಿಕ್ಕ ಚಿಕ್ಕ ಕುದುರೆಗಳಿಗೆ ಗುಂಡಿಕ್ಕಿ ಕೊಂದು ಹಾಕಲೆ ಎಂದು.
ಆಗ ಆ ಅಭಯಂಕರ ಎನ್ನುವ ಬ್ರಾಹ್ಮಣ ತನ್ನ ಬಾಲಾ ಮುದುಡಿಕೊಂಡು ಅಲ್ಲಿಂದ ಹೊಗುತ್ತಾನೆ.
ಆ ಗಣಪತರಾವ ಅಭಯಂಕರ ಬೇರೆ ಯಾರು ಅಲ್ಲಾ “ಮೈನೆ ಪ್ಯಾರ್ ಕಿಯಾ” ಚಿತ್ರದ ನಾಯಕಿ ಭಾಗ್ಯಶ್ರೀಯ ಅಜ್ಜ.

ಮೈಸೂರಿನ ನಾಲ್ವಾಡಿ ಕೃಷ್ಣರಾಜ ಒಡೆಯರ್ ಅವರ ಸಂಸ್ಥಾನದಲ್ಲಿ ಮಿಸಲಾತಿಯ ಆಧಾರದ ಮೇಲೆ ಕೆ.ಆರ್.ಎಸ್. ಡ್ಯಾಮ್ ಕಟ್ಟದಲ್ಲಿ ಕಾರ್ಮಿಕರಿಗೆ ನೇಮಕ ಮಾಡಿದ ಸಲುವಾಗಿ ಸರ್.ಎಂ.ವಿಶ್ವೆಶ್ವರಯ್ಯಾ ಎಂಬ ಬ್ರಾಹ್ಮಣ ರಾಜಿನಾಮೆ ಕೊಟ್ಟು ಹೊಗುತ್ತಾನೆ.

ಆಧುನಿಕ ಭಾರತದಲ್ಲಿ ಅಂದರೆ ಸಂವಿಧಾನ ನಿರ್ಮಾಣದ ಸಮಯದಲ್ಲಿ ಹಾಗೂ ಜಾರಿ ಆದಾಗಿನಿಂದ ಇಲ್ಲಿಯವರೆಗು ಬ್ರಾಹ್ಮಣರು ಮಿಸಲಾತಿಯ ವಿರೊಧ ಮಾಡಿದ ಉದಾಹರಣೆಗಳು ಸಾಕಾದಷ್ಟು ಇವೆ.

ಮಿಸಲಾತಿ ಬಗ್ಗೆ ಮಾಹಿತಿ 8 ಭಾಗದಲ್ಲಿ ಕೊಡಲಾಗುವುದು.

#Reservation_100%.

ಐದನೇಯ ಭಾಗದಲ್ಲಿ ಮಿಸಲಾತಿ ಇಂದಾ ಯಾರ ಯಾರಿಗೆ ಲಾಭವಿದೆ

ಎಂದು ಮಿಸಲಾತಿ 100% ಜಾರಿಯಾದರೆ ಜಾತಿಯಲ್ಲಿ ಛಿದ್ರ ಮಾಡಲ್ಪಟ್ಟ 6743 ಜಾತಿಗಳ ಮತ್ತು ಧಾರ್ಮಿಕ ಆಚರಣೆ ಹಿಂಬಾಲಿಸುವ ಜೈನ, ಬೌದ್ದ, ಕ್ರೈಸ್ತ, ಮುಸ್ಲಿಂ, ಲಿಂಗಾಯತ ಮತ್ತು ಸಿಖ್ ಜನರಿಗೆ ಆಗಲಿದೆ.

ಅದು ಹೇಗೆ ಸಾಧ್ಯ ಎಂದು ಪ್ರಶ್ನೆ ಉದ್ಭವಿಸುವುದು ಸಹಜ.
ಮಿಸಲಾತಿ ಬಗ್ಗೆ ಇರುವ ಜಾತಿಯ ಆಧಾರಿತ ಮಾಹಿತಿಯನ್ನ ನಿವು ಸ್ವತಹ ಒಂದು ಹಾಳೆಯ ಮೇಲೆ ಬರೆದುಕೊಳ್ಳಿ ಆಗ ಅರ್ಥ ಆಗುತ್ತೆ.
ಪರಿಶಿಷ್ಟ ಜಾತಿಯಲ್ಲಿ (SC) ಒಟ್ಟು 1800 ಜಾತಿಗಳು = ಕೇಂದ್ರದಲ್ಲಿ ಒಟ್ಟು ಮಿಸಲಾತಿ 15%.
ಪರಿಶಿಷ್ಟ ಪಂಗಡದಲ್ಲಿ (ST) ಒಟ್ಟು
801 ಜಾತಿಗಳು = ಕೇಂದ್ರದಲ್ಲಿ
ಒಟ್ಟು ಮಿಸಲಾತಿ 7.5%.
ಇತರೆ ಹಿಂದೂಳಿದ ವರ್ಗದಲ್ಲಿ (OBC) ಒಟ್ಟು 4142 ಜಾತಿಗಳು = ಕೇಂದ್ರದಲ್ಲಿ ಒಟ್ಟು ಮಿಸಲಾತಿ 52%.
ಧಾರ್ಮಿಕ ಆಚರಣೆ ಮಾಡುವ ಜೈನ, ಬೌದ್ದ, ಕ್ರೈಸ್ತ, ಮುಸ್ಲಿಂ, ಲಿಂಗಾಯತ ಮತ್ತು ಸಿಖ್ (MINORITY) ಒಟ್ಟು 6 ಧರ್ಮಗಳು = ಕೇಂದ್ರದಲ್ಲಿ ಒಟ್ಟು ಮಿಸಲಾತಿ 10.5%.
(ಒಟ್ಟು 85% ಮಿಸಲಾತಿ)

ಬ್ರಾಹ್ಮಣ 3.5%
ಕ್ಷತ್ರಿಯ 5.5%
ವೈಶ್ಯ 6%.
(ಒಟ್ಟು 15% ಮಿಸಲಾತಿ)

ಒಟ್ಟಾರೆ 100% ಜಾತಿ ಆಧಾರಿತ ಜನಗಣತಿಯ ಪ್ರಕಾರ 100% ಮಿಸಲಾತಿ ಜಾರಿಗೊಳಿಸಿದರೆ ಪ್ರತಿಯೋಬ್ಬರಿಗು ಲಾಭ ಆಗುತ್ತದೆ‌.

ಮಿಸಲಾತಿ ಬಗ್ಗೆ ಮಾಹಿತಿ 8 ಭಾಗದಲ್ಲಿ ಕೊಡಲಾಗುವುದು.

ಮಿಸಲಾತಿ ಭಾಗ :- 6.

ಆರನೇಯ ಭಾಗದಲ್ಲಿ ಮಿಸಲಾತಿ ಇಂದಾ ಯಾರಿಗೆ ನಷ್ಟ ಆಗಲಿದೆ

100% ಮಿಸಲಾತಿ ಜಾರಿಯಾದರೆ ನಾಲ್ಕು ವಿಭಾಗದ ಮೇಲೆ ಇರುವ ತಲೆಹಿಡುಕರಿಗೆ ನಷ್ಟ ಆಗಲಿದೆ.

ಹಾಗೂ ಎಲ್ಲಾ ಕ್ಷೆತ್ರದಲ್ಲಿಯು ಅನಿಂಯತ್ರಣವಾದ ಹಿಡಿತ ಇರುವ ಬ್ರಾಹ್ಮಣರ ವ್ಯವಸ್ಥೆಗೆ ನಷ್ಟ ಆಗಲಿದೆ.

1) ರಾಜಕಿಯ ಭಾಗದಲ್ಲಿ ಜನರ ಪ್ರತಿನಿಧಿಗಳಾಗಿ CONGRESS, BJP, CPI, CPM ಮತ್ತು TRUNAMULA CONGRESS ಬ್ರಾಹ್ಮಣರ ಪಕ್ಷದಿಂದ ಆಯ್ಕೆಯಾಗಿ ಹೋಗುತ್ತಿರುವ Sc,st,obc ಮತ್ತು Minority ಗಳ ತಲೆಹಿಡುಕ ರಾಜಕಾರಣಿಗಳಿಗೆ ನಷ್ಟ ಆಗಲಿದೆ.

2) ಕಾರ್ಯಾಂಗ ಭಾಗದಲ್ಲಿ ಇರುವಾ ಅಂದರೆ IAS, IRS, IFS ಮತ್ತು ಇತರೆ ಎಲ್ಲಾ ಕ್ಷೆತ್ರದಲ್ಲಿಯು Class-1, Class-2 ಅಲ್ಲಿ ಇರುವ 79.93% ಬ್ರಾಹ್ಮಣರ ಅಧಿಕಾರಿಗಳ ವರ್ಚಸ್ಸಿಗೆ ನಷ್ಟ ಆಗಲಿದೆ.

3) ನ್ಯಾಯಾಂಗ ಭಾಗದಲ್ಲಿ ಇರುವಾ Suprim Court ಮತ್ತು High Court ನ ನ್ಯಾಯಾಧಿಶರ ಸ್ಥಾನದಲ್ಲಿ ಇದ್ದುಕೊಂಡು ದಲ್ಲಾಳಿತನದ ತಿರ್ಪು ಕೊಡುವ 98% ಬ್ರಾಹ್ಮಣರಿಗೆ ನಷ್ಟ ಆಗಲಿದೆ.

4) ಪ್ರಚಾರ ಮತ್ತು ಪ್ರಸಾರ ಮಾಧ್ಯಮದಲ್ಲಿ ಬ್ರಾಹ್ಮಣ, ವೈಶ್ಯರ ನಿಯಂತ್ರಣದಲ್ಲಿನ ಎಲೆಕ್ಟ್ರಾನಿಕ್ ಮಿಡಿಯಾ, ಪ್ರಿಂಟ್ ಮಿಡಿಯಾ, ಟ್ರೇಡಿಷನಲ್ ಮಿಡಿಯಾದಲ್ಲಿ ಇರುವಾ 99% ದಲ್ಲಾಳಿಗಳಿಗೆ ನಷ್ಟ ಆಗಲಿದೆ.

ಅಂಧ ಶ್ರಧ್ಧೆಯ ಆಚರಣೆಗಳ ಆಧಾರದ ಮೇಲೆ ಧರ್ಮದ ಹೆಸರಿನಲ್ಲಿ ದೊಚುತ್ತಿರುವ ನಕಲಿ ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಸಿಖ್, ಲಿಂಗಾಯತರ ಮತ್ತು ಹಿಂದೂ ಹೆಸರಿನ ಕವಚ ಹಾಕಿಕೊಂಡು ಬ್ರಾಹ್ಮಣರ ವೈದಿಕರ ಅಂಗಡಿಯ ನಡೆಸುತ್ತಿರುವವರಿಗೆ ನಷ್ಟ ಆಗಲಿದೆ.

ನಕಲಿ sc,st,obc ಮತ್ತು Minorityಯ ದಾಖಲಾತಿಯ ಆಧಾರದ ಮೇಲೆ ಮಿಸಲಾತಿ ಪಡೆದವರಿಗೆ ನಷ್ಟ ಆಗಲಿದೆ.

ಇದನ್ನ ಹೋರತು ಪಡಿಸಿ ಶಿಕ್ಷಣ, ಕಲೆ, ಕ್ರೀಡೆ, ಸಾಂಸ್ಕೃತಿಕ ಆಚರಣೆಗಳು ಮತ್ತು ಇತರೆ ಎಲ್ಲಾ ಭಾಗದಲ್ಲು ಬ್ರಾಹ್ಮಣರ ಕಪಿಮುಷ್ಟಿಯಲ್ಲಿ ಇರುವಾ ವ್ಯವಸ್ಥೆಗೆ ನಷ್ಟ ಆಗಲಿದೆ.

#We_The_People_Of_India
#हम_भारत_लोक #ನಾವು_ಭಾರತೀಯರು

ನಾವು ಏಳನೇಯ ಭಾಗದಲ್ಲಿ ಬಹು ಮುಖ್ಯವಾದ ವಿಷಯ ಅಂದರೆ ಮಿಸಲಾತಿಯ ಉದ್ದೇಶದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣಾ.

7) ಮಿಸಲಾತಿಯ ಉದ್ದೇಶವೇನು ?
ಜಾತಿ ಆಧಾರದ ಮೇಲೆ ಜನಗಣತಿ ಮಾಡಿ, ಬಡ್ಜೆಟ್ ನಿಗದಿಪಡಿಸಬೇಕು, ಪ್ರತಿ ಸಮುದಾಯಕ್ಕು ಪ್ರತಿ ಕ್ಷೇತ್ರದಲ್ಲಿ ಸಮಾನವಾದ ಪ್ರತಿನಿಧಿತ್ವ ಸಿಗುವಂತೆ ಮಾಡಬೇಕು,
ಭಾರತದ ಪ್ರತಿ ಹಳ್ಳಿಯ ಮತ್ತು ನಗರದಲ್ಲಿನ ಪ್ರತಿ ನಾಗರಿಕನಿಗು ಮಿಸಲಾತಿಯು ತಲುಪವಂತೆ ಮಾಡಬೇಕು.

ಪ್ರತಿ ನಾಗರಿಕರಿಗು ಅಭಿವ್ಯಕ್ತಿಯ ಸ್ವಾತಂತ್ರ್ಯ,
ಪ್ರತಿ ನಾಗರಿಕರಿಗು ಸಮಾನವಾದ ಅವಕಾಶ,
ಪ್ರತಿ ನಾಗರಿಕರಿಗು ನ್ಯಾಯ ಮತ್ತು
ಪ್ರತಿಯೊಬ್ಬರಲ್ಲು ಸಹೊದರತ್ವದ ಬಾಂಧವ್ಯದ ಸಮಾನವಾದ ಆಲೋಚನೆ ಬರಬೇಕು.
ಒಟ್ಟಾರೆ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಸಹೋದರತೆಯ ಆಧಾರದ ಮೇಲೆ ನವ ಭಾರತ ನಿರ್ಮಾಣ ಮಾಡುವುದೆ ಮಿಸಲಾತಿ ಎನ್ನುವ ಶಸ್ತ್ರದ ಉದ್ದೇಶವಾಗಿದೆ.

We The People Of India,
ನಾವು ಭಾರತೀಯರು,
हम भारत के लोग ।
ಈ ರೀತಿ ಪ್ರತಿ ಭಾರತದ ನಾಗರಿಕರು ತಮ್ಮ ಸ್ವಂತ ಇಚ್ಛೆಯಿಂದ ಹೇಳಬೇಕು.

ಎಲ್ಲಿಯವರೆಗು ವಿಷಮತೆಯ ವರ್ಣ ವ್ಯವಸ್ಥೆಯನ್ನು ಆಚರಿಸುವ ಬ್ರಾಹ್ಮಣರ ನಿಯಂತ್ರಣದಲ್ಲಿ ಭಾರತದ ಸಂವಿಧಾನ ಇದೆಯೊ ಅಲ್ಲಿಯವರೆಗು ಮಿಸಲಾತಿ ಭಾರತದ ನಾಗರಿಕರಿಗೆ ತಲುಪಲು ಸಾಧ್ಯವಿಲ್ಲ ಮತ್ತು ನಾವು ಭಾರತೀಯರು ಎನ್ನುವ ಮನೋಭಾವ

#BahujanKrantiMorcha
#ಬಹುಜನ_ಕ್ರಾಂತಿ_ಮೋರ್ಚಾ
#बहूजन_क्रांती_मोर्चा

ಮಿಸಲಾತಿ ಯಾವಾಗ ತೆಗೆದು ಹಾಕಬೇಕು ಎನ್ನುವ ಬಗ್ಗೆ ತಿಳಿಯೊಣಾ.

ಇದು 8ನೇಯ ಮತ್ತು ಕೊನೆಯ ಭಾಗ ಇದರಲ್ಲಿ ಶಬ್ದಗಳು ತುಂಬಾ ಸುಲಭವಾಗಿ ಬರೆಯಬಹುದು ಆದರೆ ಕಾರ್ಯರೂಪದಲ್ಲಿ ತರುವುದು ಅಷ್ಟೆ ಕಠಿಣ.
ಹಾಗಂತ ಅಸಾಧ್ಯವಲ್ಲ,
ತುಂಬಾ ಪರಿಶ್ರಮ ಮಾಡಬೇಕು ಮತ್ತು ನಿರಂತರವಾಗಿ ಎಲ್ಲಿಯು ನಿಲ್ಲದೆ ಮಾಡಬೇಕು ಆಗ ಮಾತ್ರ ಮಿಸಲಾತಿ ತೆಗೆದು ಹಾಕಲು ಸಾಧ್ಯ.

ಗೆಳೆಯರೆ,
ಭಾಗ 1 ರಲ್ಲಿ ಮಿಸಲಾತಿ ಎಂದರೆ ಪ್ರತಿನಿಧಿತ್ವ ಎಂದು ತಿಳಿದುಕೊಂಡ್ವಿ.
ಭಾಗ 2 ರಲ್ಲಿ ಮಿಸಲಾತಿಯ ಆಲೋಚನೆ ರಾಷ್ಟ್ರಪಿತಾ ಮಹಾತ್ಮ ಜ್ಯೋತಿ ಬಾ ಫೂಲೆ ಅವರು ಮಾಡಿದರು ಎಂದು ತಿಳಿದುಕೊಂಡ್ವಿ‌.
ಭಾಗ 3 ರಲ್ಲಿ ಮೋದಲು ಮಿಸಲಾತಿಯನ್ನ ಜಾರಿಗೆ ತಂದವರು ರಾಜೇಶ್ರೀ ಛತ್ರಪತಿ ಶಾಹೂ ಮಹಾರಾಜರು ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಂದು ತಿಳಿದುಕೊಂಡ್ವಿ.
ಭಾಗ 4 ರಲ್ಲಿ ಬ್ರಾಹ್ಮಣರು ವಿರೋಧ ಮಾಡಿದರು ಎಂದು ತಿಳಿದುಕೊಂಡ್ವಿ.
ಭಾಗ 5 ರಲ್ಲಿ ಮಿಸಲಾತಿಯಿಂದ ಭಾರತದ ಪ್ರತಿಯೋಬ್ಬ ಪ್ರಜೆಗು ಲಾಭವಿದೆ ಎಂದು ತಿಳಿದುಕೊಂಡ್ವಿ.
ಭಾಗ 6 ರಲ್ಲಿ ಮಿಸಲಾತಿಯಿಂದ ಬ್ರಾಹ್ಮಣರಿಗೆ ಮತ್ತು ನಕಲಿ ದಾಖಲಾತಿ ಇರುವವರಿಗೆ ನಷ್ಟ ಎಂದು ತಿಳಿದುಕೊಂಡ್ವಿ.
ಭಾಗ 7 ರಲ್ಲಿ ಮಿಸಲಾತಿಯ ಉದ್ದೇಶ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಸಹೋದರತ್ವದ ಆಧಾರದ ಮೇಲೆ ನವ ಭಾರತ ನಿರ್ಮಾಣ ಮಾಡುವುದಿದೆ ಎಂದು ತಿಳಿದುಕೊಂಡ್ವಿ.

ಇವಾಗ ಕೊನೆಯ ಭಾಗದಲ್ಲಿ ಮಿಸಲಾತಿ ಯಾವಾಗ ಮತ್ತು ಹೇಗೆ ತೆಗೆದು ಹಾಕಬೇಕು ಎನ್ನುವ ಬಗ್ಗೆ ತಿಳಿದುಕೊಂಡು ಕಾರ್ಯರೂಪಕ್ಕೆ ತರಲು ಪ್ರಯತ್ನ ಮಾಡೊಣಾ.

ಗೆಳೆಯರೆ ನಮ್ಮ ಭಾರತದಲ್ಲಿ 6 ಲಕ್ಷಕಿಂತ ಹೆಚ್ಚು ಹಳ್ಳಿಗಳಿವೆ ಹಾಗೂ 6743 ಇದು ಸರ್ಕಾರಿ ಆಧಾರಿತ ಜಾತಿಯ ಸಂಖ್ಯೆ ಆದರು ಇನ್ನು ಹೆಚ್ಚು ಜಾತಿಗಳು ಇವೆ ಹಾಗೂ ಸಮಾನತೆಯ ಆಧಾರದ ಮೇಲೆ ಧಾರ್ಮಿಕ ಆಚರಣೆ ಹಿಂಬಾಲಿಸುವವರು ಇದ್ದಾರೆ.
ಮಿಸಲಾತಿ ಬಗ್ಗೆ ಇರುವಾ ತಪ್ಪು ಪರಿಕಲ್ಪನೆಯನ್ನ ಹೋಗಲಾಡಿಸಬೇಕು ಆದ್ದರಿಂದ ಮಿಸಲಾತಿಯ ಬಗ್ಗೆ ಸರಿಯಾದ ಮಾಹಿತಿ ಪ್ರತಿಯೊಬ್ಬರಿಗೂ ತಲುಪಿಸಲು ಶ್ರಮಿಸಬೇಕು.
ಸಾಮಾಜಿಕವಾಗಿ ಮತ್ತು ಭೌಗೋಳಿಕವಾಗಿ ನಿರಂತರವಾಗಿ ಕಾರ್ಯ ಮಾಡಬೇಕು.

ಅದಕ್ಕಾಗಿ ಸಾಮಾಜಿಕ ಶಿಕ್ಷಣ ಪಡೆದು ಶಿಕ್ಷಿತರಾಗಬೇಕು.
ಸಾಮಾಜಿಕವಾಗಿ ರಾಷ್ಟ್ರಮಟ್ಟದಲ್ಲಿ ಸಂಘಟಿತರಾಗಬೇಕು.
ಹಾಗೂ ರಾಷ್ಟ್ರಮಟ್ಟದಲ್ಲಿ ಇರುವಾ ಈ ಸಮಸ್ಯೆಯ ವಿರೂಧ್ಧ ಸಾಮಾಜಿಕವಾಗಿ ರಾಷ್ಟ್ರಮಟ್ಟದಲ್ಲಿ ಸಂಘರ್ಷ ಮಾಡಬೇಕು.

ಪ್ರತಿ ಕ್ಷೇತ್ರದಲ್ಲಿಯೂ ಮೂಲನಿವಾಸಿಗರ ಹಿಡಿತ ಸಾಧಿಸಲು ನಾಯಕರ ಕ್ಷಮತೆ ಬೆಳೆಸಬೇಕು.

ಆಗ ಭಾರತದಲ್ಲಿ ಇರುವ 6 ಲಕ್ಷ ಹಳ್ಳಿಗಳಲ್ಲಿ ಮತ್ತು 6743 ಜಾತಿಯಲ್ಲಿ, ನಾಯಕತ್ವದ ಕ್ಷಮತೆಯ ಆಧಾರದ ಮೇಲೆ ಕಡಿಮೆ ಎಂದರೆ 250 ಜನ ಹೆಚ್ಚು ಅಂದರೆ 500 ಜನ ಸೇರಿ ಒಂದೆ ಸಮಯದಲ್ಲಿ ಜನಾಂದೋಲನ ಮಾಡಬೇಕು.

ಜನಾಂದೋಲನ ಆದ ನಂತರ ಬ್ರಾಹ್ಮಣರ ಕಪಿಮುಷ್ಟಿಯಿಂದ ಎಲ್ಲಾ ಕ್ಷೇತ್ರದಲ್ಲು ಸ್ವಾತಂತ್ರ್ಯ ದೊರಕುತ್ತದೆ.
ಆಗ ಮಿಸಲಾತಿ ಪ್ರತಿ ಭಾರತೀಯ ಪ್ರಜೆಗೂ ಸುಲಭವಾಗಿ ತಲುಪುತ್ತದೆ.
ಎಲ್ಲಾ ಜಾತಿಯ ಪ್ರತಿ ನಾಗರಿಕನಿಗು ಮಿಸಲಾತಿ ತಲುಪಿದಾಗ ನಾವು ಭಾರತದ ಮೂಲನಿವಾಸಿಗಳು ಪ್ರಗತಿಯ ಕಡೆಗೆ ಮುನ್ನಡೆಯಲು ಸಾಧ್ಯವಾಗುತ್ತದೆ.
ಆಗ ಜಾತಿ ವ್ಯವಸ್ಥೆ ನಷ್ಟಮಾಡಿ, ಬಳಿಕ ಮಿಸಲಾತಿ ಸುಲಭವಾಗಿ ತೆಗೆದುಹಾಕಬಹುದು.

ಗೆಳೆಯರೆ ಮೊದಲೆ ಹೇಳಿದ ಹಾಗೆ ಶಬ್ದಗಳು ಬರೆಯುವುದು ಸುಲಭ ಆದರೆ ಕಾರ್ಯರೂಪಕ್ಕೆ ತರುವುದು ತುಂಬಾ ಕಠಿಣ.
ಆದರೆ ಈ ಜಾತಿ ವ್ಯವಸ್ಥೆಯ ಪದ್ದತಿ ನಷ್ಟ ಮಾಡಬೇಕು ಅಂದರೆ ಸಮಾಜದಲ್ಲಿ ಬಂದು ಪರಿಶ್ರಮ ಮಾಡಲೆ ಬೇಕು.
ನಮ್ಮ ಮುಂದಿನ ಜನಾಂಗದ ಜವಾಬ್ದಾರಿ ನಮ್ಮ ಕೈಯಲ್ಲಿ ಇದೆ.

ಮೂಲನಿವಾಸಿ ಜನರನ್ನ ಎಚ್ಚರಿಸಿ,
ರಕ್ತದ ಒಂದು ಹನಿ ನೆಲಕ್ಕೆ ತಾಗದೆ,
ಜನಾಂದೋಲನ ಮಾಡಿ,
ಜಾತಿ ನಿರ್ಮುಲನೆಗೊಳಿಸಿ,
ಮಿಸಲಾತಿ ತೆಗೆದು ಹಾಕಿ.

ಬಹುಜನ ಕ್ರಾಂತಿ ಮೋರ್ಚಾ,
ಮೈಸೂರು ವಿಭಾಗದ ಉಸ್ತುವಾರಿ.
ಅನೇಶ ಕಾಂಬಳೆ.