Ullal : June 12 .ಸೈಯ್ಯದ್ ಮದನಿ ದರ್ಗಾ ಉಳ್ಳಾಲ, ಇದರ ಅಧೀನದಲ್ಲಿರುವ ಎಲ್ಲಾ ಮೊಹಲ್ಲಗಳ ಮಸೀದಿಯ ಆಡಳಿತ ಸಮಿತಿ ಹಾಗೂ ಊರಿನ ಎಲ್ಲಾ ನಿವಾಸಿಗಳ ಗಮನಕ್ಕೆ,
ಕೊರೋನ ತೀವೃತೆಯು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವುದನ್ನು ಮನಗಂಡು ಸರಕಾರದ ಆದೇಶ ಮಸೀದಿಗಳನ್ನು ತೆರಯಬಹುದು ಎಂದಿದ್ದರೂ, ಹೆಚ್ಚಿನ ಮುಂಜಾಗರೂಕತೆಗಾಗಿ ಸೈಯ್ಯದ್ ಮದನಿ ದರ್ಗಾ ಉಳ್ಳಾಲ ಇದರ ಅಧೀನದಲ್ಲಿರುವ ಮಸೀದಿಗಳನ್ನು ಇನ್ನೊಂದು ಹಂತದವರೆಗೆ ತೆರೆಯುವುದು ಬೇಡ ಎಂದು ನಮ್ಮ ಕಳೆದ ಸಭೆಯಲ್ಲಿ ತೀರ್ಮಾನಿಸಿ ಅದರ ಸುತ್ತೋಲೆಯನ್ನು ಪ್ರತೀ ಮೊಹಲ್ಲಕ್ಕೂ ಕಳುಹಿಸಲಾಗಿತ್ತು.
ಇದೀಗ ಹಲವಾರು ಮಸೀದಿಗಳು ನಮ್ಮ ರಾಜ್ಯದಲ್ಲಿ ತೆರೆಯಲ್ಪಟ್ಟು ಶಿಸ್ತಿನಿಂದ ಪ್ರತೀಯೊಬ್ಬರೂ ಸಹಕರಿಸುತ್ತಿರುವುದರಿಂದ ಹಾಗೂ ಈ ಕೊರೋನದ ಕೊನೆ ಯಾರೂ ಸರಿಯಾಗಿ ತಿಳಿಯದೇ ಇರುವುದರಿಂದ ನಾವು ಕೂಡಾ ಸರಕಾರದ ಆದೇಶ ಹಾಗೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಹಾಗೂ ಪ್ರತಿಯೊಬ್ಬರೂ ಸದಾ ಜಾಗರೂಕತೆಯಿಂದ ಇದ್ದು ಎಲ್ಲಾ ಮೊಹಲ್ಲದ ಮಸೀದಿಗಳನ್ನು ಇಂದಿನಿಂದ ಪುನರಾರಂಭಿಸ ಬಹುದು ಎಂದು ತಿಳಿಯಪಡಿಸುತ್ತೇವೆ.
*ಪ್ರತೀ ಮೊಹಲ್ಲ ನಿವಾಸಿಗಳ ಮಸೀದಿ ಪ್ರವೇಶಕ್ಕೆ ಈ ಕೆಳಗಿನ ಕೆಲವು ನಿಬಂಧನೆಗಳನ್ನು ವಿಧಿಸಲಾಗಿದೆ. ಅದನ್ನು ಅನುಸರಿಸಿ ಅದರಂತೆ ನಡೆದುಕೊಳ್ಳಬೇಕೆಂದು ಕೋವಿಡ್ ನಿಯಂತ್ರಣ ದಲ್ಲಿ ಸಹಕರಿಸಬೇಕೆಂದು ಸೈಯ್ಯದ್ ಮದನಿ ದರ್ಗಾ ಆಡಳಿತ ಸಮಿತಿಯು ಈ ಪ್ರಕಟನೆಯೊಂದಿಗೆ ತಿಳಿಸುತ್ತಿದೆ*
*1. ಅಝಾನ್ ಗೆ ಐದು ನಿಮಿಷ ಮೊದಲು ಮಸೀದಿ ತೆರೆಯಲಾಗುವುದು ಮತ್ತು ನಮಾಝ ಆದ ತಕ್ಷಣ ಮಸೀದಿಯನ್ನು ಮುಚ್ಚಲಾಗುವುದು ಸುನ್ನತ್ ನಮಾಝ್ ಮನೆಯಲ್ಲಿ ನಿರ್ವಹಿಸಲಾಗುವುದು*
*2. ನಮಾಝ್’ಗೆ ಸಾಲು ನಿಲ್ಲುವಾಗ ಮಾರ್ಕ್ ಹಾಕಲಾಗಿರುವ ಸ್ಥಳದಲ್ಲಿ ನಿಲ್ಲಬೇಕು ಮತ್ತು 2 ಅಡಿ ಅಂತರದಲ್ಲಿ ನಿಲ್ಲಬೇಕು*
*3. ಮನೆಗಳಲ್ಲಿ ವುಝೂ ಮಾಡಿ ಬರಬೇಕು. ಮಸೀದಿಯ ಟಾಯ್ಲೆಟ್ ಹಾಗೂ ವಾಶ್ರೂಮನ್ನು ಬಳಸಬಾರದು .*
*4. ಹ್ಯಾಂಡ್ ಸ್ಯಾನಿಟೈಸರನ್ನು ಬಳಸಬೇಕು. ಮಾಸ್ಕ್ ಹಾಕಿ ಮಸೀದಿಗೆ ಬರಬೇಕು ಮತ್ತು ಮಸೀದಿಯಿಂದ ಹೋಗುವ ತನಕ ಮಾಸ್ಕನ್ನು ತೆಗೆಯಬಾರದು .*
*5. ಯಾರಿಗೂ ಹಸ್ತಲಾಗವ ಮಾಡಬಾರದು ಯಾರನ್ನೂ ಆಲಂಗಿಸಬಾರದು ಕೇವಲ ಸಲಾಂ ಮಾತ್ರ ಹೇಳಿದರೆ ಸಾಕು*
*6. 10 ವರ್ಷದ ಕೆಳಗಿನ ಮಕ್ಕಳು ಮತ್ತು 65 ವರ್ಷದ ಮೇಲಿನ ಹಿರಿಯರು ಮಸೀದಿಗೆ ಬರದಿರುವುದೇ ಉತ್ತಮ ಅವರು ಮನೆಗಳಲ್ಲಿ ನಮಾಝ್ ನಿರ್ವಹಿಸಬೇಕು*
*7. ಮಸೀದಿಗೆ ಬರುವಾಗ ಮುಸಲ್ಲಾಗಳನ್ನು ಅಥವಾ ನಮಾಝ್ ಗಾಗಿ ಹಾಸುವ ಯಾವದೇ ಬಟ್ಟೆಯನ್ನು ತಮ್ಮ ತಮ್ಮ ಮನೆಗಳಿಂದ ತರಬೇಕು ಮತ್ತು ನಮಾಝ್ ನಿರ್ವಹಿಸಿದ ಬಳಿಕ ಅದನ್ನು ಕೊಂಡು ಹೋಗಬೇಕು*
*8. ಅಝಾನ್ ಆಗಿ 5 ನಿಮಿಷಗಳಲ್ಲಿ ನಮಾಝ್ ನಿರ್ವಹಿಸಲಾಗುವುದು ಮತ್ತು ಜುಮಾದ ಅವಧಿಯನ್ನು ಕಡಿತಗೊಳಿಸಲಾಗುವುದು*
*9. ಜ್ಬರ, ಶೀತ ಗಂಟಲು ನೋವು ಕೆಮ್ಮು ಮುಂತಾದ ರೋಗಗಳಿರುಬವರು ದಯವಿಟ್ಟು ಮಸೀದಿಗೆ ಬರಬಾರದು*
*10. ವಿದೇಶಗಳಿಂದ ಹಾಗು ಹೊರ ರಾಜ್ಯಗಳಿಂದ ಬಂದವರು ಕ್ವಾರಂಟೈನ್ ಮುಗಿಸಿದ ಪ್ರಮಾಣಪತ್ರ ತೋರಿಸದೆ ಮಸೀದಿ ಪ್ರವೇಶಿಸಬಾರದು*
*11. ಮಸೀದಿಯೊಳಗೆ ಅಥವಾ ಮಸೀದಿಯ ಅಂಗಳದಲ್ಲಿ ಗುಂಪುಗೂಡಿ ನಿಲ್ಲಬಾರದು ನಮಾಝ್ ಆದ ತಕ್ಷಣ ಅವರವರ ಮನೆಗೆ ತರಳಬೇಕು*
*12. ಈ ಊರಿಗೆ ಸಂಬಂಧ ಪಡದವರು ಹಾಗೂ ದಾರಿಹೋಕರು ಅವರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿದ ಸ್ಥಳದಲ್ಲಿ ನಮಾಝ್ ನಿರ್ವಹಿಸುವುದು*
*ಅಧ್ಯಕ್ಷರು*
*ಸೈಯ್ಯದ್ ಮದನಿ ದರ್ಗಾ ಉಳ್ಳಾಲ, ಆಡಳಿತ