*ಸಂಕಷ್ಟಕ್ಕೆ ಸಿಲುಕಿಕೊಂಡಿರುವ ವಲಸಿಗರಿಗೆ ಬಟ್ಟೆಬರೆ ಮತ್ತು ಪಾದರಕ್ಷೆ ವಿತರಣೆ ನಡೆಸಿದ “ಟೀಮ್ ಬಿ-ಹ್ಯೂಮನ್” : *

ಕೋವಿಡ್-19 ಮಹಾಮಾರಿಯಿಂದ ದೇಶದಲ್ಲಿ ಸಂಕಷ್ಟಗಳು ಎದುರಾಗಿದ್ದರೂ, ಅದರಲ್ಲಿಯೂ ಅತೀ ಹೆಚ್ಚು ಸಂಕಷ್ಟದಲ್ಲಿ ಸಿಲುಕಿದವರು ನಾನಾ ರಾಜ್ಯದ ವಲಸೆ ಕಾರ್ಮಿಕರು. ಇಂತಹ ಸಂಕಷ್ಟಕ್ಕೊಳಗಾದ ವಲಸೆ ಕಾರ್ಮಿಕರಿಗೆ ಮಂಗಳೂರಿನ ಸಮಾಜ ಸೇವಾ ಸಂಸ್ಥೆ *“ಟೀಮ್ ಬಿ-ಹ್ಯೂಮನ್ “* ಕೋರೋಣ ಲಕ್ಡೌನ್ ನ ಪ್ರಾರಂಭದಿಂದಲೂ ವಲಸೆ ಕಾರ್ಮಿಕರಿಗೆ ತಾವು ಇರುವ ಸ್ಥಳಗಳಿಗೆ ತೆರಳಿ ಪ್ರತಿದಿನ ಆಹಾರ ಪೊಟ್ಟಣ, ಅರ್ಹ ಕುಟುಂಬಗಳಿಗೆ ಕೋವಿಡ್ ಕಿಟ್ ಮತ್ತು ರಂಜಾನ್ ಕಿಟ್ ವಿತರಿಸುತ್ತಾ ಸಾವಿರಾರು ಜನರ ಹಸಿವು ನೀಗಿಸಿ ನೆರವಾಗಿದೆ. ಅದಲ್ಲದೆ ಹಲವಾರು ವೈದ್ಯಕೀಯ ನೆರವು ನೀಡುತ್ತಾ ಬಂದಿದೆ.
*ಕೆಲವು ದಿನಗಳ ಹಿಂದೆ ಕೆಲವು ವಲಸೆ ಕಾರ್ಮಿಕರು ತಮ್ಮ ಊರಿಗೆ ತೆರಳಿದರೆ, ಇನ್ನೂ ಹಲವರು ತಮ್ಮ ಊರುಗಳಿಗೆ ಹೋಗದೆ ಇಲ್ಲಿಯೇ ಸಂಕಷ್ಟದಲ್ಲಿ ದಿನಕಳೆಯುತ್ತಿದ್ದಾರೆ. ಅಂತಹಾ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು ತಂಗಿರುವ ಸ್ಥಳಗಳಿಗೆ ತೆರಳಿ “ಟೀಮ್ ಬಿ-ಹ್ಯೂಮನ್” ಪುರುಷರಿಗೆ, ಮಹಿಳೆಯರಿಗೆ ಮತ್ತು ತಮ್ಮ ಮಕ್ಕಳಿಗೆ ಧರಿಸಲು ಬೇಕಾಗುವಂತಹ ವಸ್ತ್ರಗಳು ಮತ್ತು ಪಾದರಕ್ಷೆಗಳನ್ನು ವಿತರಿಸಿತು.*

Mangalore news jun 8