ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ – ಈವರೆಗಿನ ಪ್ರಗತಿ

ಹಾಕಲಾದ ದಿನಾಂಕ: 03 JUN 2020 9:09AM by PIB Bengaluru

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ –ಈವರೆಗಿನ ಪ್ರಗತಿ

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್:ಸುಮಾರು 42 ಕೋಟಿ ಬಡ ಜನತೆಗೆ 53,248ಕೋಟಿ ರೂಆರ್ಥಿಕ ನೆರವು

 

ಕೇಂದ್ರ ಸರ್ಕಾರ ಘೋಷಿಸಿದ್ದ 1.70 ಲಕ್ಷ ಕೋಟಿರೂ.ಗಳ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ನ ಭಾಗವಾಗಿ ಬಡವರು, ಹಿರಿಯ ನಾಗರಿಕರು, ರೈತರುಮತ್ತು ಮಹಿಳೆಯರಿಗೆ ಉಚಿತ ಆಹಾರ ಧಾನ್ಯ ಹಾಗುನಗದು ಪಾವತಿ ಮಾಡಲಾಗಿದೆ. ಕ್ಷಿಪ್ರಗತಿಯಲ್ಲಿ ಈಪ್ಯಾಕೇಜ್ ಅನುಷ್ಠಾನಗೊಳಿಸಲಾಗುತ್ತಿದ್ದು, ಕೇಂದ್ರಮತ್ತು ರಾಜ್ಯ ಸರ್ಕಾರಗಳು ಅದರ ಮೇಲೆ ನಿರಂತರನಿಗಾ ಇರಿಸಿವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣಪ್ಯಾಕೇಜ್(ಪಿಎಂಜಿಕೆಪಿ) ಅಡಿಯಲ್ಲಿ ಈವರೆಗೆಸುಮಾರು 42 ಕೋಟಿ ಬಡಜನರು 53,248 ರೂ.ಆರ್ಥಿಕ ನೆರವನ್ನು ಸ್ವೀಕರಿಸಿದ್ದಾರೆ. ಪಿಎಂಜಿಕೆಪಿಅಡಿಯ ನಾನಾ ವಿಭಾಗಗಳಲ್ಲಿ ಈವರೆಗೆ ಸಾಧಿಸಿರುವಪ್ರಗತಿಯ ವಿವರ ಈ ಕೆಳಗಿನಂತಿದೆ.

· ಪಿಎಂ-ಕಿಸಾನ್ ಯೋಜನೆ ಅಡಿಮೊದಲ ಕಂತಿನ ಪಾವತಿಗೆ 8.19ಕೋಟಿ ಫಲಾನುಭವಿಗಳಿಗೆ 16394ಕೋಟಿ ರೂ. ಹಣ ಪಾವತಿಸಲಾಗಿದೆ.

· ಮಹಿಳಾ ಜನ್ ಧನ್ ಖಾತೆಹೊಂದಿರುವ 20.5 ಕೋಟಿಫಲಾನುಭವಿಗಳಿಗೆ (ಶೇ.98.33)ಮಂದಿಗೆ ಮೊದಲ ಕಂತಿನ 10029ಕೋಟಿ ರೂ. ಜಮೆ ಮಾಡಲಾಗಿದೆ.ಪಿಎಂಜೆಡಿವೈ ಮಹಿಳಾ ಖಾತೆದಾರರಸಂಖ್ಯೆಗೆ ಗ್ರಾಹಕ ಪ್ರೇರಿತ ಮೊದಲಕಂತಿನ 8.72 (ಶೇ.44ರಷ್ಟು) ಹಣಪಾವತಿಸಲಾಗಿದೆ. 20.62 ಕೋಟಿ(ಶೇ.100ರಷ್ಟು) ಮಹಿಳಾ ಜನ್ ಧನ್ಖಾತೆದಾರರಿಗೆ ಎರಡನೇ ಕಂತಿನ10,315 ಕೋಟಿ ರೂ. ಹಣ ಜಮೆಮಾಡಲಾಗಿದೆ. ಪಿಎಂಜೆಡಿವೈ ಖಾತೆಹೊಂದಿರುವ ಮಹಿಳೆಯರಿಗೆ ಅವರಖಾತೆಗಳಿಗೆ ಎರಡನೇ ಕಂತಿನ ಗ್ರಾಹಕಪ್ರೇರಿತ ಹಣ 9.7ಕೋಟಿ(ಶೇ.47ರಷ್ಟು)ಪಾವತಿಸಲಾಗಿದೆ.

· ಒಟ್ಟು ಸುಮಾರು 2.81 ಕೋಟಿವೃದ್ಧರಿಗೆ, ವಿಧವೆಯರಿಗೆ ಮತ್ತುವಿಶೇಷಚೇತನರಿಗೆ ಎರಡು ಕಂತಿನಲ್ಲಿ2814.5 ಕೋಟಿ ರೂ. ಹಣ ಜಮೆಮಾಡಲಾಗಿದೆ. ಎರಡು ಕಂತಿನಲ್ಲಿಎಲ್ಲಾ 2.81 ಕೋಟಿಫಲಾನುಭವಿಗಳಿಗೆ ನಗದುವರ್ಗಾವಣೆ ಮಾಡಲಾಗಿದೆ.

· ಸುಮಾರು 2.3 ಕೋಟಿ ಕಟ್ಟಡಮತ್ತು ಇತರೆ ನಿರ್ಮಾಣ ಕಾರ್ಮಿಕರು4312.82 ಕೋಟಿ ರೂ. ಆರ್ಥಿಕನೆರವು ಸ್ವೀಕರಿಸಿದ್ದಾರೆ.

· ಈವರೆಗೆ ಏಪ್ರಿಲ್ ತಿಂಗಳಿಗೆ 36ರಾಜ್ಯಗಳು ಮತ್ತು ಕೇಂದ್ರಾಡಳಿತಪ್ರದೇಶಗಳು 101 ಲಕ್ಷ ಮೆಟ್ರಿಕ್ ಟನ್ಆಹಾರಧಾನ್ಯಗಳನ್ನು ಎತ್ತುವಳಿಮಾಡಿವೆ. ಆ ಪೈಕಿ 36.93 ಲಕ್ಷಮೆಟ್ರಿಕ್ ಟನ್ ಆಹಾರಧಾನ್ಯಗಳನ್ನು2020ರ ಏಪ್ರಿಲ್ ನಲ್ಲಿ 36 ರಾಜ್ಯಗಳುಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ73.86 ಕೋಟಿ ಫಲಾನುಭವಿಗಳಿಗೆವಿತರಿಸಲಾಗಿದೆ. ಮೇ 2020ರಲ್ಲಿ 35ರಾಜ್ಯಗಳು/ಕೇಂದ್ರಾಡಳಿತಪ್ರದೇಶಗಳಲ್ಲಿ 65.85 ಕೋಟಿಫಲಾನುಭವಿಗಳಿಗೆ 32.92 ಲಕ್ಷಮೆಟ್ರಿಕ್ ಟನ್ ಆಹಾರಧಾನ್ಯಗಳನ್ನುವಿತರಿಸಲಾಗಿದೆ. ಜೂನ್ 2020ರಲ್ಲಿ17 ರಾಜ್ಯಗಳು/ ಕೇಂದ್ರಾಡಳಿತಪ್ರದೇಶಗಳಲ್ಲಿ 7.16 ಕೋಟಿಫಲಾನುಭವಿಗಳಿಗೆ 3.58 ಲಕ್ಷಮೆಟ್ರಿಕ್ ಟನ್ ಆಹಾರಧಾನ್ಯಗಳನ್ನುವಿತರಿಸಲಾಗಿದೆ. ನಾನಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು5.06 ಲಕ್ಷ ಮೆಟ್ರಿಕ್ ಟನ್ಬೇಳೆಯನ್ನು ರವಾನಿಸಲಾಗಿದೆ.ಈವರೆಗೆ 19.4 ಕೋಟಿಫಲಾನುಭವಿಗಳ ಪೈಕಿ 17.9 ಕೋಟಿಕುಟುಂಬಗಳಿಗೆ 1.91 ಲಕ್ಷ ಮೆಟ್ರಿಕ್ಟನ್ ಬೇಳೆಯನ್ನು ವಿತರಿಸಲಾಗಿದೆ.

· ಪಿಎಂಯುವೈ ಯೋಜನೆ ಅಡಿಯಲ್ಲಿಈವರೆಗೆ ಒಟ್ಟು 9.25 ಕೋಟಿಸಿಲಿಂಡರ್ ಗಳನ್ನು ಬುಕ್ಮಾಡಲಾಗಿದೆ. ಈವರೆಗೆ 8.58ಕೋಟಿ ಪಿಎಂಯುವೈಫಲಾನುಭವಿಗಳಿಗೆ ಉಚಿತಸಿಲಿಂಡರ್ ಗಳನ್ನು ವಿತರಿಸಲಾಗಿದೆ.

· ಮರುಪಾವತಿಸಲಾಗದ ಮುಂಗಡಆನ್ ಲೈನ್ ವಾಪಸ್ ಪ್ರಯೋಜನದಮೂಲಕ 16.1 ಲಕ್ಷ ಇಪಿಎಫ್ಒಸದಸ್ಯರು ಈವರೆಗೆ ತಮ್ಮಇಪಿಎಫ್ಒ ಖಾತೆಗಳಿಂದ 4725ಕೋಟಿ ರೂ. ವಾಪಸ್ ಪಡೆದಿದ್ದಾರೆ.

· ಮನ್ರೇಗಾದಡಿ ಹೆಚ್ಚಳ ಮಾಡಲಾದಕೂಲಿ ದರದ ಅಧಿಸೂಚನೆಯನ್ನು01-04-2020ರಿಂದ ಜಾರಿಗೆಬರುವಂತೆ ಹೊರಡಿಸಲಾಗಿದೆ. ಪ್ರಸಕ್ತಹಣಕಾಸು ವರ್ಷದಲ್ಲಿ 48.13ಕೋಟಿ ಮಾನವ ದಿನದಉದ್ಯೋಗಗಳನ್ನು ಸೃಷ್ಟಿಸಲಾಗಿದೆ.ಅಲ್ಲದೆ ವೇತನ ಮತ್ತುಸಾಮಗ್ರಿಗಳಿಗಾಗಿ ರಾಜ್ಯಗಳಿಗೆ ಬಾಕಿಇದ್ದ 28,729 ಕೋಟಿ ರೂ.ಗಳನ್ನುಬಿಡುಗಡೆ ಮಾಡಲಾಗಿದೆ.

· 59.23 ಲಕ್ಷ ಉದ್ಯೋಗಿಗಳ ಖಾತೆಗೆಶೇ.24ರಷ್ಟು ಇಪಿಎಫ್ ವಂತಿಗೆಪಾವತಿಗೆ 895.09 ಕೋಟಿ ರೂ. ಹಣವರ್ಗಾಯಿಸಲಾಗಿದೆ.

ಪ್ರಧಾನಮಂತ್ರಿ ಗರೀಬ್ಕಲ್ಯಾಣ ಪ್ಯಾಕೇಜ್

2/06/2020ವರೆಗೆ ಆಗಿರುವಒಟ್ಟು ನೇರ ನಗದು ವರ್ಗಾವಣೆ

ಯೋಜನೆಗಳು ಫಲಾನುಭವಿಗಳ ಸಂಖ್ಯೆ ಮೊತ್ತ
ಪಿಎಂಜೆಡಿವೈ ಮಹಿಳಾ ಖಾತೆದಾರರಿಗೆಬೆಂಬಲ 1ನೇ ಕಂತು – 20.05 ಕೋಟಿ(98.3%)

2ನೇ ಕಂತು–20.63 ಕೋಟಿ

1ನೇ ಕಂತು – 10029 ಕೋಟಿ

2ನೇ ಕಂತು – 10315ಕೋಟಿ

ಎನ್ಎಸ್ಎಪಿ ಅಡಿ ಬೆಂಬಲ(ವಯಸ್ಸಾದವಿಧವೆಯರು, ದಿವ್ಯಾಂಗರು, ಹಿರಿಯನಾಗರಿಕರು) 2.81 ಕೋಟಿ (100%) 1ನೇ ಕಂತು – 1407 ಕೋಟಿ

2ನೇ ಕಂತು – 1407 ಕೋಟಿ

ಪಿಎಂ-ಕಿಸಾನ್ ಅಡಿಯಲ್ಲಿ ಮೊದಲ ಕಂತಿನಹಣ ಪಾವತಿ 8.19 ಕೋಟಿ 16394 ಕೋಟಿ
ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ಬೆಂಬಲ 2.3 ಕೋಟಿ 4313 ಕೋಟಿ
ಇಪಿಎಫ್ಒಗೆ ಶೇ.24ರಷ್ಟು ವಂತಿಗೆ .59 ಕೋಟಿ 895 ಕೋಟಿ
ಉಜ್ವಲ 1ನೇ ಕಂತು – 7.48

1ನೇ ಕಂತು – 4.48

8488 ಕೋಟಿ
ಒಟ್ಟಾರೆ 42 ಕೋಟಿ 53248 ಕೋಟಿ

 

***(ಪ್ರಕಟಣೆ ಐ.ಡಿ.: 1628926)