ಅಗ್ರಿ ಟೂರಿಸಂ ಪ್ರಾರಂಭಿಸಲು ಯೋಜನೆ
ಬೆಂಗಳೂರು, ಮೇ 29 ( ಕರ್ನಾಟಕ ವಾರ್ತೆ ):

ಕೋವಿಡ್-19 ಕಾರಣದಿಂದ ಅತ್ಯಂತ ಹೆಚ್ಚು ನಷ್ಟಕ್ಕೆ ಒಳಗಾಗಿರುವ ಪ್ರವಾಸೋದ್ಯಮವನ್ನು ಬಲಪಡಿಸುವ ನಿಟ್ಟಿನಲ್ಲಿ ಕೃಷಿ ಹಾಗೂ ಗ್ರಾಮೀಣ ಸಂಸ್ಕøತಿ ಒಳಗೊಂಡ ಅಗ್ರಿ ಟೂರಿಸಂ ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಸಿ.ಟಿ.ರವಿ ಅವರು ತಿಳಿಸಿದರು.
ಅವರು ಇಂದು ನಗರದ ಕುಮಾರಕೃಪ ಅತಿಥಿ ಗೃಹದಲ್ಲಿ ಕೃಷಿ ಸಚಿವರು ಹಾಗೂ ತೋಟಗಾರಿಕೆ ಮತ್ತು ಪೌರಾಡಳಿತ ಇಲಾಖೆಯ ಸಚಿವರುಗಳೊಂದಿಗೆ ಜಂಟಿಯಾಗಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟದಲ್ಲಿ “ಅಗ್ರಿ ಟೂರಿಸಂ” ಅಥವಾ “ಕೃಷಿ ಪ್ರಧಾನ” ಒಂದು ಹೊಸ ಪರಿಕಲ್ಪನೆಯಾಗಿದ್ದು ಈ ಯೋಜನೆ ಕೃಷಿ, ತೋಟಗಾರಿಕೆ, ಸಂಸ್ಕøತಿ ಮತ್ತು ಪ್ರವಾಸೋದ್ಯಮ ಸಮ್ಮಿಲನವಾಗಿದೆ. ಈ ಮೂರು ಇಲಾಖೆಗಳ ಸಮನ್ವಯದಲ್ಲಿ ಕರ್ನಾಟಕ ಟೂರಿಸಂ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಕೃಷಿಯ ಕಡೆಗೆ ಜನರಲ್ಲಿ ಅರಿವು ಮತ್ತು ಹೆಮ್ಮೆ ಮೂಡಿಸುವುದು ಮತ್ತು ಕೃಷಿ ಪ್ರವಾಸಗಳ ಮೂಲಕ ರೈತರು ಮತ್ತು ಗ್ರಾಮೀಣ ಸಮುದಾಯಗಳ ಸಾಮಾಜಿಕ- ಆರ್ಥಿಕ ಅಭಿವೃದ್ಧಿಗೆ ಅನುವು ಮಾಡಿಕೊಡುವುದು ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಹಕರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಇದು ನಗರವಾಸಿಗಳಿಗೆ ಕೃಷಿಯ ಬಗ್ಗೆ ತಿಳಿಯಲು ಮತ್ತು ರೈತರಿಗೆ ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಹಾಯಕಾರಿ. ಈ ಯೋಜನೆಯಿಂದ ಉದ್ಯೋಗ ಸೃಷ್ಠಿಯಾಗುವುದರ ಜೊತೆಗೆ ಗ್ರಾಮೀಣ ಅಭಿವೃದ್ಧಿಗೂ ಒತ್ತು ನೀಡುತ್ತದೆ. ಈ ನೂತನ ಪ್ರಯೋಗದಿಂದ ಪಟ್ಟಣವಾಸಿಗರು ತಮ್ಮ ದೈನಂದಿನ ಒತ್ತಡದ ಜೀವನಶೈಲಿಯಿಂದ ಹೊರಬಂದು ನೈಜ ಗ್ರಾಮೀಣ ಬದುಕನ್ನು ಮತ್ತು ಆಹಾರವನ್ನು ಸವಿಯಲು ಹಾಗ ಸ್ವತ: ವಿವಿಧ ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಅವುಗಳನ್ನು ಪರಿಚಯಿಸಿಕೊಳ್ಳಲು ಅನುಕೂಲವಾಗಲಿದೆ.
ನಗರ ಮತ್ತು ಗ್ರಾಮೀಣ ಸಂಸ್ಕøತಿಗಳ ನಡುವಿನ ಸಂಪರ್ಕಕ್ಕಾಗಿ ಸಾಮಾನ್ಯ ಪ್ರವಾಸದ ಅನುಭವಕ್ಕಿಂತ ಕೃಷಿ ಪ್ರವಾಸಗಳು ನೈಜ ಜೀವನದ ಉತ್ಸಾಹಭರಿತ ಅನುಭವಗಳನ್ನು ನೀಡುತ್ತದೆ. ಕೃಷಿ ಪ್ರವಾಸಲದಲಿ ವಿವಿಧ ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟು ಪ್ರವಾಸಿಗರಿಗೆ ಪರಿಣಾಮಕಾರಿಯಾದ ಅನುಭವಗಳನ್ನು ನೀಡಿದಂತಾಗುತ್ತದೆ. ಪ್ರವಾಸಿಗರು ಸ್ವತ: ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಲು ಅಂದರೆ ನಾಟಿ ಮಾಡುವುದು, ಬೀಜಗಳ ಭಿತ್ತನೆ, ಕಟಾವು ಮಾಡುವುದು ಸಂಸ್ಕರಣೆಯಂತಹ ಅನುಭವ ಪಡೆಯಬಹುದು.
ಗ್ರಾಮೀಣ ಕರಕುಶಲ ವಸ್ತುಗಳು, ಉಡುಗೆಗಳು, ತಾಜಾ ಕೃಷಿ ಉತ್ಪನ್ನಗಳು, ಆಹಾರ ಪದಾರ್ಥಗಳನ್ನು ಕಡಿಮೆ ದರದಲ್ಲಿ ರೈತರ ತೋಟದಲ್ಲಿಯೇ ಪ್ರವಾಸಿಗರು ಖರೀದಿಸುವುದರಿಂದ ಕೃಷಿಕರ ಆದಾಯ ಹೆಚ್ಚುತ್ತದೆ. ಹೀಗೆ ಅಗ್ರಿ ಟೂರಿಸಂ ಪ್ರವಾಸೋದ್ಯಮವನ್ನು ಉತ್ತೇಜಿಸುವುದರ ಜೊತೆಗೆ ಕೃಷಿಕರ ಆದಾಯವನ್ನು ಸಹ ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಲೇಗಾಂ ಹಾಗೂ ಪುಣೆ ಜಿಲ್ಲೆಯ ಬಾರಮತಿ ಗ್ರಾಮಗಳಲ್ಲಿ ಕೃಷಿ ಪ್ರವಾಸವನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರೇತರ ಸಂಸ್ಥೆಗಳು ಯಶಸ್ವಿಯಾಗಿವೆ.
ಕರ್ನಾಟಕದ ಬಹು ಸಂಸ್ಕøತಿಯ ಪ್ರವಾಸಿಗರಿಗೆ ಕಟ್ಟಿಕೊಡಲು ಇದೊಂದು ಮಹತ್ವದ ವೇದಿಕೆಯಾಗಿದೆ. ಕರ್ನಾಟಕದಲ್ಲಿ ಈಗಾಗಲೇ ವೈನ್ ಟೂರಿಸಂ, ಮ್ಯಾಂಗೋ ಟೂರಿಸಂ, ಆರ್ಗಾನಿಕ್ ಟೂರಿಸಂ ಅಲ್ಲಲ್ಲಿ ಚಾಲ್ತಿಯಲ್ಲಿದ್ದು ಇದಕ್ಕೆ ಪ್ರವಾಸೋದ್ಯಮದ ಪರಿಕಲ್ಪನೆಯ ಆಯಾಮ ನೀಡಲಾಗುವುದು. ಕರ್ನಾಟಕದಲ್ಲಿ ಆರಂಭಿಕವಾಗಿ ನಾಲ್ಕು ಸ್ಥಳಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸಿ ಇವುಗಳ ಯಶಸ್ಸಿನ ಆಧಾರದ ಮೇಲೆ ಕನಿಷ್ಠ 200 ಸ್ಥಳಗಳಲ್ಲಿ ವಿಸ್ತರಿಸುವ ಯೋಜನೆ ಹೊಂದಿದ್ದು, ಸರ್ಕಾರದ ವಿವಿಧ ಇಲಾಖೆಗಳ ಸಮನ್ವಯದೊಮದಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿ ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈ ಚರ್ಚೆಯಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಮಾತನಾಡಿ ಇದೊಂದು ಮಹತ್ವಂಕಾಕ್ಷಿ ಯೋಜನೆಯಾಗಿದ್ದು, ಇಲ್ಲಿಯವರೆಗೆ ಎರಡು ಹಂತದ ಚರ್ಚೆಗಳು ನಡೆದಿದೆ. ವಿದೇಶಗಳಲ್ಲಿ ಬಹುತೇಕ ಮಾನವ ನಿರ್ಮಿತ ಸೌಂದರ್ಯ ಆಕರ್ಷಿಣೀಯ ಪ್ರವಾಸಿತಾಣಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ, ನಮ್ಮ ದೇಶದಲ್ಲಿ ನ್ಯಾಚುರಲ್ಲಾಗಿ ಅತ್ಯಂತ ಹೆಚ್ಚಿನ ಆಕರ್ಷಣೀಯ ಸ್ಥಳಗಳಿದ್ದು, ಅಗ್ರಿ ಟೂರಿಸಂ ನಮ್ಮ ಶಕ್ತಿಯಾಗಿದೆ ಎಂದು ಹೇಳಿದರು.
ಪ್ರತಿ ಜಿಲ್ಲೆಗೊಂದು ಸಂಸ್ಕøತಿ ಹೊಂದಿರುವ ನಮ್ಮ ಕರ್ನಾಟಕ ಸಾಂಸ್ಕøತಿಕವಾಗಿ ಅತ್ಯಂತ ಶ್ರೀಮಂತ ರಾಜ್ಯವಾಗಿದೆ. ಪ್ರವಾಸೋದ್ಯಮ ಇಲಾಖೆಯೊಂದಿಗೆ ಕೈಜೋಡಿಸಿ ಕೃಷಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.
ತೋಟಗಾರಿಕೆ ಮತ್ತು ಪೌರಾಡಳಿತ ಇಲಾಖೆ ಸಚಿವ ನಾರಾಯಣ ಗೌಡ ಅವರು ಮಾತನಾಡಿ ತೋಟಗಾರಿಕೆ ಮತ್ತು ರೇಷ್ಮೆಯನ್ನು ಕೇಂದ್ರಿಕರಿಸಿ ರೈತರಿಗೆ ಶಕ್ತಿ ತುಂಬುವ ಉದ್ದೇಶ ಹೊಂದಲಾಗಿದೆ. ಕೃಚಿಗೆ ಮುಖ್ಯವಾಗಿ ಮಾರ್ಕೆಟಿಂಗ್ ಮತ್ತು ಪಬ್ಲಿಸಿಟಿ ಅವಶ್ಯಕತೆ ಇದ್ದು ಇದರಿಂದ ಸಹಕಾರಿಯಾಗಲಿದೆ ಎಂದು ಹೇಳಿದರು.

ಶೂನ್ಯ ತ್ಯಾಜ್ಯ ಕ್ಯಾಂಪಸ್ ಆಗಿ ಜಿಕೆವಿಕೆ

ಬೆಂಗಳೂರು, ಮೇ 29 ( ಕರ್ನಾಟಕ ವಾರ್ತೆ ):
ಪ್ಲಾsಸ್ಟ್ಟಿಕ್ ಮುಕ್ತ, ಪರಿಸರ ಸ್ನೇಹಿ, ಸೈಕಲ್ ಸವಾರಿ, ಸೌರ ವಿದ್ಯುತ್ ಮತ್ತು ಬ್ಯಾಟರಿ ಚಾಲಿತ ಬಗಿಗೆ (ಲಘುವಾಹನ) ಹಾಗೂ ಕೃಷಿ ತ್ಯಾಜ್ಯದಿಂದ ಎರೆಗೊಬ್ಬರಕ್ಕೆ ಹೆಸರುವಾಸಿಯಾಗಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಿಕೆವಿಕೆ ಆವರಣವು “ಶೂನ್ಯ ತ್ಯಾಜ್ಯ ಕ್ಯಾಂಪಸ್” ವಲಯವಾಗುತ್ತಿದೆ. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಐ.ಟಿ.ಸಿ (ಭಾರತೀಯ ತಂಬಾಕು ಕಂಪನಿ)ಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ಕೃಷಿ ವಿಶ್ವವಿದ್ಯಾನಿಲಯದ ವಿವಿಧ ಕಛೇರಿಗಳು / ವಿಭಾಗಗಳು ಹಳೆಯ ಕಾಗದ, ಹಳೆ ಪುಸ್ತಕಗಳು, ಹಳೆ ದಿನ ಪತ್ರಿಕೆಗಳು, ಪ್ಲಾಸ್ಟಿಕ್, ಇ-ವೇಸ್ಟ್, ಮುಂತಾದ ಅನುಪಯುಕ್ತ ವಸ್ತುಗಳನ್ನು ಆಸ್ತಿ ಅಧಿಕಾರಿಗಳ, ಉಗ್ರಾಣ ಖರೀದಿ ಅಧಿಕಾರಿಗಳ ಕಛೇರಿಯಲ್ಲಿ ಸಂಗ್ರಹಿಸಲಾಗುವುದು. ಹದಿನೈದು ದಿನಕ್ಕೊಮ್ಮೆ / ತಿಂಗಳಿಗೊಮ್ಮೆ ಈ ವಸ್ತುಗಳನ್ನು ಐ.ಟಿ.ಸಿ. ಕಂಪನಿಯವರು ತೆಗೆದುಕೊಂಡು ಹೊಸ ಕಾಗದ / ಫೈಲ್‍ಗಳನ್ನು, ಇನ್ನಿತರೆ ವಸ್ತುಗಳನ್ನು ಬದಲಾಗಿ ನೀಡುತ್ತಾರೆ. ಈ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ಕುಲಪತಿಗಳಾದ ಡಾ. ಎಸ್. ರಾಜೇಂದ್ರಪ್ರಸಾದ್ ರವರು ಒಂದು ಟನ್ ಹಳೆ ಕಾಗದವನ್ನು ಪುನರ್ ಬಳಕೆ ಮಾಡುವುದರಿಂದ ಶೇಕಡಾ 70ರಷ್ಟು ಕಚ್ಚಾವಸ್ತು, ಶೇಕಡಾ 60ರಷ್ಟು ಕಲ್ಲಿದ್ದಲು ಮತ್ತು ಶೇಕಡಾ 43ರಷ್ಟು ಶಕ್ತಿ ಉಳಿತಾಯವಾಗುತ್ತದೆ. ಭಾರತದಲ್ಲಿ ವಾರ್ಷಿಕವಾಗಿ ಮೂರು ದಶಲಕ್ಷ ಟನ್ ಹಳೆ ಕಾಗದವನ್ನು ಸಂಗ್ರಹಿಸಲಾಗುತ್ತಿದೆ, ಇದು ಶೇಕಡಾ 20ರಷ್ಟು ಮಾತ್ರ. ನಮ್ಮ ದೇಶವು ಅಭಿವೃದ್ಧಿ ಹೊಂದಿದ ದೇಶಗಳಿಂದ ಪ್ರಮುಖವಾಗಿ ಅಮೇರಿಕಾದಿಂದ ಪ್ರತಿ ವರ್ಷ ನಾಲ್ಕು ದಶಲಕ್ಷ ಟನ್ ತ್ಯಾಜ್ಯ ಕಾಗದವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.
ಜರ್ಮನಿ ಶೇಕಡಾ 73, ಸ್ವೀಡನ್ 69 ಮತ್ತು ಜಪಾನ್ ಶೇಕಡಾ 60ರಷ್ಟು ತ್ಯಾಜ್ಯ ಕಾಗದವನ್ನು ಸಂಗ್ರಹಿಸಲಾಗುತ್ತದೆ. ಕಾಗದವನ್ನು 5 ರಿಂದ 7 ಬಾರಿ ಮರುಬಳಕೆ ಮಾಡಬಹುದು. ಒಂದು ಟನ್ ಮರುಬಳಕೆಯ ಕಾಗದವು 17 ಮರಗಳ ಜೀವ ಉಳಿಸುತ್ತದೆ. ಈ 17 ಮರಗಳು ಪ್ರತಿ ವರ್ಷ 250 ಪೌಂಡ್ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳುತ್ತವೆ ಮತ್ತು ಸುಡುವಿಕೆಯಿಂದ 1500 ಪೌಂಡ್ ಕಾರ್ಬನ್ ಡೈ ಆಕ್ಸೈಡ್ ವಾತಾವರಣಕ್ಕೆ ಸೇರಿಸುತ್ತದೆ. ಈ ಸಂದರ್ಭದಲ್ಲಿ ಭಾರತೀಯ ತಂಬಾಕು ಸಂಸ್ಥೆಯ ವಿಭಾಗೀಯ ವ್ಯವಸ್ಥಾಪಕರಾದ ಶ್ರೀ ಪಂಚಾಸ್, ಕಾರ್ಯಕ್ರಮ ಸಂಘಟಕರಾದ ಶ್ರೀ ಸಂಗಾ ಮತ್ತು ಪ್ರೊ. ಕೆ.ಪಿ. ಚಿನ್ನಸ್ವಾಮಿ, ನೊಡಲ್ ಅಧಿಕಾರಿ, ಕೃಷಿ ಶಿಕ್ಷಣ, ಭಾರತೀಯ ಅನುಸಂದಾನ ಪರಿಷತ್ತು ಇವರು ಉಪಸ್ಥಿತರಿದ್ದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

 

ಸಚಿವರ ಪ್ರವಾಸ
ಬೆಂಗಳೂರು, ಮೇ 29 ( ಕರ್ನಾಟಕ ವಾರ್ತೆ ):
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ್ ಶೆಟ್ಟರ್ ಅವರು ಮೇ 30 ರಂದು ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಅಂದೇ ರಾತ್ರಿ ಕೇಂದ್ರಸ್ಥಾನಕ್ಕೆ ಹಿಂತಿರುಗುವರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

 

ಸಮಗ್ರ ಜ್ಞಾನ ಕನ್ನಡದಲ್ಲಿ ಲಭ್ಯವಾಗಬೇಕು: ಪ್ರೊ.ವೈ.ಎಸ್.ಸಿದ್ದೇಗೌಡ
ಬೆಂಗಳೂರು, ಮೇ 29 ( ಕರ್ನಾಟಕ ವಾರ್ತೆ ):
ಪ್ರಪಂಚದ ಸಮಗ್ರಜ್ಞಾನವೂ ಕನ್ನಡ ಭಾಷೆಯಲ್ಲಿ ಮುಕ್ತವಾಗಿ ಲಭ್ಯವಾಗಬೇಕು. ಅದಕ್ಕಾಗಿ ಕನ್ನಡ ತಂತ್ರಾಂಶಗಳು ಆವಿಷ್ಕಾರವಾಗಬೇಕಿದೆ ಹಾಗಿದರೆ ಮಾತ್ರ ಅಂತರ್ಜಾಲದಲ್ಲಿ ಕನ್ನಡ ಬಳಕೆ ವಿಸ್ತಾರಗೊಳ್ಳಲಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ವೈ.ಎಸ್. ಸಿದ್ದೇಗೌಡರು ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆಯ ಕೋಶ(Iಕಿಂಅ)ದ ಸಂಯುಕ್ತಾಶ್ರಯದಲ್ಲಿ ನಡೆದ ‘ಅಂತರ್ಜಾಲದಲ್ಲಿ ಕನ್ನಡ ಬಳಕೆ: ಸಮಸ್ಯೆ ಮತ್ತು ಸವಾಲುಗಳು ಕುರಿತುರಾಷ್ಟ್ರೀಯ ವೆಬಿನಾರ್‍ನ್ನು ಉದ್ಘಾಟಿಸಿ ಮಾತನಾಡಿದರು.
ಆಂಗ್ಲಭಾಷೆಯಲ್ಲಿ ಇಂದಿನ ಪ್ರಾಪಂಚಿಕ ಜ್ಞಾನವೆಲ್ಲವೂ ಲಭ್ಯವಿರುವಂತೆ ಕನ್ನಡ ಭಾಷೆಯಲ್ಲಿಯೂ ಲಭ್ಯವಾಗಬೇಕಿದೆ. ಸಧ್ಯಕನ್ನಡದಲ್ಲಿ ಲಭ್ಯವಿರುವ ನುಡಿ, ಬರಹ, ಶ್ರೀಲಿಪಿ, ಕುವೆಂಪು ತಂತ್ರಾಂಶಗಳ ಸಮರ್ಥವಾದ ಬಳಕೆಯಾಗಬೇಕಿದೆ. ವಿಶ್ವವಿದ್ಯಾನಿಲಯ ಕಲಾ ಕಾಲೇಜು ಲಾಕ್‍ಡೌನ್ ಕಾಲಾಧಿಯಲ್ಲಿ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಯಶಸ್ವಿಯಾಗಿ ವೆಬಿನಾರ್‍ಗಳನ್ನು ಆಯೋಜಿಸುತ್ತಿದೆ. ವೆಬಿನಾರ್‍ಗಳು ಅಭಿವ್ಯಕ್ತಿ ಮಾಧ್ಯಮಕ್ಕೆ ಸಹಕಾರಿಯಾಗಿ ಕಾರ್ಯ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದ ಬೆವರಹನಿ ಪತ್ರಿಕೆಯ ಸಂಪಾದಕರಾದ ಕುಚ್ಚಂಗಿ ಪ್ರಸನ್ನ ಅವರು ಮಾತನಾಡಿ ಮನುಷ್ಯನ ಅಗತ್ಯತೆಯೇ ಸಂಶೋಧನೆಗೆ ಮೂಲಕಾರಣ.ರೇಡಿಯೋ ಮಾಧ್ಯದಿಂದ ಆರಂಬಿಸಿ ದೂರದರ್ಶನವನ್ನು ದಾಟಿ ಇಂಟರ್‍ನೆಟ್ ತಂತ್ರಜ್ಞಾನದ ಕಾಲದಲ್ಲಿ ನಾವಿದ್ದೇವೆ. ಕನ್ನಡವನ್ನು ಸಮರ್ಥವಾಗಿ ಬಳಸಲು ಸಮರ್ಥ ಕೀಲಿಮಣೆಗಳಿಲ್ಲ. ಆರಂಭದಲ್ಲಿ ಶಬ್ದರತ್ನ, ವೀನಸ್, ಪ್ರಕಾಶಕ್, ಮತ್ತು ಸೆಡಿಯಾಪು ಎಂಬ ಕನ್ನಡ ಎಡಿಟಿಂಗ್ ಸಾಪ್ಟವೇರ್‍ಗಳು ವಿಕಾಸಗೊಂಡವು. ನಂತರ ಟೈಪರೈಟರ್‍ಗಳು ಮತ್ತು ಟೈಪ್ ಸೆಟ್ಟಿಂಗ್‍ಗಳ ಸ್ಥಾನವನ್ನುಡಿಟಿಪಿ ವಹಿಸಿಕೊಂಡಿತು. 1990 ರ ಮಧ್ಯಭಾಗದಲ್ಲಿ ಕಂಪ್ಯೂಟರ್‍ಗಳಲ್ಲಿ ಡಿಸ್ಕ್ ಆಪರೇಟಿಂಗ್ ಸಿಸ್ಟ್‍ಂ ಬದಲಾಗಿ ವಿಂಡೀಜ್ ಬಳಕೆಗೆ ಬಂದಿತು. 1999 ರಲ್ಲಿ ಸರ್ಕಾರಿ ಕಛೇರಿಗಳಿಗಾಗಿಯೆ ಬಹುಭಾಷೆಯ ಕಾರ್ಯಲಯ ಸಾಪ್ಟವೇರ್‍ನ್ನು ಅಭಿವೃದ್ಧಿ ಪಡಿಸಿತು ಎಂದು ಅಭಿಪ್ರಾಯಪಟ್ಟರು.
ಆದರೆ ಕನ್ನಡ ತಂತ್ರಾಂಶಗಳ ಬಳಕೆಯಲ್ಲಿ ಏಕರೂಪಯಿಲ್ಲ. ಈ ಹಿನ್ನೆಲೆಯಲ್ಲಿ ಲಿಪಿ ತಂತ್ರಾಂಶಗಳಿಗೆ ಅಗತ್ಯವಾದ ಶಿಷ್ಟತೆ ಮತ್ತು ಏಕರೂಪತೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಕನ್ನಡ ತಂತ್ರಾಶಗಳ ಬಳಕೆಯಲ್ಲಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ, ಶೇಷಾದ್ರಿವಾಸು ಚಂದ್ರಶೇಖರ್, ಲಿಂಗದೇವರು ಹಳೆಮನೆ, ಬರಗೂರು ರಾಮಚಂದ್ರಪ್ಪ, ಎಸ್.ಜಿ ಸಿದ್ದರಾಮಯ್ಯ, ಯುಬಿ ಪವನಜ ಮತ್ತು ಸತ್ಯನಾರಾಯಣರ ಕೊಡುಗೆ ಅಪಾರವಾದುದು ಎಂದು ಅಭಿಪ್ರಾಯಪಟ್ಟರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ.ಬಿ ಕರಿಯಣ್ಣ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿ ಕಣ್ಣು ಮುಚ್ಚಿ ಕಣ್ಣು ತೆಗೆಯುವುದರೊಳಗೆ ಅಂತರ್ಜಾಲದಲ್ಲಿ ಆಂಗ್ಲಭಾಷೆಯಲ್ಲಿ ಮಾಹಿತಿಗಳು ಲಭ್ಯವಾಗುವಂತೆ ಕನ್ನಡದಲ್ಲೂ ಸಾಧ್ಯವಾಗಬೇಕು. ಕನ್ನಡದ ಅಂಗ ಸಂಸ್ಥೆಗಳಾದ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿಗಳು, ವಿಶ್ವವಿದ್ಯಾನಿಲಯಗಳು ಅಂತರ್ಜಾಲದಲ್ಲಿ ಕನ್ನಡಜ್ಞಾನ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಆರುವರೆ ಕೋಟಿ ಕನ್ನಡಿಗರು ಅಂತರ್ಜಾಲವನ್ನು ಸುಲಬವಾಗಿ ಬಳಸುವಂತಹ ವಾತವರಣ ನಿರ್ಮಾಣವಾಗಬೇಕು. ಕಾಲಕ್ಕೆ ತಕ್ಕಂತೆ ಜಾಗತಿಕ ವಿದ್ಯಮಾನಗಳಿಕೆ ಕನ್ನಡವನ್ನು ಸ್ಪರ್ಧಾತ್ಮಕವಾಗಿ ಸಜ್ಜುಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು
ವೆಬಿನಾರ್ ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ರಾಮಚಂದ್ರಪ್ಪ ವಹಿಸಿದ್ದರು. Iಕಿಂಅ ಸಂಯೋಜಕರಾದ ಡಾ.ಬಿ.ಕೆ ಸುರೇಶ್, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವೆಂಕಟರೆಡ್ಡಿರಾಮರೆಡ್ಡಿ, ಡಾಎಸ್. ಶಿವಣ್ಣ ಬೆಳವಾಡಿ, ಡಾ.ಎಚ್.ಆರ್.ರೇಣುಕಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೆಬಿನಾರ್‍ನ ಸಂವಾದದಲ್ಲಿ546 ಜನ

ಬೆಂಗಳೂರು, ಮೇ 29 ( ಕರ್ನಾಟಕ ವಾರ್ತೆ ):

ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ದೈನಂದಿನ ಉದ್ಯೋಗವನ್ನು ನಡೆಸಲಾಗದೆ ಆದಾಯ ಕಳೆದುಕೊಂದಿರುವ ಅಗಸ ಹಾಗೂ ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದು ಬಾರಿ ಪರಿಹಾರವಾಗಿ ತಲಾ ರೂ.5000/-(ಐದು ಸಾವಿರ ರೂಪಾಯಿಗಳು ಮಾತ್ರ) ಗಳ ನೆರವನ್ನು ನೀಡುವ ಸರ್ಕಾರಿ ಆದೇಶ ಹೊರಡಿಸಲಾಗಿದೆ.

ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ಮುಂದೂಡಿಕೆ
ಬೆಂಗಳೂರು, ಮೇ 29 ( ಕರ್ನಾಟಕ ವಾರ್ತೆ ):
ರಾಜ್ಯ ಚುನಾವಣಾ ಆಯೋಗವು, ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯನ್ನು ನಡೆಸುವ ಸಾಧ್ಯತೆ ಕುರಿತು ಪರಿಶೀಲಿಸಿದೆ. ಪ್ರಸ್ತುತ ಕೋವಿಡ್ ಪರಿಸ್ಥಿತಿಯನ್ನು “ಅಸಾಧಾರಾಣ ಪರಿಸ್ಥಿತಿ “(ಎಂದು ಪರಿಗಣಿಸಿ, ಭಾರತ ಸಂವಿಧಾನದ ಪರಿಚ್ಛೇದ 243-ಕೆ ರಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಪಂಚಾಯಿತಿಗಳ ಚುನಾವಣೆಯನ್ನು ನಡೆಸುವ ಸಂಬಂಧ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯನ್ನು ಅನಿವಾರ್ಯತೆಯಿಂದ ತಾತ್ಕಾಲಿಕವಾಗಿ ಮುಂದೂಡಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ನೀರಿನ ಬಿಲ್ ಪಾವತಿ ಹಾಗೂ ಕಾಲರಾ ತಡೆಗೆ ಜಲಮಂಡಳಿ ಕ್ರಮ
ಬೆಂಗಳೂರು, ಮೇ 29 ( ಕರ್ನಾಟಕ ವಾರ್ತೆ ):
ಬೆಂಗಳೂರು ಜಲಮಂಡಳಿಯು ನೀರು ಸರಬರಾಜು ಕೊಳವೆಯಲ್ಲಿ ಸೋರುವಿಕೆಯನ್ನು ಸಾರ್ವಜನಿಕರಿಂದ ಅಥವಾ ಮಂಡಳಿಯ ಸಿಬ್ಬಂದಿಯವರು ಗುರುತಿಸಿದ ತಕ್ಷಣ ಸೋರುವಿಕೆ ತಡೆಗಟ್ಟಲು ಕ್ರಮವಹಿಸಲಾಗುತ್ತದೆ. ಇದಲ್ಲದೆ ಕಲುಷಿತ ನೀರು ಸರಬರಾಜಾಗುತ್ತಿದ್ದಲ್ಲಿ ತಕ್ಷಣ ಕ್ರಮವಹಿಸಿ ಕಲುಷಿತ ನೀರು ಸರಬರಾಜು ಕೊಳವೆಗೆ ಸೇರದಂತೆ ಕೂಡಲೇ ಕಾರ್ಯ ಪ್ರವೃತ್ತರಾಗಿ ಕ್ರಮವಹಿಸಲಾಗುತ್ತದೆ. ಕಾಲರಾ ಮತ್ತು ಜಿ.ಇ. ಗೆ ಸಂಬಂಧಿಸಿದ ಮಾಹಿತಿಯನ್ನು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಿಂದ ದಿನಾಂಕ 01.05.2020 ರಿಂದ 28.05.2020 ರವರೆಗೆ ನೋಂದಣಿಯಾದ ಪ್ರಕರಣಗಳ ವಿಳಾಸವನ್ನು ಪಡೆದು ಅಂತಹ ಸ್ಥಳಗಳಿಂದ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿ, ಕ್ರೋಢೀಕರಿಸಿದ ಫಲಿತಾಂಶದ ್ತ ವಿವರ ಈ ಕೆಳಕಂಡಂತಿದೆ.

ದಿನಾಂಕ 01.05.2020 ರಿಂದ 28.05.2020 ರವರೆಗೆ ದಾಖಲುಗೊಂಡ ಒಟ್ಟು 47 ನೀರಿನ ಮಾದರಿಯನ್ನು ಸಂಗ್ರಹಿಸಿದ್ದು, 03 ಮಾದರಿಗೆ ಸಂಬಂಧಿಸಿದ ಪ್ರದೇಶಗಳಲ್ಲಿ ನೀರು ಸರಬರಾಜು ಇಲ್ಲದಿದ್ದ ಕಾರಣ ನೀರಿನ ಮಾದರಿಯನ್ನು ಸಂಗ್ರಹಿಸಿರುವುದಿಲ್ಲ, 38 ಮಾದರಿಗೆ ಸಂಬಂಧಿಸಿದ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, 38 ಮಾದರಿಗಳ ಫಲಿತಾಂಶವು ಕುಡಿಯಲು ಯೋಗ್ಯವಾಗಿರುತ್ತದೆ. ಉಳಿದ 06 ಮಾದರಿಗಳಿಗೆ ಸಂಬಂಧಿಸಿದ ಪ್ರದೇಶಗಳು ಜಲ ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ.

ಎಸ್.ಎಸ್.ಎಲ್.ಸಿ. ಪರೀಕ್ಷಾ ಅಭ್ಯರ್ಥಿಗಳಿಗೆ ಫೇಸ್ ಮಾಸ್ಕ್
ಬೆಂಗಳೂರು, ಮೇ 29 ( ಕರ್ನಾಟಕ ವಾರ್ತೆ ):
2020ರ ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆಗೆ ಹಾಜರಾಗುವ 8.5 ಲಕ್ಷ ವಿದ್ಯಾರ್ಥಿಗಳಿಗೆ ಫೇಸ್ ಮಾಸ್ಕ್ ಗಳನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್-ಕರ್ನಾಟಕ ಹಾಗೂ ಹ್ಯಾಂಡ್ ಸ್ಯಾನಿಟೈ¸ಸರ್ ಗಳನ್ನು ಎಂಬೆಸಿ ಗ್ರೂಪ್ ಸಂಸ್ಥೆಯವರು ಒದಗಿಸಲು ಮುಂದಾಗಿದ್ದು, ದಿನಾಂಕ: 30-05-2020 ರಂದು ಅಪರಾಹ್ನ 1-30ಕ್ಕೆ ಬೆಂಗಳೂರು ಮಲ್ಲೇಶ್ವರಂನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಚೇರಿಯ ಸಭಾಂಗಣದಲ್ಲಿ ಈ ಫೇಸ್ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಸಾಂಕೇತಿಕವಾಗಿ ಸದರಿ ಸಂಸ್ಥೆಯವರು ಇಲಾಖೆಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಾನ್ಯ ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಹಾಗೂ ಸಕಾಲ ಸಚಿವ ಶ್ರೀ ಎಸ್. ಸುರೇಶ್ ಕುಮಾರ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್-ಕರ್ನಾಟಕ ಮುಖ್ಯ ಆಯುಕ್ತರಾದ ಶ್ರೀ ಪಿ.ಜಿ.ಆರ್.ಸಿಂಧ್ಯಾ ಮತ್ತು ಎಂಬೆಸಿ ಸಂಸ್ಥೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಎಸ್.ಎಸ್.ಎಲ್.ಸಿ. ಪರೀಕ್ಷೆ ಸಗಮವಾಗಿ ನಡೆಸಲು ಸಹಕರಿಸುವಂತೆ ಶಾಸಕರಿಗೆ ಸಚಿವ ಸುರೀಶ್ ಕುಮಾರ್ ಮನವಿ
ಬೆಂಗಳೂರು, ಮೇ 29 ( ಕರ್ನಾಟಕ ವಾರ್ತೆ ):
ಕರೋನಾ ಹಿನ್ನೆಲೆಯಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆ ತಡವಾಗಿ ನಡೆಯುತ್ತಿದ್ದು, ಇದಕ್ಕೆ ಸಾಕಷ್ಟು ಮುಂಜಾಗರೂಕತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಮ್ಮ ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಲಾಖೆಯು ಕೈಗೊಂಡಿರುವ ಉಪಕ್ರಮಗಳ ಕುರಿತು ಗಮನಹರಿಸಿ ಶಿಕ್ಷಣ ಇಲಾಖೆಯ ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಿ ಪರೀಕ್ಷೆ ಸುಗಮವಾಗಿ ನಡೆಯಲು ಹೆಚ್ಚಿನ ಸಹಕಾರ ನೀಡಬೇಕೆಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಶ್ರೀ ಎಸ್. ಸುರೇಶ್ ಕುಮಾರ್ ರಾಜ್ಯದ ಎಲ್ಲ ಮಾನ್ಯ ವಿಧಾನಸಭಾ ಸದಸ್ಯರುಗಳಲ್ಲಿ ಮನವಿ ಮಾಡಿದ್ದಾರೆ.

ಮುಖ್ಯ ಮಂತ್ರಿಗಳಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಗತಿ ಪರಿಶೀಲನೆ
ಬೆಂಗಳೂರು, ಮೇ 29 ( ಕರ್ನಾಟಕ ವಾರ್ತೆ ):
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು.
ನೂತನ ಮರಳು ನೀತಿ ಜಾರಿ ಮತ್ತು ನಿಯಮಗಳ ರಚನೆ, ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ವಲಯಗಳಲ್ಲಿ ಆಗಬೇಕಾದ ಅಗತ್ಯದ ಕಾರ್ಯಗಳು, ಇಲಾಖೆಯಿಂದ ಸರ್ಕಾರಕ್ಕೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೈಕೊಳ್ಳಬೇಕಾದ ಕ್ರಮಗಳು, ಲಾಕಡೌನ ಸಡಿಲಿಸಿದ ಹಿನ್ನೆಲೆಯಲ್ಲಿ ಗೃಹ ಮತ್ತು ವಾಣಿಜ್ಯ ಕಟ್ಟಡಗಳ ನಿರ್ಮಾಣದಲ್ಲಿ ಹೆಚ್ಚಲಿರುವ ಮರಳು ಬೇಡಿಕೆಯನ್ನು ಸೂಕ್ತವಾಗಿ ನಿಭಾಯಿಸುವುದು ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳು ಚರ್ಚಿಸಿ ಸೂಚನೆಗಳನ್ನು ನೀಡಿದರು.
ಕಳೆದ ಎಂಟು ತಿಂಗಳ ಅವಧಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ರಾಜ್ಯದ ರಾಜಸ್ವ ಹೆಚ್ಚಿಸುವ ನಿಟ್ಟಿನಲ್ಲಿ ನೂತನ ಮರಳು ನೀತಿ ಸೇರಿದಂತೆ ಕೈಕೊಂಡ ಹಲವಾರು ಅಭಿವೃದ್ಧಿ ಕಾರ್ಯಗಳ ಹಾಗೂ ಮುಖ್ಯ ಮತ್ತು ಉಪ ಖನಿಜಗಳಿಗೆ ಸಂಬಂಧಿಸಿದ ಕಾಯ್ದೆಗೆ ತರಲಾದ ತಿದ್ದುಪಡಿ ಕುರಿತು ಸಚಿವ ಸಿ.ಸಿ.ಪಾಟೀಲ ಮುಖ್ಯಮಂತ್ರಿಗಳಿಗೆ ವಿವರಿಸಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್, ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್. ಎನ್. ಪ್ರಸಾದ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಾರ್ಮಿಕ ಹಾಗೂ ವಾರ್ತಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಎಂ ಮಹೇಶ್ವರ ರಾವ್ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ಡಾ.ಶಿವಶಂಕರ್ ಸಭೆಯಲ್ಲಿ ಭಾಗವಹಿಸಿದ್ದರು.