*ಉಳ್ಳಾಲ ಮೇಲಂಗಡಿ ವಾರ್ಡ್ ಸಂಖ್ಯೆ 11ರ ಚರಂಡಿ ಮತ್ತು ರಸ್ತೆ ಕಾಮಗಾರಿಯ ಕೆಲಸ ತುರ್ತಾಗಿ ಮುಂದುವರೆಸಲು ಒತ್ತಾಯಿಸಿ ಜಿಲ್ಲಾಧಿಕಾರಿಗೆ ನಗರಸಭಾ ಆಯುಕ್ತರ ಮುಖಾಂತರ ಮನವಿ*

ದಿನಾಂಕ 26 ಮೇ, ನಗರಸಭಾ ವ್ಯಾಪ್ತಿಯ ಮೇಲಂಗಡಿ ಮಿಲ್ಲತ್ ನಗರ, ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿಯ ಪಕ್ಕದಲ್ಲಿರುವ ರಸ್ತೆ ಹಾಗೂ ಚರಂಡಿ ಕಾಮಗಾರಿ ತುಂಬಾ ಸಮಯದಿಂದ ನಿಧಾನಗತಿಯಲ್ಲಿ ನಡೆಯುತ್ತಿದೆ. ಇದರ ಬಹುದೊಡ್ಡ ಸಮಸ್ಯೆಯಿಂದ ಆಸುಪಾಸಿನ ಜನರಿಗೆ ತೊಂದರೆಯಾಗುತ್ತಿದೆ ಅಲ್ಲದೆ ಕೊಳಚೆ ನೀರು ರಸ್ತೆಯುದ್ದಕ್ಕೂ ಹರಿದು ಜನಸಾಮಾನ್ಯರಿಗೆ ನಡೆದಾಡಲು ಕಷ್ಟವಾಗಿದೆ, ಕೊಳಚೆ ನೀರು ನಿಂತು ಡೆಂಗ್ಯು, ಮಲೇರಿಯಾ ಮುಂತಾದ ಸಾಂಕ್ರಮಿಕ ರೋಗ ಹರಡುವಂತಹ ಸಂಭವ ಇದೆ, ಹತ್ತಿರದಲ್ಲಿಯೇ ಉಳ್ಳಾಲದ ಕೇಂದ್ರ ಜುಮ್ಮಾ ಮಸೀದಿ ಸಯ್ಯದ್ ಮದನಿ ದರ್ಗಾ ಶರೀಫ್ ಇದ್ದಕಾರಣ ನೈರ್ಮಲ್ಯ ಕಾಪಾಡುವುದು ಅತ್ಯಗತ್ಯವಾಗಿದೆ. ಈ ವಿಷಯದಲ್ಲಿ ಸ್ಥಳೀಯ ಎಸ್‌ಡಿಪಿಐ ಪಕ್ಷದ ಕೌನ್ಸಿಲರ್ ಹಲಾವಾರು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಯಾವುದೆ ಗಮನಹರಿಸಿರುವುದಿಲ್ಲ ಆದುದರಿಂದ ಇದರ ಬಗ್ಗೆ ಹೆಚ್ಚು ಗಮನಹರಿಸಿ ಜಿಲ್ಲಾಡಳಿತ ಮಧ್ಯಪ್ರದೇಶ ಮಾಡಿ ಈ ಕಾಮಗಾರಿಯನ್ನು ತುರ್ತು ಕಾಮಗಾರಿ ಪಟ್ಟಿಯಲ್ಲಿ ಸೇರ್ಪಡೆಮಾಡಿ ಆದಷ್ಟು ಬೇಗ ಪೂರ್ಣಗೊಳಿಸಿಬೇಕು ಮತ್ತು ಈ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆಕೂಡ ಇದ್ದು ಅವೈಜ್ಞಾನಿಕವಾಗಿ ಕೆಲಸ ನಿರ್ವಹಿಸುವುದರಿಂದ ನೀರು ಸರಬರಾಜು ಪೈಪ್ ಲೈನ್ ಸಮಸ್ಯೆ ಕಾಡುತಿದೆ ಕೊಳಚೆ ನೀರು ನಿಂತಿರುವ ಚರಂಡಿ ಮದ್ಯದಲ್ಲಿಯೇ ಕುಡಿಯುವ ನೀರಿನ ಮುಖ್ಯ ಪೈಪ್ ಹಾದು ಹೋಗಿದೆ ಆಗಾಗ ಪೈಪ್ ಒಡೆದು ಎರಡು ನೀರು ಮಿಶ್ರನವಾಗುತ್ತಿದೆ. ಈ ಎಲ್ಲಾ ಸಮಸ್ಯೆಯನ್ನು ಕೂಡಲೇ ಬಗೆಹರಿಸಿ ಕೊಡಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ.

ಈ ಸಂದರ್ಬದಲ್ಲಿ ಎಸ್‌ಡಿಪಿಐ ನಗರಸಮಿತಿ ಅಧ್ಯಕ್ಷ ಅಬ್ಬಾಸ್ ಎ.ಆರ್, ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್, ನಗರಸಮಿತಿ ಉಪಾಧ್ಯಕ್ಷ ನಿಝಾಮುದ್ದೀನ್, ಕ್ಷೇತ್ರ ಸಮಿತಿ ಸದಸ್ಯರಾದ ರವೂಫ್ ಹಳೆಕೋಟೆ, ಬಶೀರ್ ಅಜ್ಜಿನಡ್ಕ, ಸಾಮಾಜಿಕ ಕಾರ್ಯಕರ್ತರಾದ ಝಾಕೀರ್ ಉಳ್ಳಾಲ್, ಇಮ್ಮಿಯಾಝ್ ಕೋಟೆಪುರ, ಮಿಲ್ಲತ್ ನಗರದ ರಝಾಕ್, ಬಾವ, ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು