ಕನ್ನಡ ಸಾರಸ್ವತ ಲೋಕಕ್ಕೆ ಮುಸ್ಲಿಂ ಕವಿಗಳ ಕೊಡುಗೆ

ಡಾ.ಹಸೀನಾ ಹೆಚ್.ಕೆ.
ಶಿವಮೊಗ್ಗಾ.

ಇತ್ತೀಚೆಗೆ ನಮ್ಮನ್ನು ಅಗಲಿದ ನಿತ್ಯೋತ್ಸವ ಕವಿ ಕೆ ಎಸ್ ನಿಸಾರ್ ಅಹ್ಮದ್ ಅವರನ್ನು ನೆನೆಯುತ್ತ. ನಿಸಾರ್ ಅವರ ಕಾವ್ಯದ ಕುರಿತು ಕನ್ನಡ ಸಂಸ್ಕೃತಿ ಚಿಂತಕ ಪ್ರೊ. ರಹಮತ್ ತರೀಕೆರೆ ತಮ್ಮ ಕತ್ತಿಯಂಚಿನ ದಾರಿ ಎಂಬ ಕೃತಿಯಲ್ಲಿ ಉಲ್ಲೇಖ ಮಾಡುತ್ತಾರೆ. ಎರಡು ಸಂಸ್ಕೃತಿಗಳ ನಡುವೆ ನಿಂತು ಕಾವ್ಯ ಕಟ್ಟುವ ಕೆಲಸ ಕಷ್ಟದ್ದು ” ಎಂದು ಹೇಳುವುದುಂಟು. ನಿಸಾರ್‌ರ ಕಾವ್ಯದ ಶಕ್ತಿ ಇರುವುದು ‘ಎರಡು ಸಂಸ್ಕೃತಿ ಗಳ ಆಚೆ ಹೋಗಿ ಬರೆಯುವುದರಲ್ಲಿ ಅಲ್ಲ. ಅವುಗಳ ನಡುವೆ ನಿಂತು ಅದರ ಬಿಗುವನ್ನು ಮುಖಾಮುಖಿ ಮಾಡುವಲ್ಲಿ ; ಆಕರ್ಷಣೆ ಹಾಗೂ ಘರ್ಷಣೆಗಳು ಒಟ್ಟಿಗೆ ಇರುವ ಸನ್ನಿವೇಶದಲ್ಲಿಯೇ ಸೃಜನಶೀಲ ಜೀವಂತಿಕೆ ಮೈದಳೆಯುತ್ತದೆ. ಭಾರತದ ಸಂಸ್ಕೃತಿಗಳಲ್ಲಿ ಬಹಳಷ್ಟು ಸೃಜನಶೀಲವಾದ ಗಳಿಗೆಗಳು ಹುಟ್ಟಿರುವುದು ಇಂತಹ ನೋ ಮ್ಯಾನ್ಸ್ ಲ್ಯಾಂಡುಗಳಲ್ಲಿ ಅಥವಾ ಎರಡು ದಡಗಳ ಪಯಣದಲ್ಲಿ. ನಿಸಾರ್ ಯಾವುದನ್ನು ‘ ಕಷ್ಟದ ಕೆಲಸ ‘ ಎನ್ನುತ್ತಾರೋ ಅದರಲ್ಲಿ. ಅದೊಂದು ಕತ್ತಿಯಂಚಿನ ಹಾದಿ ; ಮತಾತೀತವಾದ ಪರ್ಯಾಯಗಳನ್ನು ಹುಡುಕುವ ಎಲ್ಲರೂ ಈ ಶಿಲುಬೆ ಹೊರಲೇಬೇಕು ಅನಿಸುತ್ತದೆ. ಹೀಗೆ ಕನ್ನಡದಲ್ಲಿ ಬರೆದ ಈವರೆಗಿನ ಬಹುತೇಕ ಎಲ್ಲಾ ಮುಸ್ಲಿಂ ಕವಿಗಳು ಇಂತಹದೊಂದು ಬಿಕ್ಕಟ್ಟನ್ನು ಮುಖಾಮುಖಿಯಾಗಿ ಕನ್ನಡವನ್ನು ಕಟ್ಟುವ ಕೆಲಸ ಮಾಡುತ್ತ ಬಂದಿದ್ದಾರೆ, ಮುಂದೆ ಕೂಡ ಮಾಡುತ್ತಾರೆ. ತಮಗೆಲ್ಲ ತಿಳಿದಿರುವಂತೆ ನಾನು ಇಂದು ಸಾಹಿತ್ಯ ಕ್ಷೇತ್ರಕ್ಕೆ ಮುಸ್ಲಿಂ ಕವಿಗಳ ಕೊಡುಗೆ ಎಂಬ ವಿಷಯದ ಕುರಿತು ವಿಚಾರ ಮಂಡಿಸಲಿದ್ದೇನೆ.
ಕನ್ನಡನಾಡಿನಲ್ಲಿ ಮುಸ್ಲಿಂ ಸಮುದಾಯದ ನೂರಾರು ಜನ ಕವಿಗಳು ಕಾವ್ಯ ರಚನೆ ಮಾಡಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಇದರ ಜೊತೆ ಜೊತೆಗೆ ಕಾವ್ಯ ಮಾತ್ರವಲ್ಲದೇ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. ಸಾಹಿತ್ಯ ರಚನೆ ಮಾತ್ರವಲ್ಲದೆ ಪ್ರಕಾಶನದಲ್ಲೂ ತೊಡಗಿಕೊಂಡಿದ್ದಾರೆ. ಸಾಹಿತ್ಯ ಸಂಘಟನೆಯಲ್ಲೂ ತೊಡಗಿ ಕನ್ನಡಮ್ಮನ ಸೇವೆ ಮಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿಯ ಸಲೀಮಾ ಮಂಗಳೂರು ಅವರ ಒಳದನಿ ಎಂಬ ಚೊಚ್ಚಲ ಕವನ ಸಂಕಲನ 2005 ರಲ್ಲಿ ಪ್ರಕಟಗೊಂಡಿತು.ಒಟ್ಟು ಅರವತ್ನಾಲ್ಕು ಕವನಗಳುಳ್ಳ ಕವನ ಸಂಕಲನ. ಅದರಲ್ಲಿ ಸಾಮಾಜಿಕ ಕಾಳಜಿಯುಳ್ಳ ಕವನಗಳು, ಸೈನ್ಯಕ್ಕೆ ಸಂಬಂಧಪಟ್ಟಂತೆ ದೇಶಪ್ರೇಮದ ಕವನಗಳ ಸಂಕಲನ ಇದು, ಸ್ವಂತ ಪ್ರಕಾಶನದಿಂದ ಪ್ರಕಟಣೆ ಮಾಡಿದ್ದು ಗಮನಾರ್ಹ. ನಂತರ ಇನ್ನು ಎರಡು ಕೃತಿಗಳು ಬಿಡುಗಡೆಗೊಂಡವು. 2007 ರಲ್ಲಿ “ಎತ್ತ ಸಾಗಿದೆ ದೇಶ” ಕವನ ಸಂಕಲನ ಹಾಗೂ 2009 ರಲ್ಲಿ “ದರ್ಪಣ” ಕಥಾ ಸಂಕಲನ ಪ್ರಕಟ ಆಗಿವೆ.

ಮುಸ್ಲಿಂ ಸಮುದಾಯದ ಬದುಕಿನ ವಿಶಿಷ್ಟ ಸಾಂಸ್ಕೃತಿಕ ಲೋಕವನ್ನು ಬರೆದವರಲ್ಲಿ ಬೋಳುವಾರು ಮೊಹಮ್ಮದ್ ಕುಂಞ ಸರ್ ಪ್ರಮುಖರು.ಅವರ ಓದಿರಿ ಕೃತಿ ಬಹಳ ಜನಮನ್ನಣೆ ಪಡೆದ ಕೃತಿಯಾಗಿದೆ.

ಬಂಟ್ವಾಳ ದ ಮಿತ್ತಬೈಲಿನ ಕೆ.ಎಂ.ಷರೀಫ್ ಸಾಹೇಬ್ ಸಂಪಾದಕರು .ಪ್ರಸ್ತುತ ಮ್ಯಾಗಜೀನ್ .ಕರ್ನಾಟಕ ದಲ್ಲಿ‌ ಹೆಚ್ಚು ಪ್ರಸಾರಗೊಳ್ಳುವ ಮ್ಯಾಗಜೀನ್ ಇದಾಗಿದೆ.

ಅಬ್ಬುಸ್ಸಲಾಮ್ ಪುತ್ತಿಗೆ ,ಪ್ರದಾನ ಸಂಪಾದಕರು ,ವಾರ್ತಾಭಾರತಿ ಕನ್ನಡ ದಿನ ಪತ್ರಿಕೆ
ಇಬ್ರಾಹಿಂ ಸಯೀದ್ ಸಾಬ್,ಸಂಪಾದಕರು ಸನ್ಮಾರ್ಗ ವಾರ ಪತ್ರಿಕೆ ಮತ್ತು ಹಲವು ಇಸ್ಲಾಮಿಕ್ ಸಾಹಿತ್ಯದ ಸಂಪಾದಕರು ಮತ್ತು ಭಾಷಾಂತರ ಗಾರರು
ಅಕ್ರಂಹಸನ್ ,ಸಂಪಾದಕರು ಅಹಿಂದಾ ಡಾಟ್.ಕಾಂ
ಇನ್ನೂ ಸಾವಿರಾರು ಮುಸ್ಲಿಂ ಬರಹಗಾರರು ,ಕವಿಗಳು ಕನ್ನಡ ಸಾರಸ್ವತ ಲೋಕಕ್ಕೆ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಕಲೆಹಾಕಿ ವಿಸ್ತೃತ ಲೇಖನ ವನ್ನು ಮಾಡಲಾಗುವುದು.
ಸಲಾಂ ಸಮ್ಮಿ ಬೆವರು ಕೃತಿ ರಚಿಸಿದ್ದಾರೆ
ಹಾಸನದ ನಿವಾಸಿ, ಸದ್ಯ ವಕೀಲೆಯಾಗಿರುವ ಬಾನು ಮುಷ್ತಾಕ್ – ಹೈಸ್ಕೂಲು ಅಧ್ಯಾಪಕಿಯಾಗಿ ಕೆಲಸ ಮಾಡಿ, ಅವರ ನನ್ನ ಬಾಳಸಂಗಾತಿಯ ಆಸೆಯಂತೆ ವಕೀಲರಾಗಿ, ಪುರಸಭೆಗೆ ಚುನಾವಣೆಗೆ ನಿಂತು ಎರಡು ಸಲ ಕೌನ್ಸಿಲರ್ ಆಗಿ. ಲಂಕೇಶ್ ಪತ್ರಿಕೆಗೆ ಜಿಲ್ಲಾ ವರದಿಗಾರ್ತಿಯಾಗಿ ಸ್ವಲ್ಪ ದಿನ ಕೆಲಸ ಮಾಡಿದ ಕನ್ನಡದ ಬರಹಗಾರ್ತಿ. ನಂತರ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು. ಹೀಗೆ ಬಾನು ಮುಷ್ತಾಕ್ ತಮಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ, ಹಲವು ಕವನ ಸಂಕಲನ ಪ್ರಕಟಿಸಿದ್ದಾರೆ. ನಾಡಿನ ಸಮಗ್ರತೆ ಐಕ್ಯತೆಗಾಗಿ ನಡೆದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೆಜ್ಜೆ ಮೂಡಿದ ಹಾದಿ, ಬೆಂಕಿ ಮಳೆ, ಎದೆಯ ಹಣತೆ, ಸಫೀರಾ, ಬಡವರ ಮಗಳು ಹೆಣ್ಣಲ್ಲ, ಒದ್ದೆ ಕಣ್ಣಿನ ಬಾಗಿನ, ಇಬ್ಬನಿಯ ಕಾವು, ತಾರೀಖ್ ಎ ಫರಿಸ್ತಾ ಎಂಬ ಕವನ ಸಂಕಲನಗಳೂ. ಅದರ ಹೊರತಾಗಿ ಹಸೀನಾ ಮತ್ತು ಇತರ ಕತೆಗಳು ಕಥಾ ಸಂಕಲನ, ಹೂ ಕಣಿವೆಯ ಚಾರಣ – ಪ್ರಬಂಧಗಳು, ಅಲಿ ಅದಿಲ್ಶಾಹಿ – ಅನುವಾದ ಕೃತಿಗಳು ಪ್ರಕಟಗೊಂಡಿವೆ. ಇದರ ಹೊರತಾಗಿ 2013 ರಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಎಂಬ ಕೃತಿ ಪ್ರಕಟಗೊಂಡಿದೆ.
ಕೆ ಷರೀಫಾ ಮೂಲತಃ ಎಡಪಂಥೀಯ ಹೋರಾಟಗಾರ್ತಿ. ಇವರು “ಬಿಡುಗಡೆಯ ಕವಿತೆಗಳು” ಷರೀಫಾ ಅವರ ಮೊದಲ ಕೃತಿ. ಕವನ ಸಂಕಲನ ಬಿಡುಗಡೆ ಮಾಡುವಾಗ ತುಂಬಾ ಸಮಸ್ಯೆ ಎದುರಿಸಿದ್ದರು. ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದಿರುವ ಕೆ ಷರಿಫಾ ಅವರಿಗೆ ಸಾಹಿತ್ಯ ರಚನೆ ಹೊಸದು, ಕೇವಲ ಸಾಹಿತ್ಯ ರಚನೆ ಮಾತ್ರವಲ್ಲ ಸಾಇತ್ಯ ಪ್ರಕಟಣೆ ಕೂಡ ತಿಳಿದಿರಲಿಲ್ಲ. ಇಂತಹ ಹಲವು ಸಮಸ್ಯೆಗಳನ್ನು ಎದುರಿಸಿ ಷರೀಫಾ ಅವರು ತಮ್ಮ ಕೃತಿಯನ್ನು ಪ್ರಕಟಿಸಿದ್ದಾರೆ. ತಮ್ಮ ಕೆಲ ಹೋರಾಟದ ಅನುಭವಗಳನ್ನೇ ಕವನಗಳನ್ನಾಗಿ ರೂಪಿಸಿ ಕನ್ನಡ ಸಾಹಿತ್ಯ ರಚನೆ ಮಾಡಿದ್ದಾರೆ.

 1. ಶಿವಮೊಗ್ಗ ಜಿಲ್ಲೆಯ ಡಿ ಬಿ ರಜಿಯಾ ಅವರ ಚೊಚ್ಚಲ ಕೃತಿ “ಛಾಯೆ”. ಈ ಪುಸ್ತಕ ಪ್ರಕಟವಾಗಿ ಸರಿಸುಮಾರು ಮೂವತ್ತು ವರ್ಷಗಳಾಗಿವೆ. ರಜಿಯಾ ಅವರ ಮೊದಲ ಕೃತಿ ಬಿಡುಗಡೆಯಾಗುವ ವೇಳೆಯಲ್ಲೇ “ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳಾ ಸಂವೇದನೆ” ಎಂಬ ಎರಡು ದಿನದ ಕಾರ್ಯಾಗಾರ ಆಯೋಜನೆ ಮಾಡಿ ಕಾರ್ಯಕ್ರಮದ ಕೊನೆಯಲ್ಲಿ ಅವರ ಪುಸ್ತಕ ಬಿಡುಗಡೆ ಮಾಡಲಾಗಿತ್ತು.
  ಇನ್ನು ಯುವ ಬರಹಗಾರ್ತಿಯರೂ ಕೂಡ ಸಾಕಷ್ಟು ಜನೆ ಇದ್ದಾರೆ. ಮೂಲತಃ ಮಂಡ್ಯದವರಾದ ಜಹಾನ್ ಆರಾ ಇವರ ಮೊದಲ ಕೃತಿ “ಭಾವಜೀವ” ಎಂಬ ಕವನ ಸಂಕಲನ ಅವರ ಮಹತ್ವಾಕಾಂಕ್ಷೆಯ ಪುಸ್ತಕವಾಗಿತ್ತು. ಪ್ರಾಧಿಕಾರಕ್ಕೆ ಹಾಕುವ ಆಸೆಯೂ ಇತ್ತು ಆದರೆ ಈಡೇರಲಿಲ್ಲ. ಆಗ ಇವರಿಗೆ ಚಿತ್ತಾರ ಪಬ್ಲಿಕೇಷನ್ಸ್ ನವರು ಯಾವುದೇ ಸಂಭಾವನೆ ತೆಗೆದುಕೊಳ್ಳದೇ ಕೃತಿಯನ್ನು ಪ್ರಕಟಿಸಿದರು. ಸಂಪೂರ್ಣ ಪ್ರಕಾಶಕರ ಖರ್ಚಿನಿಂದಲೇ ಪ್ರಕಟವಾಯಿತು. ಈಗ ಎರಡನೇ ಕೃತಿ “ಹಂಗಿಲ್ಲದ ಹಾದಿ” ಪ್ರಕಟಣೆಗೆ ಸಿದ್ದವಿದೆ.
  ಇನ್ನು ಇತ್ತೀಚೆಗೆ ನಮ್ಮನ್ನು ಅಗಲಿದ ಕೆ ಎಸ್ ನಿಸಾರ್ ಅಹಮದ್ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಪ್ರೊ. ಕೆ.ಎಸ್.ನಿಸಾರ್ ಅಹಮದ್ ಫೆಬ್ರುವರಿ 5, 1936 ರಲ್ಲಿ ಜನಿಸಿದರು. ಇತ್ತೀಚೆಗಷ್ಟೇ ನಮ್ಮನ್ನಗಲಿದರು. ಇವರ ಕೃತಿಗಳ ಪೈಕಿ ಮನಸು ಗಾಂಧಿ ಬಜಾರು (1960)
  ನಿತ್ಯೋತ್ಸವ ಪ್ರಮುಖ ಕೃತಿಗಳು. ಇವರು ತಾವು ಮಾಡಿದ ಕನ್ನಡ ಸೇವೆಗೆ ಪದ್ಮಶ್ರೀ (೨೦೦೮) ಮತ್ತು ರಾಜ್ಯೋತ್ಸವ (೧೯೮೧) ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ.
  ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ ಆಯಿತು. ‘ಜಲಪಾತ’ ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (೨೦೧೮) ೨೧ ಕವನ ಸಂಕಲನಗಳು, ೧೪ ವೈಚಾರಿಕೆ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.
  ಅವುಗಳಲ್ಲಿ ಮನಸು, ಗಾಂಧಿ ಬಜಾರು, ಹಾಗು ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.
  ೧೯೭೮ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ (೨೦೧೮) ೧೩ ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ. ಆಡಿಯೋ ಕ್ಯಾಸೆಟ್ ಮೂಲಕ ಭಾವಗೀತೆಗಳನ್ನು ಜನಮಾನಸಕ್ಕೆ ಮೊಟ್ಟ ಮೊದಲ ಬಾರಿಗೆ ಪರಿಚಯಿಸಿದ ಕೆಲಸವನ್ನು ನಿಸಾರ್ ಅವರು ಮಾಡಿದರು. ಮತ್ತು ಇದಕ್ಕೆ ಅವರು ತಮ್ಮ ಸ್ವಂತ ಹಣ ಖರ್ಚು ಮಾಡಿದ್ದರು.
  ಕುರಿಗಳು ಸಾರ್ ಕುರಿಗಳು, ರಾಜಕೀಯ ವಿಡಂಬನೆ ಕವನ, ಭಾರತವು ನಮ್ಮ ದೇಶ (ಸರ್ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ), ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.
  ಮನಸು ಗಾಂಧಿ ಬಜಾರು (೧೯೬೦)
  ನೆನೆದವರ ಮನದಲ್ಲಿ (೧೯೬೪)
  ಸುಮಹೂರ್ತ (೧೯೬೭)
  ಸಂಜೆ ಐದರ ಮಳೆ (೧೯೭೦)
  ನಾನೆಂಬ ಪರಕೀಯ (೧೯೭೨)
  ಆಯ್ದ ಕವಿತೆಗಳು (೧೯೭೪)
  ನಿತ್ಯೋತ್ಸವ (೧೯೭೬)
  ಸ್ವಯಂ ಸೇವೆಯ ಗಿಳಿಗಳು (೧೯೭೭)
  ಅನಾಮಿಕ ಆಂಗ್ಲರು(೧೯೮೨),
  ಬರಿರಂತರ (೧೯೯೦)
  ಸಮಗ್ರ ಕವಿತೆಗಳು (೧೯೯೧)
  ನವೋಲ್ಲಾಸ (೧೯೯೪)
  ಆಕಾಶಕ್ಕೆ ಸರಹದ್ದುಗಳಿಲ್ಲ (೧೯೯೮)
  ಅರವತ್ತೈದರ ಐಸಿರಿ(೨೦೦೧)
  ಸಮಗ್ರ ಭಾವಗೀತೆಗಳು(೨೦೦೧)
  ಪ್ರಾತಿನಿಧಿಕ ಕವನಗಳು(೨೦೦೨)

‘ಅಚ್ಚುಮೆಚ್ಚು’
‘ಇದು ಬರಿ ಬೆಡಗಲ್ಲೊ ಅಣ್ಣ’
ಷೇಕ್ಸ್ ಪಿಯರ್‍ನ ಒಥೆಲ್ಲೊದ ಕನ್ನಡಾನುವಾದ
‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ಕೃತಿಯ ಕನ್ನಡಾನುವಾದ.
ಎ ಎಸ್ ಮಕಾನದಾರ ಅವರು ಹತ್ತಾರು ಕೃತಿಗಳನ್ನು ರಚಿಸಿದ್ದಾರೆ. ಇತ್ತೀಚೆಗೆ ಪ್ರಕಟಗೊಂಡ ಅಕ್ಕಡಿಸಾಲು ಕವನ ಸಂಕಲನ ಸಹಿತ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಕೆಲವು ಕೃತಿಗಳನ್ನು ಸಂಪಾದಿಸಿದ್ದಾರೆ ಕೂಡ. ಮಾತ್ರವಲ್ಲ ಸಾಕಷ್ಟು ಜನ ಯುವಕ ಯುವತಿಯರಿಗೆ ಬರೆಯುವಂತೆ ಪ್ರೇರೇಪಿಸಿದ್ದಾರೆ ಮಾತ್ರವಲ್ಲದೆ ಅಂತಹವರ ಪುಸ್ತಕ ಪ್ರಕಟಣೆಗೆ ಬೆಂಬಲವಾಗಿ ನಿಂತಿದ್ದಾರೆ. ಸೂಫಿ ಸಾಹಿತ್ಯ ಸಂಪಾದನೆ 3 ಕೃತಿಗಳು, ತತ್ವ ಪದ ಸಾಹಿತ್ಯ ಸಂಪಾದನೆಯ 3 ಕೃತಿಗಳು ಮತ್ತು ಕವನ ಸಂಕಲನ ಸಂಪಾದನೆ 3 ಕೃತಿಗಳು ಸೇರಿದಂತೆ ಒಟ್ಟು 17 ಕೃತಿಗಳನ್ನು ಸಂಪಾದಿಸಿದ್ದಾರೆ. ಇವರ ಎರಡು ಕವನ ಸಂಕಲನಗಳು ಹಿಂದಿಗೆ ಅನುವಾದಗೊಂಡಿವೆ. 8 ಸ್ವತಂತ್ರ ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಕನ್ನಡ ನುಡಿ ಸಂಪದ ಪಠ್ಯ ಪುಸ್ತಕದಲ್ಲಿ ಇವರ ಕವಿತೆ ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ? ಸೇರಿಸಲಾಗಿದೆ. ಸಂತ ಶಿಶುನಾಳ ಷರೀಫ, ಸರ್ವೋತ್ತಮ ಸೇವಾ ಪುರಸ್ಕಾರ, ಅಣಿಮಾನಂದಶ್ರೀ ಸದ್ಭಾವನಾ ಪುರಸ್ಕಾರ ಮೊದಲಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರು ತಮ್ಮ ನಿರಂತರ ಪ್ರಕಾಶನದ ಮೂಲಕ ಯುವ ಪ್ರತಿಭೆಗಳನ್ನು ಹುಡುಕಿ ಕೃತಿಗಳನ್ನು ಪ್ರಕಟಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಕನ್ನಡ ಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ.
ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯ ಬಿ ಪೀರ್ ಭಾಷಾ ಕವಿ. ಮಾತ್ರವಲ್ಲ ಸಾಮಾಜಿ ಹೋರಾಟಗಾರ, ಸಂಶೋಧಕ. ಇವರ ಕೃತಿಗಳು – ಜೀವ ಬಂತು ಹಾದಿಗೆ, ಜಾಲಿ ಹೂಗಳ ನಡುವೆ, ದೇವರು ಮನುಷ್ಯರಾದ ದಿನ, ಅಕ್ಕ ಸೀತಾ, ನಿನ್ನಂತೆ ನಾನೂ ಶಂಕಿತ ಇವು ಇವರ ಕವನ ಸಂಕಲನಗಳು. ಉರಿಯ ಬೆಳಕು ಬಂಗಾಳ : ಪ್ರವಾಸ ಕಥನ, ಸಮಾಜವಾದಿ ಹೋರಾಟಗಾರರ ಸಂದರ್ಶನ ಸಂಪುಟ ೧, ಸಮಾಜವಾದಿ ಹೋರಾಟಗಾರರ ಸಂದರ್ಶನ ಸಂಪುಟ ೨, ಕನ್ನಡ ವಿಶ್ವವಿದ್ಯಾಲಯದ ಲೋಹಿಯಾ ಅಧ್ಯಯನ ಪೀಠದ ಯೋಜನೆ. ಪ್ರಸಾರಾಂಗ ಪ್ರಕಟಣೆ. ನೀಲಗಂಗಯ್ಯ ಪೂಜಾರ್: ಜೀವನ ಕಥನ, ಸಾಕ್ಷರತೆಯ ಸುತ್ತಮುತ್ತ, ಗೋಪಾಳಗ್ಯಾನ : (ಕನಕದಾಸ ಅಧ್ಯಯನಪೀಠದ ಪ್ರಕಟಣೆ)
ಸಂಪಾದನೆಗಳು.


ನಿರಹಂ : (ಸಂಪಾದನೆ) ಜಾಗತಿಕ ಅನುವಾದಿತ ಸೂಫಿ ಕಾವ್ಯ, (ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಯೋಜನೆ ಪ್ರಕಟಣೆಗಾಗಿ ಸಿದ್ಧ) ಇದೀಗ ಎಡ್ ವರ್ಡ್ ಥರ್ಸ್ಟನ್ ಕೃತಿ ಅನುವಾದದಲ್ಲಿ ತೊಡಗಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿಯ ಅಜಮೀರ ನಂದಾಪುರ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಹುಚ್ಚು ಮನಸ್ಸುಗಳು (ಕವನ ಸಂಕಲನ), ಕಾವ್ಯಗಂಗಾ ಸಿರಿಗಂಗಾ (ಕವನ ಸಂಕಲನ), ತರ್ಲೆ ತಿಮ್ಮನ ಗಾಂಧಿ ಹೌಸ್ (ಲಲಿತ ಪ್ರಬಂಧ),
ತರ್ಲೆತಿಮ್ಮನ ಬಿ,ಫಾರ್ಮ್ ಮತ್ತು ಬಿಳಿದೇವ್ರು ಲಲಿತ ಪ್ರಬಂಧಗಳು. ರಸೂಲ್ ಭಾಯಿ (ಕಥಾ ಸಂಕಲನ) ಪ್ರಕಟಗೊಂಡಿವೆ.
ರಾಯಚೂರು ಜಿಲ್ಲೆಯ ದಸ್ತಗೀರ್ ದಿನ್ನಿ ಅವರು ಕೂಡ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ – ಕಣ್ಣ ಮುಂದಿನ ಬೆಳಕು ಕಾವ್ಯ, ಸಾಹಿತ್ಯ ಸಲ್ಲಾಪ – ವಿಮರ್ಶೆ, ದಿನ್ನಿ ಕಾಳಪಲ್ಲಿ ವೆಂಕಯ್ಯ – ಸಂಶೋಧನೆ, ಶರಣ ಆದಯ್ಯ – ಜೀವನ ಚರಿತ್ರೆ, ತಾಳಕೇರಿ ಬಸವರಾಜ್ – ಜೀವನ ಚರಿತ್ರೆ, ಜಾಗತೀಕರಣ ಮತ್ತು ಸಂಸ್ಕೃತಿ, ಹಗೇವು – ಕಥಾ ಸಂಕಲನ ಸಂಪಾದನೆ, ಬಿಸಿಲ ಹೂವು ಗಜಲ್ ಸಂಕಲನ ಸಂಪಾದನೆ, ಎಲ್ಲ ಕಾಲದ ಬೆಳಕು ಲೋಹಿಯಾ ಕುರಿತು ಸಂಪಾದನೆ, ಬಿಸಿಲು ಚೆಲ್ಲಿದ ನೆರಳು – ರಾಯಚೂರು ಜಿಲ್ಲೆಯ ಕಾವ್ಯ – ಸಂಪಾದನೆ. ಇನ್ನು ಎರಡು ಪುಸ್ತಕಗಳನ್ನು ಕಲ್ಬುರ್ಗಿ ವಿಶ್ವವಿದ್ಯಾಲಯಕ್ಕೆ ಪಠ್ಯಪುಸ್ತಕ ರಚಿಸಿ ಕೊಟ್ಟಿದ್ದಾರೆ.
ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಮಾಮ್ ಹಡಗಲಿಯವರ ದರ್ದ್ ಗಜ಼ಲ್ – ಗಜ಼ಲ್ ಸಂಕಲನ ಮುದ್ರಣ ಹಂತದಲ್ಲಿದೆ. ಇದರ ಹೊರತಾಗಿ ರಸಋಷಿ ಕುವೆಂಪು – ಜೀವನ ಚರಿತ್ರೆ, ದ ರಾ ಬೇಂದ್ರೆ – ಜೀವನ ಚರಿತ್ರೆ, ಶಿವರಾಮ ಕಾರಂತ – ಜೀವನ ಚರಿತ್ರೆ, ಮಾ ವೆಂ.ಅಯ್ಯಂಗಾರ – ಜೀವನ ಚರಿತ್ರೆ, ವಿ ಕೃ ಗೋಕಾಕ್ – ಜೀವನ ಚರಿತ್ರೆ, ಅನಂತಮೂರ್ತಿ – ಜೀವನ ಚರಿತ್ರೆ, ಗಿರೀಶ್ ಕಾರ್ನಾಡ್ – ಜೀವನ ಚರಿತ್ರೆ, ಚಂದ್ರಶೇಖರ ಕಂಬಾರ – ಜೀವನ ಚರಿತ್ರೆ, ಸ್ಕೌಟಿಂಗ್ ಚಿತ್ರಗಳು – ಸಂಗ್ರಹ, ಕನ್ನಡ ವ್ಯಾಕರಣ – ಪಠ್ಯಾಧಾರಿತ, ಸಿರಿಗನ್ನಡ – ವ್ಯಾಕರಣ, ಗಂಗಾಪುತ್ರ ಅಂಬಿಗರ ಚೌಡಯ್ಯ- ಸಂಶೋಧನ ಗ್ರಂಥ, ವೀರ ಲವಕುಶರ ಕಾಳಗ – ಬಯಲಾಟ ನಾಟಕ, ಮಿರ್ಜಾ ಗಾಲಿಬ್ – ಅನುವಾದ, ಹರಿಗೋಲು ಅಂಬಿಗ – ನಾಟಕ, ಜಾತ್ರಿ ಬಲು ಜೋರು – ಸಂಶೋಧನಾ ಗ್ರಂಥ, ಪುಟಿದೇಳು – ಕಥೆಗಳು ಕಥಾ ಸಂಕಲನ ಮುದ್ರಣ ಹಂತದಲ್ಲಿದೆ.
ಅಲ್ಲಾವುದ್ದೀನ್ ಯಮ್ಮಿ – 1993 ರಲ್ಲಿ ಸಂದೇಶ ಎಂಬ ಸಂಪಾದಿತ ಕವನ ಸಂಕಲನ, 2017 ರಲ್ಲಿ ಜೀವನೋತ್ಸಾಹ ಎಂಬ ಕವನ ಸಂಕಲನ ಬಿಡುಗಡೆಯಾಗಿದೆ.
ಡಾ. ಮಕ್ತೂಂಬಿ ಮುಲ್ಲಾ ಹೃತ್ಕಿರಣಗಳು ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ.
ಶಿವಮೊಗ್ಗದ ಶಿ ಜು ಪಾಶಾ  ಅವರು ಹಾಲಿ ಪತ್ರಕರ್ತರಾದರೂ ಮೂಲತಃ ಇವರು ಓರ್ವ ಕವಿಯಾಗಿದ್ದಾರೆ. ಅಪ್ಪನ ಬೀಡಿ, ಕೋಳಿ ಹುಂಜದ ಹೂವು ಕವನ ಸಂಕಲನಗಳು. ಕೆರೆಯಂಗಳದ ನವಾಬ ಕಥಾ ಸಂಕಲನ ಪ್ರಕಟಗೊಂಡಿದೆ. ಪತ್ರಿಕೋದ್ಯಮ ಮತ್ತು ಸಾಹಿತ್ಯ- ಮಾಧ್ಯಮ ಅಕಾಡೆಮಿಗೆ ಬರೆದಿರುವ ಕೃತಿ.
ಇದೇ ರೀತಿ ಮೆಹಬೂಬ್ಬಿ ಶೇಖ್ ಅವರು ಸಹಿತ ಕಳೆದ ಹಲವು ದಶಕಗಳಿಂದ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರ. ಸೂರ್ಯನನ್ನು ಹಡೆದದ್ದು ನಾನೇ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇದರ ಜೊತೆಗೆ ಇವರು ತಮ್ಮ ಮಾತೋಶ್ರೀಯವರಾದ ದಿವಂಗತ ಶ್ರೀಮತಿ ಚಾಂದ್ಬೀಬಿ ಸ್ಮರಣಾರ್ಥ ಪ್ರತಿ ವರ್ಷ ಯುವ ಕವಿಗಳೊಬ್ಬರ ಕೃತಿಯನ್ನು ಪ್ರಕಟಿಸುತ್ತಿದ್ದಾರೆ. ಅಲ್ಲದೆ ಸಾಹಿತ್ಯಿಕ ಕಾರ್ಯಕ್ರಮ ಆಯೋಜಿಸುತ್ತ. ಯುವ ಕವಿಗಳಿಗೆ ಮಾರ್ಗದರ್ಶನ ಮಾಡುತ್ತ ಕನ್ನಡ ಕಾವ್ಯದಲ್ಲಿ ಗಝಲ್ ಹಾಗೂ ರುಬಾಯಿ ಪ್ರಕಾರ ಬೆಳೆಯಲು ಇವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಯುವ ಕವಿಗಳಾದ ಸಿರಾಜ್ ಬಿಸರಳ್ಳಿಯವರು ಕಳೆದ ಹತ್ತು ವರ್ಷಗಳ ಹಿಂದೆ ಕ್ರಾಂತಿ ಸೂರ್ಯನ ಕಂದೀಲು ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ನೂರುಲ್ಲಾ ತ್ಯಾಮಗೊಂಡ್ಲು ನನ್ನಪ್ಪ ಒಂದು ಗ್ಯಾಲಕ್ಸಿ ಕವನ ಸಂಕಲನ ಪ್ರಕಟಿಸಿದ್ದಾರೆ. ನಜ್ಮಾ ನಜೀರ್ ಚಿಕ್ಕನೇರಳೆ ಪೀವೋಟ್ ಪದ್ಯಗಳು ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಮುನವ್ವರ್ ಜೋಗಿಬೆಟ್ಟು ಅವರು ಇಶ್ಕಿನ ಒರತೆಗಳು ಕವನ ಸಂಕಲನ ಪ್ರಕಟಿಸಿದ್ದಾರೆ. ಕೊಪ್ಪಳದ ಮೆಹಬೂಬಭಾಷಾ ಮಕಾನದಾರ ಅವರು ಒಂದೇ ಬಳ್ಳಿಯ ಹೂಗಳು ಕವನ ಸಂಕಲನ ಪ್ರಕಟಿಸಿದ್ದಾರೆ.
ಬಾಬು ಮನಸೇ, ನಿಜಾಮ್, ಹಕೀಂ ಪದಡ್ಕ, ಹಸನ್ಮುಖಿ ಬಡಗನ್ನೂರು, ಆಸೀಫಾ, ನೂರಜಾನ್, ಸಕೀನಾ ಬೇಗಂ, ಸುನೈಫ್ ವಿಟ್ಲ, ಇಮಾಮ್ ಹಡಗಲಿ, ಅಮೀರಸಾಬ ವಂಟಿ, ಉಮರ್ ದೇವರಮನಿ, ಅಮೀನ್ ಅತ್ತಾರ್, ಸಯ್ಯದ್ ಸಿಕಂದರ್ ಮೀರ್ ಅಲಿ, ಚಾಂದ್ ಕವಿಚಂದ್ರ, ಕಾ ಹು ಚಾನಪಾಶಾ, ಕೊಟ್ಟೂರಿನ ಸೈಫ್ ಜಾನ್ಸೆ, ರಾಜೇಸಾಬ ಬಾಗವಾನ್, ಶರೀಫ್ ಹಸಮಕಲ್, ಆಶಿಖ್ ಮುಲ್ಕಿ ಸೇರಿದಂತೆ ಇಮಾಮ್ ಗೋಡೆಕಾರ ಮೊದಲಾದ ಯುವ ಕವಿಗಳು ಕನ್ನಡ ಕಾವ್ಯ ಲೋಕವನ್ನು ಶ್ರೀಮಂತಗೊಳಿಸುತ್ತಿದ್ದಾರೆ.
ಇದು ಕನ್ನಡ ಕಾವ್ಯ ಲೋಕಕ್ಕೆ ಮುಸ್ಲಿಂ ಸಮುದಾಯದ ಕವಿಗಳು ನೀಡಿರುವ ಕೊಡುಗೆಯ ಕುರಿತು ಸಣ್ಣ ಪರಿಚಯ.