*ದ.ಕ ಜಿಲ್ಲೆಯ ಜನಸಾಮಾನ್ಯರಿಗೆ ಈ ಮೂರು ಬ್ರದರ್ಸ್ಗಳೇ ಆಪತ್ಬಾಂಧವರು*

ಒಬ್ಬರು ಮಾಜಿ ಜನಪ್ರಿಯ ಶಾಸಕರು, ಇನ್ನೊಬ್ಬರು ವಿಧಾನ ಪರಿಷತ್ ಸದಸ್ಯರು, ಮತ್ತೊಬ್ಬರು ತಮ್ಮನ್ನು ತಾವೇ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರು.. ದ.ಕ‌ ಜಿಲ್ಲೆಯ ಪ್ರತಿಯೊಬ್ಬರಿಗೂ ಈ ಮೂರು ಮುತ್ತುಗಳು ಚಿರಪರಿಚಿತರ, ಜಿಲ್ಲೆಯ ಜನರಿಗೆ ಯಾವುದೇ ರೀತಿಯ ಸಂಕಷ್ಟಗಳು ಎದುರಾದಾಗ ಜಾತಿ ಮತ ಧರ್ಮ ಪಕ್ಷ ಭೇದ ಮರೆತು ತಕ್ಷಣ ಪ್ರತ್ಯಕ್ಷವಾಗಿ ಅದಕ್ಕೆ ಸ್ಪಂದಿಸುವ ಗುಣವನ್ನು ಹೊಂದಿರುವ ಶ್ರೀಮಂತಿಕೆಯ ಹೃದಯ ಉಳ್ಳವರು.. ಇದಕ್ಕೆ ಉದಾಹರಣೆ ಇತ್ತೀಚಿನ ಲಾಕ್ ಡೌನ್ ಸಂಧರ್ಭದಲ್ಲಿ ಜಾತಿ ಧರ್ಮ ಪಕ್ಷ ಬೇಧ ಮರೆತು ಖುದ್ದಾಗಿ ಫೀಲ್ಡಿಗೆ ಇಳಿದು ಕೆಲಸ ಮಾಡಿ ಕ್ಷೇತ್ರದ ಜನ ಎಂದೂ ಮರೆಯದಂತಹ ಕೆಲಸ ಮಾಡಿ ರಾಜ್ಯದ ಜನ ಪ್ರತಿನಿಧಿಗಳಿಗೆ ಮಾದರಿಯಾಗಿ ಜನರ ಮೆಚ್ಚುಗೆಗೆ ಪಾತ್ರರಾದರು ಮಾಜಿ ಶಾಸಕ ಮೊಯಿದ್ದೀನ್ ಬಾವ, ಲಾಕ್ ಡೌನ್ ನಿಂದಾಗಿ ಸಮಸ್ಯೆಗಳ ಮೂಲಕ ಸಂಕಷ್ಟಗಳನ್ನು ಎದುರಿಸುತ್ತಿದ್ದ ರೈತರ ಬೆನ್ನೆಲುಬಾಗಿ ನಿಂತು ಅವರು ಬೆಳೆದ ಕೃಷಿಗೆ ಉತ್ತಮ ಬೆಲೆ ಕಲ್ಪಿಸುವಂತೆ ರಾಜ್ಯದ ಹಿರಿಯ ರಾಜಕೀಯ ನಾಯಕರೊಂದಿಗೆ ಚರ್ಚಿಸಿ ರೈತರಿಗೆ ಹತ್ತಿರವಾಗಿರುವ ವಿಧಾನ ಪರಿಷತ್ ಸದಸ್ಯರಾದ ಬಿ.ಎಮ್ ಫಾರೂಕ್ , ಎಲ್ಲಾ ಧಾರ್ಮಿಕ ಮುಖಂಡರೊಂದಿಗೆ ಉತ್ತಮ ಸಂಪರ್ಕ ಬೆಳೆಸಿರುವ ಹಿರಿಯರ ಮಾರ್ಗದರ್ಶನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅನುಸರಿಸುತ್ತ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಮತ್ತು ಮುಸ್ಲಿಂ ಸೆಂಟ್ರಲ್ ಕಮಿಟಿ ಸಂಘಟನೆಯ ಉಪಾಧ್ಯಕ್ಷರಾಗಿರುವ ಮುಮ್ತಾಜ್ ಆಲಿ..

ಇತ್ತೀಚೆಗೆ ಅನಿವಾಸಿ ಭಾರತೀಯರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಮಸ್ಯೆ ಎದುರಿಸಿದಾಗ ತುರ್ತಾಗಿ ಮಾನ್ಯ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮಂಗಳೂರಿಗೆ ಆಗಮಿಸುವ ಅನಿವಾಸಿ ಭಾರತೀಯರಿಗೆ ಮುಂದಿನ ದಿನಗಳಲ್ಲಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವಂತೆ ಮತ್ತು ಗರ್ಭಿಣಿಯರಿಗೆ, ಹಿರಿಯರಿಗೆ, ‌ಮತ್ತು ಮಕ್ಕಳಿಗೆ ಕ್ವಾರಂಟೈನ್ ಸಂಧರ್ಭದಲ್ಲಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲು ಮನವಿ ಮಾಡಿದ್ದರು..