Manama Bahrain 11may:  The Second Secretary (Consular & CW) of the Embassy of India, Bahrain Mr. P. K. Chowdhury met Kannada Sangha Bahrain President Mr. Pradeep Shetty and senior Kannadiga, Vice President of Bahrain’s prestigious KHK HEROES Foundation Mr. Mohammed Mansoor today in the Indian Embassy. The situation, problems, and relief of Indians and Kannadigas residing in the Kingdom of Bahrain during the COVID 19 Pandemic was discussed in detail. The distribution of food (Dry ration) kits, as well as those seeking repatriation, was also discussed in the meeting.
When asked about the repatriation of distressed Kannadigas, the Second Secretary said that though the number of Kannadigas who wish to return home is not much compared to the rest of the states, still Embassy is compiling all the information and will do the needful soon. Mr. Shetty and Mr. Mansoor told the Second Secretary that those who are in problem can contact them and they are ready to do their best.
Photo Caption:

The Second Secretary Indian Embassy Mr. P. K. Chowdhury, Kannada Sangha Bahrain President Mr. Pradeep Shetty and KHK HEROES Foundation Vice President Mr. Mohammed Mansoor

ಕನ್ನಡಿಗ ಪ್ರತಿನಿಧಿಗಳ ದೂತಾವಸ ಭೇಟಿ

ಬಹ್ರೈನ್ ಭಾರತೀಯ ದೂತಾವಾಸದ ಎರಡನೆಯ ಕಾರ್ಯದರ್ಶಿ ಶ್ರೀ ಪಿ. ಕೆ. ಚೌಧರಿಯವರು ಇಂದು ಬಹ್ರೈನ್ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿ ಮತ್ತು ಹಿರಿಯ ಕನ್ನಡಿಗ, ಬಹ್ರೈನ್ನ ಪ್ರತಿಷ್ಠಿತ ಕೆಎಚ್ಕೆ ಹೀರೋಸ್ ಫ಼ೌಂಡೇಷನ್ ಉಪಾಧ್ಯಕ್ಷರಾದ ಶ್ರೀ ಮೊಹಮ್ಮದ್ ಮನ್ಸೂರ್ ಅವರನ್ನು ಭೇಟಿಯಾದರು. ಕೋವಿಡ್ ಮಹಾಮಾರಿ ಪಿಡುಗಾಗಿರುವ ಸಂದರ್ಭದಲ್ಲಿ ಬಹ್ರೈನ್ನಲ್ಲಿ ನೆಲೆಸಿರುವ ಭಾರತೀಯರ ಮತ್ತು ಕನ್ನಡಿಗರ ಸ್ಥಿತಿಗತಿ, ಸಮಸ್ಯೆಗಳು, ಮತ್ತು ಪರಿಹಾರ ಕಾರ್ಯಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು. ಆಹಾರದ ಕಿಟ್ ವಿತರಣೆಯ ವಿಷಯ, ಸ್ವದೇಶಕ್ಕೆ ಮರಳಲು ಬಯಸುತ್ತಿರುವವರ ಕುರಿತಾಗಿಯೂ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
ಸಂಕಷ್ಟದಲ್ಲಿರುವ ಕನ್ನಡಿಗರನ್ನು ತಾಯ್ನಾಡಿಗೆ ಮರಳಿ ಕಳುಹಿಸುವುದರ ಕುರಿತು ಪ್ರಶ್ನಿಸಿದಾಗ, ಉಳಿದ ರಾಜ್ಯಕ್ಕೆ ಹೋಲಿಸಿದರೆ ತಾಯ್ನಾಡಿಗೆ ಮರಳಲು ಇಚ್ಚಿಸುತ್ತಿರುವ ಕನ್ನಡಿಗರ ಸಂಖ್ಯೆ ಕಡಿಮೆಯಾದರೂ, ಅತಿ ಶೀಘ್ರದಲ್ಲಿಯೇ ಅವರ ಪಟ್ಟಿ ತಯಾರಿಸಿ ಅದಕ್ಕೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ನಡೆಯುತ್ತಿದೆಯೆಂದು ಕಾರ್ಯದರ್ಶಿಗಳು ತಿಳಿಸಿದರು. ಈ ಸಂದರ್ಭದಲ್ಲಿ ತೊಂದರೆಯಲ್ಲಿರುವ ಕನ್ನಡಿಗರು ತಮ್ಮನ್ನು ಸಂಪರ್ಕಿಸಬಹುದೆಂದು ಶ್ರೀ ಪ್ರದೀಪ್ ಶೆಟ್ಟಿ ಮತ್ತು ಶ್ರೀ ಮೊಹಮ್ಮದ್ ಮನ್ಸೂರ್ ಕಾರ್ಯದರ್ಶಿಯವರಿಗೆ ತಿಳಿಸಿದರು.

ಚಿತ್ರದಲ್ಲಿ: ಭಾರತೀಯ ದೂತಾವಾಸದ ಎರಡನೆಯ ಕಾರ್ಯದರ್ಶಿ ಶ್ರೀ ಪಿ. ಕೆ. ಚೌಧರಿ, ಕನ್ನಡ ಸಂಘ ಬಹ್ರೈನ್ ಅಧ್ಯಕ್ಷ ಶ್ರೀ ಪ್ರದೀಪ್ ಶೆಟ್ಟಿ ಮತ್ತು ಕೆಎಚ್ಕೆ ಹೀರೋಸ್ ಫ಼ೌಂಡೇಷನ್ ಉಪಾಧ್ಯಕ್ಷ ಶ್ರೀ ಮೊಹಮ್ಮದ್ ಮನ್ಸೂರ್.