*_ರಾಜೀವ್ ಗಾಂಧಿ ವೈಧ್ಯಕೀಯ ವಿಶ್ವ ವಿಧ್ಯಾಲಯದ ವಿಧ್ಯಾರ್ಥಿಗಳ ಗೊಂದಲವನ್ನು ನೀವಾರಿಸಿದ : ಡಾ. ಯು.ಟಿ ಇಫ್ತಿಕಾರ್ ಅಲಿ_*

ಮಂಗಳೂರು,ಮೇ3: ಭಾರತದಲ್ಲಿ ಸುಮಾರು 800ಕ್ಕಿಂತ ಹೆಚ್ಚು ಕಾಲೇಜ್ ಗಳನ್ನು ಹೊಂದಿರುವ ಅತ್ಯಂತ ದೊಡ್ಡ ಆರೋಗ್ಯ ಮತ್ತು ವಿಜ್ಞಾನಗಳ ವಿಶ್ವವಿದ್ಯಾಲಯವಾದ ರಾಜೀವ್ ಗಾಂಧಿ ವೈಧ್ಯಕೀಯ ವಿಶ್ವವಿದ್ಯಾಲದಲ್ಲಿ ವಿದೇಶಗಳಿಗೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಮೂರು ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು.

ಕೋರೊನಾ ವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಆದೇಶದಿಂದಾಗಿ ರಾಜೀವ್ ಗಾಂಧಿ ವೈಧ್ಯಕೀಯ ವಿಶ್ವ ವಿಧ್ಯಾಲಯದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಯಾವುದೇ ಆತಂಕ, ಗೊಂದಲ ಬೇಡ ಸಂಸ್ಥೆಯು ವಿವಿಧ ರೀತಿಯ ತಂತ್ರಜ್ಞಾನ ಬಳಸಿ ನೇರ ಶಿಕ್ಷಣ ನೀಡುವ ಚಿಂತನೆಯನ್ನು ನಡೆಸುತ್ತಿದ್ದೇವೆ ಎಂದು ನಮ್ಮ ಟಿವಿ ಆಯೋಜಿಸಿದ ಜನಧ್ವನಿ ನೇರ ಪ್ರಸಾರ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ರಾಜೀವ್ ಗಾಂಧಿ ವೈಧ್ಯಕೀಯ ವಿಶ್ವವಿದ್ಯಾಲದ ಸಿಂಡಿಕೆಟ್ ಸದಸ್ಯರಾದ ಡಾ.ಯು.ಟಿ ಇಫ್ತಿಕಾರ್ ಆಲಿ ರವರು ಧೈರ್ಯ ತುಂಬಿದ್ದಾರೆ.