- ಗೆಳೆಯ ಮಹೇಂದ್ರ ಕುಮಾರ್…. ಅಂತಿಮ ನಮನಗಳು……
ನಂಬಲಾಗುತ್ತಿಲ್ಲ….ನಮ್ಮ ಸಮಾಜಕ್ಕೆ ನೀವು ಹಿಂದೆಂದಿಗಿಂತಲೂ ಹೆಚ್ಚು ಅಗತ್ಯ ವಾಗಿದ್ದಾಗ ಹೀಗೇಕೆ ದಿಢೀರನೆ ನಿರ್ಗಮಿಸಿದಿರಿ?
ಬ್ರಾಹ್ಮಣ ಶಾಹಿ ಸಂಘಟನೆಗಳ ಹಾಗೂ ವಿಚಾರಧಾರೆಗಳ ಸಂಕೋಲೆಗಳನ್ನು ಕಡಿದುಕೊಂಡ ನಂತರ ನೀವು ಪಡೆದುಕೊಂಡ ಹೊಸಹುಟ್ಟು ನಮ್ಮಂಥವರಲ್ಲಿ ಮೊದಮೊದಲು ಆಶ್ಚರ್ಯ ವನ್ನು ನಂತರ ಸಂತೋಷವನ್ನು ಉಂಟುಮಾಡಿತ್ತು.
ಕಳೆದ ಹಲವಾರು ವರ್ಷಗಳಿಂದ ಕುವೆಂಪು ಕನಸುಕಂಡ ವಿಶ್ವಮಾನವ ಲೋಕದೃಷ್ಟಿ ಹಾಗೂ ಸಾಮಾಜಿಕ ನ್ಯಾಯ ವನ್ನು ಆಧರಿಸಿದ ಸಮಾಜವನ್ನು ಕಟ್ಟಲು ನಿರಂತರವಾಗಿ ಶ್ರಮಿಸುತ್ತಿದ್ದಿರಿ…
NRC-NPR-CAA ವಿರೋಧಿ ಚಳವಳಿಯಲ್ಲಿ ನೀವೂ-ನಾನೂ ಹಲವಾರು ಸಾರಿ ವೇದಿಕೆಯನ್ನು ಹಂಚಿಕೊಡಿದ್ದೇವೆ….NRC ಹಿಂದೆ ಇರುವ ಬ್ರಾಹ್ಮಣ ಶಾಹಿ ಸಂಚುಗಳನ್ನು ಸ್ಪಷ್ಟವಾಗಿ ನೀವು ಜನರ ಮುಂದಿರಿಸುತ್ತಿದ್ದ ರೀತಿ ನಿಮ್ಮ ಬಗ್ಗೆ ಅಭಿಮಾನ ಮೂಡಿಸುವಂತಿರುತ್ತಿತ್ತು…ಯಾವ ಹೆದರಿಕೆ ಅಥವಾ ಹಿಂಜರಿಕೆಯಿಲ್ಲದೆ ನೀವು ಅಧಿಕೃತ ಧ್ವನಿಯಲ್ಲಿ ಬಯಲು ಮಾಡುತ್ತಿದ್ದ ಆರೆಸ್ಸೆಸ್ ನ ದಲಿತ-ಶೂದ್ರ-ಮಹಿಳಾ ವಿರೋಧಿ ಮನೋಧರ್ಮ ತಳಸಮುದಾಯಗಳಲ್ಲಿ ಎಂಥಾ ಆತ್ಮವಿಶ್ವಾಸ ಹಾಗೂ ಹುಮ್ಮಸ್ಸನ್ನು ಮೂಡಿಸುತ್ತಿತ್ತು ಎಂಬುದನ್ನು ನಾನು ಕಣ್ಣಾರೆ ಕಂಡಿದ್ದೇನೆ…ಹಾಗೂ ಅಭಿಮಾನಿಸಿದ್ದೇನೆ…
ಅದೇ ಸಮಯದಲ್ಲಿ ಸದಾ ಅಪಮಾನ ಹಾಗೂ ಅವಮಾನಕ್ಕೆ ಗುರಿಯಾಗಿರುವ ಮುಸ್ಲಿಂ ಸಮುದಾಯದ ಕೆಲವು ಪ್ರತಿಕ್ರಿಯೆ ಗಳು, ಕೆಲವು ವಿದ್ಯಮಾನ ಗಳ ಬಗ್ಗೆ ಪ್ರಗತಿಪರರು ತೆಗೆದುಕೊಳ್ಳುತ್ತಿದ್ದ ನಿಲುವುಗಳು ನಿಮಗೆ ಅತಿರೇಕದ್ದು ಎನಿಸುತ್ತಿತ್ತು..ಅಂಥವನ್ನೂ ನೀವು ಬಹಿರಂಗವಾಗಿ ಯೇ ತರಾಟೆಗೆ ತೆಗೆದುಕೊಳ್ಳುತ್ತಿದ್ದಿರಿ…(ಅದಕ್ಕೆ ಪ್ರತಿಯಾಗಿ ನೀವು ತೆಗೆದುಕೊಳ್ಳುತ್ತಿದ್ದ ಕೆಲವು ನಿಲುವುಗಳು ನನಗೆ ಸರಿ ಎನಿಸುತ್ತಿರಲಿಲ್ಲ..ಅದನ್ನು ನಿಮ್ಮ ಜೊತೆಗೂ ಚರ್ಚಿಸುತ್ತಿದ್ದೆ..)..
ಅದರ ತಪ್ಪು-ಸರಿಗಳೇನೇ ಇರಲಿ… ಇಂಥಾ ಬಹಿರಂಗ ನಡೆಗಳು ಹೋರಾಟನಿರತರ ವ್ಯಕ್ತಿತ್ವ ಹಾಗೂ ವಿಚಾರಧಾರೆಗಳ ಪ್ರಾಮಾಣಿಕ ತೆ ಹಾಗೂ ಪಾರದರ್ಶಕತೆಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಸ್ವಾಗತಾರ್ಹ ಎಂದೇ ನನಗನ್ನಿಸುತ್ತಿತ್ತು..
ಒಂದೆರೆಡೇ ವರ್ಷಗಳ ಲ್ಲಿ ನೀವು ಕಟ್ಟಿದ “ನಮ್ಮ ಧ್ವನಿ”ಸಂಘಟನೆ ಹಾಗೂ ಯೂಟ್ಯೂಬ್ ಮಾಧ್ಯಮ ಜನಪ್ರಿಯ ಗೊಂಡಿದೆ. ಇದು ಕಳೆದ ಕೆಲವು ವರ್ಷಗಳಲ್ಲಿ ಈ ರಾಜ್ಯದಲ್ಲಿ ಆಗಿರುವ ಕೆಲವು ಸಕಾರಾತ್ಮಕ ಬೆಳವಣಿಗೆಗಳಲ್ಲಿ ಒಂದು…
ಅಷ್ಟು ಮಾತ್ರವಲ್ಲ… ದ್ವೇಷವನ್ನು ಆಧರಿಸಿದ ಬ್ರಾಹ್ಮಣ ಶಾಹಿ ಆರೆಸ್ಸೆಸ್ ನ್ನು ಧಿಕ್ಕರಿಸಿ ಸೌಹಾರ್ದ ಹಾಗೂ ಸಾಮರಸ್ಯ ದ ಸಮಾಜ ವನ್ನು ಕಟ್ಟುವ ಕಡೆಗೆ ನೀವು ಪ್ರಾರಂಭಿಸಿದ ಪ್ರಯಾಣ ಈ ದುರಿತ ಕಾಲದಲ್ಲಿ ಭರವಸೆಯ ಕೋಲ್ಮಿಂಚಾಗಿತ್ತು…ಇತಿಹಾಸದ ಈ ಕಾಲಘಟ್ಟದಲ್ಲಿ ನೀವು ಅತ್ಯಂತ ಸಕಾರಾತ್ಮಕ ಪಾತ್ರ ವಹಿಸುತ್ತಿದ್ದಿರಿ. .
ಸಮಾಜ ಹಾಗೂ ಸಂದರ್ಭಕ್ಕೆ ನಿಮ್ಮ ಅಗತ್ಯ ತುಂಬಾ, ತುಂಬಾ ಇರುವಾಗಲೇ, ನಾವೆಲ್ಲರೂ ಜೊತೆಗೂಡಿ ಹಾಕಬೇಕಾದ ಹೆಜ್ಜೆಗಳು ಬಹಳಷ್ಟಿರುವಾಗಲೇ. .. ಸುಳಿವನ್ನೂ ಕೊಡದೆ ನಡೆದುಬಿಟ್ಟಿರಿ….
ನಿಮ್ಮ ಈ ದಿಢೀರ್ ನಿರ್ಗಮನ ನನ್ನಂಥ ಹಲವರಿಗೆ ಆಘಾತ ವುಂಟು ಮಾಡಿದೆ. ಸದ್ಯಕ್ಕಂತೂ ದಿಗ್ಮೂಢರನ್ನಾಗಿಸಿದೆ…
ನಿಮ್ಮ ಕುಟುಂಬ ದವರಿಗೆ, ನಮ್ಮ ಧ್ವನಿ ಬಳಗಕ್ಕೆ ಈ ನೋವು ತಡೆದುಕೊಳ್ಳುವ ಚೈತನ್ಯ ದಕ್ಕಲಿ..
ಸೌಹಾರ್ದ-ಹಾಗೂ ಸಾಮರಸ್ಯ ದ ಸಮಾಜವನ್ನು ಕಟ್ಟುವ ಕೆಲಸದಲ್ಲಿ ನೀವು ನಮ್ಮ ಜೊತೆಗೆ ಪರೋಕ್ಷವಾಗಿ ಇದ್ದೇ ಇರುತ್ತೀರಿ….
ನಿಮ್ಮ
ಶಿವಸುಂದರ್
=======================
*ನೇರ ಹಾಗೂ ದಿಟ್ಟ ಮಾತುಗಾರಿಕೆಯ ಉದಯೋನ್ಮುಖ ನಾಯಕನನ್ನು ರಾಜ್ಯ ಕಳೆದುಕೊಂಡಿದೆ. ಎಸ್ಡಿಪಿಐ*
……………………………………………
ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಹಾಗೂ ಭ್ರಾತೃತ್ವದ ಧ್ವನಿ ಎಬ್ಬಿಸಿ ದಿಟ್ಟ ಮಾತುಗಳಿಂದ ಜನಪ್ರಿಯತೆ ಗಳಿಸಿ ಉದಯೋನ್ಮುಖ ಮುಂದಾಳು ಎನಿಸಿಕೊಂಡಿದ್ದ ಮಹೇಂದ್ರಕುಮಾರ್ ರವರ ನಿಧನ ದಿಗ್ಭ್ರಮೆ ಹುಟ್ಟಿಸಿದೆ. ಸಾಮಾಜಿಕ ನ್ಯಾಯ ಹಾಗೂ ಸೌಹಾರ್ದತೆಯ ಸಂಘಟಿತ ಹೋರಾಟದಲ್ಲಿದ್ದ ಒಬ್ಬ ಲವಲವಿಕೆಯ ನಾಯಕನನ್ನು ರಾಜ್ಯದ ಜನತೆ ಕಳೆದುಕೊಂಡಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಇಲ್ಯಾಸ್ ಮುಹಮ್ಮದ್ ತುಂಬೆ ವಿಷಾದ ವ್ಯಕ್ತಪಡಿಸಿದ್ದಾರೆ
ಪ್ರಾರಂಭದಲ್ಲಿ ಕೋಮುವಾದ ಹಾಗೂ ಬಲಪಂಥೀಯ ವಿಚಾರಧಾರೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಮಹೇಂದ್ರಕುಮಾರ್ ಆನಂತರ ತಾನು ಸಾಗುತ್ತಿರುವ ಹಾದಿ ಅತ್ಯಂತ ಕೆಡುಕಿನದೆಂದು ಮನಗಂಡು ಜಾತ್ಯಾತೀತತೆ, ಸೌಹಾರ್ದತೆ ಹಾಗೂ ಸಮಾನ ನ್ಯಾಯ ದೆಡೆಗೆ ಪರಿವರ್ತನೆಗೊಂಡು ರಾಜ್ಯದಲ್ಲಿ ಸಂಚಲನ ಮೂಡಿಸಿ ರಾಜ್ಯದಲ್ಲಿ ಉದಯೋನ್ಮುಖ ನಾಯಕನಾಗಿ ಮೂಡಿಬಂದಿದ್ದರು.
ತನ್ನ ನೇರ ಹಾಗೂ ಪ್ರಖರ ಮಾತುಗಾರಿಕೆ ಮತ್ತು ಮಾನವೀಯ ಚಿಂತನೆಗಳಿಂದ ರಾಜ್ಯದಲ್ಲಿ ಭಾರೀ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಅವರು ಇತ್ತೀಚಿಗೆ ಆರಂಭಿಸಿದ್ದ ಜನಧ್ವನಿ ಯೂಟ್ಯೂಬ್ ವಾಹಿನಿ ಅಪಾರ ಜನಮನ್ನಣೆ ಗಳಿಸಿದ್ದು ಮಾಧ್ಯಮಗಳಲ್ಲಿ ತಾಂಡವವಾಡುತ್ತಿರುವ ಭೃಷ್ಟತೆ ಹಾಗೂ ಮತೀಯತೆಗೆ ನೇರ ಸವಾಲಾಗಿ ಮೂಡಿಬರುತ್ತಿತ್ತು. ಮಹೇಂದ್ರ ಕುಮಾರ ರವರ ಅಗಲಿಕೆ ರಾಜ್ಯದ ಜನತೆಗೆ ದೊಡ್ಡ ನಷ್ಟವಾಗಿದೆ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಧ್ಯಕ್ಷ ಇಲಿಯಾಸ್ ಮೊಹಮ್ಮದ್ ತುಂಬೆ ಸಂತಾಪ ವ್ಯಕ್ತಪಡಿಸಿದ್ದಾರೆ.
💥💥💥💥💥💥💥💥💥💥💥
*ಮಹೇಂದ್ರ ಕುಮಾರ್ ನಿಧನ : ಯುನಿವೆಫ್ ಕರ್ನಾಟಕ ತೀವ್ರ ಸಂತಾಪ*
➖➖➖➖➖➖➖➖➖➖➖
ಸದ್ವಿಚಾರಗಳನ್ನು ಧನಾತ್ಮಕವಾಗಿಯೇ ಬಿಂಬಿಸಿ ಜನರ ಮನವೊಲಿಸುವ ಕಾರ್ಯದ ಮೂಲಕ ಹೊಸ ಜಾಗೃತಿಯನ್ನು ಮೂಡಿಸಬೇಕೆಂದು ಬಲವಾಗಿ ನಂಬಿದ್ದ ಮತ್ತು ಅದಕ್ಕಾಗಿ ಕಾರ್ಯಪ್ರವರ್ತರಾಗಿದ್ದ *ನಮ್ಮ ಧ್ವನಿ* ಎಂಬ ಯುಟ್ಯೂಬ್ ಚಾನಲ್ ನ ಸ್ಥಾಪಕರು ಸೌಹಾರ್ದ ಸಮಾಜದ ಸ್ಥಾಪನೆಗಾಗಿ ಹೋರಾಟ ನಡೆಸುವಲ್ಲಿ ಮುಂಚೂಣಿಯಲ್ಲಿದ್ದ ಖ್ಯಾತ ವಾಗ್ಮಿ ಮಹೇಂದ್ರ ಕುಮಾರ್ ರ ನಿಧನಕ್ಕೆ *ಯುನಿವೆಫ್ ಕರ್ನಾಟಕ ತೀವ್ರ ಸಂತಾಪ ಸೂಚಿಸುತ್ತದೆ.*
ಸಂಘಪರಿವಾರದ ಕೊಂಡಿಯನ್ನು ಕಳಚಿ ಸಮಾಜಮುಖಿ ಕೆಲಸಗಳಿಗೆ ತನ್ನನ್ನು ಅರ್ಪಿಸಿ ಎಲ್ಲ ವಿಧದ ಸಾಮಾಜಿಕ ಕಟ್ಟಳೆಗಳನ್ನು ವಿರೋಧಿಸಿ ಹೊಸ ಸಮಾಜ ಕಟ್ಟುವಲ್ಲಿ ತನ್ನನ್ನು ಸಮರ್ಪಿಸಿ ಈಗ ಅಕಾಲಿಕವಾಗಿ ಮರಣ ಹೊಂದಿರುವುದು ಕರ್ನಾಟಕಕ್ಕೆ ದೊಡ್ಡ ನಷ್ಟ ಎಂದು *ಯುನಿವೆಫ್ ಕರ್ನಾಟಕ* ಭಾವಿಸುತ್ತದೆ.
ಒಂದು ವರ್ಷ ಮೊದಲು *ಯುನಿವೆಫ್ ಕರ್ನಾಟಕದ “ಪ್ರವಾದಿ ಅಭಿಯಾನದ”* ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸಾಮಾಜಿಕ ಬದಲಾವಣೆಯಲ್ಲಿ ಯುವಕರ ಪಾತ್ರಗಳ ಬಗ್ಗೆ ಬಹಳ ಮನೋಜ್ಞವಾಗಿ ವಿವರಿಸಿದ್ದ ಅವರು ಸೇರಿದ ಸಾವಿರಾರು ಜನರಲ್ಲಿ ಆಶಾಕಿರಣ ಮೂಡಿಸಿದ್ದ ಮಹೇಂದ್ರ ಕುಮಾರ್ ರ ಅಗಳುವಿಕೆ , ನಿಜಕ್ಕೂ ಆದುನಿಕ ಸಮಾಜ ಅಮೂಲ್ಯ ವಸ್ತುವೊಂದನ್ನು ಕಳೆದುಕೊಂಡ ಹಾಗೆ ಭಾಸವಾಗುತ್ತಿದೆ.
ಕಳೆದ ಕೆಲವು ಸಮಯಗಳಿಂದ ನಮ್ಮೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದ ಅವರು ಎಲ್ಲ ವಿಚಾರಗಳನ್ನು ಮುಕ್ತವಾಗಿ ಚರ್ಚಿಸುತ್ತಿದ್ದರು. ವಿಶೇಷವಾಗಿ *ಮುಸ್ಲಿಂ ಸಮುದಾಯದ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಯಾವ ರೀತಿ ಧನಾತ್ಮಕವಾಗಿ ಪ್ರತಿನರೋಧಿಸಬಹುದು* ಎಂಬುದರ ಕುರಿತು ಮಾರ್ಗದರ್ಶನ ನೀಡುತ್ತಿದ್ದ ಒಬ್ಬ ಗೆಳೆಯನನ್ನು ನಾವು ಕಳೆದುಕೊಂಡಿದ್ದೇವೆ.
*ದ್ವೇಷ ಹಾಗೂ ಕೋಮುವಾದವನ್ನು ಪ್ರತಿರೋಧಿಸುವವರೊಂದಿಗೆ* ನಿಕಟ ಸಂಪರ್ಕವನ್ನು ಸಾಧಿಸಿ ಅವರಲ್ಲಿ ವೈಚಾರಿಕ ಏಕತೆಯನ್ನು ತಂದು ಒಂದು ಹೊಸ ವೇದಿಕೆಯನ್ನು ಕರ್ನಾಟಕದಲ್ಲಿ ಸ್ಥಾಪಿಸುವ ಅವರ ಯೋಜನೆ ಅಪೂರ್ಣ ಗೊಂಡಕಾರಣಕ್ಕೂ ಮಹೇಂದ್ರ ಕುಮಾರ್ ರವರ ಅಗಲಿಕೆ ನಮ್ಮನ್ನು ದುಃಖಕ್ಕೀಡು ಮಾಡಿದೆ.
*ಯುನಿವೆಫ್ ಕರ್ನಾಟಕದ ಕೆಲಸಕಾರ್ಯಗಳ ಬಗ್ಗೆ ಹೆಮ್ಮೆಯನ್ನೂ ಅವರು ಪ್ರಕಟಿಸಿದ್ದರು.*
*🌍ಸುದ್ದಿ ಯುನಿವೆಫ್*
💥💥💥💥💥💥💥💥💥💥💥
==========================
*ಕೋಮುವಾದಿ ಗಳಿಗೆ ಸಿಂಹಸ್ವಪ್ನ ವಾಗಿದ್ದ ಮಹೇಂದ್ರ ಕುಮಾರ್ ಇನ್ನಿಲ್ಲ* ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ನಂಬಲಾಗುತ್ತಿಲ್ಲ….
ಕೋಮುವಾದಿ ಸಂಘಟನೆಗಳ ಹಾಗೂ ವಿಚಾರಧಾರೆಗಳಿಂದ ಹೂರ ಬಂದು ನಂತರ ನೀವು ಪಡೆದುಕೊಂಡ ಹೊಸಹುಟ್ಟು ನಮ್ಮಂಥವರಲ್ಲಿ ಮೊದಮೊದಲು ಆಶ್ಚರ್ಯ ವನ್ನು ನಂತರ ಸಂತೋಷವನ್ನು ಉಂಟುಮಾಡಿತ್ತು.
*#NRC_NPR_CAA ವಿರೋಧಿ ಚಳವಳಿಯಲ್ಲಿ ನೀವೂ-ನಾನೂ ಹಲವಾರು ಬಾರಿ ವೇದಿಕೆಯನ್ನು ಹಂಚಿಕೊಡಿದ್ದೇವೆ….ಅದೇ ರೀತಿ ನೀವು ಪ್ರಸ್ತಾಪಿಸುತಿದ್ದ ಕೆಲವು ವಿಚಾರಗಳು ನನಗೆ ಸರಿಯೆನಿಸದಿದ್ದರೂ NRC_CAA_NPR ಹಿಂದೆ ಇರುವ ಕೋಮುವಾದಿ ರಾಜಕೀಯದ ಸಂಚುಗಳನ್ನು ಸ್ಪಷ್ಟವಾಗಿ ನೀವು ಜನರ ಮುಂದಿರಿಸುತ್ತಿದ್ದ ರೀತಿ ನಿಜಕ್ಕೂ ಶ್ಲಾಘನೀಯ.*
ಒಂದೆರೆಡೇ ವರ್ಷಗಳ ಲ್ಲಿ ನೀವು ಕಟ್ಟಿದ *”ನಮ್ಮ ಧ್ವನಿ”* ಯೂಟ್ಯೂಬ್ ಮಾಧ್ಯಮ ಜನಪ್ರಿಯ ಗೊಂಡಿದೆ. ಇದು ಕಳೆದ ಕೆಲವು ವರ್ಷಗಳಲ್ಲಿ ಈ ರಾಜ್ಯದಲ್ಲಿ ಆಗಿರುವ ಕೆಲವು ಸಕಾರಾತ್ಮಕ ಬೆಳವಣಿಗೆಗಳಲ್ಲಿ ಒಂದು…
ನಿಮ್ಮ ಕುಟುಂಬ ಕುಟುಂಬ ವರ್ಗದವರಿಗೆ ಈ ನೊವು ಸಹಿಸಿಕೊಳ್ಳುವ ಶಕ್ತಿ ನೀಡಲಿ.
ಸೌಹಾರ್ದ-ಹಾಗೂ ಸಾಮರಸ್ಯ ದ ಸಮಾಜವನ್ನು ಕಟ್ಟುವ ಕೆಲಸದಲ್ಲಿ ನೀವು ನಮ್ಮ ಜೊತೆಗೆ ಪರೋಕ್ಷವಾಗಿ ಇದ್ದೇ ಇರುತ್ತೀರಿ….
✍🏻ಅಪ್ಸರ್ ಕೊಡ್ಲಿಪೇಟೆ
============================
*ಹೋರಾಟಗಾರ ಮಹೇಂದ್ರ ಕುಮಾರ್ ನಿಧನಕ್ಕೆ ಸಂತಾಪ.*
*ಬೆಂಗಳೂರು, ಮಹೇಂದ್ರ ಕುಮಾರ್ ಕೊಪ್ಪ ರವರು ಹ್ರದಯಾಘಾತ ದಿಂದ ಮರಣ ಸಂಭವಿಸಿದ ಸುದ್ದಿ ತಿಳಿದು ತುಂಬಾ ದುಖ ಆಗಿದೆ.*
*ತನ್ನ ಯವ್ವನದ ಅಮೂಲ್ಯ ಕಾಲವನ್ನು ಹಿಂದುತ್ವ ಫ್ಯಾಶಿಸ್ಟ್ ಸಂಘಪರಿವಾರದಲ್ಲಿ ಸೇರಿಕೊಂಡು ಮಾಡಿದ ಕೆಟ್ಟ ಕೆಲಸಗಳಿಗೆ ಪಶ್ಚಾತ್ತಾಪ ಪಟ್ಟು ಅದರಿಂದ ಹೊರಬಂದವರು.*
*ಜೀವನದ ಕೊನೆಯ ಭಾಗದಲ್ಲಿ ಜಾತ್ಯತೀತ ಪ್ರಜಾಪ್ರಭುತ್ವ ಸಂವಿಧಾನದ ವ್ಯವಸ್ಥೆಯನ್ನು ಸಂರಕ್ಷಣೆ ಮಾಡಲು ಹಿಂದೂ ಮುಸ್ಲಿಮ್ ಸೌಹಾರ್ದತೆಯನ್ನು ಬೆಳೆಸಲು ನಿರಂತರವಾಗಿ ಹೋರಾಟ ಮಾಡಿದರು.*
*ಯುವಕರಲ್ಲಿ ಸಂಘಪರಿವಾರದ ಫ್ಯಾಶಿಸ್ಟ್ ಹಿಂದುತ್ವ ದಿಂದ ಹೊರಬಂದು ಶಾಂತಿ ಸೌಹಾರ್ದತೆಯನ್ನು ಕಾಪಾಡುವ ಜಾಗೃತಿ ಮೂಡಿಸುವ ಕೆಲಸದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಹೋರಾಟದಲ್ಲಿ ಇರುವಾಗಲೇ ಸಂಭವಿಸಿದ ಈ ಆಕಸ್ಮಿಕ ಮರಣವು ಎಲ್ಲಾ ಶಾಂತಿ ಸೌಹಾರ್ದತೆಯನ್ನು ಬಯಸುವ ಜನರಿಗೆ ದೊಡ್ಡ ನಷ್ಟ ಆಗಿದೆ.*
*ಜಾಫರ್ ಫೈಝೀ*
=============================
*ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ನಿಧನಕ್ಕೆ ಸಂತಾಪ*
ಮಂಗಳೂರು: ಸಾಮಾಜಿಕ ಹೋರಟಗಾರ, ಮರ್ದಿತ ಸಮುದಾಯದ ನಾಯಕ ಮಹೇಂದ್ರ ಕುಮಾರ್ ನಿಧಾನಕ್ಕೆ ವೆಲ್ಪೇರ್ ಪಕ್ಷದ ದ.ಕ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ಯಾಶಿಸ್ಟ ಸಂಘಟನೆಯ ಕಾಪಟ್ಯತನವನ್ನು ಬಯಲಿಗೆಲೆದ ಮತ್ತು ಹಿಂದುಳಿದ ವರ್ಗಗಳಲ್ಲಿ ಸಾಮಾಜಿಕ ಜಾಗೃತಿ ಗೊಳಿಸುತ್ತಿದ್ದರು. ಮಹೇಂದ್ರ ಕುಮಾರ್ ನಿಧನವು ಸಾಮಾಜಿಕ ಮತ್ತು ಸೈದ್ದಾಂತಿಕ ಹೋರಾಟಕ್ಕೆ ಬಲು ದೊಡ್ಡ ನಷ್ಟವಾಗಿದೆ ಎಂದು ಸುಲೈಮಾನ್ ಕಲ್ಲರ್ಪೆ ಪತ್ರಿಕಾ ಪ್ರಕಟನೆ ತಿಳಿಸಿರುತ್ತಾರೆ.
========================