ಆತ್ಮೀಯ ಬಂಧುಗಳೇ,
ಸುಮಾರು 3ದಿನಗಳ ಸಂಪೂರ್ಣ ಲಾಕ್ ಡೌನ್ ನಂತರ ಇಂದು ಮಂಗಳೂರು ನಗರದಲ್ಲಿ ಬೆಳಿಗ್ಗೆ 6-00ರಿಂದ ಮಧ್ಯಾಹ್ನ 3-00ಗಂಟೆಯ ತನಕ ದೈನಂದಿನ ಅಗತ್ಯ ವಸ್ತುಗಳ ಖರಿದಿಗೋಸ್ಕರ ಅಂಗಡಿಗಳನ್ನು ತೆರೆದಿರುವ ಪರಿಣಾಮದಿಂದ, ನಗರದಲ್ಲಿ ಸುಡು ಬಿಸಿಲಿನಲ್ಲಿ ಜನರು ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಖರೀದಿಸುವ ದೃಶ್ಯ ನನ್ನ ಮನಸ್ಸಿಗೆ ತುಂಬಾ ನೋವನ್ನು ತಂದಿದೆ. ಇದನ್ನು ಗಮನಿಸಿದಾಗ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕಾದ ಅತ್ಯಾವಶ್ಯಕ ವಿಷಯ ಅಗತ್ಯ ವಸ್ತುಗಳು ಸಿಗುತ್ತವೋ ಇಲ್ಲವೋ ಎಂಬ ಕಾತರದಲ್ಲಿ ಸಂಪೂರ್ಣ ಮರೆತು ಹೋದಂತಿದೆ ಈ ಪರಿಸ್ಥಿತಿಯನ್ನು ತಕ್ಕ ಮಟ್ಟಿಗೆ ಸರಿ ಪಡಿಸಬಹುದಿತ್ತೆನೋ ಎಂದು ನನಗೆ ಅನಿಸುತ್ತಿದೆ. Crisis Mangament ನ ಅನುಭವದಿಂದ ಈ ಕೆಳಗಿನ ಸಲಹೆಗಳನ್ನು ಜಿಲ್ಲಾಡಳಿತಕ್ಕೆ ನೀಡಲು ಇಚ್ಚಿಸುತ್ತೆನೆ
(1) ಉತ್ಪಾದಕತೆ- ಸಗಟು ವಿತರಣೆ-ಚಿಲ್ಲರೆ ವಿತರಣೆ-ಗ್ರಾಹಕ ಈ ನೈಸರ್ಗಿಕವಾಗಿ ಬಂದ Supply Chain ನ್ನು ವಿತರಣಾ ಜಾಲವನ್ನು ನಾವು ಎಂದಿಗೂ ಮುರಿಯಬಾರದು, ಸಾಧ್ಯವಾದರೆ ಇದನ್ನು ಬಲಪಡಿಸಬೇಕು ಹಾಗೂ ನಿಯಂತ್ರಿಸಬೇಕು
(2) ಉತ್ಪಾದಕತೆಯಲ್ಲಿ ಮುಖ್ಯವಾಗಿ ಅಕ್ಕಿ, ತರಕಾರಿ, ಬೇಳೆ, ದಿನಸಿ ಇತ್ಯಾದಿ ಅದು ತಯರಾಗುದರಲ್ಲಿ ತೊಂದರೆಗಳು ಆಗದಂತೆ ನೋಡಿಕೊಳ್ಳುವುದು ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ನಿರಂತರ ಉತ್ಪಾದನೆ ಆಗುವಂತೆ ನೋಡುವುದು. ಅಂದರೆ ಉದಾಹರಣೆಗೆ, ಅಕ್ಕಿ ಮಿಲ್ಲುಗಳು ಮುಚ್ಚಿದರೆ ಅಕ್ಕಿ ಲಭ್ಯವಾಗುವುದು ಹೇಗೆ? ಅಕ್ಕಿ ಮಿಲ್ಲುಗಳು ಸಾಮಾಜಿಕ ಅಂತರದೊಂದಿಗೆ ಉತ್ಪಾದನೆ ನಿಲ್ಲಿಸದಂತೆ ನೋಡಿಕೊಳ್ಳುವುದು. ಅಲ್ಲಿ ಅದಕ್ಕೆ ಸಂಬಧಿಸಿದ ಕೈಗಾರಿಕೆ ಇಲಾಖೆಯ, ಆಹಾರ ಇಲಾಖೆಯ ಮಾರ್ಗ ಸೂಚಿಗಳನ್ನು ನೀಡುವುದು
(3)ಉತ್ಪಾದಿತ ಸ್ಥಳದಿಂದ ಸಗಟು ವ್ಯಾಪಾರ ಸ್ಥಳಕ್ಕೆ ನಿರಂತರ ಸರಬರಾಜು ಆಗಲು ಸಾಗಾಟ ಪಾಸುಗಳನ್ನು ವಿತರಣೆ ಮಾಡುವುದು, ಉದಾಹರಣೆಗೆ ಅಕ್ಕಿ, ಹಾಸನ, ಶಿವಮೊಗ್ಗ, ರಾಯಚೂರು ಇಲ್ಲಿಂದ ಬರುದಾದ್ರೆ, ಈ ಸ್ಥಳಗಳಲ್ಲಿ ನಮ್ಮ ಜಿಲ್ಲೆಯಿಂದ ಇಬ್ಬರು ಅಧಿಕಾರಿಗಳನ್ನು ನಿಯೋಜಿಸಿ ನಮ್ಮ ಸಗಟುದಾರರಿಗೆ ಸಾಕಷ್ಟು ಸಾಮಾನು ಸಿಗುವಂತೆ ಹಾಗೂ ರವಾನೆಗೆ ಅಡಚಣೆ ಆಗದಂತೆ Coordinate ಮಾಡಿಸುವುದು (4)ಸಗಟು ವ್ಯಾಪಾರಸ್ಥರು ಪ್ರತಿ ದಿವಸ ಬೆಳಿಗ್ಗೆ 5.00 ಘಂಟೆಯಿಂದ 9.00 ಗಂಟೆವರೆಗೆ ಚಿಲ್ಲರೆ ವ್ಯಾಪಾರಸ್ಥರಿಗೆ ಮಾರಾಟ ಮಾಡುವುದು. 9.00 ಗಂಟೆಯನಂತರ ಸಗಟು ವ್ಯಾಪಾರ ಸಂಪೂರ್ಣ ಬಂದ್.
(5)ಚಿಲ್ಲರೆ ವ್ಯಾಪಾರಸ್ಥರು ಪ್ರತಿ ದಿವಸ ಅಂಗಡಿಗಳಲ್ಲಿ ಬೆಳಿಗ್ಗೆ 6.00 ರಿಂದ 11.00 ಗಂಟೆ ವರೆಗೆ ತಮ್ಮ ಅಂಗಡಿ ಪ್ರದೇಶದ ಗ್ರಾಹಕರಿಗೆ ಮಾರಾಟ. 11.00 ಗಂಟೆಯ ನಂತರ ಸಂಪೂರ್ಣ ಬಂದ್. (6)ಪ್ರತೀ ಚಿಲ್ಲರೆ ವ್ಯಾಪಾರಸ್ಥರು ಕಡ್ಡಾಯವಾಗಿ ಬೆಳಿಗ್ಗೆ 11.00 ಗಂಟೆ ವರೆಗೆ ಅಂಗಡಿ ತೆರೆದಿಡಬೇಕು. ಪ್ರತೀ ದಿವಸ ಅವರು ಈ ಹಿಂದೆ ಮಾಡುತಿದ್ದ ದೈನಂದಿನ ಅವಶ್ಯಕ ಸಾಮಗ್ರಿಗಳ ಚಿಲ್ಲರೆ ವ್ಯಾಪಾರ ಮಾಡಲೇಬೇಕು. ಇಲ್ಲವಾದಲ್ಲಿ ಅವರ ಲೈಸನ್ಸ್ ಕಡ್ಡಾಯವಾಗಿ ರದ್ದುಗೊಳಿಸಬೇಕು. (7)ಇಲಾಖೆಗಳು, ಸಗಟು ವ್ಯಾಪಾರಸ್ಥರು, ಚಿಲ್ಲರೆ ವ್ಯಾಪಾರಸ್ಥರು ಕಾನೂನು ಬಾಹಿರವಾಗಿ ದಾಸ್ತಾನು ಇಡುವುದು, ಹೆಚ್ಚಿನ ದರದಲ್ಲಿ ಮಾರುವುದು ಇತ್ಯಾದಿಗಳ ಮೇಲೆ ಸಂಪೂರ್ಣ ನಿಗಾ ವಹಿಸುವುದು. (8)ಈ ಮೇಲಿನ ವಿತರಣಾ ಜಾಲವನ್ನು ಸರಿಯಾಗಿ ಮಾಡಿದರೆ ಯಾವುದೇ ಗೊಂದಲ ಉಂಟಾಗುವುದಿಲ್ಲ. ಇದನ್ನು ಬಿಟ್ಟು, 3-4 ದಿವಸಗಳಿಗೆ ಸಂಪೂರ್ಣ ಬಂದ್ ಮಾಡಿ, ಒಂದು ದಿವಸ ತೆರೆದರೆ ಇವತ್ತು ಆದಂತಹ ಪರಿಸ್ಥಿತಿ ಉಂಟಾಗುವುದು ಮಾತ್ರವಲ್ಲದೇ, ಸಾಮಾಜಿಕ ಅಂತರವನ್ನು ಕಾಪಾಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗುವುದು. (9)ಇದನ್ನು ಬಿಟ್ಟು ಸರಕಾರವೇ ನೇರವಾಗಿ ಮನೆ ಮನೆಗೆ ವಿತರಣೆ ಮಾಡುತ್ತೇವೆ ಎನ್ನುವುದಾದರೆ ಅದು ಹುಚ್ಚುತನ. ಅದು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗುವುದಲ್ಲದೆ, ಬೇರೆ ಪ್ರಯೋಜನಕ್ಕೆ ಬಾರದು. ಅದು ಯಶಸ್ಸು ಕಾಣದು. ಡಿಸೆಂಟ್ರಲೈಸಷನ್, (ವಿಕೇಂದ್ರೀಕರಣ )ವ್ಯವಸ್ಥೆ ಯಾವಾಗಲು ಒಳ್ಳೆಯದು.

ಇದು ನನ್ನ ಅನುಭವದ ಮಾತುಗಳು. ಈವರೆಗೆ ಜಿಲ್ಲಾಡಳಿತವಾಗಲಿ ಯಾ ಅಧಿಕಾರದಲ್ಲಿರುವ ಮಂತ್ರಿಗಳಾಗಲಿ, ನಮ್ಮನ್ನು ಯಾರನ್ನು ಕರೆದು ಸಲಹೆಗಳನ್ನು ಪಡೆದಿಲ್ಲ. ಆದುದರಿಂದ, ಸಾಮಾಜಿಕ ಜಾಲತಾಣದ ಮುಖಾಂತರ ನನ್ನ ಸಲಹೆ ನೀಡಲು ಇಚ್ಚಿಸಿದೆ. ಈ ನನ್ನ ಸಲಹೆಗಳು ಒಪ್ಪಿಗೆಯಾದಲ್ಲಿ ಪರಿಗಣಿಸಿ. ಇಲ್ಲವಾದಲ್ಲಿ ಅಲ್ಲಿಗೇನೇ ಬಿಟ್ಟು ಬಿಡಿ. ಧನ್ಯವಾದಗಳು. ತಮ್ಮ ವಿಶ್ವಾಸಿ, ಶ್ರೀ.ಜೆ. ಆರ್. ಲೋಬೊ, ಮಾಜಿ ಶಾಸಕರು.