*ಕುರುಬರ ಎಸ್ ಟಿ ಹೋರಾಟದ *
ಕುರಿತು ನಮ್ಮ ಸಮಾಜದ ಹಿರಿಯರು ಮತ್ತು ಜನಪ್ರತಿನಿಧಿಗಳು ಸೇರಿ ಈಗಾಗಲೇ ಸಭೆ ಸೇರಿ ಚರ್ಚಿಸಲಾಗಿದೆ.
ಹೋರಾಟ ಮತ್ತು ಕೇಂದ್ರ ಸರ್ಕಾರಕ್ಕೆ ಇದರ ಬಗ್ಗೆ ಒತ್ತಾಯ ಮಾಡಲು ಉದ್ದೇಶಿಸಲಾಗಿದೆ.
ಎಸ್.ಟಿ. ಹೋರಾಟದ ರೂಪು ರೇಷೆಗಳನ್ನು ಮಾಡಲು ಇದೇ ತಿಂಗಳು 20ನೇ ತಾರೀಖಿನಂದು ಬೆಂಗಳೂರಿನಲ್ಲಿ
ಎಲ್ಲ ಪಕ್ಷದ ನಾಯಕರುಗಳು, ಅಧಿಕಾರಿಗಳು, ಸ್ವಾಮೀಜಿಗಳ ನೇತೃತ್ವದಲ್ಲಿ
ಮಾಡಲು ಇಚ್ಚಿಸಿದ್ದೇವೆ ಎಂದು ಮಾಜಿ ಲೋಕಸಭಾ ಸದಸ್ಯರಾದ ಕೆ.ವಿರುಪಾಕ್ಷಪ್ಪನವರು ತಿಳಿಸಿದರು.
ಅಹಿಂದ ಮುಖಂಡರಾದ
ಶ್ರೀ ಕೆ.ಮುಕುಡಪ್ಪನವರು ಹಾಗೂ ನಿವೃತ್ತ IAS ಅಧಿಕಾರಿಯಾದ
ಶ್ರೀ ಪುಟ್ಟಸ್ವಾಮಿ, ಕುರುಬರ ಸಂಘದ ಸದಸ್ಯರಾದ ಟಿ.ಬಿ.ಬಳಗಾವಿ ಅವರು
ಎಸ್.ಟಿ.ಹೋರಾಟ ಸಮಿತಿ ಮುಖಂಡರಾದ ನಾಗೇಶ್ ರವರು
ಆನೇಕಲ್ ದೊಡ್ಡಯ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕುರುಬ ಸಮುದಾಯದ ಮುಖಂಡ ಮುಕುಡಪ್ಪ‌ ಹೇಳಿಕೆ

1935-1953ವರೆಗೆ ಕುರುಬರು ಎಸ್.ಟಿಗೆ ಪರಿಗಣನೆ ಮಾಡಲಾಗಿತ್ತು

ಮದ್ರಾಸ್ ಪ್ರಾಂತ್ಯದಲ್ಲಿ ಕುರುಮನ್ಸ್(ST), ಕಟ್ಟುನಾಯಕನ್ (ST)

ಬಾಂಬೆ ಪ್ರಾಂತ್ಯದಲ್ಲಿ ಗೊಂಡ (ST)

ಹಳೆಮೈಸೂರು ಭಾಗದಲ್ಲಿ ಜೇನುಕುರುಬ(ST), ಕಾಡುಕುರುಬ(ST)

ಹೈದ್ರಾಬಾದ್ ಪ್ರಾಂತ್ಯದಲ್ಲಿ ಗೊಂಡ (ST), ಕೊಡಗು ಕುರುಬರು (ST) ಇತ್ತು

ಆಗಿನ ಎಲ್ಲ ಜಾತಿಗಳು ಹಾಗೆ ಮುಂದುವರಿದಿವೆ

ಆದರೆ ಕುರುಬರಿಗೆ ಮಾತ್ರ (ST) ಮೀಸಲಾತಿ ಸಿಗಲಿಲ್ಲ

ಬಹಳ ವರ್ಷಗಳ ಹಿಂದಿನಿಂದ ಎಸ್.ಟಿ ಆಗಿಲ್ಲ

ಹೀಗಾಗಿ ಈ ಕುರಿತ ಹೋರಾಟಕ್ಕೆ ಮುಂದಾಗುತ್ತೇವೆ

ಕುರುಬ ಸಮುದಾಯದ ಮುಖಂಡ ಕೆ.ವಿರುಪಾಕ್ಷಪ್ಪ ಹೇಳಿಕೆ

ಕಾಡುಕುರುಬರು, ಜೇನುಕುರುಬರು ಸೀಮಿತ ಭಾಗದಲ್ಲಿದ್ದಾರೆ

ಅವರು ಬೇರೆ ಭಾಗದಲ್ಲಿ ಬಂದು ನೆಲೆಸಬಾರದೆ?

ಬೆಂಗಳೂರಿನಲ್ಲಿ‌ ಕಾಡುಕುರುಬರು ವಲಸೆ‌ಬಂದು ಬದುಕಬಾರಾದೇ

ಹಾಗೆ ಬೆಂಗಳೂರಿಗೆ ಬಂದು ನೆಲೆಸಿದವರಿಗೆ ಜಾತಿ ಪ್ರಮಾಣ ಪತ್ರ ಕೊಡುತ್ತಿಲ್ಲ

ಈ ದೇಶದ ಮೂಲ ನಿವಾಸಿಗಳು ಕುರುಬರು

ಕುರುಬರು ಬುಡಕಟ್ಟು ಜನಾಂಗದವರು

ಬ್ರಿಟೀಷರು ಕೂಡ ವರದಿಯಲ್ಲಿ ಉಲ್ಲೇಖಿಸಿದ್ದಾರೆ

ಹಿಂದೆ ತಲತಲಾಂತರದಿಂದ ಇದ್ದ ಮೀಸಲಾತಿ ಮುಂದುವರಿಸಬೇಕು

ಕುರುಬರನ್ನು ಎಸ್.ಟಿಗೆ ಸೇರಿಸಬೇಕು