ಮಾರ್ಚ್-8 ಪೌರತ್ವ ವಿರೊಧಿ ಸಮಾವೇಶಕ್ಕೆ ಅಭೊತಪೂರ್ವ ಜನ ಬೆಂಬಲ.
ಮಂಗಳೂರು 7 ಮಾರ್ಚ್ ದಕ್ಷಿಣ ಕನ್ನಡ ಜಿಲ್ಲೆ ಪೌರತ್ವ ಸಮನ್ವಯ ಸಮಿತಿ ಆಶ್ರಯದಲ್ಲಿ ಬ್ರಹತ್ ಪ್ರತಿಭಟನಾ ಸಮಾವೇಶ ಮಾರ್ಚ 8 ರಂದು ಮಧ್ಯಾಹ್ನ 2 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ನಗರ ರಾಷ್ಟ್ರೀಯ ಹೆದ್ದಾರಿ ಬಳಿಯ ಜಪ್ಪಿನ ಮೊಗರಿನಲ್ಲಿ ನಡೆಯಲಿದೆ.
ಕೇಂದ್ರ ಸರಕಾರ ತಂದಿರುವ ಎನ್ಆರ್ಸಿ, ಎನ್ಪಿಆರ್,ಸಿ.ಎ.ಎ, ಮತ್ತು ದೆಹಲಿ ಕೊಮು ಹಿಂಸಾಚಾರದ ವಿರುದ್ದ ಪ್ರತಿಭಟನಾ ಸಮಾವೇಶ ನಡೆಯಲಿದೆ ಎಂದು ಸಂಸ್ತೆಯ ಅಧ್ಯಕ್ಷ ಯು.ಕೆ.ಯೊಸುಫ್ ತಿಳಿಸಿದ್ದಾರೆ. 26 ಎಕರೆ ವಿಶಾಲ ಮೈದಾನ ಮತ್ತು 100 ಗಣ್ಯರಿಗೆ ಆಸೀನರಾಗುವ ವಿಶಾಲ ವೇದಿಕೆ ಸಜ್ಜುಗೊಳಿಸಲಾಗಿದೆ. 2 ಸಾಮಿರ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ.
ಗ್ರಾಂಡ್ ಮುಫ್ತಿ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್, ಮುಸ್ಲಿಂ ಲೀಗ್ ಮುಖಂಡ ಪಾನಕ್ಕಾಡ್ ಮುನವರ್ ಅಲಿ ತಂಗಳ್, ಆರ್ಯಸಮಾಜ ಮುಖಂಡ ಸ್ವಾಮಿ ಅಗ್ನಿವೇಶ್, ಮಾಜಿ ಪ್ರಧಾನಿ ದೇವೇಗೌಡ, ಉಳ್ಳಾಲ ಖಾಝಿ ಪಝಲ್ ಕೋಯಮ್ಮ ಕೂರ ತಂಗಳ್, ಉಡುಪಿ ಖಾಝಿ ಬೇಕಲ ಉಸ್ತಾದ್, ದ.ಕ.ಜಿಲ್ಲಾ ಖಾಝಿ ತ್ವಾಕ ಅಹ್ಮದೆ ಮುಸ್ಲಿಯಾರ್, ಎಸ್ಡಿಪಿಐ ರಾಷ್ಟ್ರೀಯ ಕಾರ್ಯದಶೀ ಸೀತಾರಾಮ್ ಕೊಯಿವಾಲ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದಾಮಯ್ಯ ಮತು ಕುಮಾರ ಸ್ವಾಮಿ, ಮಾಜಿ ಸಚಿವರುಗಳಾದ ರಮೇಶ್ ಕುಮಾರ್, ಯು.ಟಿ.ಖಾದರ್, ಬಿ.ಎಂ,ಫಾರೂಕ್ (ಎಂ.ಎಲ್.ಸಿ), ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ್ಷ ಯಾಸೀರ್ ಹಸನ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ್ಷ ತಾಹೀರ್ ಹುಸೇನ್, ಕಮ್ಯನಿಷ್ಟ್ ಪಕ್ಷದ ಶಾಸಕ ಸ್ವರಾಜ್ ಮೊದಲಾದವರು ಭಾಷನ ಮಾಡಲಿದ್ದಾರೆ. ಅಲ್ಲದೆ ನೂರಾರು ರಾಜಕೀಯ, ಧಾರ್ಮಿಕ ಮುಖಂಡರು, ಸಂಘ-ಸಂಸ್ತೆಗÀಳ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ತಿತರಿದ್ದಾರೆ. ದ.ಕ.ಜಿಲ್ಲೆ ಮತ್ತು ಆಸುಪಾಸಿನ ಲಕ್ಷಾಂತರ ಹಿಂದು-ಮುಸ್ಲಿಮ್-ಕ್ರೈಸ್ತ ಭಾಂದವರು ಭಾಗವಹಿಸಲಿದ್ದಾರೆ. ಕುಡಿಯುವ ನೀರು ಮತ್ತು ನಮಾಝ್ ವ್ಯವಸ್ತೆ ಮಾಡಲಾಗಿದೆ.