(ಜನವರಿ 15 ಮಾಯಾವತಿ ಹುಟ್ಟುಹಬ್ಬದ ಪ್ರಯುಕ್ತ ಈ ಲೇಖನ)
ಮನೆ ಬಿಟ್ಟ ಮಗಳು ಮಹಾನಾಯಕಿಯಾದಳು.
ಅದೊಂದು ಮಾಗಿಯ ಕಾಲ. ಕೊರೆವ ಚಳಿಯಲ್ಲಿಯೂ ತಾನು ಐಎಎಸ್ ಪರೀಕ್ಷೆಯನ್ನು ಪಾಸುಮಾಡಬೇಕೆಂದು ಸಂಬಂಧಿಸಿದ ಪುಸ್ತಕಗಳನ್ನು ಸಂಗ್ರಹಿಸಿಕೊಂಡು ಅಧ್ಯಾಯನದಲ್ಲಿ ಯುವತಿಯೊಬ್ಬಳು ತೊಡಗಿದ್ದಳು. ಸುಮಾರು ರಾತ್ರಿಕ 9ಗಂಟೆಯ ಸಮಯ ಇದ್ದಕ್ಕಿದ್ದಂತೆ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದವಾಯಿತು. ಕೂಡಲೆ ಎದ್ದು ಹೋದ ಯುವತಿಯು ಬಾಗಿಲು ತೆರೆದು ನೋಡಿದರೆ ಎದುರಿಗೆ ಮಧ್ಯವಯಸ್ಸಿನ ನೀಳಕಾಯದ ತಲೆಗೆ ಮಪ್ಲರ್ ಸುತ್ತಿದ ವ್ಯಕ್ತಿಯೊಬ್ಬರು ತನ್ನ ಐದು ಜನ ಸಹಪಾಠಿಗಳೊಂದಿಗೆ ನಿಂತಿದ್ದರು. ಮನೆಗೆ ಬಂದ ಅತಿಥಿಗಳನ್ನು ಒಳಕರೆದು ಕುಳ್ಳಿರಿಸಿದರು. ಹೀಗೆ ಏಕಾಏಕಿ ಯಾವುದೇ ಸುಳಿವನ್ನು ನೀಡದೆ ಆ ಯುವತಿ ಮನೆಗೆ ಬಂದ ವ್ಯಕ್ತಿ ಬೇರಾರು ಅಲ್ಲ ಅವರೆ ಭಾರತದ ರಾಜಕೀಯ ಕ್ಷಿಪಣಿ ಎಂದೇ ಮಾಧ್ಯಮಗಳಿಂದ ಕರೆಯಲ್ಪಟ್ಟ ವ್ಯಕ್ತಿ ದಾದಾಸಾಹೇಬ್ ಕಾನ್ಸೀರಾಮ್.
ಒಳಬಂದವರೇ ಯುವತಿಯ ಕಡೆಗೆ ನೋಡುತ್ತಾ ನೀನು ಬಹಳಷ್ಟು ಪುಸ್ತಕಗಳನ್ನು ಓದುತ್ತಿರುವಂತಿದೆ. ಮುಂದೆ ಏನಾಗಬೇಕೆಂದಿರುವೆ..? ಎಂದು ಪ್ರಶ್ನಿಸಿದರು. ತಟ್ಟನೆ ಉತ್ತರಿಸಿದ ಯುವತಿಯು ನಾನು ಐಎಎಸ್ ಪಾಸು ಮಾಡಬೇಕೆಂದಿದ್ದೇನೆ. ಜಿಲ್ಲಾಧಿಕಾರಿಯಾಗಿ ನನ್ನ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಬೇಕೆಂಬ ಬಯಕೆಯಿದೆ ಎಂದರು. ಇದನ್ನು ಕೇಳಿಸಿಕೊಂಡ ಕಾನ್ಸೀರಾಮರು ನೀನು ದೊಡ್ಡ ತಪ್ಪನ್ನು ಮಾಡುತ್ತಿದ್ದೀಯಾ.. ಜಿಲ್ಲಾಧಿಕಾರಿಯಾಗುವುದರಿಂದ ನೀನು ನಿನ್ನ ಸಮಾಜಕ್ಕೆ ಉತ್ತಮ ಸೇವೆಯನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ಜಿಲ್ಲಾಧಿಕಾರಿಗಳು ರಾಜಕಾರಣಿಗಳ, ರಾಜಕೀಯ ಪಕ್ಷಗಳ ಕೈಕೆಳಗೆ ಕೆಲಸಮಾಡುವ ಸೇವಕರು, ಇವತ್ತು ನಮ್ಮ ಸಮಾಜಕ್ಕೆ ಜಿಲ್ಲಾಧಿಕಾರಿಗಳ ಕೊರತೆಯಿಲ್ಲ, ಬದಲಿಗೆ ಆ ಜಿಲ್ಲಾಧಿಕಾರಿಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಲ್ಲ ಉತ್ತಮ ನಾಯಕರ ಕೊರತೆಯಿದೆ. ನಮ್ಮ ಸಮಾಜಕ್ಕೆ ಸಮರ್ಥ ಮುಂದಾಳುಗಳ ಕೊರತೆಯಿದೆ. ನೀನು ಈ ಮಹತ್ತರ ಕೊರತೆಯನ್ನು ನೀಗಿಸುವುದು ಒಳ್ಳೆಯದು. ನಿನ್ನಲ್ಲಿ ಸಮಾಜವನ್ನು ಮುನ್ನಡೆಸುವ ಮಹತ್ತರ ಗುಣಗಳಿವೆ. ಪರಿಶ್ರಮದ ಸದೃಢತೆ ಮನಸ್ಸಿದೆ, ನಮ್ಮ ಚಳುವಳಿಯಲ್ಲಿ ತೊಡಗಿಸಿಕೋ ಮುಂದೊಂದು ದಿನ ಎಲ್ಲಾ ಜಿಲ್ಲಾಧಿಕಾರಿಗಳು ಫೈಲುಗಳನ್ನಿಡಿದು ನಿನ್ನ ಆಜ್ಞೆಗಾಗಿ ಸಾಲಾಗಿ ನಿಲ್ಲುವಂತಹ ನಾಯಕಿಯನ್ನಾಗಿ ಮಾಡುತ್ತೇನೆ, ನೀನು ಅಂತಹ ನಾಯಕಿಯಾದರೆ ಇಂತಹ ಅಧಿಕಾರಿಗಳ ಮೂಲಕ ಸಮಾಜಕ್ಕೆ ಉತ್ತಮ ಸೇವೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನೀಡಬಹುದು ಎಂದು ವಿವರಿಸಿದರು. ಸುಮಾರು ಒಚಿದು ಗಂಟೆಗಳ ಕಾಲ ಭಾರತದ ಸಾಮಾಜಿಕ ಮತ್ತು ಆಧುನಿಕ ಸ್ಥಿತಿಗತಿಗಳನ್ನು ಅಂಬೇಡ್ಕರ್ ವಾದದ ಹಿನ್ನಲೆಯಲ್ಲಿ ಎಳೆಎಳೆಚಿiÀiÁಗಿ ಬಿಡಿಸಿ ಹೇಳಿದಾಗ ಅವರ ಮಾತನ್ನು ಕೇಳುತ್ತಲೇ ಸಮಾಜ ಪರಿವರ್ತನೆಗೆ ಮನಸ್ಸಿನಲ್ಲಿಯೆ ಸಮ್ಮತಿಸಿದ್ದರು. ಒಬ್ಬ ವ್ಯಕ್ತಿಯ ಮಾತಿನಿಂದಲೆ ತಾನು ಐಎಎಸ್ ಅಧಿಕಾರಿಯಾಗಬೇಕೆಂಬ ಕನಸಿಗೆ ತಿಲಾಂಜಲಿಯಿಟ್ಟು ಸಮಾಜ ಪರಿವರ್ತನೆಗೆ ಅಣಿಯಾದಳು ತನ್ನ ಜೀವನವನ್ನೇ ಸಮಾಜದ ಏಳಿಗೆಗಾಗಿ ಮುಡುಪಿಟ್ಟ ಆ ಯುವತಿಯೇ ಭಾರತದ ಭಾಗ್ಯವಿಧಾತೆ ಬೆಹನ್ ಮಾಯಾವತಿ.
1956 ಜನವರಿ 15 ರಂದು ದೆಹಲಿಯ ಪ್ರಭುದಾಸ್ ಮತ್ತು ರಾಮರತಿ ಎಂಬ ದಂಪತಿಗಳಿಗೆ ಮಗಳಾಗಿ ಜನಿಸಿದರು. ಮಾಯಾವತಿಯವರು ಸೇರಿದಂತೆ ದಂಪತಿಗಳಿಗೆ ಅವರಿಗೆ 9 ಜನ ಮಕ್ಕಳು. ಪ್ರಭುದಾಸರು ಅಂಚೆ ಇಲಾಖೆಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಆಶ್ಚರ್ಯವೆಚಿದರೆ ಹೆಣ್ಣುಮಗು ಹುಟ್ಟಿದೆ ದಿನವೇ ಪ್ರಭುದಾಸರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯಿತು. ಅವರ ಕಛೇರಿಯಿಂದ ಬರಬೇಕಿದ್ದ ಹಿಂಬಾಕಿ ಹಣವೂ ದೊರೆಯಿತು. ಜೊತೆಗೆ ಉತ್ತಮ P್ಪಛೇರಿಗೆ ವರ್ಗಾವಣೆಯೂ ಆಯಿತು. ಈ ಮೂರು ಪ್ರಸಂಗಗಳಿಂದ ಆನಂದತುಂದಿಲರಾದ ಪ್ರಭುದಾಸರು ಇದೆಲ್ಲಾ “ಮಾಯೇ” ಎಂದು ಉದ್ಗರಿಸಿದರು. ತನ್ನ ಬದುಕಿನಲ್ಲಿ ಅನಿರೀಕ್ಷಿತ ಬದಲಾವಣೆಯು ಹೆಣ್ಣು ಮಗು ಜನಿಸಿದ್ದ ದಿನದಂದೆ ಆvದ್ದರಿಂದ ಆ ಮಗುವಿಗೆ ಮಾಯಾವತಿ ಎಂದು ಹೆಸರಿಟ್ಟರು.
ಮಾಯಾವತಿಯು ತನ್ನ ಪ್ರಾಥಮಿಕ ಶಿಕ್ಷಣವನ್ನು ದೆಹಲಿಯ ಬಾದಲ್ ಪುರದಲ್ಲಿ ಕಲಿತರು. 1975ರಲ್ಲಿ ದೆಹಲಿ ಯುನಿವರ್ಸಿಟಿಯ ಕಾಳಿಂದಿ ಕಾಲೇಜಿನಲ್ಲಿ ಬಿಎಡ್ ಪದವಿಯನ್ನು ಹಾಗು ದೆಹಲಿಯ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದರು. 1977ರಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದಾಲೆ ಸರ್ಕಾರಿ ಶಾಲೆಗೆ ಶಿಕ್ಷಕಿಯಾಗಿ ನೇಮಕವಾದರು.
ಕಾನ್ಸಿರಾಮರ ಮಾತನ್ನು ಕೇಳಿ ಎಲ್ಲಿ ತನ್ನ ಮಗಳು ದಿಕ್ಕುತಪ್ಪುತ್ತಾಳೋ ಎಂದು ಆತಂಕಗೊಂಡ ಪ್ರಭುದಾಸರು ಪದೆಪದೇ ಐಎಎಸ್ ಓದುವ ಬಗ್ಗೆ ನೆನಪಿಸುತ್ತಿದ್ದರು. ಹಾಗು ಮಗಳೇ ನೀನು ಜಿಲ್ಲಾಧಿಕಾರಿಯಾಗಲೇ ಬೇಕು, ಹಾಗಾದರೆ ಮಾತ್ರ ಸಮಾಜ ಸೇವೆಯನ್ನು ಹೆಚ್ಚಿನ ರೀತಿಯಲ್ಲಿ ಮಾಡಬಹುದು ಎಂದು ಎಚ್ಚರಿಸುತ್ತಿದ್ದರು. ನಿನ್ನ ಸಂಬಳದ ಹಣವನ್ನು ಉಳಿಸು ನಿನ್ನ ಮದುವೆಗೆ ಬೇಕಾಗುತ್ತದೆ ಎಂದೂ ಹೇಳಿದ್ದರು.
ಮಗಳು ಕಾನ್ಸೀರಾಮರು ಬಾಂಸೇಫ್(ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ನೌಕರರ ಒಕ್ಕೂಟ) ಸಭೆ, ಸಮಾರಂಭಗಳಿಗೆ ಹೋಗುವುದು ಇಷ್ಠವಿಲ್ಲದೆ ರೇಗಾಡುತ್ತಿದ್ದರು. ಇದನ್ನು ಲೆಕ್ಕಿಸದೆ ಮಾಯಾವತಿ ಬಾಂಸೇಫ್ ಕೆಲಸ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದರು. ಇದರಿಂದ ಮತ್ತಷ್ಟು ಕೋಪಗೊಂಡ ಪ್ರಭುದಾಸರು ಮಾಯಾವತಿಯನ್ನು ಹೀಯಾಳಿಸಿ ಬೈದರು. ತಂದೆಯ ಮಾತಿಗೆ ನಾನು ಐಎಎಸ್ ಪರೀಕ್ಷೆಗೆ ಓದುವುದಿಲ್ಲ. ಅಷ್ಠೇ ಏಕೆ ಜಿಲ್ಲಾಧಿಕಾರಿಯಾಗುವ ಆಸೆಯೂ ನನಗಿಲ್ಲ ಎಂದು ಹೇಳಿದರು. ಇದರಿಂದ ಕೆಂಡಮಂಡಲವಾದ ತಂದೆಯು ನೀನು ಆ ಕಾನ್ಸಿರಾಮನ ಹಿಂದೆ ಹೋದರೆ ಕಾರ್ಪೋರೇಟರ್ ಕೂಡ ಆಗುವುದಿಲ್ಲ ನೀನು ಐಎಎಸ್ ಪರೀಕ್ಷೆಗೆ ಓದುವುದಿಲ್ಲವಾದರೆ ಕಾನ್ಸಿರಾಮರ ಸಹವಾಸವನ್ನು ಬಿಡದೇ ಹೋದರೆ ಈ ಮನೆಯಲ್ಲಿ ಇರಕೂಡದು ಎಂದು ಗದರಿಸಿದರು. ತಂದೆಯ ಮಾತುಗಳಿಂದ ಕಂಗಾಲಾದ ಮಾಯಾವತಿಯು ತಾನು ಸಂಗ್ರಹಿಸಿದ್ದ ಸಂಬಳದ ಹಣವನ್ನು ತೆಗೆದುಕೊಂಡು ಸೂಟ್ ಕೇಸ್ ಒಂದಕ್ಕೆ ಬಟ್ಟೆಗಳನ್ನು ತುಂಬಿಸಿಕೊಂಡು ತನ್ನ ತಮ್ಮ ಸಿದ್ದಾರ್ಥನೊಂದಿಗೆ ಮನೆ ಬಿಟ್ಟು ಹೊರಟುಹೋದರು. ಹೀಗೆ ಮನೆಬಿಟ್ಟಾಗ ಅವರ ವಯಸ್ಸು ಕೇವಲ 22ವರ್ಷಗಳು. ಎಲ್ಲಾ ಯುವತಿಯರಂತೆ ಪ್ರೀತಿ, ಪ್ರಣಯ, ಪ್ರೇಮದ ಗುಂಗಿನಲ್ಲಿ ತೇಲುವ ವಯಸ್ಸಿನಲ್ಲಿ ಮಾಯಾವತಿ ತನ್ನ ಕಾರ್ಯ ಸಾಧನೆಗಾಗಿ ಹರೆಯದ ಬಯಕೆಗಳನ್ನು ಹತ್ತಿಕ್ಕಿ ತನ್ನ ಮನೆಯನ್ನೇ ತೊರೆದಿದ್ದರು.
ದೆಹಲಿಯ ಕರೋಲಾಬಾಗ್‍ನಲ್ಲಿದ್ದ ಬಾಂಸೇಫ್ P್ಪಛೇರಿಗೆ ಬಂದ ಮಾಯಾವತಿಯು ನಡೆದ ಘಟನೆಯೆಲ್ಲವನ್ನು ದಾದಾಸಾಹೇಬರಿಗೆ ತಿಳಿಸಿದರು. ಹೆದರಬೇಡ ನೀನು ಒಳ್ಳೆಯ ತೀರ್ಮಾನವನ್ನೇ ತೆಗೆದುಕೊಂಡಿರುವೆ. ಎಂದು ಧೈರ್ಯತುಂಬಿದರು. ತನ್ನ ತಮ್ಮನೊಡನೆ ಕಾನ್ಸೀರಾಮರ ಬಾಡಿಗೆ ಮನೆಯಲ್ಲಿ ಉಳಿದುಕೊಂಡು ಅಲ್ಲಿಂದಲೇ ಶಾಲೆಗೆ ಹೋಗುತ್ತಿದ್ದರು, ಸಂಜೆ ಸಮಯದಲ್ಲಿ ಕಾನೂನು ಕಾಲೇಜಿಗೆ ಹೋಗುತ್ತಿದ್ದರು. ಉಳಿದ ಸಮಯದಲ್ಲಿ ಬಾಂಸೇಫ್ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಕಾನ್ಸಿರಾಮರು ಸದಾಕಾಲ ದೇಶಪರ್ಯಟನೆಯಲ್ಲಿದ್ದರಿಂದ ಅವರ ಮನೆ ಮಾಯಾವತಿ ಮತ್ತು ತಮ್ಮ ಸಿದ್ದಾರ್ಥನಿಗೆ ಮೀಸಲಾಗಿತ್ತು. ಇದನ್ನು ಕಂಡ ಬಾಂಸೇಫ್ ನಾಯಕರು, ಕಾನ್ಸಿರಾಮರು ತಮಗಿಂತ ಕಿರಿಯರಾದ ಮಾಯಾವತಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿದ್ದಾರೆ ಎಂದು ಆಪಾದಿಸಿದರು. ಅಲ್ಲದೆ ಮಾಯಾವತಿ ಮತ್ತು ಕಾನ್ಸಿರಾಮರ ನಡುವೆ ಕೆಟ್ಟ ವದಂತಿಗಳನ್ನು ಹಬ್ಬಿಸಿದರು. ಆಕೆಯ ವಿರುದ್ದ ಕುಹಕವಾಡತೊಡಗಿದರು. ಇದರಿಂದ ಮನನೊಂದ ಮಾಯಾವತಿಯು ತಾನು ಸಂಬಳದಲ್ಲಿ ಕೂಡಿಟ್ಟ ಹಣದಲ್ಲಿ ಬೇರೊಂದು ಮನೆಯನ್ನು ಖರೀದಿಸಿ ತಮ್ಮನೊಡನೆ ವಾಸಿಸತೊಡಗಿದರು.
1981ರಲ್ಲಿ ಡಿಎಸ್4(ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ) ಸ್ಥಾಪನೆಯಾದಾಗ ಪಾನನಿರೋಧ ಚಳುವಳಿ ಹಮ್ಮಿಕೊಂಡಾಗ ಮಾಯಾವತಿ ಎಲ್ಲಾ ಸಭೆಗಳಲ್ಲೂ ಭಾಗವಹಿಸಿ ಉತ್ತರ ಪ್ರದೇಶದಾದ್ಯಂತ ಮನೆಮಾತಾದರು. 1984 ಏಪ್ರೀಲ್ 14 ರಂದು ಬಿಎಸ್‍ಪಿ ಸ್ಥಾಪನೆಯಾದಾಗ ತನ್ನ ಶಾಲಾಶಿಕ್ಷಕಿ ಹುದ್ದೆಗೆ ರಾಜೀನಾಮೆಯನ್ನು ನೀಡಿ ಮುಜಾಫರ್ ನಗರ ಜಿಲ್ಲೆಯ ‘ಕೈರಾಣಿ’ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿ 44,445 ಮತಗಳನ್ನು ಪಡೆದು ಸೋಲುಂಡರು. 1985ರ ಡಿಸೆಂಬರ್‍ನಲ್ಲಿ ಬಿಜನೂರು ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು. ಇವರ ವರ್ಚಸ್ಸು ಮತ್ತು ಜನಪ್ರೀಯತೆಯನ್ನು ಹಿಮ್ಮೆಟ್ಟಿಸಲು ಕಾಂಗ್ರೇಸ್ಸಿಗರು ಜಗಜೀವನ ರಾಮ್ ಮಗಳನ್ನು(ಮೀರಾಕುಮಾರ್) ಸರ್ಕಾರಿ ಹುದ್ದೆಗೆ ರಾಜೀನಾಮೆ ಕೊಡಿಸಿ ನಿಲ್ಲಿಸಿ ಮಾಯಾವತಿಯವರನ್ನು ಸೋಲಿಸಿದರು. 1987ರಲ್ಲಿ ಹರಿದ್ವಾರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. 1989ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 1,83,189 ಮತಗಳನ್ನು ಪಡೆದು ಪ್ರಥಮಬಾರಿಗೆ ವಿಜಯಿಯಾದರು. 1995 ರ ಜೂನ್ ಒಂದರಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂಸಿಂಗ್ ಯಾದವ್ ಮಾಯಾವತಿಯನ್ನು ಪ್ರವಾಸಿಮಂದಿರದಲ್ಲಿ ಕೂಡಿಹಾಕಿ ಬೆಂಬಲಿಗರ ಮೂಲಕ ಕೊಲ್ಲಿಸಲು ಪ್ರಯತ್ನಿಸಿದಾಗ ಪೋಲೀಸ್ ಅಧಿಕಾರಿಗಳ ರಕ್ಷಣೆಯಿಂದ( ರಾಜೀವ್‍ಕೇರ್ ಮತ್ತು ರಾಜೀವ್ ರಂಜನ್ ವರ್ಮಾ) ಬದುಕಿದ ಮಾಯಾತಿಯು ಅದೇ ಜೂನ್ 3 ರಂದು ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದ ಅಧಿಕಾರ ಹಿಡಿಯುವುದರೊಂದಿಗೆ ದೇಶದ ಪ್ರಪ್ರಥಮ ದಲಿತ ಮಹಿಳಾ ಮುಖ್ಯಮಂತ್ರಿ ಎಂಬ ಕೀರ್ತಿಗೆ ಭಾಜನರಾದರು. 1995, 1996,1997,2002ರಲ್ಲಿ ಚೌಕಾಸಿ ರಾಜಕಾರಣದ ಮೂಲಕ ಮುಖ್ಯಮಂತ್ರಿ ಪದವಿಗೇರಿ 2007ರಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದರು. ತಮ್ಮ ಅಧಿಕಾರಾವಧಿಯಲ್ಲಿ ಬಡತನ ರೇಖೆಯ ಕೆಳಗಿರುವ ಎಲ್ಲಾ ವರ್ಗದವರಿಗೂ ಸರ್ಕಾರದವತಿಯಿಂದಲೇ ಸುಮಾರು 10ಲಕ್ಷ ಹೆಕ್ಟೇರ್ ಸರ್ಕಾರಿ ಭೂಮಿಯನ್ನು ತಲಾ ಮೂರು ಎಕರೆಗಳಂತೆ ಹಂಚಿ ದುರ್ಬಲರಿಗೆ ಆಸ್ತಿಯ ಹಕ್ಕನ್ನು ನೀಡಿದರು. ಗೂಂಡಾ ಕಾಯ್ದೆಯನ್ನು ಜಾರಿಗೆ ತಂದು 1,45000 ಲಕ್ಷ ಗೂಂಡಾಗಳನ್ನು ಜೈಲಿಗೆ ಹಾಕಿಸಿದರು. ದುರ್ಬಲ ಮಹಿಳೆಯರ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯ ದಬ್ಬಾಳಿಕೆಯನ್ನು ತಡೆಗಟ್ಟಲು ಸರ್ಕಾರದವತಿಯಿಂದಲೇ 17000 ಬಂದೂಕು ಪರವಾನಗಿ ನೀಡಿದರು. ದೇಶದಲ್ಲೇ ಪ್ರಪ್ರಥಮಬಾರಿಗೆ ಖಾಸಾಗಿ ವಲಯದಲ್ಲಿ 30% ಮೀಸಲಾತಿಯನ್ನು ನೀಡಿದರು.(ಬ್ರಾಹ್ಮಣ,ಬನಿಯ ಮೇಲ್ವರ್ಗದ ಬಡವರಿಗೆ 10%, ಹಿಂದುಳಿದ ಜಾತಿ ಅಲ್ಪಸಂಖ್ಯಾತರಿಗೆ 10%, ಪರಿಶಿಷ್ಠಜಾತಿ ಸಮುದಾಯಗಳಿಗೆ 10%) ಇಷ್ಠೇಲ್ಲಾ ಸಾಧನೆಗೈದ ಇವರು ಮುಖ್ಯಮಂತ್ರಿಯಾಗಿದ್ದಾಗ ತನ್ನ ತಂದೆ ಸಂಬಂಧಿಕರೊಬ್ಬರಿಗೆ ಸರ್ಕಾರಿ ಕೆಲಸ ಕೊಡಿಸಲು ಕೇಳಿದಾಗ ನಿನ್ನ ಗಂಡು ಮಕ್ಕಳಿದ್ದಾರಲ್ಲ ಅವರನ್ನು ಹೋಗಿ ಕೇಳು ಎಂದು ತಂದೆಯನ್ನೇ ಪ್ರಶ್ನಿಸಿ ಕಛೇರಿಯಿಂದಲೆ ಹೊರಗೆ ಕಳುಹಿಸಿದ್ದ ಧೀರವನಿತೆ. ಇಂತಹ ಭಾರತದ ಶೋಷಿತ ಬಹುಜನರ ಮಹಾಮಾರಿ ಜನಿಸಿ 60 ವಸಂತಗಳನ್ನು ಪೂರೈಸಿ, 64ನೇ ಹುಟ್ಟುಹಬ್ಬದ ಸಡಗರದಲ್ಲಿರುವ ಅವರು ಮುಂದೆಯೂ ರಾಷ್ಟ್ರೀಯ ರಾಜಕಾರಣದಲ್ಲಿ ಉಜ್ವಲವಾಗಿ ಬೆಳೆಯಲಿ, ಎಷ್ಟೇ ಅಡೆತಡೆಗಳು ಬಂದರೂ ಸಾಧಿಸುಛಲವಿದ್ದರೆ ಏನನ್ನಾದರೂ ಸಾಧಿಸಿ ಗುರಿಮುಟ್ಟಬಹುದು ಎಂಬುದಕ್ಕೆ ಮಾಯಾವತಿಯವರ ಹೋರಾಟವೇ ಸಾಕ್ಷಿ. ಅವರ ಹೋರಾಟದ ಜೀವನವೆಲ್ಲವೂ ಒಂದು ಪುಸ್ತಕವಿದ್ದಂತೆ. ಸದಾ ಬಡತನ, ದಾರಿದ್ರ್ಯ, ಕಂದಾಚಾರಗಳಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಕೊರಗುವ ಯುವತಿಯರಿಗೆ, ತಳಸಮುದಾಯಗಳಿಗೆ ಇವರ ಛಲ, ಸಾಧನೆ, ಬದುಕಿನ ಪಯಣವೆ ಆದರ್ಶ ಮತ್ತು ಮಾರ್ಗದರ್ಶನವಾಗಲಿ,
ಸ್ಟೀವನ್ ಪ್ರಕಾಶ್ ಹೆಚ್.ಸಿ. ಹಿರಿಯೂರು, (ಸಕಲೇಶಪುರ ತಾ;)