*ಸೌಹಾರ್ದ ಭಾರತ ಕಟ್ಟಲು ಎಸ್‍ಡಿಪಿಐ ಗೆ ಮತ ನೀಡಲು ಮನವಿ*

ಹುಣಸೂರು:- ನವಂಬರ್27 ಸೌಹಾರ್ದ ಮತ್ತು ಬಲಿಷ್ಟ ಭಾರತ ಕಟ್ಟಲು ಎಸ್‍ಡಿಪಿಐ ಪಕ್ಷಕ್ಕೆ ಮತ ನೀಡಲು ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ಹುಣಸೂರು ವಿಧಾನ ಸಭಾ ಕ್ಷೇತ್ರದ ಉಪ ಚುನಾವಣಾ ಅಭ್ಯರ್ಥಿಯಾದ ದೇವನೂರು ಪುಟ್ಟನಂಜಯ್ಯ ಮನವಿ ಮಾಡಿದರು. ಅವರು ಕ್ಷೇತ್ರದ ವಿವಿಧ ಗ್ರಾಮ-ನಗರ ಪ್ರದೇಶಗಳಲ್ಲಿ ಮತ ಯಾಚನೆ ನಡೆಸಿ ಜನತೆಯ ಭರವಸೆಯನ್ನು ಪಡೆದು ಕೊಂಡಿದ್ದಾರೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಎಸ್‍ಡಿಪಿಐ ಪಕ್ಷ ಈ ಉಪ ಚುನಾವಣೆಯಲ್ಲಿ ರಾಜ್ಯದ ಹುಣಸೂರು ಮತ್ತು ಶಿವಾಜಿ ನಗರಗಳಲ್ಲಿ ಮಾತ್ರ ಸ್ಪರ್ಧಿಸಿದ್ದು. ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ಹನ್ನಾನ್‍ ರವರು ಶಿವಾಜಿ ನಗರದಿಂದ ಸ್ಪರ್ಧಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದು, ಅಭೂತ ಪೂರ್ವ ಜನ ಬೆಂಬಲ ಸಿಕ್ಕಿರುತ್ತದೆ. ಮತದಾರರು ಮತ ನಿಡುವ ವಾಗ್ದಾನ ಮಾಡಿರುತ್ತಾರೆ. ಹುಣಸೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭೇಟಿ ನೀಡಿದಾಗ ಜನರು ನೂರಾರು ಸಮಸ್ಯೆಗಳಿಂದ ತತ್ತರಿಸುತ್ತಿರುವ ವಾಸ್ತವಂಶವನ್ನು ನಾವು ಕಂಡಿದ್ದೇವೆ. ಕುಡಿಯುವ ನೀರು, ರಸ್ತೆ, ಬೀದಿ ದೀಪ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಕೊರತೆ ಇದೆ. ಗ್ರಾಮೀಣ ಭಾಗದ ರೈತರು ಜೀವನ ಸಾಗಿಸಲು ಕಷ್ಟಪಡುತ್ತಿದ್ದಾರೆ.
ಈ ಬಾರಿ ಎಸ್‍ಡಿಪಿಐ ಪಕ್ಷದ ಗ್ಯಾಸ್ ಸಿಲಿಂಡರ್ ಚಿಹ್ನೆಗೆ ಮತ ನೀಡಿ ಜನ ಸೇವಕನಾಗಿ ಆಯ್ಕೆ ಮಾಡಿದರೆ ಭ್ರಷ್ಟಾಚಾರ, ಜಾತಿ- ಧರ್ಮ ಭೇದ ಮತ್ತು ತಾರತಮ್ಯ ಮಾಡದೆ ಸಮಗ್ರ ಹುಣಸೂರಿನ ಅಭಿವೃದ್ಧಿ ಮಾಡುವುದಾಗಿ ಪುಟ್ಟನಂಜಯ್ಯನವರು ಆಶ್ವಾಸನೆ ನೀಡಿದರು.
ಜನರ ತೆರಿಗೆ ಹಣ ಪೋಲಾಗ ಬಾರದು ರಾಜಕಾರಣಿಗಳು ಮತ್ತು ಮಧ್ಯವರ್ತಿಗಳ ಕಮಿಷನ್ ದಂಧಗೆ ಕಡಿವಾಣ ಹಾಕಬೇಕು. ಸರ್ಕಾರದ ಸೌಲಭ್ಯಗಳು ಕಟ್ಟಕಡೆಯ ಪ್ರಜೆಗೊ ತಲುಪಬೇಕು ಇದಕ್ಕಾಗಿ ಎಸ್‍ಡಿಪಿಐ ಹತ್ತು ವರ್ಷಗಳಿಂದ ಹೊರಾಡುತ್ತಿದೆ. ಎಂದು ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ಲತ್ತೀಫ್ ಮತಯಾಚನೆ ಸಂದರ್ಭದಲ್ಲಿ ತಿಳಿಸಿದರು.


ರಾಜ್ಯ ಕಾರ್ಯದರ್ಶಿ ಕುಮಾರಸ್ವಾಮಿ ಕಾರ್ನರ್ ಮಿಟೀಂಗ್‍ನಲ್ಲಿ ಮಾತನಾಡುತ್ತ ದೇಶದಲ್ಲಿ ಬಡವರು, ದಲಿತರು, ಮುಸ್ಲಿಂರ, ಕಾರ್ಮಿಕರ, ರೈತರ, ಮಹಿಳೆಯರ ಮತ್ತು ಎಲ್ಲಾ ಆವಕಾಶ ವಂಚಿತ ಜನ ಸಮುದಾಯಗಳ ಸಂವಿಧಾನ ಬದ್ಧ ಹಕ್ಕುಗಳಿಗಾಗಿ ಎಸ್‍ಡಿಪಿಐ ಪಕ್ಷಕ್ಕೆ ಮತ ನೀಡಿ ಬಲ ಪಡಿಸಲು ಕರೆ ನೀಡಿದರು.
ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸನ್ ಕಾರ್ನರ್ ಮಿಟಿಂಗ್‍ನಲ್ಲಿ ಮಾತನಾಡಿ ಸರಳ, ಸಜನ, ಶಿಕ್ಷಣತಜ್ಞ, ಆಂಬೇಡ್ಕರ್ ವಾದಿಯಾಗಿರುವ. ದೇವನೂರು ಪುಟ್ಟನಂಜಯ್ಯನವರು ಶಾಸಕರಾಗಿ ಹುಣಸೂರಿನ ಮತದಾರರು ಚುನಾಯಿಸಿದರೆ ಖಂಡಿತವಾಗಿ ನೀಡಿದ ಭರವಸೆಗಳನ್ನು ಈಡೇರಿಸುತ್ತಾರೆ ಎಂದರು.
ರಾಜ್ಯ ಕಾರ್ಯದರ್ಶಿ ಆಶ್ರಫ್ ಮಾಚಾರ್ ನಗರದ ವಿವಿದಡೆ ಕಾರ್ನರ್ ಮಿಟೀಂಗ್‍ನಲ್ಲಿ ಮಾತನಾಡಿ ಕಾಂಗ್ರಸ್ ಮತ್ತು ಜೆಡಿಎಸ್ ಪಕ್ಷದ ಕೆಲವು ಶಾಸಕರುಗಳನ್ನು ಕುದುರೆ ವ್ಯಾಪಾರ ಮಾಡಿ ಪಕ್ಷಾಂತರ ಮಾಡಿಸಿದರು. ಬಿಜೆಪಿ ಆಮಿಷ ಮತ್ತು ಒತ್ತಡ ನೀಡಿ ರಾಜಿನಾಮೆ ಕೊಡಿಸಿದರು. ಇದರಿಂದ ಈ ಉಪ ಚುನಾವಣೆ ಅನಿವಾರ್ಯವಾದವು ಎಂದರು. ರಾಜ್ಯ ಸಮಿತಿ ಸದಸ್ಯ, ಚಾಮರಾಜನಗರ ಕೌನ್ಸಿಲರ್ ಅಬ್ರಾರ್ ಅಹ್ಮದ್ ಮಾತನಾಡಿ ತಾಲೂಕು ಕೇಂದ್ರವಾದ ಹುಣಸೂರು ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಕ್ರಿಯಾಶಿಲ ಅಭ್ಯರ್ಥಿ ಪುಟ್ಟನಂಜಯ್ಯನವರು ಶಾಸಕರಾದರೆ ಇಲ್ಲಿನ ಸಮಸ್ಯೆಗಳನ್ನು ಬಗೆ ಹರಿಸಲಿದ್ದಾರೆ ಎಂದರು.
ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಯೂನುಸ್ ಮಾತನಾಡಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಯಾವುದೇ ಫಲಾಪೇಕ್ಷೆವಿಲ್ಲದೆ ಕಳೆದ 2 ತಿಂಗಳುಗಳಿಂದ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ-ಜನಪರ ಹೋರಾಟ ನಡೆಸಿದ್ದಾರೆ ಖಂಡಿತವಾಗಿಯೂ ಈ ತ್ಯಾಗ ಕಂಡು ಜನರು ಮತನೀಡಲಿದ್ದಾ ಕ್ಷೇತ್ರದ ಎಲ್ಲಾ ಧರ್ಮ,ಜಾತಿ ಮತ್ತು ಭಾಷೆಗಳ ಮತದಾರರು ಮತ ನೀಡುವ ಭರವಸೆ ನೀಡಿದ್ದಾರೆಎಂದರು
ಪಕ್ಷದ ಮುಖಂಡರಾದ ಸೈಯದ್ ಸಮೀರ್, ಮಜಾಸ್ ಅಹ್ಮದ್, ಅಕ್ಮಲ್, ವಸೀಮ್, ಕೌನ್ಸಿಲರ್ ರಾಜ್ ಮಾಹನ್, ಮನ್ಸೂರ್ ಮಾದಲಾದವರು ವಿವಿದೆಡೆ ಎಸ್‍ಡಿಪಿಐ ಪಕ್ಷದ ಗ್ಯಾಸ್ ಸಿಲಿಂಡರ್ ಚಿಹ್ನೆಗೆ ಮತಯಾಚನೆ ನಡೆಸಿದರು.