ರಾಜ್ಯ ಚುನಾವಣಾ ಆಯೋಗ ಇಂದಿನಿಂದಲೇ ಚುನಾವಣೆ ಡೆಯಲಿರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಗೊಳಿಸಿದೆ. ಇದೇ ಅ.31ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನಾಮಪತ್ರ ಹಿಂಪಡೆಯಲು ನ.4ರವರೆಗೂ ಮಾತ್ರ ಅವಕಾಶ ಮಾಡಿಕೊಡಲಾಗಿದೆ.

ಬೆಂಗಳೂರು(ಅ.20): ಹಲವಾರು ಗೊಂದಲಗಳಿಂದ ಮುಂದೂಡಲಾಗುತ್ತಿದ್ದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೊನೆಗೂ ಕಾಲ ಕೂಡಿಬಂದಿದೆ. ರಾಜ್ಯದ 2 ಮಹಾನಗರ ಪಾಲಿಕೆ, 6 ನಗರಸಭೆ, 3 ಪುರಸಭೆ, 3 ಪಟ್ಟಣ ಪಂಚಾಯಿತಿಗಳಿಗೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಅಲ್ಲದೇ ತೆರವುಗೊಂಡಿದ್ದ ಜಿಲ್ಲಾ/ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯಿತಿ ಕ್ಷೇತ್ರಗಳಿಗೆ ಕೂಡ ಆಯೋಗ ವೇಳಾಪಟ್ಟಿ ಪ್ರಕಟಿಸಿ ಆದೇಶ ಹೊರಡಿಸಿದೆ.

ರಾಜ್ಯ ಚುನಾವಣಾ ಆಯೋಗ ಇಂದಿನಿಂದಲೇ ಚುನಾವಣೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಗೊಳಿಸಿದೆ. ಇದೇ ಅ.31ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನಾಮಪತ್ರ ಹಿಂಪಡೆಯಲು ನ.4ರವರೆಗೂ ಮಾತ್ರ ಅವಕಾಶ ಮಾಡಿಕೊಡಲಾಗಿದೆ

ಮಂಗಳೂರು ಮಹಾನಗರ ಪಾಲಿಕೆ, ಶಿವಮೊಗ್ಗ ಜಿಲ್ಲೆಯ ಜೋಗ್ ಕಾರ್ಗಲ್ ಪಟ್ಟಣ ಪಂಚಾಯಯಿ, ಬಳ್ಳಾರಿ ಕಂಪ್ಲಿ ಪುರಸಭೆ, ಕೂಡ್ಲಿಗಿ ಪಟ್ಟಣ ಪಂಚಾಯತಿ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ಸ್ಥಳೀಯ ಸಂಸ್ಥೆಗಳ 1388 ಮತಗಟ್ಟೆಗಳಲ್ಲಿ, 13, 04,614 ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಈ ಚುನಾವಣೆಗೆ ನ.12 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಇನ್ನೇನಾದರೂ ಮರು ಮತದಾನ ಇದ್ದಲ್ಲಿ ನ.13 ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ. ನಂತರ ನ.14 ರಂದು ಆಯಾ ತಾಲೂಕು ಕೇಂದ್ರ ಸ್ಥಳದಲ್ಲಿ ಮತಗಳ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.
ಚುನಾವಣೆ ನಡೆಯಲಿರುವ ಜಿಲ್ಲೆಗಳು

ಕೋಲಾರ: ಕೋಲಾರ(ನಗರಸಭೆ), ಮುಳಬಾಗಿಲು(ನಗರಸಭೆ), ಕೆಜಿಎಫ್(ನಗರಸಭೆ)

ಚಿಕ್ಕಬಳ್ಳಾಪುರ: ಗೌರಿಬಿದನೂರು(ನಗರಸಭೆ), ಚಿಂತಾಮಣಿ(ನಗರಸಭೆ)

ರಾಮನಗರ: ಕನಕಪುರ(ನಗರಸಭೆ), ಮಾಗಡಿ(ಪುರಸಭೆ)

ಶಿವಮೊಗ್ಗ: ಜೋಗ ಕಾರ್ಗಲ್(ಪಟ್ಟಣ ಪಂಚಾಯತ್)

ಚಿಕ್ಕಮಗಳೂರು: ಬೀರೂರು(ಪುರಸಭೆ)

ದಾವಣಗೆರೆ: ದಾವಣಗೆರೆ(ಮಹಾನಗರ ಪಾಲಿಕೆ)

ದಕ್ಷಿಣ ಕನ್ನಡ: ಮಂಗಳೂರು(ಮಹಾನಗರ ಪಾಲಿಕೆ)

ಧಾರವಾಡ: ಕುಂದಗೋಳ(ಪಟ್ಟಣ ಪಂಚಾಯತ್)

ಬಳ್ಳಾರಿ: ಕಂಪ್ಲಿ(ಪುರಸಭೆ), ಕೂಡ್ಲಗಿ(ಪಟ್ಟಣ ಪಂಚಾಯತ್)

ಉಪ ಚುನಾವಣೆ ನಡೆಯುವ ಜಿಲ್ಲೆಗಳು

ಹೊಳೆನರಸೀಪುರ ಪುರಸಭೆ ವಾರ್ಡ್ ನಂ.4

ಕೊಳ್ಳೆಗಾಲ ನಗರಸಭೆ ವಾರ್ಡ್ ನಂ.19

ಚಡಚಣ ಪಟ್ಟಣ ಪಂಚಾಯತ್ ವಾರ್ಡ್ ನಂ.5

ಮಹಾಲಿಂಗಪುರ ಪುರಸಭೆ ವಾರ್ಡ್ ನಂ.17

ಚಿತ್ತಾಪುರ ಪುರಸಭೆ ವಾರ್ಡ್ ನಂ.10