ಮಂಗಳೂರು: ಕೇಂದ್ರ ಸರಕಾರವು ಮಂಗಳೂರು ಬಂದರನ್ನು ಖಾಸಗೀಕರಣ ಮಾಡಲು ಮುಂದಾಗಿರುವುದನ್ನು ತೀವ್ರವಾಗಿ ವಿರೋಧಿಸುವಾಗಿ ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.

ಬುಧವಾರದಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಎನ್‌ಎಂಪಿಟಿಯಲ್ಲಿ ಈಗಾಗಲೇ ಸುಮಾರು 40 ರಷ್ಟು ಶಿಪ್ಪಿಂಗ್ ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಸರಕಾರದ ಖಾಸಗೀಕರಣ ನೀತಿಯಿಂದಾಗಿ ಇಲ್ಲಿ ಕಾರ್ಯನಿರ್ವಹಿಸುವ ಸುಮಾರು ನಾಲ್ಕು ಸಾವಿರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ನಿಯೋಗವು ಕೇಂದ್ರ ಸಚಿವರನ್ನು ಬೇಟಿಯಾಗಿ ಇಲ್ಲಿ ಉದ್ಯೋಗ ಕಳೆದು ಕೊಳ್ಳುವವರಿಗೆ ಪ್ರಥಮ ಆದ್ಯತೆ ಅಡಿ ಕೆಲಸ ನೀಡಬೇಕು ಹಾಗೂ ನೇಮಕಾತಿಯ ಸಂದರ್ಭ ಶೇ 50 ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಅವರು ಆಗ್ರಹಿಸಲಾಗುವುದು ಎಂದು ಹೇಳಿದರು.

ರಾಜ್ಯ ಸರಕಾರವು 10 ದಿನಗಳ ಅಧಿವೇಶನವನ್ನು 3 ದಿನಗಳಿಗೆ ಇಳಿಸಿದ್ದು, ಇದರಿಂದ ನೆರೆ-ಹಾಗೂ ಇತರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲು ಅಡಚಣೆಯಾಗಿದೆ. ಆದುರಿಂದ ರಾಜ್ಯ ಸರಕಾರವು ಅಧಿವೇಶನದ ಅವಧಿಯನ್ನು ವಿಸ್ತರಿಸಬೇಕು ಎಂದು ಹೇಳಿದರು