ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಅಬ್ದುಲ್ ಬಾಸಿತ್ ಆಯ್ಕೆ

ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟ ದ.ಕ ಜಿಲ್ಲೆ ಇದರ 2019-20 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮವು ಮಂಗಳೂರಿನ ನೇತ್ರಾವತಿ ಸಭಾಭವನದಲ್ಲಿ ಇಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಸಲಹೆಗಾರರಾದ ಇಕ್ಬಾಲ್ ಬೆಳ್ಳಾರೆ ವಹಿಸಿ ಮಾತನಾಡಿ ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿದ ಜಿಲ್ಲೆಯಾಗಿದ್ದು ಹಲವಾರು ರಾಜಕೀಯ ನಾಯಕರ ವಿವಿಧ ವಿದ್ಯಾರ್ಥಿ ಒಕ್ಕೂಟಗಳು ಅಸ್ತಿತ್ವದಲ್ಲಿದೆ. ವಿದ್ಯಾರ್ಥಿಗಳನ್ನು ತಮ್ಮ ರಾಜಕೀಯ ಚಟುವಟಿಕೆಗಳ ವಸ್ತುವಾಗಿ ಬಳಸಿ ಮತ್ತು ಹಣದ ವ್ಯಾಮೋಹಕ್ಕೆ ಬಲಿಯಾಗಿಸಿ ನೈಜ ವಿದ್ಯಾರ್ಥಿ ಒಕ್ಕೂಟಗಳ ಮೌಲ್ಯಗಳನ್ನು ಕಸಿಯಲಾಗುತ್ತಿದೆ. ವಿದ್ಯಾರ್ಥಿ ಒಕ್ಕೂಟದ ನೈಜ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಮಗ್ರತೆ, ನಾಯಕತ್ವ ಹಾಗೂ ಅಧಿಕಾರವನ್ನು ವಿದ್ಯಾರ್ಥಿ ಸಮುದಾಯದಲ್ಲಿ ಬೆಳೆಸಲು ಸರ್ವ ಕಾಲೇಜು ವಿದ್ಯಾರ್ಥಿ ಒಕ್ಕೂಟವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಅಹಿಂದ ಡಾಟ್ ಕಾಮ್ ಇದರ ಸಂಪಾದಕಾರಾದ ಅಕ್ರಮ್ ಹಸನ್ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಖಾಸಗಿ ಶಿಕ್ಷಣ ಸಂಸ್ಥೆಗಳಿದ್ದು, ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಡೊನೇಶನ್ ಹಾವಳಿಗಳಿಂದ ಶಿಕ್ಷಣ ಹಕ್ಕನ್ನು ಕಸಿಯಲಾಗುತ್ತಿದೆ, ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಈ ವಿದ್ಯಾರ್ಥಿ ಒಕ್ಕೂಟವು ಕಾರ್ಯಪ್ರವೃತ್ತರಾಗಬೇಕು ಎಂದರು.

ಒಕ್ಕೂಟದ ಸ್ಥಾಪಕ ಸಲಹೆಗಾರರಾದ ಫಯಾಝ್ ದೊಡ್ಡಮನೆ ಮಾತನಾಡಿ ಈ ವಿದ್ಯಾರ್ಥಿ ಒಕ್ಕೂಟವನ್ನು ದಮನಿತ ವರ್ಗದ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಎಲ್ಲಾ ನಾಯಕರು ಸತ್ಯ, ನ್ಯಾಯ ಮತ್ತು ನೈತಿಕತೆಗೆ ಬದ್ಧರಾಗಿ ಒಕ್ಕೂಟವನ್ನು ಮುನ್ನಡೆಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯವಾದಿಗಳಾದ ಅಬ್ದುಲ್ ರಹ್ಮಾನ್ ಹಾಗೂ ಸಲಹೆಗಾರ ಇಮ್ರಾನ್ ಪಿ.ಜೆ, ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿ ಸದಸ್ಯೆ ಮಿಶ್ರಿಯಾ ಹಾಗೂ ಒಕ್ಕೂಟದ ನಿರ್ಗಮಿತ ಜಿಲ್ಲಾ ಕಾರ್ಯದರ್ಶಿ ಸಕೀನಾ ಮುನವ್ವರ ಉಪಸ್ಥಿತರಿದ್ದರು. ಮುಹಮ್ಮದ್ ಸಾದಿಕ್ ಸ್ವಾಗತಿಸಿದರು, ಫಹದ್ ಅನ್ವರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು

ನೂತನ ಸಮಿತಿ ರಚನೆ ಜಿಲ್ಲಾಧ್ಯಕ್ಷರಾಗಿ ಅಬ್ದುಲ್ ಬಾಸಿತ್, ಉಪಾಧ್ಯಕ್ಷಾರಾಗಿ ತಫ್ಸೀರ್, ಮನ್ಸೂರ್ ವಿಟ್ಲ, ಜಶೀರ, ಪ್ರಧಾನ ಕಾರ್ಯದರ್ಶಿಗಳಾಗಿ ನೌಫಲ್ ಉಪ್ಪಿನಂಗಡಿ, ಫಾತಿಮ ಬೆಳ್ತಂಗಡಿ ಕಾರ್ಯದರ್ಶಿಗಳಾಗಿ ಮೊಹಿನುದ್ದೀನ್ ಫರಾಝ್, ಅಲೀಮ ಸುಮ, ಅಲ್ ಹಫೀಝ್, ಹಶ್ಶಂ, ಅಶ್ಫಕ್, ಮುರ್ಷಿದ ಮತ್ತು ದಿಲ್ಶದ್ . ಕೋಶಾಧಿಕಾರಿಯಾಗಿ ರೋಯಲ್ ಮೋನಿಸ್

ತಾಲೂಕು ಪದಾಧಿಕಾರಿಗಳಾಗಿ ವಿವರ :
ಬಂಟ್ವಾಳ ತಾಲೂಕು ಅಧ್ಯಕ್ಷ ಅಶ್ವರ್, ಕಾರ್ಯದರ್ಶಿಯಾಗಿ ನಿಹಾಬ್ ಮತ್ತು ಉಪಧ್ಯಕ್ಷರಾಗಿ ಅಕ್ಮರ್ ಸಾದಾತ್, ಪುತ್ತೂರು ಅಧ್ಯಕ್ಷರಾಗಿ ಇಲ್ಯಾಸ್, ಉಪಾಧ್ಯಕ್ಷರಾಗಿ ಯಶವಂತ್ ಕಾರ್ಯದರ್ಶಿಯಾಗಿ ತನ್ಸೀರ್, ಬೆಳ್ತಂಗಡಿ ತಾಲೂಕು ಅಧ್ಯಕ್ಷರಾಗಿ ಸಿನಾನ್, ಉಪಾಧ್ಯಕ್ಷರಾಗಿ ಅಝಂ, ಕಾರ್ಯದರ್ಶಿಯಾಗಿ ತೌಫೀಕ್, ಮಂಗಳೂರು ತಾಲೂಕು ಅಧ್ಯಕ್ಷರಾಗಿ ನೌಫಲ್, ಕಾರ್ಯದರ್ಶಿಯಾಗಿ ಝಿಯಾದ್ ,ಮಂಗಳೂರು ನಗರ ಅಧ್ಯಕ್ಷರಾಗಿ ಇಹ್‍ತಿಶಾಂ, ಉಪಾಧ್ಯಕ್ಷರಾಗಿ ಅಫ್ರಾಝ್, ಕಾರ್ಯದರ್ಶಿಯಾಗಿ ಸಂಶುದ್ದೀನ್ ಜೊತೆ ಕಾರ್ಯದರ್ಶಿಯಾಗಿ ಶಾನಿದ್, ಅಹ್ಮದ್ ಸಿನಾನ್ ಆಯ್ಕೆಯಾದರು.