🇵🇹 ಬ್ರಹತ್ ಪ್ರತಿಭಟನೆ 🇵🇹
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ನಗರ ಸಮಿತಿ ಉಳ್ಳಾಲ ನಗರ ಸಭೆಯ ದರಾಡಳಿತ ವಿರುದ್ಧ ಮತ್ತು ನೆರೆ ಸಂತ್ರಸ್ತರ ಪರಿಹಾರದಲ್ಲಿ ತಾರತಮ್ಯದ ಬಗ್ಗೆ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಉಳ್ಳಾಲ ನಗರ ಸಭೆಯ ಜನರ ಸಮಸ್ಯೆಗಳ ಬಗ್ಗೆ ಸರಕಾರ ಸೂಕ್ತ ಪರಿಹಾರ ಮಾಡಲು ಇಂದು ಪ್ರತಿಭಟನೆ ಮಾಡಿ ಈ ಕೆಳಗಿನ ಬೇಡಿಕೆ ಇಟ್ಟಿದೆ ತಾವುಗಳು ಈ ಬೇಡಿಕೆಗಳನ್ನು ಶ್ರೀಘ್ರವೇ ಪರಿಹರಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಬಗೆಹರಿಸದಿದ್ದಲ್ಲಿ ಎಸ್.ಡಿ.ಪಿ.ಐ ಉಗ್ರ ಹೋರಾಟವನ್ನು ಮಾಡಲಿದೆ ಎಂದು ಎಚ್ಚರಿಕೆ ನೀಡಿದೆ.
ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್, ಎಸ್.ಡಿ.ಪಿ.ಐ ನಗರಸಮಿತಿ ಅದ್ಯಕ್ಷ ಅಬ್ಬಾಸ್ ಎ.ಆರ್, ಉಪಾಧ್ಯಕ್ಷ ನಿಝಾಂ, ಕಾರ್ಯದರ್ಶಿ ಮುಶರ್ರಫ್ ಉಳ್ಳಾಲ್, ಎಸ್.ಡಿ.ಪಿ.ಐ ಮುಖಂಡರಾದ ಶಾಫಿ ಬಬ್ಬುಕಟ್ಟೆ, ಇಸ್ಮಾಯಿಲ್ ತಲಪಾಡಿ ಪ್ರತಿಭಟನೆಯನ್ನು ಕುರಿತು ಮಾತನಾಡಿದರು.
ಮತ್ತು ಕೌನ್ಸಿಲರುಗಳಾದ ರಮೀಝ್, ಅಸ್ಗರ್ ಅಲಿ, ರವೂಫ್, ಇಕ್ಬಾಲ್ ಮತ್ತಿತರು ಉಪಸ್ಥಿತರಿದ್ದರು.

ಬೇಡಿಕೆಗಳು :-
1) ಮಳೆ ನೀರು ಹರಿದು ಹೋಗಲು ಅಲ್ಲಲ್ಲಿ ತಡೆ ಇದೆ ಕೂಡಲೇ ರಾಜ ಕಾಲುವೆ,ಚರಂಡಿ ಒತ್ತುವರಿ ಖಾಲಿ ಮಾಡಿಸಿ ನೀರು ಹೋಗುವ ವ್ಯವಸ್ಥೆ ಮಾಡಬೇಕು.
2) ಕಳಪೆ ಕಾಮಗಾರಿಯಿಂದ ಹಾಳಾದ ರಸ್ತೆ ಚರಂಡಿ,ಕಿರು ಸೇತುವೆಗಳನ್ನು ಕೂಡಲೇ ದುರಸ್ತಿ ಮಾಡಬೇಕು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು.
3) ಸ್ಥಳೀಯ ಸಂಸ್ಥೆ ಚುನಾವಣೆಯಾಗಿ 1 ವರ್ಷ ವಾದರೂ ಕೌನ್ಸಿಲರ್ ಗಳ ಪದಗ್ರಹಣವಾಗಿಲ್ಲ, ಕೂಡಲೇ ಸ್ವಾರ್ಥ ರಾಜಕಾರಣಿಗಳು ಹಾಕಿದ ಕೇಸುಗಳನ್ನು ಹಿಂಪಡೆಯಲು ಒತ್ತಡ ಹೇರಬೇಕು,ಮತ್ತು ಅಧಿಕಾರ ಹಸ್ತಾಂತರವಾಗಬೇಕು.
4) ಚುನಾಯಿತರಾದ ಕೌನ್ಸಿಲರ್ ಗಳ ವಾರ್ಡ್ ಗಳ ಕೆಲಸ ಕಾರ್ಯಗಳ ಬೇಡಿಕೆಗಳನ್ನು ನಗರ ಸಭೆ ಸಿಬ್ಬಂದಿಗಳು ಆದ್ಯತೆಯಲ್ಲಿ ಈಡೇರಿಸಬೇಕು ಸೋತ ಅಭ್ಯರ್ಥಿಗಳ ಒತ್ತಡಕ್ಕೆ ಮಣಿಯುವುದನ್ನು ನಿಲ್ಲಿಸಬೇಕು.
5) ಉಳ್ಳಾಲ ಬೀಚ್ ಬದಿಯ ಅನಧಿಕೃತ ಕಟ್ಟಡದ ತೆರವುಮಾಡಿ ಪ್ರವಾಸೋದ್ಯಮಕ್ಕೆ ವ್ಯವಸ್ಥೆ ಮಾಡಬೇಕು.
6) ನೈಜ ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕು. ಇದರಲ್ಲಿ ರಾಜಕಾರಣಿ/ಬ್ರೋಕರ್ ಗಳಿಗೆ ಅವಕಾಶ ನೀಡ ಬಾರದು ಕೌನ್ಸಿಲರ್ ಗಳು ಶಿಫಾರಸ್ಸು ಮಾಡಿದ ನೈಜ ಫಲಾನುಭವಿಗಳಿಗೆ ಪರಿಹಾರ ವಿತರಿಸಬೇಕು.
5)- ಜನವಸತಿ ಪ್ರದೇಶದಲ್ಲಿ ಇರುವ ಅನಧಿಕೃತ ಮೀನಿನ ಗೋಡಾಮು ದುರ್ವಾಸನೆ ಬೀರುವ ಮೀನಿನ ವಾಹನ ಸಾಗಣಿಕೆ ಶಾಶ್ವತ ತಡೆ ನೀಡಬೇಕು
6)- ಕೆಲವು ಅಂಗನವಾಡಿ ಶಿಕ್ಷಕಿಯರು (BLO) ಮತದಾರರ ಪಟ್ಟಿ ಸೇರ್ಪಡೆ ಮತ್ತಿತರ ಕೆಲಸದಲ್ಲಿ ಕರ್ತವ್ಯಲೋಪ ಮಾಡುವ ವಿರುದ್ಧ ಕ್ರಮ ಕೈಗೊಳ್ಳಬೇಕು
7)- ನಗರಸಭೆಯಲ್ಲಿ ಕರ್ತವ್ಯಲೋಪ ಮಾಡುವ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಬೇಕು, ಖಾಲಿ ಇರುವ ಸಿಬ್ಬಂದಿಗಳನ್ನು ಕೂಡಲೇ ಭರ್ತಿ ಮಾಡಬೇಕು.
8)- ನಗರಸಭೆಯ ವೆಬ್ಸೈಟ್ ಮತ್ತು ಅಲ್ಲಿಯ ಸೂಚನಾ ಫಲಕದಲ್ಲಿ ಟೆಂಡರ್ ಪ್ರಕಟಣೆ ಆಯವ್ಯಯ ಇನ್ನಿತರ ಮಾಹಿತಿಗಳನ್ನು ಪ್ರೇರೇಪಿಸಬೇಕು.
9)- ಎರಡು ವರ್ಷಗಳಿಂದ ಹೊಸ ಬೀದಿದೀಪಗಳನ್ನು ಅಳವಡಿಸಲಾಗಿಲ್ಲ ಕೂಡಲೇ ಹೊಸ ಲೈಟು ಕಂಬಗಳನ್ನು ಹಾಕಬೇಕು, ಅಪಾಯಕಾರಿ ವಿದ್ಯುತ್ ಪ್ರಸರಣ ಸಲಕರಣೆಗಳನ್ನು ಮೆಸ್ಕಾಂ ಮುಖಾಂತರ ಮಾಡಬೇಕು.
10)- ನಗರಸಭೆಯ ಟ್ರ್ಯಾಕ್ಟರ್, ಜೆಸಿಬಿ, ರಸ ವಿಲೇವಾರಿ ವಾಹನ ಮತ್ತಿತರ ಸಲಕರಣೆಗಳನ್ನು ಕೂಡಲೇ ದುರಸ್ತಿ ಮಾಡಬೇಕು ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು.
11)- ಕುಡಿಯುವ ನೀರು ಅಳವಡಿಕೆ ಕಾಮಗಾರಿ ನಿರ್ವಹಣೆಗೆ ಬೀದಿದೀಪ ಮತ್ತಿತರ ಕಾಮಗಾರಿಗಳ ಬಗ್ಗೆ ಮಾಡಲಾದ ಖರ್ಚುವೆಚ್ಚಗಳ ತನಿಖೆಯಾಗಬೇಕು ಜನರ ತೆರಿಗೆ ಹಣ ದುರುಪಯೋಗ ನಿಲ್ಲಿಸಬೇಕು.
12)- ಒಳಚರಂಡಿ ಕಾಮಗಾರಿ ಎಂಟು ವರ್ಷದಿಂದ ಬಾಕಿಯಾಗಿದೆ ಕೂಡಲೇ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು.
13)- ಸರಕಾರಿ ಆಸ್ಪತ್ರೆ ಮತ್ತು ಆರೋಗ್ಯ ಕಿಯೋಸ್ಕ್ಗಳಲ್ಲಿ ಶಾಶ್ವತ ಸಿಬ್ಬಂದಿ ನೇಮಿಸಬೇಕು. ಪ್ರಯೋಗಾಲಯ, ರಕ್ತಪರೀಕ್ಷೆ ಮಾಡಲಾದ ವ್ಯವಸ್ಥೆ ಕಲ್ಪಿಸಬೇಕು.
14)- ಅನಾವಶ್ಯಕ ಹುಲ್ಲು ಕಡಿಯಲು, ಮರಗಳ ಗೆಲ್ಲು ಕಡಿಯಲು, ಕ್ರಿಮಿನಾಶಕ ಪೌಡರ್ ಸಿಂಪಡಿಸಲು ಮತ್ತು ಕೀಟನಾಶಕ ಸ್ಪ್ರೇ ಸಿಂಪಡಿಸಲು ಶಾಶ್ವತ ಸಿಬ್ಬಂದಿ ಮತ್ತು ಸಲಕರಣೆಗಳನ್ನು ಒದಗಿಸಬೇಕು.
15)- ಕೋಟೆಪುರದಿಂದ ಕುದ್ರು ತನಕ ನೇತ್ರಾವತಿ ನದಿನೀರು ಉಳ್ಳಾಲ ನಗರಕ್ಕೆ ನೆರೆ ನೀರು ಬಾರದಂತೆ ಶಾಶ್ವತ ತಡೆಗೋಡೆ ನಿರ್ಮಿಸಬೇಕು.
16)- ಉಳ್ಳಾಲಕ್ಕೆ ಬಾಕಿರುವ ಮಂಗಳೂರು ನಗರ ರಿಕ್ಷಾ ಪರ್ಮಿಟ್ ಕೂಡಲೇ ಮಂಜೂರು ಮಾಡಬೇಕು.
17)- ಕಂದಾಯ ಇಲಾಖೆಯ ಕಚೇರಿಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಬೇಕು ಮತ್ತು ಉಳ್ಳಾಲಕ್ಕೆ ಇನ್ನೋರ್ವ ವಿ.ಎ ರನ್ನು ಕೂಡಲೇ ನೇಮಿಸಬೇಕು.
18)- ನಗರೋತ್ಥಾನ ಮತ್ತು ಇತರ ಸರಕಾರಿ ನಿಧಿಗಳನ್ನು ಎಲ್ಲಾ ವಾರ್ಡ್ ಗಳಿಗೆ ಸಮಾನವಾಗಿ ಹಂಚಿಕೆ ಮಾಡಬೇಕು.