ನವದೆಹಲಿ: ಯೋಜನಾ ವೆಚ್ಛ ಶೇ ೧೫.೩ಕ್ಕೆ ಏರಿಕೆ, ಆರ್‌ಬಿಐ ಕಾಯ್ದೆ ಪರಿಷ್ಕರಿಸಲು ಕೇಂದ್ರದ ಚಿಂತನೆ, ದೇಶದ ಎಲ್ಲಾ ರಸ್ತೆಗಳ ಅಭಿವೃದ್ಧಿಗಾಗಿ ೯೭ ಸಾವಿರ ಕೋಟಿ, ಪ್ರಸಕ್ತ ವರ್ಷ ೧೦ ಸಾವಿರ ಕಿ. ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ.

ಇನ್ನು ಮುಂದೆ ‘ಹೂಡಿಕೆ ಮತ್ತು ಸಾರ್ವಜನಿಕ ಸಂಪತ್ತು ನಿರ್ವಹಣೆ’ ಸಂಸ್ಥೆ ಎಂಬ ಹೆಸರು, ಸರ್ಕಾರಿ ಬ್ಯಾಂಕ್‌ಗಳಿಗೆ ೨೫ ಸಾವಿರ ಕೋಟಿ ರೂಪಾಯಿ ಮೀಸಲು, ತೆರಿಗೆ ವಂಚನೆ ತಡೆಯಲು, ಮತ್ತು ತೆರಿಗೆ ಸಂಬಂಧಿತ ಪ್ರಕರಣಗಳ ತನಿಖೆಗೆ ‘ಹಣಕಾಸು ದತ್ತಾಂಶ ನಿರ್ವಹಣೆ ಕೇಂದ್ರ’ ಸ್ಥಾಪನೆ.

ಆಹಾರ ಪದಾರ್ಥಗಳ ಉತ್ಪಾದನೆಗೆ ಶೇ ೧೦೦ ರಷ್ಟು ಎಫ್‌ಡಿಐ, ಸರ್ಕಾರಿ ಮತ್ತು ೧೦ ಖಾಸಗಿ ಶಿಕ್ಷಣ ಸಂಸ್ಥೆಗಳು ವಿಶ್ವದರ್ಜೆಗೆ ಉನ್ನತೀಕರಣ, ನವೋದಯ ವಿದ್ಯಾಲಯಗಳ ಸ್ಥಾಪನೆ, ಗ್ರಾಮೀಣ ಪ್ರದೇಶಗಳಲ್ಲಿ ‘ಡಿಜಿಟಲ್ ಸಾಕ್ಷರತೆ’ ಅಭಿಯಾನ, ಹಳೇ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ನರೇಗಾ ಯೋಜನೆಗೆ ೩೮,೫೦೦ ಕೋಟಿ, ಭಾರತದಲ್ಲಿ ತಯಾರಿಸುವ ಆಹಾರ ಉತ್ಪನ್ನಗಳ ಮಾರಾಟ ಕ್ಷೇತ್ರದಲ್ಲಿ ಶೇ ೧೦೦ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ, ಬಂಧರುಗಳ ಅಭಿವೃದ್ಧಿಗೆ ೮೦೦ ಕೋಟಿ ರೂಪಾಯಿ, ಮೂಲಸೌಕರ್ಯ ವಲಯಕ್ಕೆ ೨.೩೧ ಲಕ್ಷ ಕೋಟಿ ಮೀಸಲು, ಪ್ರಧಾನ ಮಂತ್ರಿ ಜನ್ ಔಷಧ ಯೋಜನೆ ಜಾರಿ, ಬಡ ಕುಟುಂಬಗಳ ಗ್ಯಾಸ್ ಪೂರೈಕೆಗೆ ೨ ಸಾವಿರ ಕೋಟಿ ಮೀಸಲು ಇಡಲಾಗುತ್ತದೆ.

ಪ್ರತಿ ಕುಟುಂಬಕ್ಕೆ ೧ ಲಕ್ಷದವರೆಗೆ ಆರೋಗ್ಯ ಮಿಮೆ ಪ್ರಧಾನಿ ಜನ ಔಷಧಿ ಯೋಜನೆಯಡಿ ೩೦೦ಕ್ಕೂ ಹೆಚ್ಚು ಜೀವರಕ್ಷಕ ಔಷಧ ಅಂಗಡಿ ಆರಂಭ, ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗೆ ೫೦೦ ಕೋಟಿ ಅನುದಾನ. ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳಾ ಉದ್ಯಮಿಗಳಿಗೆ ಬ್ಯಾಂಕುಗಳ ಮೂಲಕ ಹಣಕಾಸಿನ ನೆರವು.

ಮುಂದಿನ ೩ ವರ್ಷಗಳಲ್ಲಿ ಪ್ರಧಾನಿ ಕೌಶಲ ವಿಕಾಸ ಯೋಜನೆಯಡಿ ೧ ಕೋಟಿ ಯುವಕರಿಗೆ ವೃತ್ತಿ ತರಬೇತಿ, ಸಾವಯವ ಸಮಗ್ರ ಕೃಷಿ ಅಭಿವೃದ್ಧಿಗೆ ಯೋಜನೆ, ಸ್ವಚ್ಛ ಭಾರತ ಯೋಜನೆಗೆ ೯ ಸಾವಿರ ಕೋಟಿ ರೂಪಾಯಿ ಮೀಸಲು.

ರೈತರ ಸಾಲ ಯೋಜನೆಗೆ ೯ ಸಾವಿರ ಕೋಟಿ ರೂಪಾಯಿ ಮೀಸಲು, ರೈತರಿಗಾಗಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಗೆ ೧೯ ಸಾವಿರ ಕೋಟಿ ರೂಪಾಯಿ ಮೀಸಲು, ನೀರಾವರಿ ಯೋಜನೆಗಳಿಗೆ ೧೭ ಸಾವಿರ ಕೋಟಿ ರೂಪಾಯಿ ಮೀಸಲು, ರೈತರಿಗೆ ಮಣ್ಣು ಆರೋಗ್ಯ ಪರಿಶೀಲಿಸಲು ‘ಸಾಯಿಲ್ ಹೆಲ್ತ್ ಕಾರ್ಡ್’, ರೈತರಿಗಾಗಿ ೩೫.೯೮೪.೦೦೦ ಕೋಟಿ ರೂಪಾಯಿ ನಿಧಿ ಮೀಸಲು.

ಬಿಪಿಎಲ್ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಎಲ್‌ಪಿಜಿ, ಕೃಷಿ, ಮೂಲಸೌಕರ್ಯ, ಗ್ರಾಮೀಣ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ. ತಂಬಾಕು ಉತ್ಪನ್ನಗಳ ಮೇಲಿನ ಸುಂಕ ಹೆಚ್ಚಳ, ಬೀಡಿ, ಸಿಗರೇಟ್ ಬೆಲೆಯಲ್ಲಿ ಹೆಚ್ಚಳ, ಡೀಸೆಲ್ ವಾಹನದ ಮೇಲಿನ ತೆರಿಗೆ ಏರಿಕೆ, ಆದಾಯ ತೆರಿಗೆ ಸ್ಲಾಬ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ,ಸಣ್ಣ ಉದ್ದಿಮೆಗಳ ಸರ್ ಚಾರ್ಜ್ ಶೇ ೧೫ಕ್ಕೆ ಹೆಚ್ಚಳ

‘ನಿರ್ಮಯಾ’ ಯೋಜನೆಯಡಿ ಬರುವ ಸಾಮಾನ್ಯ ವಿಮಾ ಯೋಜನೆಗಳಿಗೆ ಸೇವಾ ತೆರಿಗೆಯಿಂದ ವಿನಾಯ್ತಿ, ಆಧಾರ್ ಬಳಸಲು ಸಾಮಾಜಿಕ ಭದ್ರತಾ ವ್ಯವಸ್ಥೆ ೫ ಲಕ್ಷದವರೆಗೆ ವರಮಾನ ಹೊಂದಿರುವವರಿಗೆ ೩ ಸಾವಿರದಷ್ಟು ತೆರಿಗೆ ವಿನಾಯಿತಿ ನೀಡಲಾಗುತ್ತದೆ.