.

dad

ಮಕ್ಕಳು ಹೆತ್ತವರ ಕನ್ನಡಿ. ಅವುಗಳ ಹಾವ, ಬಾವ ನೋಡಿದರೆ ಸಾಕು ಮನೆ ಹೇಗಿದೆ, ಅಪ್ಪ ಅಮ್ಮ ಹೇಗೆ ಎನ್ನುವುದನ್ನು ತಿಳಿಯಬಹುದು. ಒಳ್ಳೆ ಪೇರೆಂಟ್‌ ಆಗುವುದು ಹುಟ್ಟಿನಿಂದ ಬರುವ ಗುಣವಲ್ಲ. ಇದೊಂದು ಕಲೆ.  ಆಯಾ ಪರಿಸ್ಥಿತಿ, ಸಂದರ್ಭಗಳಿಗೆ ತಕ್ಕಂತೆ ಬುದ್ಧಿವಂತಿಕೆಯಿಂದ ವರ್ತಿಸುವುದು ಒಳ್ಳೆ ಪೇರೆಂಟ್‌ ಲಕ್ಷಣ. 

ಪುಟ್ಟ ಮಕ್ಕಳ ಪ್ರಪಂಚನೇ ಚೆಂದ.  ಬಹುಶ ನೀವು ಬಾಲ್ಯವನ್ನು ಕಣ್ಮುಂದೆ ತಂದುಕೊಳ್ಳಿ. ನಾವೂ ಹಾಗೇ ಇರಬೇಕಿತ್ತು ಅನಿಸೊಲ್ಲವೇ? ಅವರ ಪ್ರಪಂಚಕ್ಕೆ ನಾವು ಹೋಗಲು ಸಾಧ್ಯವೇ ಇಲ್ಲ. ಆದರೆ ಅವರ ಆ ಪ್ರಪಂಚವನ್ನು ಚೆಂದಾಗಿಸಿದರೆ ನೀವು ಗುಡ್‌ ಪೇರೆಂಟ್‌ ಆಗ್ತಿàರಿ.  ಅವರ ಆಟ, ಓಟ, ಊಟ ಎಲ್ಲವನ್ನು ಸವಿಯುತ್ತಾರೆ. ಈ ಪ್ರಪಂಚದ ಮೂಲಕವೇ ಅಪ್ಪ ಅಮ್ಮನನ್ನು ನೋಡುವುದು. ಅದು ಬಹಳ ಪುಟ್ಟ ಜಗತ್ತಾಗಿರುವುದರಿಂದ ಹೆತ್ತವರು ಅವರ ಪ್ರಪಂಚಕ್ಕಿಂತು ದೊಡ್ಡದಾಗಿ ಕಾಣುತ್ತಾರೆ. ನಿರೀಕ್ಷೆಗಳು ಬಹಳ ಇರುತ್ತದೆ. ಅದಕ್ಕೆ ಭಾವನೆ, ತೋರುವ  ಪ್ರೀತಿಗಳಲ್ಲಿ ಸ್ವಲ್ಪ ಏರು ಪೇರಾದರೂ ಮಕ್ಕಳು ಅದನ್ನು ಸಹಿಸದು. ಇದರ ಪರಿಣಾಮ ಈಗ ತಿಳಿಯುವುದಿಲ್ಲ. ಭವಿಷ್ಯದಲ್ಲಿ ನಿಧಾನಕ್ಕೆ ಆಗುತ್ತಿರುತ್ತದೆ. ಒಂದು ಪಕ್ಷ ಚಿಕ್ಕವಯಸ್ಸಿನಲ್ಲಿ ಹಿಂಸಿಸುವುದು, ಗದರುವುದು, ಬಯ್ಯೋದು. ನಮ್ಮ ಮಗು ನಮ್ಮ ಕೈಯಲ್ಲಿ ಇರಬೇಕು ಎಂದು ಹದ್ದು ಬಸ್ತಿನಲ್ಲಿ ಇಟ್ಟು ಕೊಳ್ಳುವ ಪಟ್ಟುಗಳು ಅವುಗಳಿಗೆ ಕಂಟಕವಾದರೆ ಕಷ್ಟ, ಕಷ್ಟ.

ನಿಮಗೆ ಗೊತ್ತಾ, ಕೆಲವು ಮಕ್ಕಳು 5-6 ವರ್ಷಕ್ಕೆಲ್ಲಾ ಮನೆ ಬಿಟ್ಟು ಓಡಿ ಹೋಗುತ್ತವೆ. ಮಿತಿ ಮೀರಿದ ತುಂಟತನಗಳನ್ನು ಕಲಿತಿರುತ್ತವೆ. ಇವಕ್ಕೆಲ್ಲಾ ಪರೋಕ್ಷ ಕಾರಣ ಹೆತ್ತವರೇ.. ಅವರ ವರ್ತನೆಗಳೇ…

ಹೀಗಿರಬೇಕಾದರೆ  ಪೇರೆಂಟ್‌ ಎನಿಸಿ ಕೊಳ್ಳುವುದು ಹೇಗೆ?
ಈ ಬಗ್ಗೆ ಯಾರೂ ತಲೆ ಕೆಡಿಸಿ ಕೊಳ್ಳುವುದಿಲ್ಲ. ಕಾಲಬಂದಂತೆ ಹೆಜ್ಜೆ ಹಾಕೋಣ ಎನ್ನೋರೇ ಹೆಚ್ಚು. ಸುಮ್ಮನೆ ಕೂತು ಇದು ಸಾಧ್ಯವೇ ಎಂದು ಲೆಕ್ಕಾಹಾಕಿ. ಮಕ್ಕಳ ಕಣ್ಣಲ್ಲಿ ಹೆತ್ತವರು ಮಿನುಗುವ ಹಾಗೇ ಹಾಗುವುದು  ಐಸ್‌ ಕ್ರೀಂ ಕೊಡಿಸುವುದರಿಂದ, ಒಂದು ಪಪ್ಪಿ ಕೊಡುವುದರಿಂದಲಾ? ರಾಶಿ, ರಾಶಿ ಬೊಂಬೆಗಳನ್ನು ತಂದು ಕೊಡುವುದರಿಂದಲಾ?
ಹೂ ಹುಂ.
ಪರಿಶುದ್ಧ ಪ್ರೀತಿಯಿಂದ.

ಪ್ರೀತಿ ಎಂದರೆ ಮಕ್ಕಳು ಕೇಳಿದೆಲ್ಲಾ ತಂದು ಕೊಡುವುದರಲ್ಲಿ ಇಲ್ಲ.  ಪ್ರತಿ ಮಕ್ಕಳು ತಮ್ಮ ಬಗ್ಗೆ ಅಪ್ಪ- ಅಮ್ಮನಿಗೆ ಎಷ್ಟರ ಮಟ್ಟಿಗೆ ಕೇರ್‌ ಇದೆ ಎನ್ನುವುದನ್ನು ಇಣುಕಿ ನೋಡುತ್ತಿರುತ್ತವೆ.  ಎಡವಿ ಬಿದ್ದಾಗ ನೋವು ಆಗದೇ ಇದ್ದರೂ ಮಗು ನಿಮ್ಮ ಕೇರ್‌ನ್ನು ನಿರೀಕ್ಷಿಸುತ್ತದೆ.  ಬಿದ್ದಾಗ ಮುದ್ದು ಮಾತನ್ನು ಆಡಿ.  ಕಣ್ಣಿಂದ ಇಳಿಯುವ ಜಳ, ಜಳ ಅಳುವನ್ನು ಒರೆಸಿ- ಪಾಟಿ ನೋವು ಇದ್ದರೂ ಅರ್ಧ ಕಡಿಮೆಯಾಗುತ್ತದೆ.   ಇಂಥ ಆಪ್ತ  ಚಟುವಟಿಕೆಗಳು ಮಕ್ಕಳಿಗೆ ಬೇಕು.

ಅವುಗಳಿಗೆ ಏನು ಬೇಕು, ಏನು ಬೇಡ ಎನ್ನುವುದನ್ನು ಮೊದಲೆ ತಿಳಿದಿರಬೇಕು.  ತಿಳಿಯಲು ಪ್ರತಿ ನಿಮಿಷ  ಅದರ ಒಡನಾಟದಲ್ಲಿರಬೇಕು.

ಒಳ್ಳೆ ಪೇರೆಂಟ್‌ ಆಗುವುದು ಹುಟ್ಟಿನಿಂದ ಬರುವ ಗುಣವಲ್ಲ.  ಇದೊಂದು ಕಲೆ.  ಆಯಾ ಪರಿಸ್ಥಿತಿ, ಸಂದರ್ಭಗಳಿಗೆ ತಕ್ಕಂತೆ ಬುದ್ಧಿವಂತಿಕೆಯಿಂದ ವರ್ತಿಸುವುದು ಒಳ್ಳೆ ಪೇರೆಂಟ್‌ ಲಕ್ಷಣ.

ನಿಮಗೆ ಗೊತ್ತಿರಲಿ, ಮಕ್ಕಳಿಗೆ ಹೆತ್ತವರೇ  ಮಾದರಿ. ನೀವು ಇಡುವ ಹೆಜ್ಜೆಯ ಮೇಲೆ  ಅವರೂ ಹೆಜ್ಜೆ ಊರುತ್ತಾರೆ. ಅದಕ್ಕೆ ನಾವು ಒಳ್ಳೆಯ ತನಗಳಿಗೆ ಉದಾಹರಣೆಯಾಗಬೇಕು. ಹೀಗಾಗ ಬೇಕಾದರೆ ಒಳ್ಳೆತನವನ್ನು ರೂಢಿಸಿ , ಪರಿಪಾಲಿಸಿ ಕೊಂಡು ಬರಬೇಕು.  ಕೆಲವೊಂದು ದುಶ್ಚ ಟ, ವರ್ತನೆಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ.  ತಮಗೆ ಗೊತ್ತಿಲ್ಲದೇ ಅವುಗಳನ್ನು ಅಳವಡಿಸಿ ಕೊಳ್ಳುತ್ತಾರೆ.

ಅದಕ್ಕೆ  ಸುಖ, ದುಖ, ಸಂತೋಷಗಳನ್ನು ಯಾವ ರೀತಿ ಪ್ರಸೆಂಟ್‌ ಮಾಡ್ತೀವಿ ಅನೋದು ಇಲ್ಲಿ ಬಹಳ ಮುಖ್ಯ. ಮಕ್ಕಳು ಮುಂದೆ ರೇಗುವುದು, ಕೆಟ್ಟಕೊಳಕ ಪದಗಳನ್ನು ಬಳಸಿದರೆ- ಕೆಲ ನಿಮಿಷದಲ್ಲೇ ಅವುಗಳ ನಾಲಿಗೆಯ ಮೇಲೆ ನಲಿದಾಡುತ್ತಿರುತ್ತದೆ. ಒಂದು ಸಲ ಬುದ್ಧಿಗೆ ಮೆತ್ತಿಕೊಂಡರೆ ಅದನ್ನು ಡಿಲೀಟ್‌ ಮಾಡುವುದು ಕಷ್ಟವೋ ಕಷ್ಟ.

ಮಕ್ಕಳನ್ನು ನೋಡಿದರೆ ಸಾಕು ಹೆತ್ತವರ ವರ್ತನೆ ಗುರುತಿಸಬಹುದು. ಮಕ್ಕಳನ್ನು ನೋಡಿದರೆ ಸಾಕು ಮನೆಯ ವಾತಾವರಣ ಹೇಗಿದೆ ಎಂದು ತಿಳಿಯಬಹುದು.  ಮಕ್ಕಳು ಏನೇ ತಪ್ಪು ಮಾಡಿದರೂ ಹೆತ್ತವರೇ ಗುರಿಯಾಗುತ್ತಾರೆ.  ಮಕ್ಕಳನ್ನು ಹೇಗೆ ಸಾಕಿದ್ದಾರೆ ನೋಡು ಎಂದು ಮಾತಿನ ಅಂಕುಶದಿಂದ ತಿವಿಯುವುದು ಇವರನ್ನೇ.

ಅದಕ್ಕೆ ಮೊದಲು ನೀವು ಸನ್ನಡತೆಗಳನ್ನು ರೂಢಿಸಿ ಕೊಳ್ಳಬೇಕು. ಅದನ್ನೇ ಅವುಗಳಿಗೆ ಕಲಿಸಬೇಕು.

ಓದು, ಬರಿ ಎಂದು ಒತ್ತಡ ಹೇರುವ ಯಂತ್ರಗಳು ಹೆತ್ತವರಾಗಬಾರದು. ಓದನ್ನು ಆಟದಂತೆಯೇ  ಪ್ರೀತಿಸುವಂತೆ ಮಾಡುವುದು ಇವರ ಕಾರ್ಯ.  ಈ ಕೆಲಸವನ್ನು ಭಯದ ನೆರವಿನಿಂದ  ತಿಳಿಸುವುದು ಒಳ್ಳೇ ಮಾರ್ಗವಲ್ಲ.  ಹೊಡೆತ, ಬೈಗಳು ಹೆತ್ತವರನ್ನು ಮಕ್ಕಳ ಕಣ್ಣಲ್ಲಿ ಚಿಕ್ಕವರನ್ನಾಗಿ ಮಾಡುತ್ತವೆ ಎನ್ನುವುದು ನೆನಪಿರಲಿ.   ಮನಸ್ಸಿನಲ್ಲಿ ಮೊಂಡುತನಗಳು ಹೆಡೆ ಎತ್ತಲು ಇದೇ ಕಾರಣ.

ಒಂದು ಪಕ್ಷ ಓದುವ ಸಮಯದಲ್ಲಿ ಮಗು ಆಟವಾಡಲು ರಚ್ಚೆ ಹಿಡಿಯಿತು ಎನ್ನಿ. ಬಲವಂತೆವೇಕೆ. ಆಟವಾಡಲು ಕಳುಹಿಸಿ.  ಆದರೆ ಆಟದ ನಂತರ ಓದಬೇಕು.  ಇಲ್ಲವಾದರೆ ನಾಳೆ ಆಡಲು ಬಿಡುವುದಿಲ್ಲ ಎಂದು ಕಂಡೀಷನ್‌ ಹಾಕಿ ನೋಡಿ.  ಆಟ ಮುಗಿಸಿದ ನಂತರ ನಿಮಗೆ ಗೊತ್ತಿಲ್ಲದೇ ಪುಸ್ತಕ ಹಿಡಿದು ಕುಳಿತಿರುತ್ತದೆ.

ಮಕ್ಕಳ  ಓದಿನಲ್ಲಿ  ಬಾಗಿಯಾಗುವುದು ಗುಡ್‌ ಪೇರೆಂಟ್‌ ಲಕ್ಷಣ.  ನಿಮ್ಮ ಚಿಕ್ಕಂದಿನ ಅನುಭವ, ಕಥೆಯನ್ನು ಹೇಳುತ್ತಾ ಪಾಠ ಹೇಳಿ ಕೊಟ್ಟರಂತೂ ಖುಷಿಯೋ ಖುಷಿ. ಇದರಿಂದ ಬೌದ್ಧಿಕ ವಿಕಾಸವಾಗುತ್ತದೆ.  ಮಕ್ಕಳಾಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದರಿಂದ ಅವರಲ್ಲಿ ಅಡಗಿರುವ ದೈಹಿಕ ಸಾಮರ್ಥಯ ಪರಿಚಯವಾಗುತ್ತಾ, ಆತ್ಮವಿಶ್ವಾಸ ಹೆಚ್ಚುತ್ತದೆ.

ಮಕ್ಕಳಿಗೆ ಯಾವುದು ಒಳ್ಳೆಯದು, ಯಾವುದ ಕೆಟ್ಟದ್ದು ಎಂಬುದನ್ನು ತಿಳಿಸಬೇಕಾದವರು ನೀವೇ. ಆದರೆ ನಿರ್ಧಾರ ಅವರಿಗೆ ಬಿಟ್ಟು ಬಿಡಬೇಕು. ನಿಮ್ಮ ಆಸೆ, ಕನಸುಗಳನ್ನು ಅವರ ಮೇಲೆ ಹೇರ ಬೇಡಿ. ಏಕೆಂದರೆ ಅವರ ಪುಟ್ಟ ವಯಸ್ಸಿನ ಕನಸು ಬೇರೆಯೇ ಇರುತ್ತದೆ. ನಿಮ್ಮ ಕನಸು ಅವರ ಸಾಮರ್ಥಯಕ್ಕೆ ಹೊಂದಾಣಿಕೆ ಆಗಬೇಕಲ್ಲವೇ? ಒಂದು ಪಕ್ಷ ತೀರ್ಮಾನ ತೆಗೆದುಕೊಳ್ಳುವಲ್ಲಿ ಗೊಂದಲಕ್ಕೀಡಾದರೆ ಅವರೇ ನಿಮ್ಮ ನೆರವನ್ನು ಪಡೆಯುತ್ತಾರೆ. ಒಂದು ಪಕ್ಷ ತಪ್ಪು ಮಾಡಿದರೆ ಎನ್ನಿ. ಪರಿಣಾಮವೇ  ಅವರಿಗೆ ಜೀವನ ಕಲಿಸುವ ದೊಡ್ಡ ಪಾಠ.

ಸಮಯದ ಬೆಲೆ, ಹಣದ ಮೌಲ್ಯ, ಹಿರಿಯರಿಗೆ ಗೌರವ ತೋರಿಸುವ ರೀತಿ- ಹೀಗೆ  ಜೀವನ ಮೌಲ್ಯಗಳನ್ನೆಲ್ಲಾ ತಾಳ್ಮೆಯಿಂದ ಹೇಳಿ ಕೊಡಬೇಕು.  ಮಕ್ಕಳೊಂದಿಗೆ ಮಕ್ಕಳಾಗಿ, ಅವರ ದಾರಿಯಲ್ಲೇ ಸಾಗಿ, ನಿಮ್ಮ ಹಾದಿಗೆ ಕರೆತರುವುದು ಗುಡ್‌ ಪೇರೆಂಟ್‌ ಚಾಣಾಕ್ಷತನ.

ಮಕ್ಕಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು. ನಾವು ನಡೆದಂತೆ, ನಾವಿದ್ದಂತೆ ಇವರೂ ಇರಬೇಕು ಎನ್ನುವ ಹಠಕ್ಕೆ ಬೀಳಬೇಡಿ. ಚಿಕ್ಕ ಮನಸ್ಸುಗಳಿಗೆ ಅದು ದಬ್ಟಾಳಿಕೆ ಎನಿಸಿಬಿಡುತ್ತದೆ. ನಿಮ್ಮ ಉದ್ದೇಶ ಎಷ್ಟೇ ಒಳ್ಳೆಯದಾದರೂ ಅವು ಮಕ್ಕಳ ಮನಸ್ಸಿಗೆ ನಾಟುವುದು ಕಷ್ಟ. ಕೆಲವು ಮಕ್ಕಳಂತೂ ಜೀವ ತಿನ್ನ ಬೇಡ. ನಾನೇ ಓದಿ¤àನಿ ಅನ್ನೋದನ್ನು ಕೇಳಿರಬಹುದು. ಇದು ದಬ್ಟಾಳಿಕೆ ಎನಿಸಿದ ಮನಸಿನ ಕನವರಿಕೆಗಳು. ಸಣ್ಣ ಆಸೆಗಳಲ್ಲಿ ದೊಡ್ಡ ಕನಸುಗಳಿರುತ್ತವೆ. ಅವುಗಳನ್ನು ಉರುಳಿಸಬೇಡಿ.

ಹೀಗೆ ಪುಟ್ಟ ಮಕ್ಕಳ  ಸ್ವತಂತ್ರ ಹರಣಮಾಡದೇ ಲಗಾಮು ತಮ್ಮ ಕೈಯಲ್ಲಿ ಇಟ್ಟು ಕೊಳ್ಳುವುದು ಬುದ್ಧಿವಂತಿಕೆ.

ಇವರೇ ಗುಡ್‌ ಪೇರೆಂಟ್‌…

-ಜೋಗಿ