ಅಮೂಲ್ಯ ಅಂಕಿ ಅಂಶ ಮತ್ತು ಅದ್ಭುತ ಆಶಾಕಿರಣ*
ದಯವಿಟ್ಟು ಈ ಲೇಖನವನ್ನು ತಾಳ್ಮೆಯಿಂದ ಮತ್ತು ಎಚ್ಚರಿಕೆಯಿಂದ ಓದಿರಿ.
ಮೂರು ತಿಂಗಳ ಸತತ ಪರಿಶ್ರಮದ ಫಲ ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯಾ ಪಟ್ಟಿ
1) ಜಮ್ಮು ಕಾಶ್ಮೀರ 50 ಲಕ್ಷ
2) ಪಂಜಾಬ್ 2 ಕೋಟಿ 50 ಲಕ್ಷ
3) ಹರಿಯಾಣ 1ಕೋಟಿ 50 ಲಕ್ಷ
4) ರಾಜಾಸ್ಥಾನ್ 1 ಕೊಟಿ 5 ಲಕ್ಷ
5) ಗುಜರಾತ್ 90 ಲಕ್ಷ
6) ಮಹಾರಾಷ್ಟ್ರ 1 ಕೋಟಿ 59 ಲಕ್ಷ
7) ಗೋವಾ 29 ಲಕ್ಷ
8) ಕರ್ನಾಟಕ 1 ಕೋಟಿ 5 ಲಕ್ಷ
9) ಕೇರಳ 40 ಲಕ್ಷ
10) ತಮಿಳುನಾಡು 60 ಲಕ್ಷ
11) ಆಂದ್ರಪ್ರದೇಶ 90 ಲಕ್ಷ
12) ಛತ್ತೀಸ್ ಘಡ್ 49 ಲಕ್ಷ
13) ಒಡಿಸ್ಸಾ 1 ಕೋಟಿ 5 ಲಕ್ಷ
14) ಜಾರ್ಖಂಡ್ 50 ಲಕ್ಷ
15) ಬಿಹಾರ್ 1 ಕೋಟಿ 91 ಲಕ್ಷ
16) ಪಶ್ಚಿಮ ಬಂಗಾಳ 57 ಲಕ್ಷ
17) ಮಧ್ಯ ಪ್ರದೇಶ 94 ಲಕ್ಷ
18) ಉತ್ತರ ಪ್ರದೇಶ 3 ಕೋಟಿ 60 ಲಕ್ಷ
19) ಉತ್ತರಾಖಂಡ 48 ಲಕ್ಷ
20) ಹಿಮಾಚಲ ಪ್ರದೇಶ 84 ಲಕ್ಷ
21) ಸಿಕ್ಕಿಂ 10 ಲಕ್ಷ
22) ಅಸ್ಸಾಂ 29 ಲಕ್ಷ
23) ಮೀಜೋರಾಂ 7 ಲಕ್ಷ
24) ಅರುಣಾಚಲ್ 9 ಲಕ್ಷ
25) ನಾಗಾಲ್ಯಾಂಡ್ 12 ಲಕ್ಷ
26) ಮಣಿಪುರ 19 ಲಕ್ಷ
27) ಮೇಘಾಲಯ 20 ಲಕ್ಷ
28) ತ್ರಿಪುರಾ 23 ಲಕ್ಷ
ಭಾರತಲ್ಲಿ ಪರಿಶಿಷ್ಟ ಜಾತಿಯ ಒಟ್ಟು ಜನಸಂಖ್ಯೆ 31 ಕೋಟಿ 75 ಲಕ್ಷ 42 ಸಾವಿರ. ಇದು ಒಟ್ಟು ಜನಸಂಖ್ಯೆಯ ಶೇಕಡ 25.4 ರಷ್ಟಿದೆ.
ಇದರಲ್ಲಿ ಪರಿಶಿಷ್ಟ ವರ್ಗಗಳ ಜನಸಂಖ್ಯೆಯನ್ನು ಸೇರಿಸಿಲ್ಲ. ಅದನ್ನೂ ಸೇರಿಸಿದರೆ ಒಟ್ಟು ಶೇಕಡಾವಾರು ಎಷ್ಟಾಗಬಹುದು ಊಹಿಸಿರಿ. ತ್ರಿಪುರಾ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್, ಮೀಜೋರಾಂ ಮತ್ತು ಸಿಕ್ಕಿಂ ನಲ್ಲಿ ಅವರ ಜನಸಂಖ್ಯೆ ಶೇಕಡ 70ರಷ್ಟಿದೆ. ಅಲ್ಲದೆ ಜಾರ್ಖಂಡ್, ಛತ್ತೀಸ್ ಘಡ್ ಮತ್ತು ಅಸ್ಸಾಂ ನಲ್ಲಿಯೂ ಅವರ ಜನಸಂಖ್ಯೆ ಸಾಕಷ್ಟು ಇದೆ.
ಅತಿ ಹೆಚ್ಚು ಶೇಕಡಾವಾರು ಪರಿಶಿಷ್ಟ ಜಾತಿ ಇರುವ ರಾಜ್ಯಗಳು
ಉತ್ತರ ಪ್ರದೇಶ
ಹರಿಯಾಣ
ಅತಿ ಕಡಿಮೆ ಶೇಕಡಾವಾರು ಪರಿಶಿಷ್ಟ ಜಾತಿ ಇರುವ ರಾಜ್ಯ ಸಿಕ್ಕಿಂ
ಪರಿಶಿಷ್ಟ ಜಾತಿಗಳು ಉತ್ತಮ ಆರ್ಥಿಕ ಸ್ಥಿತಿಯಲ್ಲಿರುವ ರಾಜ್ಯ ಪಂಜಾಬ್.
ಅತಿ ಹೆಚ್ಚು ಪರಿಶಿಷ್ಟ ಸರಪಂಚರು ಆಯ್ಕೆಯಾಗಿರುವ ರಾಜ್ಯ ರಾಜಾಸ್ಥಾನ್.
ಈಗ ಒಂದಿಷ್ಟು ಗಂಭೀರವಾಗಿ ಯೋಚಿಸಿರಿ, ಈ ದೇಶದ 25% ಜನ ಒಗ್ಗಟ್ಟಾದರೆ ಕೇವಲ 3% ಇರುವ ಮನುವಾದಿಗಳ ಪ್ರಾಭಲ್ಯವನ್ನು ಹೇಗೆ ಕಿತ್ತು ಬಿಸಾಡಬಹುದೆಂದು.
ನಾವು ಒಂದಾಗದಿರುವುದೇ ಈ 3% ಮನುವಾದಿಗಳ ಯಶಸ್ಸು. ಅವರ ಹುನ್ನಾರಗಳಿಗೆ ಸುಲಭವಾಗಿ ಬಲಿಯಾಗುತ್ತಿರುವ ನಮ್ಮ ಸಹೋದರರಿಗೆ ಅಂಬೇಡ್ಕರ್ ಸಾಹೇಬರ ತತ್ವಗಳನ್ನು ತಿಳಿಸದೆ ಹೋದದ್ದು ಮತ್ತು ಮಾನ್ಯವರ್ ಕಾಂಶೀರಾಂರವರ ಮಾರ್ಗದರ್ಶನವನ್ನು ತೋರಲು ನಾವು ವಿದ್ಯಾವಂತ ಉದ್ಯೋಗಿಗಳು ಸೋತಿದ್ದೇವೆ.
ನಾವು ಸ್ವಾರ್ಥಿಗಳಾಗಿ
*ಸಮಾಜಕ್ಕೆ ಹಿಂತಿರುಗಿಸುವ(payback to society)*
ಜವಾಬ್ದಾರಿಯನ್ನು ಮರೆತೆವು. ಹಾಗಿಲ್ಲವಾದರೆ ಇಷ್ಟು ದೊಡ್ಡ ಜನಸಂಖ್ಯೆ ಇದ್ದರೂ
ನಮ್ಮ ಜನಗಳ ಕೊಲೆಗಳು ನಡೆಯುತ್ತಿದ್ದವೇ?
ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ನಡೆಯಲು ಸಾಧ್ಯವಿತ್ತೇ?
ಗುಜರಾತಿನ ಬೀದಿಗಳಲ್ಲಿ ನಮ್ಮ ಯುವಕರನ್ನು ಬೆತ್ತಲೆ ಮಾಡಿ ಮಾರಣಾಂತಿಕವಾಗಿ ಹೊಡೆಯಲು ಸಾಧ್ಯವಿತ್ತೇ?
ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತೇ?
ಬಂಧುಗಳೇ ಈಗಲೂ ಕಾಲ ಮಿಂಚಿಲ್ಲ. ಬನ್ನಿ ಎಲ್ಲರೂ ಒಂದಾಗೋಣ. ಇಡೀ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, OBC ಮತ್ತು ಅಲ್ಪ ಸಂಖ್ಯಾತರನ್ನು ಒಳಗೊಂಡಂತಾ ಬಹುಜನ ಸಮಾಜವನ್ನು ಪ್ರಭಲವಾಗಿ ಕಟ್ಟೋಣ. ಈ ಕಾರ್ಯದಲ್ಲಿ ಈಗಾಗಲೇ ರಾಷ್ಟ್ರವ್ಯಾಪಿ ಸಂಘಟನೆಯಾಗಿ ರೂಪುಗೊಳ್ಳುತ್ತಿರುವ *ಬಹುಜನ್ ಸೋಷಿಯಲ್ ಫೌಂಡೇಶನ್ BAHUJAN SOCIAL FOUNDATION (BSF)* ಜೊತೆ ಕೈ ಜೋಡಿಸೋಣ. ಈ ದೇಶದ ದಲಿತರು ಆಳುವ ವರ್ಗ ಆಗಬೇಕೆಂಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಂತಿಮ ಕನಸನ್ನು ನನಸಾಗಿಸೋಣ.
ತಮಗೆ ಜೈ ಭೀಮ್ ವಂದನೆಗಳು
ಬಿ.ಗೋಪಾಲ್
ರಾಷ್ಟ್ರೀಯ ಸೆಕ್ರೆಟರಿ ಜನರಲ್
ಬಹುಜನ್ ಸೋಷಿಯಲ್ ಫೌಂಡೇಶನ್.