ಮೀಸಲಾತಿ ಬಗ್ಗೆ ತಪ್ಪು ಅಭಿಪ್ರಾಯಗಳಿವೆ.
ಈ ಕೆಳಗಿನ ಮಾಹಿತಿಯನ್ನೊಮ್ಮೆ ಗಮನಿಸಿ:

3ಎ, 3ಬಿ, 2ಎ ಕೆಟಗರಿ ಜನ ಮೀಸಲಾತಿ ತಿರಸ್ಕರಿಸಬೇಕು.!!!

ದುರಂತವೆಂದರೆ ಯಾರು ಮೀಸಲಾತಿಯನ್ನು ಪಡೆಯುತ್ತಿದ್ದಾರೋ ಅವರು ಮೀಸಲಾತಿಯನ್ನು ನಾವು ಪಡೆಯುತ್ತಲೇ ಇಲ್ಲವೆಂಬ ನಾಟಕವಾಡುತ್ತಿದ್ದಾರೆ.!!

■ ಲಿಂಗಾಯಿತರು ಹಾಗೂ ಅದರ 42 ಒಳಪಂಗಡಗಳೂ ಕೆಟಗರಿ 3ಬಿ ಕೋಟಾದ ಅಡಿಯಲ್ಲಿ ಮೀಸಲಾತಿಯನ್ನು ಪಡೆಯುತ್ತಿವೆ.!!

■ ಇನ್ನು ರೆಡ್ಡಿ,  ಒಕ್ಕಲಿಗ, ಬಂಟ, ಬಲಿಜ, ಕೊರವ ಇವರೂ ಸಹ ಕೆಟಗರಿ 3ಎ ಅಡಿಯಲ್ಲಿ ಒಟ್ಟು 12 ಜಾತಿಗಳವರು ಮೀಸಲಾತಿ ಪಡೆಯುತ್ತಿದ್ದಾರೆ.!!

■   ವಿಶ್ವಕರ್ಮ, ಕುರುಬರು, ಮಡಿವಾಳರು, ಕಂಬಾರರು, ಕುಂಬಾರರು, ದೇವಾಂಗ ಹೀಗೆ 102 ಜಾತಿಗಳು ಎಸ್.ಸಿ ಗೆ ಎಷ್ಟು ಮೀಸಲಾತಿ ಇದೆಯೋ ಅವರೂ ಸಹ ಅಷ್ಟೇ  [ ಶೇ.15 ] ಮೀಸಲಾತಿ ಪಡೆಯುತ್ತಿದ್ದಾರೆ.!! ಇವರೆಲ್ಲಾ ನಾವು ಮೇಲ್ವರ್ಗದವರು ಎಂದೇ ಹೇಳಿಕೊಳ್ಳುತ್ತಾರೆ.!!

■ ಜೇನುಕುರುಬ, ಕಾಡುಕುರುಬ ಇವರೂ ಸಹ ಮೀಸಲಾತಿ ಪಡೆಯುತ್ತಿದ್ದಾರೆ..

ಪ್ರಶ್ನೆ ಬಂದಿರೋದು ನಾವ್ಯಾರೂ ಮೀಸಲಾತಿಯನ್ನು ಪಡೆಯುತ್ತಿಲ್ಲ ಅನ್ನುವ ಮಟ್ಟಿಗೆ ಈ ಮೇಲಿನವರಲ್ಲಿ ಬಹುತೇಕರು ವರ್ತಿಸುತ್ತಿರುವುದು ಹೇಸಿಗೆ ಹುಟ್ಟಿಸಿ ಅವರ ಚಾಣಾಕ್ಷ್ಯತನಕ್ಕೆ ತಳಮಟ್ಟದ ಸಮುದಾಯಗಳು ಬೆರಗುಗಣ್ಣಿನಿಂದ ನೋಡುವಂತೆ ಮಾಡಿವೆ.!!

■ ಇವರೆಲ್ಲರೂ ಅಸ್ಪೃಷ್ಯತೆಯ ನೋವನ್ನು ಅನುಭವಿಸಿದ್ದಾರೆಯೇ!? ಹೀಗಿದ್ದರೂ ಮೀಸಲಾತಿ ವಿರೋಧಿಸುವ ಬಹುತೇಕರು ಇದೇ ಗುಂಪುಗಳಲ್ಲಿದ್ದಾರೆಂಬುದು ಖೇದಕರ, ದುರದೃಷ್ಟಕರ.!!

■ ಪರಿಶಿಷ್ಟ  ಜಾತಿ, ಪಂಗಡದವರು ಮಾತ್ರ ಮೀಸಲಾತಿ ಪಡೀತೀದಾರೆ ಅನ್ನೋ ಹುಂಬತನ ಇರುವ ಇಂಥ ಜನ ತಾವೆಲ್ಲಿದ್ದೇವೆ? ಏನು ಮಾಡುತ್ತಿದ್ದೇವೆ!? ಇದರರಿವೇ ಇಲ್ಲ.!!

ಮೀಸಲಾತಿಯನ್ನು ವಿರೋಧಿಸುವ ಧೋರಣೆ ಹೊಂದಿರುವ ಇವರು ತಮಗಿರುವ ಮೀಸಲಾತಿಯನ್ನು ಮೊದಲು ಬಿಟ್ಟುಬಿಡಲಿ.!! ಬಡವರಿಗಾದರೂ ಸಿಗುತ್ತದೆ,ಇದು ಆದರ್ಶ.!

ಸಾಮಾಜಿಕ  ಸ್ಥಾನಮಾನದ ಪ್ರಶ್ನೆ ಬಂದರೆ..ನಾವು ಮೇಲ್ವರ್ಗದವರೆನ್ನುವ, ಸಂವಿಧಾನಿಕ ಸೌಲಭ್ಯಗಳ ಪ್ರಶ್ನೆ ಬಂದಾಗ ನಾವೂ ದಲಿತರೆ… ಕೆಳವರ್ಗದವರೇ ಅಂದರೆ. …ಅವರು ಪೂಜಿಸುತ್ತರುವ ದೇವರಾದರೂ ಮೆಚ್ಚಬಹುದೇ. !?

ಈ ದಿಶೆಯಲ್ಲಿ ತಳಮಟ್ಟದ ಸಮುದಾಯಗಳ  ಮಂದಿ ಇದನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಿದರೆ ಮಾತ್ರ ಬದುಕುತ್ತೀರಿ. ಇಲ್ಲವೆಂದರೆ… ಯಾರದೋ ಹೆಸರು ಇನ್ನ್ಯಾರೋ ಬಸಿರು ಆಗುವುದು ನಿಶ್ಚಿತ!!

ಇತ್ತೀಚೆಗೆ ಕೆಲವು ಅಪ್ರಬುದ್ದ , ಅಲ್ಪಮತಿಗಳು
ಫೇಸ್ ಬುಕ್ ನ ತಮ್ಮ ಗೋಡೆಯ ಮೇಲೆ ಮೀಸಲಾತಿ ವಿರೋಧಿಸಿ ಪರಿಶಿಷ್ಟ ಜಾತಿ ಸಮುದಾಯಗಳನ್ನು ( SC ) ಮಾತ್ರ  ಗುರಿಮಾಡಿಕೊಂಡು  post ಗಳನ್ನು , ಬರಹಗಳನ್ನು ಹಾಗೂ ಚಿತ್ರಗಳನ್ನು ಸೃಷ್ಟಿ ಮಾಡಿ ಮನಸ್ಸಿಗೆ ಬಂದಂತೆ ಗೀಚಿಕೊಂಡು  ವೀರೋಧಿಸುತ್ತ  ವಿಕೃತ ಆನಂದ ಪಡುತ್ತಿದ್ದಾರೆ.

ಮಿತ್ರರೇ ಇಂತಹವರನ್ನು ,
“ಕೈಲಾಗದವರು ಮೈ ಪರಚಿಕೊಂಡರಂತೆ” ಎನ್ನಬಹುದಲ್ಲವೇ. ಅದರಲ್ಲೂ CET ಪಾಸಾಗದೇ  ಸರಕಾರಿ ನೌಕರಿ ಪಡೆಯಲಾಗದವರು (ಕೈಲಾಗದವರು) SC ಸಮುದಾಯದವರನ್ನು ಹೊಣೆ ಮಾಡಿ ಮೀಸಲಾತಿ ವಿರೋಧಿಸುತ್ತ , ದ್ವೇಷಕಾರುತ್ತ  ಕೈ ಲಾ ಗೆದ್ದ ಕ್ಕೆ ಎಲ್ಲಾ ಶನೀಶ್ವರನೇ ( SC ಯವರೇ)ಕಾರಣ ಎಂಬಂತೆ ವರ್ತಿಸುತ್ತಿದ್ದಾರೆ.

ಕರ್ನಾಟಕದ ಮೀಸಲಾತಿ ವಿವರ ಇಂತಿದೆ.

೧) ಪ್ರ ವರ್ಗ -1              4 %  (   95 ಜಾತಿಗಳು )

೨) ಪ್ರ ವರ್ಗ – 2 (ಎ)     15%. ( 102 ಜಾತಿಗಳು)

೩) ಪ್ರವರ್ಗ  – 2 (ಬಿ)       4%. (   ಮುಸ್ಲಿಮರು   )

೪) ಪ್ರವರ್ಗ  – 3 (ಎ)        4% (ಒಕ್ಕಲಿಗ&ಬಲಿಜ)

೫) ಪ್ರವರ್ಗ  – 3 (ಬಿ)        ೫% ( ಲಿಂಗಾಯತರು &                ಇತರೆ 5)

೬) ಪ.ಜಾತಿ   –              15%  ( 101 ಜಾತಿಗಳು)

೭) ಪ.ಪಂಗಡ-                3% ( 50ಜಾತಿಗಳು)

ನೀವು ನಿಮಗೆ ಗೊತ್ತಿಲ್ಲದೆ ಮೀಸಲಾತಿಯ ಋಣದೊಳಗೆ ಬಿದ್ದಿದ್ದೀರಿ ? ಅಲ್ಲವೇ?

ಪ್ರವರ್ಗ ಗಳ 206 ಜಾತಿಗಳಿಗೆ  32 %  ಮೀಸಲಾತಿ ಇರುವುದು ಹೆಚ್ಚೋ ? ಅದು ಮುಖ್ಯವಾಗಿಸಾಮಾಜಿಕವಾಗಿ ಮುಂದುವರೆದು , ತಲತಲಾಂತರದಿಂದ ಹಲವಾರು ಎಕರೆ ಭೂಮಿಯನ್ನು ಹೊಂದಿ . ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರೆದು.

ಪ.ಜಾತಿ ಮತ್ತು ಪ.ಪಂಗಡದ 151 ಜಾತಿಗಳಿಗಿರುವ 18% ಮೀಸಲಾತಿ ಹೆಚ್ಚೋ  ?
ಇವರು ಸಾಮಾಜಿಕವಾಗಿ ಹಿಂದುಳಿದು , ಉಳುಮೆಗೆ ಭೂಮಿ ಇಲ್ಲದೆ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದೂಳಿದು. ಈ ಪರಿಸ್ಥಿತಿ,

ಇವತ್ತು ಪರಿಶಿಷ್ಟ ಜಾತಿಯ  ಕೆಲವೇ ಕೆಲವು ಸಮುದಾಯದವರು ಮೀಸಲಾತಿಯ ಸಹಾಯದಿಂದ  ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದುವರೆಯುತ್ತಲಿದ್ದರೂ  , SC ಸಮುದಾಯದವರನ್ನು ಸಾಮಾಜಿಕವಾಗಿ ಮುಂದುವರೆಯಲು ಬಿಡುತ್ತಿಲ್ಲ.

ಭಾರತದ ಯಾವುದೇ ಒಂದು ಸಮುದಾಯ ಮೀಸಲಾತಿಯಿಂದ ಹೊರ ಉಳಿದಿಲ್ಲ  ಯಾವುದಾದರೂ ಒಂದು ರೀತಿಯ ಮೀಸಲಾತಿ ಪಡೆದೆ ಪಡೆದಿರುತ್ತಾನೆ.
ಉದಾ :-  ಪ್ರಾದೇಶಿಕ ಮೀಸಲಾತಿ ( ಹೈದರಾಬಾದ್ ಕರ್ನಾಟಕ)

ಕೆಳಗಿನ ಚಿತ್ರ ನೋಡಿ  ಇಲ್ಲಿ  ಅವರಿಗೆ SC ಸಮುದಾಯದವರಿಗೆ ನೀಡುವ ಮೀಸಲಾತಿ ( ಪ್ರಾತಿನಿಧ್ಯತೆ ) ಕುರಿತು ಆಕ್ಷೇಪಣೆ ತುಂಬಾ ಇದೆ.

ಅಂದರೆ ಇಲ್ಲಿ  ( ಕೆಳಗಿನ ಚಿತ್ರದಲ್ಲಿ  ) ಮೀಸಲಾತಿಯ ಫಲಾನುಭವಿಗಳು ಕೇವಲ SC ಸಮುದಾಯದವರು  ಮಾತ್ರ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ.

ಮೀಸಲಾತಿಯನ್ನು ಭೀಕ್ಷೆ ಎಂದು ಹೀಯಾಳಿಸುವುದಾದರೆ  SC, ST  ಗಳು 18%  ಮೀಸಲಾತಿಗಿಂತ ಇನ್ನುಳಿದವರು 82% ಮೀಸಲಾತಿ ಪಡೆಯುತ್ತಿರುಪಡೆಯುತ್ತಿರುವವರು ಭೀಕ್ಷುಕರಾಗುವುದಿಲ್ಲವೇ ?

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೀಸಲಾತಿಯಿಂದ ಅನ್ಯಾಯವಾಗುತ್ತಿದೆ  ಎನ್ನುವವರು ಕೇಳಿ

ಆರ್ಥಿಕವಾಗಿ ಹಿಂದುಳಿದ ಎಲ್ಲ ಜನಾಂಗದವರಿಗೆ ಮಾತ್ರ ಮೀಸಲಾತಿ ಅವಶ್ಯಕತೆ ಇದೆ ಎಂದು ಬೊಬ್ಬಿಡುತ್ತಿರುವ ಕೈಲಾಗದವರೆ ಕೇಳಿ  , ಸಾಮಾಜಿಕವಾಗಿ ಹಿಂದುಳಿದವರನ್ನು ಏನು ಮಾಡತೀರಾ ?  ಅವರ ಪರಿಸ್ಥಿತಿಗ ಯಾರು ಹೊಣೆ? ಅವರ ನೋವು ಸಂಕಟಕ್ಕೆ ಪರಿಹಾರ ಏನು ವಿಚಾರ ಮಾಡಿದಿರಾ?  ಭಾರತದ ಈ ಹಿಂದೂ ರಾಷ್ಟ್ರದಲ್ಲಿ ಪರಿಶಿಷ್ಟ  ಜಾತಿ ಸಮುದಾಯದವರಿಗೆ ಸರಕಾರಿ ಪ್ರಾತಿನಿಧ್ಯತೆ ( ಮೀಸಲಾತಿ) ಬಿಟ್ಟರೆ ಖಾಸಗೀಯಾಗಿ ಬೆಳೆಯಲು ಬಿಟ್ಟಿದೀರಾ, ಉದಾಹರಣೆಗೆ ಒಬ್ಬ SC ವ್ವಕ್ತಿ ಹೊಟೆಲ್ ಇಟ್ಟರೆ ಆ ಹೊಟೆಲ್ ಗೆ ಹೋಗಿ ಊಟಮಾಡುವ ಮನುಷ್ಯತ್ವ ನಿಮಗೆ ಇದೆಯಾ ?

SC ಗಳಿಗೆ ಮತದಾನದ ಅವಕಾಶವನ್ನೇ ಕೊಡಲು ನಿರಾಕರಿಸಿದಂತ ಮಹಾನುಭಾವ ಜವಾಹರಲಾಲ್ ನೆಹರು. ಅಂಬೇಡ್ಕ ರ್  ರವರಿಗೆ ತುಂಬಾ ನೋವು ಉಂಟು ಮಾಡಿದ್ದ.
ಅಂಬೇಡ್ಕರ್ ರವರು ಹುಟ್ಟಿರದಿದ್ದರೆ , ನಮ್ಮ ಸಮುದಾಯದವರರಿಗೆ ಮತದಾನದ ಅವಕಾಶ ಸಿಗುತ್ತಿರಲಿಲ್ಲ,  ಸರ್ಕಾರದಲ್ಲಿ ಪ್ರಾತಿನಿಧ್ಯತೆ ಸಿಗುತ್ತಿರಲಿಲ್ಲ,  ಶಿಕ್ಷಣ ಅಸಾಧ್ಯವಾದ ಮಾತು, ಕಿತ್ತು ತಿನ್ನುವ ಬಡತನ ಕಟ್ಟಿಟ್ಟ ಬುತ್ತಿ  , ಅಶ್ಪ್ರುಶ್ಯತೆ, ಕೀಳಾಗಿ ಕಾಣುವುದು, ಚಪ್ಪಲಿ ಹೊಲಿಯುವುದು , ಕಸ ಗೂಡಿಸುವುದು,  ಇವರಿಗೆ ಬೇಕಾದಾಗ ದೇಹ ಕೊಡುವುದು. ಖಾಯಂ ಆಗಿರುತ್ತಿತ್ತು.

ಸುಪ್ರೀಂ ಕೋರ್ಟ್ ಆದೇಶ :-

ನರಸಿಂಹ್ ರಾವ್ ಸರ್ಕಾರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಳಿದವರಿಗೆ ನೀಡುವ ಮೀಸಲಾತಿಯ ಜೊತೆಗೆ ” ಆರ್ಥಿಕವಾಗಿ ಹಿಂದೂಳಿದವರನ್ನೂ ಸೇರಿಸಿ ಮೀಸಲು ನೀಡುವ ನಿಯಮವನ್ನು ಸೇರಿಸಿ ಆದೇಶ ಹೊರಡಿಸಿತು .

ಆದರೆ 16 – 11 – 1992 ರಲ್ಲಿ ಸುಪ್ರೀಂ ಕೋರ್ಟ್ ಆರ್ಥಿಕವಾಗಿ ಹಿಂದುಳಿದವರಿಗೆ  ಮೀಸಲು  ನೀಡುವ ಸರ್ಕಾರದ ನಿರ್ಧಾರವನ್ನು ತಳ್ಳಿಹಾಕಿತು.

ಅಂದರೆ ಇಲ್ಲಿ ಆರ್ಥಿಕ ಅಂಶದ ಪರಿಗಣಣೆಗಿಂತಲೂ ಮುಖ್ಯವಾಗಿ ಗಣನೆಗೆ ಬರುವುದು ಸಾಮಾಜಿಕ ಹಿಂದೂಳಿದವರು.

ಅದಕ್ಕೆ ಹೇಳೋದು ಜಾತಿ ಹಿಂಸೆಯಿಂದ ನೋವು ಪಟ್ಟು ಸಾಮಾಜಿಕವಾಗಿ ಹಿಂದುಳಿಯುವುದಕ್ಕಿಂತಲೂ  ೧೦೦% ಪ್ರತಿಶತವಾಸಿ ಯಾವುದೆಂದರೆ ಬಡವನಾಗಿರುವುದು.

-ಅಂಬೇಡ್ಕರ್ ಜ್ಞಾನದರ್ಶನ ಅಭಿಯಾನ